Health Tips: ಗುಣದಲ್ಲಿ ಹುಳಿಯಾಗಿದ್ದರೂ ಆರೋಗ್ಯಕ್ಕೆ ಸಿಹಿಯಂತೆ ಈ ಬೆಟ್ಟದ ನೆಲ್ಲಿಕಾಯಿ!
ಬೆಟ್ಟ ನೆಲ್ಲಿಕಾಯಿಯಲ್ಲಿ ರುಚಿಯಲ್ಲಿ ಹುಳಿಯಾಗಿದ್ದರೂ ತಿಂದ ಬಳಿಕ ಆರೋಗ್ಯಕ್ಕೆ ಸಿಹಿ ಎನ್ನುವುದು ಮಾತ್ರ ನಿಜ. ಬೆಟ್ಟದ ನೆಲ್ಲಿ ಅಥವಾ ಆಮ್ಲಾ ಎಂದು ಕರೆಯಲ್ಪಡುವ ಆಯುರ್ವೇದದಲ್ಲಿ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ನಮ್ಮ ಹಿರಿಯರು ಈ ಬೆಟ್ಟದ ನೆಲ್ಲಿಯನ್ನು ಬಳಸಿ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದರಲ್ಲಿ ನಿಪುಣರು. ಇವತ್ತಿಗೂ ಹಳ್ಳಿ ಕಡೆಗೆ ಹೋದರೆ ಈ ಬೆಟ್ಟದ ನೆಲ್ಲಿಕಾಯಿಯನ್ನು ಮನೆ ಮದ್ದು ತಯಾರಿಕೆಯಲ್ಲಿ ಬಳಸುವುದನ್ನು ಕಾಣಬಹುದು.
ಬೆಟ್ಟದ ನೆಲ್ಲಿಕಾಯಿ ಎಂದ ಕೂಡಲೇ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಗುಣದಲ್ಲಿ ಹುಳಿಯಾಗಿದ್ದು, ಈ ನೆಲ್ಲಿಕಾಯಿಯನ್ನು ಉಪ್ಪಿನ ಕಾಯಿ ತಯಾರಿಸಲು ಬಳಸುತ್ತಾರೆ. ನೆಲ್ಲಿಕಾಯಿ ಮರದ ಹಣ್ಣು, ಹೂವು, ಕಾಯಿ, ಎಲೆಗಳು, ಬೇರು ಮತ್ತು ತೊಗಟೆ ತುಂಬಾ ಔಷಧೀಯ ಗುಣವನ್ನು ಹೊಂದಿದೆ. ಆದರೆ, ಈ ಬೆಟ್ಟದ ನೆಲ್ಲಿಕಾಯಿಯಲ್ಲಿ ಕ್ಯಾಲೋರಿಗಳು, ಫೈಬರ್, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ 50%, ಕಬ್ಬಿಣ, ಕ್ಯಾರೋಟಿನ್, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್, ವಿಟಮಿನ್ ಗಳು ಹೇರಳವಾಗಿದ್ದು, ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಿಹಿಯಾಗಿದೆ.
ರೋಗ ಶಮನಕಾರಿ ಗುಣವಿರುವ ಬೆಟ್ಟದ ನೆಲ್ಲಿಕಾಯಿಯ ಮನೆಮದ್ದು:
- ನೆಲ್ಲಿಕಾಯಿ ಪುಡಿ ಎರಡು ಚಮಚ, ಜೀರಿಗೆ ಪುಡಿ ಅರ್ಧ ಚಮಚ ಮತ್ತು ಕಲ್ಲು ಸಕ್ಕರೆ ಇವುಗಳನ್ನು ಮಿಶ್ರ ಮಾಡಿ ದಿನಕ್ಕೆರಡು ಬಾರಿ ಸೇವಿಸಿದರೆ ಅಸಿಡಿಟಿ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ನೆಲ್ಲಿಕಾಯಿ ಬೀಜದ ಕಷಾಯ ತಯಾರಿಸಿ ಆರಿಸಿ ಶೋಧಿಸಿ ಕಣ್ಣಿಗೆ ಎರಡು ಹನಿ ಹಾಕಿದರೆದರೆ ಕಣ್ಣು ನೋವು ಗುಣಮುಖವಾಗುತ್ತದೆ.
- ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದಲ್ಲಿ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಕಣ್ಣು ನೋವಿಗೆ ಪರಿಣಾಮಕಾರಿಯಾಗಿದೆ.
- ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಅಕ್ಕಿ ತೊಳೆದ ನೀರಿನಲ್ಲಿ ಕಲಸಿ ದಿನಕ್ಕೆರಡು ಬಾರಿ ಸೇವಿಸಿದರೆ ಬಿಳಿ ಮುಟ್ಟು ನಿವಾರಣೆಯಾಗುತ್ತದೆ.
- ನಾಲ್ಕು ಚಮಚ ನೆಲ್ಲಿಕಾಯಿ ರಸಕ್ಕೆ ಒಂದು ಚಮಚ ಅಶ್ವಗಂಧ ಪುಡಿ ಒಂದು ಚಮಚ ಜೇನುತುಪ್ಪ ಅಥವಾ ಅರ್ಧ ಚಮಚ ತುಪ್ಪ ಸೇರಿಸಿ ಸೇವಿಸಿ ನಂತರ ಹಾಲು ಕುಡಿದರೆರೆ ಕಣ್ಣು ನೋವಿನ ಸಮಸ್ಯೆಯೂ ಶಮನವಾಗುತ್ತದೆ.
- ನೆಲ ನೆಲ್ಲಿಯನ್ನು ಬಾಯಿಗೆ ಹಾಕಿ ಅಗಿದು, ಬಿಸಿನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲುನೋವು ಕಡಿಮೆಯಾಗುತ್ತದೆ.
- ನೆಲ್ಲಿಕಾಯಿ ರಸ ಮತ್ತು ಜೀರಿಗೆ ಪುಡಿಯನ್ನು ಮಜ್ಜಿಗೆಯಲ್ಲಿ ಬೆರೆಸಿ, ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಗುಣಮುಖವಾಗುತ್ತದೆ.
- ಉರಿಮೂತ್ರ ಸಮಸ್ಯೆಯಿರುವವರು ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಮಿಶ್ರಣ ಮಾಡಿ, ಬೆಳಗ್ಗಿನ ಹೊತ್ತು ಮೂರು ದಿನಗಳ ಕಾಲ ಸೇವಿಸಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
- ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆಯು ವಾಸಿಯಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ