Mawe Tribe: ಗಂಡಸರು ಈ ವಿಶೇಷ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಮದುವೆ !; ಫೇಲಾದರೆ ಮದುವೇ ಇಲ್ಲ?

|

Updated on: Jun 23, 2023 | 3:38 PM

ಬುಡಕಟ್ಟು ಜನಾಂಗವೊಂದು ತನ್ನ ಸಮುದಾಯದ ಹದಿಹರೆಯದ ಯುವಕರಿಗೆ ವಿಚಿತ್ರ ಸವಾಲುವೊಂದನ್ನು ನೀಡುತ್ತದೆ. ಆ ಸವಾಲಿನಲ್ಲಿ ಗೆದ್ದರೆ ಮಾತ್ರ ಆತ ಮದುವೆಯಾಗೋಕೆ ಅರ್ಹ ಎಂದು ನಿರ್ಧರಿಸಲಾಗುತ್ತದೆ. ಅಷ್ಟಕ್ಕೂ ಆ ಸವಾಲು ಏನು ಗೊತ್ತಾ? ಈ ಸ್ಟೋರಿನಾ ಪೂರ್ತಿಯಾಗಿ ಓದಿ.

Mawe Tribe: ಗಂಡಸರು ಈ ವಿಶೇಷ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಮದುವೆ !; ಫೇಲಾದರೆ ಮದುವೇ ಇಲ್ಲ?
Mawe Tribe Tradition
Image Credit source: Twitter
Follow us on

ಬ್ರೆಜಿಲ್‌ನ ಅಮೆಜಾನ್ ಅರಣ್ಯದಲ್ಲಿ ವಾಸಿಸುವ ಮಾವೆ ಬುಡಕಟ್ಟು(Mawe Tribe) ಸಮುದಾಯದ ವಿಚಿತ್ರ ಸಂಪ್ರದಾಯವೊಂದು ನಿಮ್ಮನ್ನು ಬೆಚ್ಚಿಬೀಳಿಸಿದಂತೂ ಖಂಡಿತಾ. ಈ ಜನಾಂಗದಲ್ಲಿ ಹದಿಹರೆಯದ ಯುವಕರಿಗೊಂದು ವಿಚಿತ್ರವಾದ ಸವಾಲುಗಳನ್ನು ಇಡಲಾಗುತ್ತದೆ. ಆ ಸವಾಲಿನಿಂದ ಗೆದ್ದರೆ ಮಾತ್ರ ಆತ ಮದುವೆಯಾಗೋಕೆ ಅರ್ಹ ಎಂದು ನಿರ್ಧರಿಸಲಾಗುತ್ತದೆ. ಜೊತೆಗೆ ಆತ ಶಕ್ತಿಶಾಲಿ ಪುರುಷ ಎಂಬ ಬಿರುದು ಕೂಡ ನೀಡಲಾಗುತ್ತದೆ. ಆ ವಿಚಿತ್ರ ಸವಾಲಿನ ಬಗ್ಗೆ ಮಾಹಿತಿ ಇಲ್ಲಿದೆ.

ಏನಿದು ವಿಚಿತ್ರ ಸವಾಲು?

ಒಂದು ಚಿಕ್ಕದಾದ ಕೈಗವಚವನ್ನು ಕೈಗೆ ಹಾಕಿ 10 ನಿಮಿಷ ನಿಂತರೆ ಸಾಕು. ಏನಪ್ಪಾ ಇಷ್ಟೊಂದು ಸುಲಭವಾಗಿರುವ ಸವಾಲು ಅಂತಾ ಅಂದ್ಕೋಬೇಡಿ. ಆದ್ರೆ ಇಲ್ಲೇ ಇರೋದು ಟ್ವಿಸ್ಟ್​​. ಹೌದು ಈ ಚಿಕ್ಕದಾದ ಕೈಗವಚದೊಳಗೆ ಅತ್ಯಂತ ಅಪಾಯಕಾರಿಯಾದ ಇರುವೆ (Bullet Ant) ಹಾಕಲಾಗಿರುತ್ತದೆ. ಈ ಇರುವೆ ಕಚ್ಚಿದ ನೋವು 30 ಜೇನುನೊಣ ಕಚ್ಚಿದ ನೋವಿಗೆ ಸಮನಾಗಿರುತ್ತದೆಯಂತೆ. ಈ ಕೈವಚ ಹಾಕಿಕೊಂಡು 30 ನಿಮಿಷಗಳ ಕುಣಿದರೆ ಮಾತ್ರ ಆತನಿಗೆ ಮದುವೆ ಮತ್ತು ಆ ಸಮುದಾಯದಲ್ಲಿ ಮರ್ಯಾದೆ ನೀಡಲಾಗುತ್ತದೆ. ಈ ವಿಚಿತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಹೊರತು ಅಲ್ಲಿನ ಪುರುಷರಿಗೆ ಮದುವೆಯಾಗುವುದಿಲ್ಲ. ಈ ಇರುವೆ ಗುಂಡು ತಗುಲಿದಷ್ಟೇ ನೋವಾಗುತ್ತದೆ ಎನ್ನುತ್ತಾರೆ. ಜೊತೆಗೆ ಇರುವೆ ಕಚ್ಚಿದ ನಂತರ ಹಲವಾರು ದಿನಗಳವರೆಗೆ, ನೋವಿಗೆ ಕೈಯಲ್ಲಿ ಊತವೂ ಕಂಡುಬರುತ್ತದೆ.


ಇದನ್ನೂ ಓದಿ: ತುರ್ತು ಅಗತ್ಯತೆ ಹೊರತಾಗಿ ರೈಲಿನಲ್ಲಿ ಚೈನ್ ಎಳೆದರೆ ಅಪರಾಧಿಗೆ ಶಿಕ್ಷೆ ಏನು ಗೊತ್ತಾ? ಹೊಸಾ ರೂಲ್ಸ್​ ಏನ್​ ಹೇಳತ್ತೆ?

ಈ ಅಪಾಯಕಾರಿ ಪರೀಕ್ಷೆಗಾಗಿ 12 ವರ್ಷ ಮೇಲ್ಪಟ್ಟ ಹದಿಹರೆಯದ ಯವಕರು ಕಾಡಿನಿಂದ ಅಪಾಯಕಾರಿ ಇರುವೆಗಳನ್ನು ತಾವಾಗಿಯೇ ತರಬೇಕು ಮತ್ತು ಮರದ ಕೈಗವಸುಗಳನ್ನು ತಯಾರಿಸಬೇಕು. ನಂತರ ಈ ಕೈಗವಸುಗಳನ್ನು 20 ಬಾರಿ ಧರಿಸುತ್ತಾರೆ. ಇದನ್ನು ಒಮ್ಮೆಗೆ 10 ನಿಮಿಷಗಳ ಕಾಲ ಧರಿಸಲಾಗುತ್ತದೆ. ಈ ಅಪಾಯಕಾರಿ ಇರುವೆ ಕಡಿತದ ನೋವು ಜೇನುನೊಣಕ್ಕಿಂತ 30 ಪಟ್ಟು ಹೆಚ್ಚು ಎಂದು ಹೇಳಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: