AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Most Expensive Hotel: ಜೈಪುರದಲ್ಲಿದೆ ವಿಶ್ವದ ದುಬಾರಿ ಹೋಟೆಲ್; ಒಂದು ರಾತ್ರಿಯ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಿ

ಐಷಾರಾಮಿ ಹೋಟೆಲೊಂಡರಲ್ಲಿ ಒಂದು ರಾತ್ರಿಗೆ ಹೆಚ್ಚೆಂದರೆ ಎಷ್ಟು ಬಾಡಿಗೆ ಇರಬಹುದು ಎಂದು ನೀವು ಯೋಚಿಸುತ್ತೀರಿ? ಒಬ್ಬ ಸಾಮಾನ್ಯ ಮೇಲ್ಮಧ್ಯಮ ವರ್ಗದ ವ್ಯಕ್ತಿಯ ಒಂದು ವರ್ಷದ ವೇತನಕ್ಕೆ ಸಮಾನವಾಗಿದ್ದರೋ? ನಂಬುವುದು ಕಷ್ಟ ಅಲ್ಲವೇ... ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಅಂತಹ ಒಂದು ಹೋಟೆಲ್ ಇದೆ ಎಂದರೆ ನೀವು ನಂಬಲೇಬೇಕು.

Most Expensive Hotel: ಜೈಪುರದಲ್ಲಿದೆ ವಿಶ್ವದ ದುಬಾರಿ ಹೋಟೆಲ್; ಒಂದು ರಾತ್ರಿಯ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಿ
ರಾಂಬಾಗ್ ಪ್ಯಾಲೇಸ್ ಹೋಟೆಲ್Image Credit source: Taj Hotels
Ganapathi Sharma
|

Updated on: Jun 01, 2023 | 9:00 AM

Share

ಐಷಾರಾಮಿ ಹೋಟೆಲೊಂಡರಲ್ಲಿ (Luxurious Hotel) ಒಂದು ರಾತ್ರಿಗೆ ಹೆಚ್ಚೆಂದರೆ ಎಷ್ಟು ಬಾಡಿಗೆ ಇರಬಹುದು ಎಂದು ನೀವು ಯೋಚಿಸುತ್ತೀರಿ? ಒಬ್ಬ ಸಾಮಾನ್ಯ ಮೇಲ್ಮಧ್ಯಮ ವರ್ಗದ ವ್ಯಕ್ತಿಯ ಒಂದು ವರ್ಷದ ವೇತನಕ್ಕೆ ಸಮಾನವಾಗಿದ್ದರೋ? ನಂಬುವುದು ಕಷ್ಟ ಅಲ್ಲವೇ… ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ (Jaipur) ಅಂತಹ ಒಂದು ಹೋಟೆಲ್ ಇದೆ ಎಂದರೆ ನೀವು ನಂಬಲೇಬೇಕು. ಅಷ್ಟೇ ಅಲ್ಲ, ಆ ಹೋಟೆಲ್ ಸ್ವಿಟ್ಜರ್ಲೆಂಡ್, ಲಂಡನ್, ಲಾಸ್-ವೇಗಾಸ್ ಹೋಟೆಲ್‌ಗಳಿಗಿಂತ ಮುಂದಿದೆ ಮತ್ತು ವಿಶ್ವದ ನಂಬರ್ -1 ಹೋಟೆಲ್ (World’s Best Hotel) ಎಂದೇ ಪರಿಗಣಿಸಲಾಗಿದೆ.

ಹೌದು, ಜೈಪುರದ ರಾಂಬಾಗ್ ಪ್ಯಾಲೇಸ್ ಹೋಟೆಲ್ ವಿಶ್ವದ ಅತ್ಯಂತ ದುಬಾರಿ ಹೋಟೆಲ್ ಆಗಿದೆ. ಈ ಐಷಾರಾಮಿ ಹೋಟೆಲ್ ಅನ್ನು ಟ್ರಾವೆಲ್ ಪೋರ್ಟಲ್ ಟ್ರಿಪ್ ಅಡ್ವೈಸರ್‌ನ ‘ಟ್ರಾವೆಲರ್ಸ್ ಚಾಯ್ಸ್ ವರ್ಲ್ಡ್ ಬೆಸ್ಟ್ ಆಫ್ ಬೆಸ್ಟ್ ಹೋಟೆಲ್‌ಗಳ ಪಟ್ಟಿ-2023′ ನಲ್ಲಿ ವಿಶ್ವದ ನಂಬರ್-1 ಹೋಟೆಲ್ ಆಗಿ ಆಯ್ಕೆ ಮಾಡಲಾಗಿದೆ. ಈ ಹೋಟೆಲ್‌ನ ಮಾಲೀಕರು ಬೇರೆ ಯಾರೂ ಅಲ್ಲ, ‘ತಾಜ್ ಹೋಟೆಲ್’ ನಡೆಸುತ್ತಿರುವ ಟಾಟಾ ಗ್ರೂಪ್.

ಐಷಾರಾಮಿ ಹೋಟೆಲ್​​​ ರಾಂಬಾಗ್​ನ ವಿಡಿಯೋ ನೋಡಿ

View this post on Instagram

A post shared by Taj Hotels (@tajhotels)

ಮಹಾರಾಜರಂತೆ ಜೀವನ ನಡೆಸುವುದು ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ಅಥವಾ ಅನುಭವಿಸಬೇಕಾದರೆ ಈ ಹೋಟೆಲ್‌ನಲ್ಲಿ ಒಂದು ರಾತ್ರಿ ಕಳೆಯಬೇಕು. ಆದರೆ, ಈ ಹೆರಿಟೇಜ್ ಹೋಟೆಲ್‌ನಲ್ಲಿ ಒಂದು ರಾತ್ರಿಯ ಬಾಡಿಗೆ 10 ಲಕ್ಷ ರೂಪಾಯಿ ವರೆಗೆ ಇದೆ! ಇದು ಭಾರತದ ಕೋಟಿಗಟ್ಟಲೆ ಜನರ 12 ತಿಂಗಳ ಸಂಬಳಕ್ಕೆ ಸಮಾನವಾಗಿದೆ.

ಈ ಹೋಟೆಲ್‌ನ ‘ಸುಖ್ ನಿವಾಸ್’ನಲ್ಲಿ ನೀವು ಉಳಿಯಲು ಬಯಸಿದರೆ, ಒಂದು ರಾತ್ರಿಗೆ 10 ಲಕ್ಷ ರೂಪಾಯಿಗಳವರೆಗೆ ಪಾವತಿಸಬೇಕಾಗಬಹುದು. ನೀವು ಅದೃಷ್ಟವಂತರಾಗಿದ್ದರೆ, ಆಫ್-ಸೀಸನ್‌ನಲ್ಲಿ ಕಡಿಮೆ ಬಾಡಿಗೆಗೆ ದೊರೆಯಬಹುದು. ಆದರೆ, ಆಫ್-ಸೀಸನ್‌ನಲ್ಲಿ ಸಹ ಒಂದು ರಾತ್ರಿಯ ಬಾಡಿಗೆ ಸುಮಾರು 4.7 ಲಕ್ಷ ರೂಪಾಯಿಗಳಷ್ಟಿರುತ್ತದೆ ಎಂಬುದು ಗಮನಾರ್ಹ.

ಇದನ್ನೂ ಓದಿ: Travel Tips: ಭಾರತದಲ್ಲಿ ಪ್ಯಾರಾಗ್ಲೈಡಿಂಗ್ ಅನುಭವ ಪಡೆಯಲು ಸೂಕ್ತ ತಾಣಗಳ ವಿವರ ಇಲ್ಲಿವೆ

ರಾಂಬಾಗ್ ಅರಮನೆಯು ಒಂದು ಕಾಲದಲ್ಲಿ ಜೈಪುರ ರಾಜಮನೆತನದ ಅತಿಥಿ ಗೃಹವಾಗಿತ್ತು. ಜೈಪುರ ರಾಜಮನೆತನಕ್ಕೆ ಸಂಬಂಧಿಸಿದ ರಾಜರು ಮತ್ತು ಚಕ್ರವರ್ತಿಗಳು ಇದನ್ನು ಬಳಸುತ್ತಿದ್ದರು. ಇದನ್ನು 1835 ರಲ್ಲಿ ನಿರ್ಮಿಸಲಾಯಿತು. ಜೈಪುರದ ಮಹಾರಾಜ ಸವಾಯಿ ಮಾನ್ ಸಿಂಗ್-II ಮತ್ತು ಮಹಾರಾಣಿ ಗಾಯತ್ರಿ ದೇವಿ ಈ ಅರಮನೆಯನ್ನು ತಮ್ಮ ನಿವಾಸವಾಗಿ ಬಳಸಿಕೊಂಡರು.

ನಂತರ ಅದನ್ನು ಐಷಾರಾಮಿ ಹೆರಿಟೇಜ್ ಹೋಟೆಲ್ ಆಗಿ ಪರಿವರ್ತಿಸಲಾಯಿತು. ಇದರ ನಿರ್ವಹಣೆಯ ಹೊಣೆಯನ್ನು ಟಾಟಾ ಗ್ರೂಪ್‌ಗೆ ನೀಡಲಾಯಿತು. ಇಂದು ಈ ಹೋಟೆಲ್ 70 ಕ್ಕೂ ಹೆಚ್ಚು ಐಷಾರಾಮಿ ಕೊಠಡಿಗಳನ್ನು ಹೊಂದಿದೆ. ಇಲ್ಲಿರುವ ಪ್ರೆಸಿಡೆನ್ಶಿಯಲ್ ಸೂಟ್ ಅನ್ನು ‘ಸುಖ್ ನಿವಾಸ್’ ಎಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ಈ ಹೋಟೆಲ್‌ನಲ್ಲಿ ಸುವರ್ಣ ಮಹಲ್, ಸ್ಟೀಮ್, ವರಂದಾ ಕೆಫೆ, ರಜಪೂತ್ ರೂಮ್ ಮತ್ತು ಪೋಲೋ ಬಾರ್‌ನಂತಹ ರೆಸ್ಟೋರೆಂಟ್ ಆಯ್ಕೆಗಳು ಸಹ ಲಭ್ಯವಿವೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ