Mental Health: ಪ್ಯಾನಿಕ್ ಅಟ್ಯಾಕ್ ಆದ ವ್ಯಕ್ತಿಗೆ ನೀವು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 30, 2023 | 6:41 PM

ಎದೆನೋವು, ಮರಗಟ್ಟುವಿಕೆ ಮತ್ತು ಉಸಿರಾಟದ ತೊಂದರೆಗಳ ಜೊತೆಗೆ ವ್ಯಕ್ತಿಯನ್ನು ಆವರಿಸುವ ಭಯ ಮತ್ತು ಆತಂಕದ ಹಠಾತ್ ಭಾವನೆಯಿಂದ ಪ್ಯಾನಿಕ್ ಅಟ್ಯಾಕ್ ಆಗಬಹುದು. ಪ್ಯಾನಿಕ್ ಅಟ್ಯಾಕ್ ಸಾಮಾನ್ಯವಾಗಿ ನಿಮಿಷಗಳಲ್ಲಿ ಅನಿರೀಕ್ಷಿತವಾಗಿ ಸಂಭವಿಸುತ್ತದೆ

Mental Health: ಪ್ಯಾನಿಕ್ ಅಟ್ಯಾಕ್ ಆದ ವ್ಯಕ್ತಿಗೆ ನೀವು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us on

ನೀರು ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ ಮತ್ತು ತಣ್ಣೀರು ಕುಡಿಯುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಪ್ರಚೋದಿಸಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಎದೆನೋವು, ಮರಗಟ್ಟುವಿಕೆ ಮತ್ತು ಉಸಿರಾಟದ ತೊಂದರೆಗಳ ಜೊತೆಗೆ ವ್ಯಕ್ತಿಯನ್ನು ಆವರಿಸುವ ಭಯ ಮತ್ತು ಆತಂಕದ ಹಠಾತ್ ಭಾವನೆಯಿಂದ ಪ್ಯಾನಿಕ್ ಅಟ್ಯಾಕ್ ಆಗಬಹುದು. ಪ್ಯಾನಿಕ್ ಅಟ್ಯಾಕ್ ಸಾಮಾನ್ಯವಾಗಿ ನಿಮಿಷಗಳಲ್ಲಿ ಅನಿರೀಕ್ಷಿತವಾಗಿ ಸಂಭವಿಸುತ್ತದೆ ಮತ್ತು ಕೆಲವರಿಗೆ ಸೆಕೆಂಡುಗಳು ಅಥವಾ ಗಂಟೆಗಳವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಗಳು ಎದುರಿಸಲು ಅಗಾಧವಾಗಿರಬಹುದು ಮತ್ತು ವ್ಯಕ್ತಿಯ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು.

ಪೌಷ್ಟಿಕತಜ್ಞೆ ಲೊವ್ನಿತ್ ಬಾತ್ರಾ ಅವರ ಪ್ರಕಾರ ಯಾರಾದರೂ ಪ್ಯಾನಿಕ್ ಅಟ್ಯಾಕ್‌ನ್ನು ಅನುಭವಿಸಿದಾಗ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಸಹಾಯವನ್ನು ನೀಡಬೇಕೆಂದು ತಿಳಿದಿರಬೇಕು. ಇನ್ಟಾಗ್ರಾಮ್ ರೀಲ್‌ನಲ್ಲಿ ಪ್ಯಾನಿಕ್ ಅಟ್ಯಾಕ್ ಹೊಂದಿರುವ ಯಾರಿಗಾದರೂ ಸಹಾಯ ಮಾಡಲು ನೀವು ಅನುಸರಿಸಬಹುದಾದ ಕೆಲವು ಸಲಹೆಗಳನ್ನು ಪೌಷ್ಟಿಕತಜ್ಞರು ವಿವರಿಸುತ್ತಾರೆ.

ಸ್ವಲ್ಪ ನೀರು ಕೊಡಿ: ಪೌಷ್ಟಿಕತಜ್ಞರು ನೀರು ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ ಮತ್ತು ತಣ್ಣೀರು ಕುಡಿಯುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಪ್ರಚೋದಿಸಬಹುದು ಮತ್ತು ಅದು ವ್ಯಕ್ತಿಯನ್ನು ಶಾಂತವಾಗಿರಿಸುತ್ತದೆ ಎಂದು ಹೇಳುತ್ತಾರೆ. ಒಬ್ಬ ವ್ಯಕ್ತಿಯ ಕೈ ಅಥವಾ ಪಾದಗಳನ್ನು ತಣ್ಣೀರಿನಲ್ಲಿ ಅದ್ದಬಹುದು ಅಥವಾ ಒದ್ದೆಯಾದ ಟವೆಲ್‌ನ್ನು ಮುಖದ ಮೇಲೆ ಅಥವಾ ಕುತ್ತಿಗೆಗೆ ಹಾಕಬಹುದು. ಇದು ಆತಂಕವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.

ಇದನ್ನು ಓದಿ:Mental Health Tips: ನಿಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭ; 7 ಸರಳ ಮಾರ್ಗಗಳು ಇಲ್ಲಿವೆ

ಅವರು ಕುಳಿತುಕೊಳ್ಳಲು ಬಯಸಿದರೆ ಕೇಳಿ: ಯಾರಾದರೂ ಪ್ಯಾನಿಕ್ ಅಟ್ಯಾಕ್ ಹೊಂದಿರುವುದನ್ನು ನೀವು ನೋಡುತ್ತಿದ್ದರೆ ಆ ವ್ಯಕ್ತಿಯನ್ನು ಆರಾಮದಾಯಕವಾದ ಕುರ್ಚಿ ಅಥವಾ ಸೋಫಾದಲ್ಲಿ ಕೂರಿಸಿ. ಇದು ಪೌಷ್ಟಿಕತಜ್ಞರ ಪ್ರಕಾರ, ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ವ್ಯಕ್ತಿಯನ್ನು ಶಾಂತಗೊಳಿಸಲು ಸಹಾಯ ಮಾಡುವ ಗ್ರೌಂಡಿಂಗ್ ಪರಿಣಾಮವನ್ನು ಹೊಂದಿರುತ್ತದೆ.

ಗ್ರೌಂಡಿಂಗ್ ತಂತ್ರ: ಗ್ರೌಂಡಿಂಗ್ ತಂತ್ರವನ್ನು ಬಳಸುವುದು ಪ್ಯಾನಿಕ್ ಅಟ್ಯಾಕ್ ಸಂದಂರ್ಭದಲ್ಲಿ ವ್ಯಕ್ತಿಗೆ ಸಹಾಯ ಮಾಡುವ ಇನ್ನೊಂದು ಮಾರ್ಗವಾಗಿದೆ. ತಂತ್ರವು ವ್ಯಕ್ತಿಯನ್ನು ಆರಾಮವಾಗಿರುವಂತೆ ಮಾಡಲು ಎಲ್ಲಾ ಐದು ಇಂದ್ರಿಯಗಳ ಬಳಕೆಯನ್ನು ಒಳಗೊಂಡಿರುತ್ತದೆ. ಅತ್ಯಂತ ಸಾಮಾನ್ಯವಾದ ಗ್ರೌಂಡಿಂಗ್ ತಂತ್ರವೆಂದರೆ ಒಬ್ಬ ವ್ಯಕ್ತಿಯನ್ನು ಅವನು ನೋಡುವ ಐದು ವಿಷಯಗಳು, ಅವನು ಸ್ಪರ್ಷಿಸುವ ನಾಲ್ಕು ವಿಷಯಗಳು, ಅವನು ಕೇಳುವ ಮೂರು ವಿಷಯಗಳು, ಅವನು ವಾಸನೆ ಮಾಡುವ ಎರಡು ವಿಷಯಗಳು ಮತ್ತು ಅವನು ರುಚಿ ನೋಡಬಹುದಾದ ಒಂದು ವಿಷಯವನ್ನು ಪಟ್ಟಿ ಮಾಡಲು ನೀವು ಕೇಳಬಹುದು. ಈ ತಂತ್ರವು ವ್ಯಕ್ತಿಯನ್ನು ಈ ಪ್ರಶ್ನೆಗಳ ಮೇಲೆ ಕೇಂದ್ರೀಕರಿಸುವಂತೆ ಮಾಡುತ್ತದೆ ಮತ್ತು ಪ್ಯಾನಿಕ್ ಅಟ್ಯಾಕ್ ಸಮಯದಲ್ಲಿ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಲವ್ನೀತ್ ಬಾತ್ರಾ ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Mon, 30 January 23