AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vrat Festivals December 2021: ಡಿಸೆಂಬರ್ ಮಾಸದಲ್ಲಿ ಬರುವ ವ್ರತ, ಹಬ್ಬ ಹರಿದಿನಗಳ ವಿವರಗಳು ಇಲ್ಲಿವೆ

ಶಾಸ್ತ್ರಗಳಲ್ಲಿ ಎಲ್ಲಾ ಅಮಾವಾಸ್ಯೆಗಳಿಗೂ ವಿಶೇಷ ಮಹತ್ವ ಇರುತ್ತದೆ. ಮಾರ್ಗಶಿರ ಮಾಸದ ಅಮಾವಾಸ್ಯೆಯು ಡಿಸೆಂಬರ್ 4 ಶನಿವಾರದಂದು ಬರುತ್ತದೆ. ದಿನದಂದೇ ಪೂರ್ವಜರ ಕರ್ಮಾದಿಗಳನ್ನು ಮಾಡುತ್ತಾರೆ. ಪವಿತ್ರ ನದಿಗೆ ಹೋಗಿ ಸ್ನಾನ ಮಾಡಿ, ಪಿಂಡ ಪ್ರದಾನ ಮಾಡುತ್ತಾರೆ. ತಮ್ಮ ಯಥಾಶಕ್ತಿಗೆ ಅನುಸಾರ ದಾನ ಮಾಡುವುದರಿಂದ ಶುಭದಾಯಕವಾಗುತ್ತದೆ ಎಂಬ ನಂಬಿಕೆಯಿದೆ.

Vrat Festivals December 2021: ಡಿಸೆಂಬರ್ ಮಾಸದಲ್ಲಿ ಬರುವ ವ್ರತ, ಹಬ್ಬ ಹರಿದಿನಗಳ ವಿವರಗಳು ಇಲ್ಲಿವೆ
Vrat Festivals December 2021: ಡಿಸೆಂಬರ್ ಮಾಸದಲ್ಲಿ ಬರುವ ವ್ರತ, ಹಬ್ಬ ಹರಿದಿನಗಳ ವಿವರಗಳು ಇಲ್ಲಿವೆ
TV9 Web
| Updated By: ಸಾಧು ಶ್ರೀನಾಥ್​|

Updated on: Dec 01, 2021 | 7:15 AM

Share

ಆಂಗ್ಲ ಕ್ಯಾಲೆಂಡರ್​ ಪ್ರಕಾರ ಡಿಸೆಂಬರ್ ತಿಂಗಳು ವರ್ಷದ ಕೊನೆಯ ಮಾಸವಾಗಿರುತ್ತದೆ. ಎಲ್ಲ ತಿಂಗಳುಗಳಲ್ಲಿ ಆಚರಸುವಂತೆ ಈ ಡಿಸೆಂಬರ್​ನಲ್ಲಿಯೂ ನಾನಾ ವ್ರತಗಳು ಮತ್ತು ಹಬ್ಬ ಹರಿದಿನಗಳು ಬರುತ್ತವೆ. ಕ್ರೈಸ್ತರ ದೊಡ್ಡ ಹಬ್ಬ ಕ್ರಿಸ್​ಮಸ್ ಸಹ ಇದೇ ಮಾಸಾಂತ್ಯಕ್ಕೆ ವರ್ಷದ ಕೊನೆಯ ಭಾಗದಲ್ಲಿ (ಡಿಸೆಂಬರ್ 25) ಬರುತ್ತದೆ. ಅದಾದ ಒಂದು ವಾರದಲ್ಲಿ ಹೊಸ ವರ್ಷವೂ ಕಾಲಿಡುತ್ತದೆ. ಹೀಗೆ ಎಲ್ಲ ಪ್ರಮುಖ ಹಬ್ಬ/ ವ್ರತಗಳ ವಿವರಗಳನ್ನು ಇಲ್ಲಿ ನಿಮಗಾಗಿ ನೀಡಲಾಗಿದೆ. ಇಂದು ಬುಧವಾರದಿಂದ ಪ್ರಸಕ್ತ 2021ನೇ ಸಾಲಿನ ಕೊನೆಯ ತಿಂಗಳು ಆರಂಭವಾಗಿದೆ. ಇದರೊಂದಿಗೆ ಚಳಿಗಾಲವೂ ಕಾಲಿಡುತ್ತದೆ. ಎಲ್ಲ ತಿಂಗಳಲ್ಲಿ ಬರುವಂತೆ ಈ ಮಾಸದಲ್ಲಿಯೂ ಏಕಾದಶಿ, ಪ್ರದೋಷ ವ್ರತ, ಅಮಾವಾಸ್ಯೆ, ಚತುರ್ಥಿ ಮುಂತಾದ ಹಬ್ಬ ಹರಿದಿನಗಳು ಬರುತ್ತವೆ.

ಮಾಸಿಕ ಶಿವರಾತ್ರಿ ಮತ್ತು ಪ್ರದೋಷ ವ್ರತ (ಗುರುವಾರ- ಡಿಸೆಂಬರ್ 2):

ಮಹಾಶಿವರಾತ್ರಿ ವರ್ಷದಲ್ಲಿ ಒಮ್ಮೆ ಮಾತ್ರ ಆಚರಿಸಲ್ಪಡುತ್ತದೆ. ಆದರೆ ಮಾಸಿಕ ಶಿವರಾತ್ರಿ ಹಬ್ಬವು ಪ್ರತಿ ತಿಂಗಳೂ ಬರುತ್ತೆ. ಇದು ಕೃಷ್ಣ ಪಕ್ಷದ ಚತುರ್ದಶಿಯ ದಿನ ಆಚರಿಸಲ್ಪಡುತ್ತದೆ. ಈಶ್ವರನ ಭಕ್ತರು ತಮ್ಮ ಮನೋಕಾಮನೆಗಳನ್ನೆಲ್ಲಾ ಸಿದ್ಧಿಸಿಕೊಳ್ಳುವ ಸಲುವಾಗಿ ಆಚರಿಸುವ ವ್ರತ ಇದಾಗಿದೆ. ಇನ್ನು ಪ್ರದೋಷ ವ್ರತವು ಪ್ರತಿ ತಿಂಗಳೂ ಎರಡು ಬಾರಿ ತ್ರಯೋದಶಿ ದಿನದಂದು ಬರುತ್ತದೆ. ಒಂದು, ಕೃಷ್ಣ ಪಕ್ಷದಲ್ಲಿ ಮತ್ತೊಂದು ಶುಕ್ಲ ಪಕ್ಷದಲ್ಲಿ ಬರುತ್ತದೆ. ಇದನ್ನೂ ಸಹ ಏಕಾದಶಿಯ ಅರ್ಥಪೂರ್ಣವಾಗಿ ಆಚರಿಸಲ್ಪಡುತ್ತದೆ. ಡಿಸೆಂಬರ್ ತಿಂಗಳಲ್ಲಿ ಕೃಷ್ಣ ಪಕ್ಷದ ಪ್ರದೋಷ ವ್ರತ ಮತ್ತು ಮಾಸಿಕ ಶಿವರಾತ್ರಿ – ಎರಡೂ ಡಿಸೆಂಬರ್ 2ರಂದು ಒಂದೇ ದಿನ ಬರುತ್ತದೆ.

ಮಾರ್ಗಶಿರ ಅಮಾವಾಸ್ಯೆ (ಶನಿವಾರ- ಡಿಸೆಂಬರ್ 4):

ಶಾಸ್ತ್ರಗಳಲ್ಲಿ ಎಲ್ಲಾ ಅಮಾವಾಸ್ಯೆಗಳಿಗೂ ವಿಶೇಷ ಮಹತ್ವ ಇರುತ್ತದೆ. ಮಾರ್ಗಶಿರ ಮಾಸದ ಅಮಾವಾಸ್ಯೆಯು ಡಿಸೆಂಬರ್ 4 ಶನಿವಾರದಂದು ಬರುತ್ತದೆ. ದಿನದಂದೇ ಪೂರ್ವಜರ ಕರ್ಮಾದಿಗಳನ್ನು ಮಾಡುತ್ತಾರೆ. ಪವಿತ್ರ ನದಿಗೆ ಹೋಗಿ ಸ್ನಾನ ಮಾಡಿ, ಪಿಂಡ ಪ್ರದಾನ ಮಾಡುತ್ತಾರೆ. ತಮ್ಮ ಯಥಾಶಕ್ತಿಗೆ ಅನುಸಾರ ದಾನ ಮಾಡುವುದರಿಂದ ಶುಭದಾಯಕವಾಗುತ್ತದೆ ಎಂಬ ನಂಬಿಕೆಯಿದೆ.

ಮೋಕ್ಷ ಏಕಾದಶಿ (ಮಂಗಳವಾರ- ಡಿಸೆಂಬರ್ 14):

ಡಿಸೆಂಬರ್ ತಿಂಗಳ ಕೃಷ್ಣ ಪಕ್ಷದಲ್ಲಿ ಮೋಕ್ಷದ ಏಕಾದಶಿ ಡಿಸೆಂಬರ್ 14ರ ಮಂಗಳವಾರದಂದು ಬರುತ್ತದೆ. ಏಕಾದಶಿ ವ್ರತಕ್ಕೆ ಮೋಕ್ಷದಾಯಿ ಎಂದು ಆಚರಿಸಲಾಗುತ್ತದೆ. ಈ ವರತವನ್ನು ಭಗವಂತ ವಿಷ್ಣುವಿಗೆ ಸಮರ್ಪಿಸಲಾಗುತ್ತದೆ. ಈ ವ್ರತಾಚರಣೆಯಿಂದ ಮುಕ್ತಿಧಾಮ ಲಭಿಸುತ್ತದೆ ಎಂಬ ಪ್ರತೀತಿಯಿದೆ.

ಪ್ರದೋಷ ವ್ರತ, ಶುಕ್ಲ ಪಕ್ಷ (ಗುರುವಾರ- ಡಿಸೆಂಬರ್ 16):

ಡಿಸೆಂಬರ್ ತಿಂಗಳ ಎರಡನೆಯ ಪ್ರದೋಷ ವ್ರತವು ಡಿಸೆಂಬರ್ 16ರ ಗುರುವಾರದಂದು ಬರುತ್ತದೆ. ಇದರ ಮುಖ್ಯ ಸಂಗತಿ ಏನೆಂದರೆ ಈ ಬಾರಿ ಡಿಸೆಂಬರ್​ನಲ್ಲಿ ಎರಡೂ ಪ್ರದೋಷಗಳೂ ಗುರುವಾರದಂದೆ ಬರುತ್ತದೆ. ದಿನದ ಲೆಕ್ಕಾಚಾರದಲ್ಲಿ ಈ ವ್ರತದ ಮಹತ್ವ ಎರಡೂ ದಿನ ಬೇರೆಬೇರೆಯದ್ದಾಗಿರುತ್ತದೆ. ಅದು ಈಶ್ವರನಿಗೆ ಸಮರ್ಪಿತವಾಗಿರುತ್ತದೆ. ಈ ವ್ರತ ಮಹಾದೇವ ಶಿವನಿಗೆ ಅತ್ಯಂತ ಪ್ರೀತಿದಾಯಕವಾಗಿರುತ್ತದೆ. ಇದೇ ದಿನ ಧನು ಸಂಕ್ರಾಂತಿ ಸಹ ಬರುತ್ತದೆ. ಹಿಂದೂ ಸೌರ ಪಂಚಾಂಗದ ಪ್ರಕಾರ ಸೂರ್ಯದೇವ ಇದೇ ದಿನ ಧನು ರಾಶಿಗೆ ಪ್ರವೇಶ ಮಾಡುತ್ತಾನೆ. ಮತ್ರು ನವ ಮಾಸದ ಆರಂಭವೂ ಇದೇ ದಿನದಿಂದ ಶುರುವಾಗುತ್ತದೆ.

ಮಾರ್ಗಶಿರ ಪೂರ್ಣಿಮಾ (ರವಿವಾರ- ಡಿಸೆಂಬರ್ 19):

ಮಾರ್ಗಶಿರ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ಬರುವ ಹುಣ್ಣಿಮೆಗೆ ಮಾರ್ಗಶಿರ ಹುಣ್ಣಿಮೆ ಅನ್ನುತ್ತಾರೆ. ಅಂದು ಭಕ್ತರು ವ್ರತ ಆಚರಿಸುತ್ತಾರೆ. ಪವಿತ್ರ ನದಿಗಳಿಗೆ ತೆರಳಿ ಸ್ನಾನ ಮಾಡುತ್ತಾರೆ. ಬಳಿಕ ನೀಡುವ ದಾನವು ಅತ್ಯಂತ ಶ್ರೇಷ್ಠ ದಾನವಾಗಿರುತ್ತದೆ.

ಸಂಕಷ್ಟ ಚತುರ್ಥಿ (ಬುಧವಾರ- ಡಿಸೆಂಬರ್ 22):

ಈ ಮಾಸದಲ್ಲಿ ಸಂಕಷ್ಟ ಚತುರ್ಥಿಯು ಡಿಸೆಂಬರ್ 22 ರಂದು ಬುಧವಾರ ಬರುತ್ತದೆ. ಈ ವ್ರತವನ್ನು ವಿನಾಯಕನಿಗೆ ಸಮರ್ಪಿಸಲಾಗುತ್ತದೆ. ಈ ವ್ರತಾಚರಣೆಯಿಂದ ಜೀವನದಲ್ಲಿ ದೊಡ್ಡ ದೊಡ್ಡ ಕಷ್ಟಗಳೂ ಸಹ ಸುಲಭವಾಗಿ ಪರಿಹಾರವಾಗಿಬಿಡುತ್ತವೆ.

ಕ್ರಿಸ್​ಮಸ್​ ದಿನ (ಶನಿವಾರ- ಡಿಸೆಂಬರ್ 22):

ಕ್ರೈಸ್ತ ಧರ್ಮದಲ್ಲಿ ಸತ್ಯಂತ ದೊಡ್ಡ ಹಬ್ಬ ಇದಾಗಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳ 25ನೇ ತಾರೀಕು ಈ ಹಬ್ಬ ಆಚರಿಸಲಾಗುತ್ತದೆ. ಕ್ರೈಸ್ತರು ಈ ವಿಶೇಷ ಹಬ್ಬಕ್ಕಾಗಿ ತುಂಬಾ ಕಾತುರದಿಂದ ಎದುರು ನೋಡುತ್ತಾರೆ. ಕ್ರಿಸ್ತನ ಜನ್ಮ ದಿನ ರೂಪದಲ್ಲಿ ಈ ತಾರೀಕನ್ನು ಆಚರಿಸುತ್ತಾರೆ.

ಸಫಲ ಏಕಾದಶಿ (ಗುರುವಾರ- ಡಿಸೆಂಬರ್ 30):

ಪುಷ್ಯ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಈ ಏಕಾದಶಿಗೆ ವಿಶೇಷ ಮಹತ್ವವಿದ್ದು ಸಫಲ ಏಕಾದಶಿ ಎನ್ನುತ್ತಾರೆ. ಡಿಸೆಂಬರ್ 30ರಂದು ಗುರುವಾರ ಸಫಲ ಏಕಾದಶಿ ಇದೆ. ಈ ವ್ರತವು ಭಗವಂತ ವಿಷ್ಣುವಿನ ಆಶೀರ್ವಾದ ಬೇಡಲು ಭಕ್ತರು ಆಚರಿಸುತ್ತಾರೆ.

ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು