ಉಗುರು ಕಚ್ಚುವಿಕೆಯು ನಿಮ್ಮ ಉಗುರುಗಳ ಸುತ್ತಲಿನ ಚರ್ಮವನ್ನು ನೋಯುವಂತೆ ಮಾಡುತ್ತದೆ. ಇದು ಉಗುರುಗಳನ್ನು ಬೆಳೆಯುವಂತೆ ಮಾಡುವ ಅಂಗಾಂಶವನ್ನು ಹಾನಿಗೊಳಿಸುತ್ತದೆ. ಇದರಿಂದ ಉಗುರುಗಳು ಅಸಹಜವಾಗಿ ಕಾಣುತ್ತದೆ. ದೀರ್ಘಕಾಲದ ಉಗುರು ಕಚ್ಚುವಿಕೆಯು ನಿಮ್ಮ ಬಾಯಿಯಿಂದ ನಿಮ್ಮ ಬೆರಳುಗಳಿಗೆ ಮತ್ತು ನಿಮ್ಮ ಉಗುರುಗಳಿಂದ ನಿಮ್ಮ ಮುಖ ಮತ್ತು ಬಾಯಿಗೆ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ರವಾನಿಸುವುದರಿಂದ ನೀವು ಸೋಂಕಿಗೆ ಗುರಿಯಾಗಬಹುದು.
ಉಗುರು ಕಚ್ಚುವಿಕೆಯನ್ನು ನಿಲ್ಲಿಸಲು ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ…
– ನಿಮ್ಮ ಉಗುರುಗಳನ್ನು ಚಿಕ್ಕದಾಗಿ ಟ್ರಿಮ್ ಮಾಡಿ. ಇದು ಉಗುರುಗಳನ್ನು ಕಚ್ಚುವ ಪ್ರಲೋಭನೆಯನ್ನು ಕಡಿಮೆ ಮಾಡಿ, ಆರೋಗ್ಯಕರ ಉಗುರು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಇದನ್ನೂ ಓದಿ: ಗಟ್ಟಿಯಾದ ಉಗುರುಗಳನ್ನು ಪಡೆಯಲು ಈ 8 ಆಹಾರ ಸೇವಿಸಿ
– ಉಗುರು ಕಚ್ಚುವಿಕೆಯನ್ನು ಚೂಯಿಂಗ್ ಗಮ್ ಅಥವಾ ತರಕಾರಿ, ಡ್ರೈಫ್ರೂಟ್ ಮುಂತಾದ ಆರೋಗ್ಯಕರ ಅಭ್ಯಾಸಗಳೊಂದಿಗೆ ಬದಲಿಸಿ.
– ಉಗುರು ಕಚ್ಚುವ ಪ್ರಚೋದನೆಯನ್ನು ಕಡಿಮೆ ಮಾಡಲು ಒತ್ತಡ ನಿವಾರಣೆ ಮಾಡುವ ತಂತ್ರಗಳನ್ನು ರೂಢಿಸಿಕೊಳ್ಳಿ.
– ಉಗುರು ಕಚ್ಚುವಿಕೆಯನ್ನು ದೈಹಿಕವಾಗಿ ತಡೆಗಟ್ಟಲು ಕೈಗೆ ಗ್ಲೌಸ್ಗಳನ್ನು ಧರಿಸುವುದನ್ನು ಅಥವಾ ಬೆರಳ ತುದಿಯಲ್ಲಿ ಬ್ಯಾಂಡೇಜ್ಗಳನ್ನು ಬಳಸುವುದನ್ನು ಮರೆಯಬೇಡಿ.
– ಸ್ಟ್ರೆಸ್ ಬಾಲ್ ಮುಂತಾದ ಚಟುವಟಿಕೆಗಳಲ್ಲಿ ನಿಮ್ಮ ಕೈಗಳನ್ನು ತೊಡಗಿಸಿಕೊಳ್ಳಿ.
– ನಿಮ್ಮ ಉಗುರುಗಳಿಗೆ ಕಹಿ ರುಚಿಯ ನೇಲ್ ಪಾಲಿಷ್ ಅನ್ನು ಹಚ್ಚಿ. ಇದರಿಂದ ಉಗುರು ಕಚ್ಚುವ ಅಭ್ಯಾಸ ನಿಧಾನವಾಗಿ ಕಡಿಮೆಯಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ