Viral News: 15 ವರ್ಷಗಳ ಬಳಿಕ ಯಹೂದಿ ಸಂಪ್ರದಾಯದ ವಿವಾಹಕ್ಕೆ ಸಾಕ್ಷಿಯಾದ ಕೇರಳ

ಬರೋಬ್ಬರಿ 15 ವರ್ಷಗಳ ಬಳಿಕ ಕೇರಳದಲ್ಲಿ ಯಹೂದಿ ಸಂಪ್ರದಾಯದ ವಿವಾಹ ಕಾರ್ಯಕ್ರಮವೊಂದು ಜರುಗಿದ್ದು, ಸುಮಾರು 300 ಅಥಿತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:May 22, 2023 | 3:17 PM

ಯಹೂದಿ ಸಂಪ್ರದಾಯಗಳ ಸಾರವನ್ನು ಸೆರೆಹಿಡಿಯುವ ಮೂಲಕ 15 ವರ್ಷಗಳ ಬಳಿಕ ಕೇರಳದಲ್ಲಿನ ಯಹೂದಿ ಕುಟುಂಬವೊಂದು, ಭಾನುವಾರ ತಮ್ಮ ಸಾಂಪ್ರದಾಯಿಕ ವಿವಾಹವನ್ನು ಆಚರಿಸಿತು. ಖಾಸಗಿ ರೆಸಾರ್ಟ್​​ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬ, ಸ್ನೇಹಿತರು ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದ್ದರು. ಮತ್ತು ಇಸ್ರೇಲ್​​​ನ ರಬ್ಬಿಯೊಬ್ಬರು ವಿವಾಹವನ್ನು ನೆರವೇರಿಸಿದರು. ಅಪರಾಧ ವಿಭಾಗದ ಮಾಜಿ ಎಸ್.ಪಿ ಬೆನೊಯ್ ಮಲಾಖೈ ಅವರ ಮಗಳು ಅಮೇರಿಕಾದಲ್ಲಿ ಡೇಟಾ ಸೈಂಟಿಸ್ಟ್ ಆಗಿರುವ ರಾಚೆಲ್ ಮಲಾಖೈ, ಅಮೇರಿಕಾದ ಪ್ರಜೆ ಮತ್ತು ನಾಸಾ ಎಂಜಿನಿಯರಿಂಗ್ ರಿಚರ್ಡ್ ಜಕಾರಿ ರೋವ್ ಅವರ ವಿವಾಹ ಕಾರ್ಯಕ್ರಮ ಇದಾಗಿತ್ತು.

ಇಸ್ರೇಲ್​​​ನ ರಬ್ಬಿ (ಯಹೂದಿಯರ ಗುರು) ಏರಿಯಲ್ ಟೈಸನ್ ವಿವಾಹವನ್ನು ನೆರವೇರಿಸಿದರು. ಮದುವೆಯ ಸಮಾರಂಭವು ಹುಪ್ಪಾ ಎಂಬ ಮೇಲಾವರಣದ ಅಡಿಯಲ್ಲಿ ನಡೆಯಿತು, ಕೇರಳದ ಸಿನಗಾಗ್ (ಯಹೂದಿಯರ ದೇವಾಲಯ) ನ ಹೊರಗೆ ನಡೆದ ಮೊದಲ ಮದುವೆ ಇದಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೇರಳದಲ್ಲಿ ಇಂತಹ ವಿವಾಹಗಳು ಅಪರೂಪವಾಗಿ ನಡೆಯುವುದರಿಂದ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. ಕೇರಳದಲ್ಲಿ ಕೊನೆಯ ಯಹೂದಿ ವಿವಾಹವು 2008ರಲ್ಲಿ ನಡೆದಿತ್ತು. ಇದಾಗಿ ಬರೋಬ್ಬರಿ 15 ವರ್ಷಗಳ ನಂತರ ಯಹೂದಿ ವಿವಾಹವು ನಡೆದಿದೆ.

ಸಿನಗಾಗ್​​​​ನಲ್ಲಿ ನಡೆಯುವ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆ, ಕುಟುಂಬದ ಇತರ ಸದಸ್ಯರು ಹಾಗೂ ಸ್ನೇಹಿತರು ಆಚರಣೆಗಳಲ್ಲಿ ಭಾಗಿಯಾಗಲು ಅವಕಾಶ ನೀಡುವ ಸಲುವಾಗಿ ಖಾಸಗಿ ರೆಸಾರ್ಟ್​​​ನಲ್ಲಿ ವಿವಾಹ ಸಮಾರಂಭವನ್ನು ನೆರವೇರಿಸಲಾಯಿತು ಹಾಗೂ ಸುಮಾರು 300 ಅಥಿತಿಗಳು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:Viral Video : ಲತಾ ಮಂಗೇಶ್ಕರ್ ‘ಕ್ರಾಂತಿ’ ಹಾಡಿಗೆ ವೃದ್ಧದಂಪತಿ ಲಿಪ್​ ಸಿಂಕ್; 2 ಮಿಲಿಯನ್​ ವೀಕ್ಷಣೆ​

ಕೆಲವು ಇತಿಹಾಸಗಳ ಪ್ರಕಾರ, ಸುಮಾರು 2,000 ವರ್ಷಗಳ ಹಿಂದೆ ಅಂದರೆ ರಾಜ ಸೊಲೊಮೋನನ ಕಾಲದಲ್ಲಿ ಯಹೂದಿಗಳು ವ್ಯಾಪಾರಕ್ಕೆಂದು ಕೇರಳಕ್ಕೆ ಬಂದರು. ಇದೀಗ ಕೇವಲ ಕೆಲವು ಯಹೂದಿ ಕುಟುಂಬಗಳು ಕೇರಳದಲ್ಲಿವೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:21 pm, Mon, 22 May 23

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ