Festivals in June 2023: ಜೂನ್ ತಿಂಗಳಲ್ಲಿ ಆಚರಿಸಲಾಗುವ ಭಾರತೀಯ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ

ಮೇ ತಿಂಗಳ ಅಂತ್ಯದೊಂದಿಗೆ, ಹೊಸ ತಿಂಗಳು ಜೂನ್ ಇಂದು ಪ್ರಾರಂಭವಾಗಿದೆ. ಈ ತಿಂಗಳಲ್ಲಿ ಅನೇಕ ಹಬ್ಬಗಳು ಮತ್ತು ವ್ರತಗಳನ್ನು ಆಚರಿಸಲಾಗುತ್ತದೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿವೆ.

Festivals in June 2023: ಜೂನ್ ತಿಂಗಳಲ್ಲಿ ಆಚರಿಸಲಾಗುವ ಭಾರತೀಯ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 01, 2023 | 11:41 AM

ಭಾರತವು ಇಡೀ ವರ್ಷದಲ್ಲಿ ವ್ಯಾಪಕವಾದ ಹಬ್ಬಗಳನ್ನು ಆಚರಿಸಲು ಹೆಸರುವಾಸಿಯಾದ ದೇಶವಾಗಿದೆ. ವರ್ಷದ 12 ತಿಂಗಳುಗಳಲ್ಲಿಯೂ ವಿವಿಧ ಆಚರಣೆಗಳು ಮತ್ತು ವ್ರತಗಳನ್ನು ಆಚರಿಸಲಾಗುತ್ತದೆ. ಅದರಂತೆ ಈ ಬಾರಿಯ ಜೂನ್ ತಿಂಗಳಲ್ಲಿ ಯಾವೆಲ್ಲ ಹಬ್ಬಗಳು ನಡೆಯಲಿವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಿಂದೂ ಪಂಚಾಂಗದ ಪ್ರಕಾರ, ಜೂನ್ ತಿಂಗಳು ಜ್ಯೇಷ್ಠ ಮಾಸದಿಂದ ಆರಂಭವಾಗಿ ಆಷಾಢ ಮಾಸದಲ್ಲಿ ಕೊನೆಗೊಳ್ಳುತ್ತದೆ. ಪಂಚಾಂಗದ ಪ್ರಕಾರ ಜೂನ್ ತಿಂಗಳಲ್ಲಿ ಅನೇಕ ವ್ರತಗಳು, ಹಬ್ಬಗಳು ನಡೆಯಲಿವೆ.

ಈ ಬಾರಿಯ ಜೂನ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳು ಮತ್ತು ವ್ರತಗಳ ಪಟ್ಟಿ:

ಜೂನ್ 1, 2023, ಪ್ರದೋಷ ವ್ರತ, ರಾಮ ಲಕ್ಷ್ಮಣ ದ್ವಾದಶಿ:

ದ್ವಾದಶಿ ಹಿಂದೂ ಧರ್ಮದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಏಕಾದಶಿಯ ಉಪವಾಸವು ದ್ವಾದಶಿಯ ದಿನದಂದು ಕೊನೆಗೊಳ್ಳುತ್ತದೆ. ಭಗವಾನ್ ಶಿವನಿಗೆ ಸಮರ್ಪಿತವಾದ ಪ್ರದೋಷ ವ್ರತವನ್ನು ಇಂದು ಆಚರಿಸಲಾಗುತ್ತದೆ ಮತ್ತು ರಾಮ ಲಕ್ಷ್ಮಣ ದ್ವಾದಶಿಯನ್ನು ಈ ದಿನ ಆಚರಿಸಲಾಗುತ್ತದೆ.

ಜೂನ್ 3, ವಟಸಾವಿತ್ರಿ ವ್ರತ:

ವಟ ಸಾವಿತ್ರಿ ಉಪವಾಸವನ್ನು ಜೂನ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಇದು ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಬರುತ್ತದೆ. ಪಂಚಾಂಗದ ಪ್ರಕಾರ ಜ್ಯೇಷ್ಠ ಮಾಸದ ಶುಕ್ಷ ಪಕ್ಷದ ಹುಣ್ಣಿಮೆಯ ದಿನವು ಜೂನ್ 3 ರಂದು ಬೆಳಗ್ಗೆ 11:16 ರಿಂದ ಪ್ರಾರಂಭವಾಗುತ್ತದೆ ಮತ್ತು ಜೂನ್ 4 ರಂದು ಬೆಳಗ್ಗೆ 9:11 ಕ್ಕೆ ಕೊನೆಗೊಳ್ಳುತ್ತದೆ. ಈ ಬಾರಿ ಜೂನ್ 3 ಶನಿವಾರದಂದು ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ.

ಜೂನ್ 4, ಜ್ಯೇಷ್ಠ ಪೂರ್ಣಿಮಾ ಉಪವಾಸ:

ಹಿಂದೂ ಪಂಚಾಂಗದ ಪ್ರಕಾರ, ಜ್ಯೇಷ್ಠ ಮಾಸದ ಶುಕ್ಷ ಪಕ್ಷದ ಹುಣ್ಣಿಮೆಯು ಈ ಬಾರಿ ಜೂನ್ 4 ರಂದು ಇರುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮತ್ತು ವೈಶಾಖ ಮಾಸದ ನಂತರ ಜ್ಯೇಷ್ಠ ಮಾಸ ಬರುತ್ತದೆ. ಈ ದಿನ ವಿಷ್ಣು ದೇವರನ್ನು ಪೂಜಿಸಲಾಗುತ್ತದೆ.

ಜೂನ್ 4, ಕಬೀರದಾಸ ಜಯಂತಿ:

ಕಬೀರದಾಸರು ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಜನಿಸಿದರು ಎಂದು ನಂಬಲಾಗಿದೆ. ಈ ಬಾರಿ ಕಬೀರ ಜಯಂತಿಯನ್ನು ಜೂನ್ 4 ರಂದು ಆಚರಿಸಲಾಗುತ್ತಿದೆ.

ಜೂನ್ 7, ಸಂಕಷ್ಟ ಚತುರ್ಥಿ:

ಜ್ಯೇಷ್ಠ ಮಾಸದ ನಂತರ, ಆಷಾಢ ಮಾಸ ಪ್ರಾರಂಭವಾಗುತ್ತದೆ. ಸಂಕಷ್ಟಿ ಚತುರ್ಥಿ ಉಪವಾಸವನ್ನು ಆಷಾಢ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಜೂನ್ 10, ಕಲಾಷ್ಟಮಿ:

ಕಲಾಷ್ಟಮಿಯು ಪ್ರತಿ ತಿಂಗಳ ಕೃಷ್ಣ ಪಕ್ಷದ ಎಂಟನೇ ದಿನದಂದು ಬರುತ್ತದೆ. ಈ ದಿನವನ್ನು ಕಾಲಭೈರವನಿಗೆ ಸಮರ್ಪಿಸಲಾಗಿದೆ. ಭಗವಾನ್ ಶಿವನ ಭೈರವ ರೂಪವನ್ನು ಈ ದಿನ ಆಚರಿಸಲಾಗುತ್ತದೆ.

ಇದನ್ನೂ ಓದಿ: ಡಿಸೆಂಬರ್ ಮಾಸದಲ್ಲಿ ಬರುವ ವ್ರತ, ಹಬ್ಬ ಹರಿದಿನಗಳ ವಿವರಗಳು ಇಲ್ಲಿವೆ

ಜೂನ್ 14, ಯೋಗಿನಿ ಏಕಾದಶಿ:

ಆಷಾಢ ಮಾಸದ ಕೃಷ್ಣ ಪಕ್ಷದ ಯೋಗಿನಿ ಏಕಾದಶಿಯನ್ನು ಈ ಬಾರಿ ಜೂನ್ 14 ರಂದು ಆಚರಿಸಲಾಗುತ್ತದೆ. ಈ ಉಪವಾಸವನ್ನು ಆಚರಿಸುವ ಜನರು ತಮ್ಮ ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ.

ಜೂನ್ 15 ಪ್ರದೋಷ ವ್ರತ ಹಾಗೂ ಮಿಥುನ ಸಂಕ್ರಾಂತಿ :

ಪ್ರದೋಷ ವ್ರತವನ್ನು ಜೂನ್ 15 ರಂದು ಆಚರಿಸಲಾಗುತ್ತದೆ. ಅಲ್ಲದೆ, ಈ ದಿನ ಸೂರ್ಯ ದೇವರು ವೃಷಭ ರಾಷಿಯಿಂದ ಹೊರಬಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನವನ್ನು ಮಿಥುನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನ ಸೂರ್ಯ ದೇವನನ್ನು ಪೂಜಿಸಲಾಗುವುದು.

ಜೂನ್ 16, ಮಾಸಿಕ ಶಿವರಾತ್ರಿ ಉಪವಾಸ :

ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿಯ ತಿಥಿಯಂದು ಭಗವಾನ್ ಶಿವನಿಗೆ ಅರ್ಪಿತವಾದ ಮಾಸಿಕ ಶಿವರಾತ್ರಿ ಉಪವಾಸವನ್ನು ಆಚರಿಸಲಾಗುತ್ತದೆ. ಆಷಾಢ ಮಾಸದ ಮಾಸಿಕ ಶಿವರಾತ್ರಿ ಉಪವಾಸವನ್ನು ಈ ಬಾರಿ ಶುಕ್ರವಾರ ಜೂನ್ 16 ರಂದು ಆಚರಿಸಲಾಗುತ್ತದೆ.

ಜೂನ್ 20, ಜಗನ್ನಾಥ ರಥ ಯಾತ್ರೆ :

2023ರಲ್ಲಿ ಜಗನ್ನಾಥ ರಥಯಾತ್ರೆ ಉತ್ಸವವನ್ನು ಜೂನ್ 20 ರಂದು ಆಚರಿಸಲಾಗುತ್ತದೆ. ಜಗನ್ನಾಥ ರಥಯಾತ್ರೆಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ನಂಬಿಕೆ ಮತ್ತು ಪವಾಡಗಳಿಗೆ ಸಂಬಂಧಿಸಿದ ಈ ಹಬ್ಬವನ್ನು ಒಡಿಶಾದಲ್ಲಿ ಆಚರಿಸಲಾಗುತ್ತದೆ.

ಜೂನ್ 28 ಅಥವಾ ಜೂನ್ 29 ಈದ್-ಅಲ್-ಅಧಾ:

ಮುಸಲ್ಮಾನರ ಪವಿತ್ರ ಹಬ್ಬವಾದ ಬಕ್ರೀದ್ ನ್ನು ಭಾರತದಲ್ಲಿ ಈ ಬಾರಿ ಜೂನ್ 28 ಅಥವಾ 29 ರಂದು ಆಚರಿಸಲಾಗುತ್ತದೆ. ಇದು ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಇದನ್ನು ತ್ಯಾಗದ ಹಬ್ಬವೆಂದು ಕರೆಯುತ್ತಾರೆ,

ಜೂನ್ 29, ದೇವಶಯಾನಿ ಏಕಾದಶಿ ಹಾಗೂ ಗೌರಿ ವ್ರತ:

ದೇವಶಯಾನಿ ಏಕಾದಶಿಯನ್ನು ಆಷಾಢ ಪೂರ್ಣಿಮೆಯ ಹನ್ನೊಂದನೇ ದಿನದಂದು ಅಂದರೆ ಜೂನ್ 29ನೇ ಮಂಗಳವಾರದಂದು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ಏಕಾದಶಿಯಂದು ಭಗವಾನ್ ವಿಷ್ಣುವು ಮುಂದಿನ ನಾಲ್ಕು ತಿಂಗಳುಗಳ ಕಾಲ ನಿದ್ರಿಸುತ್ತಾರೆ ಮತ್ತು ಕ್ಷೀರ ಸಾಗರದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾರೆ. ಗೌರಿ ವ್ರತವನ್ನು ಕೂಡಾ ಈ ಸಲ ಇದೇ ದಿನದಂದು ಆಚರಿಸಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ