ತುರ್ತು ಅಗತ್ಯತೆ ಹೊರತಾಗಿ ರೈಲಿನಲ್ಲಿ ಚೈನ್ ಎಳೆದರೆ ಅಪರಾಧಿಗೆ ಶಿಕ್ಷೆ ಏನು ಗೊತ್ತಾ? ಹೊಸಾ ರೂಲ್ಸ್ ಏನ್ ಹೇಳತ್ತೆ?
ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ ಜೊತೆಗೆ ಸಾಕಷ್ಟು ಬೋಗಿಗಳಿರುವುದರಿಂದ ನೀವು ಏನಾದರೂ ತಪ್ಪು ಮಾಡಿದರೂ ಅದು ನಾನೆಂದು ತಿಳಿಯಲು ಸಾಧ್ಯವಿಲ್ಲ ಎಂದು ಅಂದುಕೊಳ್ಳಬೇಡಿ. ತುರ್ತು ಅಗತ್ಯತೆ ಹೊರತಾಗಿ ರೈಲಿನಲ್ಲಿ ಚೈನ್ ಎಳೆದರೆ ಅಪರಾಧಿಗೆ ಶಿಕ್ಷೆ ಎನು ಎಂಬುದು ಇಲ್ಲಿ ತಿಳಿದುಕೊಳ್ಳಿ.
ಭಾರತೀಯ ರೈಲ್ವೇ ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವಾಗಿದೆ. ಆದರೆ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ. ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ ಜೊತೆಗೆ ಸಾಕಷ್ಟು ಬೋಗಿಗಳಿರುವುದರಿಂದ ನೀವು ಏನಾದರೂ ತಪ್ಪು ಮಾಡಿದರೂ ಅದು ನಾನೆಂದು ತಿಳಿಯಲು ಸಾಧ್ಯವಿಲ್ಲ ಎಂದು ಅಂದುಕೊಳ್ಳಬೇಡಿ. ಉದಾಹರಣೆಗೆ ಯಾವುದೇ ಮಾನ್ಯ ಕಾರಣವಿಲ್ಲದೆ ಚಲಿಸುವ ರೈಲನ್ನು ನಿಲ್ಲಿಸಲು ರೈಲುಗಳಲ್ಲಿ ಚೈನ್ ಎಳೆಯುವುದು ಕಾನೂನು ಅಪರಾಧವಾಗಿದೆ. ಹಾಗೆ ಮಾಡಿದ ವ್ಯಕ್ತಿಗೆ ದಂಡ ವಿಧಿಸಬಹುದು ಮತ್ತು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ರೈಲಿನಲ್ಲಿ ಚೈನ್ ಎಳೆಯುವುದು ಯಾವ ಸಂದರ್ಭದಲ್ಲಿ?
ಸಾಮಾನ್ಯವಾಗಿ ಪ್ರಯಾಣಿಕರ ಯೋಗ ಕ್ಷೇಮಕ್ಕಾಗಿಯೇ ಈ ಚೈನ್ ಪುಲ್ಲಿಂಗ್ನ್ನು ಅಳವಡಿಸಲಾಗಿದೆ. ಏನಾದರೂ ತುರ್ತು ಸಮಯದಲ್ಲಿ ಪ್ರಯಾಣಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು.
- ವಯಸ್ಸಾದವರು ಅಥವಾ ವಿಕಲಚೇತನರು ರೈಲು ಹತ್ತಲು ಸಮಯ ತೆಗೆದುಕೊಳ್ಳುತ್ತಾರೆ. ಆ ಸಮಯದಲ್ಲಿ ರೈಲು ಚಲಿಸಲು ಪ್ರಾರಂಭಿಸಿದರೆ ಚೈನ್ ಎಳೆದು ರೈಲು ನಿಲ್ಲಿಸಬಹುದು.
- ರೈಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡರೆ ಪ್ರಯಾಣಿಕರು ಬೋಗಿಯಿಂದ ಪಾರಾಗಲು ಚೈನ್ ಎಳೆದು ರೈಲು ನಿಲ್ಲಿಸಬಹುದು.
- ರೈಲಿನಲ್ಲಿ ಸರಗಳ್ಳತನ, ಕಳ್ಳತನ ಅಥವಾ ದರೋಡೆ ಘಟನೆ ನಡೆದರೆ, ಇಂತಹ ತುರ್ತು ಸಮಯದಲ್ಲಿ ಇದನ್ನು ಸದುಪಯೋಗ ಪಡಿಸಿಕೊಳ್ಳುವುದು ಉತ್ತಮ.
ಮಾನ್ಯ ಕಾರಣಗಳಿಲ್ಲದೇ ಚೈನ್ ಎಳೆಯುವುದು ಶಿಕ್ಷಾರ್ಹ ಅಪರಾಧ:
ತುರ್ತು ಅಗತ್ಯತೆಗಳ ಹೊರತಾಗಿ ಸಾರ್ವಜನಿಕ ಸ್ಥಳಗಳನ್ನು ಹಾಳು ಮಾಡುವುದು, ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವುದು ಸರಿಯಲ್ಲ ಎಂಬುದು ಪ್ರತಿಯೊಂದು ಪ್ರಜೆಯೂ ತಿಳಿದಿರಬೇಕು. ಮಾನ್ಯ ಕಾರಣಗಳಿಲ್ಲದೇ ಚೈನ್ ಎಳೆಯುವುರಿಂದ ರೈಲು ಮತ್ತೆ ಚಲಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ಸಾಕಷ್ಟು ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ತಲುಪುವ ಜಾಗಕ್ಕೆ ತಲುಪದಂತೆ ಮಾಡುತ್ತದೆ.
ರೈಲಿನಲ್ಲಿ ಚೈನ್ ಎಳೆದರೆ ಎಷ್ಟು ದಂಡ ವಿಧಿಸಲಾಗುತ್ತದೆ?
ಅಲಾರ್ಮ್ ಚೈನ್ ರೈಲಿನ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುವುದು ರೈಲ್ವೇ ನಿಯಮಗಳ ಅಡಿಯಲ್ಲಿ ಅಪರಾಧ ಕೃತ್ಯವಾಗಿದೆ. ಅಂತಹ ಸ್ಥಿತಿಯಲ್ಲಿ, ಯಾವುದೇ ತುರ್ತು ಪರಿಸ್ಥಿತಿ ಇಲ್ಲದೆ ರೈಲಿನಲ್ಲಿ ಚೈನ್ ಎಳೆದರೆ, ರೈಲ್ವೆ ಕಾಯಿದೆಯ ಸೆಕ್ಷನ್ 141 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ನಿಯಮದ ಪ್ರಕಾರ, ಅಪರಾಧಿಗೆ 1,000 ರೂಪಾಯಿ ದಂಡ ಅಥವಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ ಭವಿಷ್ಯದಲ್ಲಿ ಅಪರಾಧಿಗೆ ಸರ್ಕಾರಿ ನೌಕರಿ ಪಡೆಯಲು ಸಾಧ್ಯವಿಲ್ಲ.
ಅಪರಾಧಿ ಯಾರೆಂದು ಕಂಡುಹಿಡಿಯುವುದು ಹೇಗೆ?
ಚೈನ್ ಎಳೆದಾಗ ಬೋಗಿಯ ಮೇಲಿನ ಮೂಲೆಯಲ್ಲಿ ಅಳವಡಿಸಿರುವ ವಾಲ್ವ್ ತಿರುಗುತ್ತದೆ. ಇದು ರೈಲಿನ ಚೈನ್ ಅನ್ನು ಎಲ್ಲಿ ಎಳೆಯಲಾಗಿದೆ ಎಂಬುದನ್ನು ತೋರಿಸುತ್ತದೆ. ಏರ್ ಪೈಪ್‌ನ ಮುಚ್ಚಳವು ಹೊರಬಂದ ಕೋಚ್ ಅನ್ನು ಚೈನ್ ಎಳೆದಿರುವ ಬೋಗಿ ಎಂದು ಪರಿಗಣಿಸಲಾಗುತ್ತದೆ.
ರೈಲು ಟಿಟಿಯನ್ನು ಸಂಪರ್ಕಿಸುವುದು ಹೇಗೆ?
ನೀವು ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ ಸುರಕ್ಷಿತವಾಗಿ ಪ್ರಯಾಣಿಸಬಹುದು. ನೀವಿರುವ ಬೋಗಿಯಲ್ಲಿ ಗಲಾಟೆ, ಹೊಡೆದಾಟ ಉಂಟಾದರೆ ನೀವು ತಕ್ಷಣ ಟಿಟಿಯಿ ಯನ್ನು ಸಂಪರ್ಕಿಸಬಹುದು. ಈ ಕೆಳಗಿನ ಟೋಲ್ ಫ್ರೀ ನಂಬರಿಗೆ ಕರೆಮಾಡಿ ಸಹಾಯ ಪಡೆದುಕೊಳ್ಳಿ.
TTE ದೂರವಾಣಿ ಸಂಖ್ಯೆ: 1800111321
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: