AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ಲಾಂಗ್ ಡಿಸ್ಟೆನ್ಸ್ ರಿಲೇಷನ್ ಶಿಪ್​​​​​ನಲ್ಲಿ ಸದಾಕಾಲ ಪ್ರೀತಿಯನ್ನು ಜೀವಂತವಾಗಿರಿಸಬೇಕೇ? ಇಲ್ಲಿದೆ ಸಿಂಪಲ್ ಟಿಪ್ಸ್

ಪ್ರೀತಿ ಎನ್ನುವುದು ಸಂಬಂಧದಲ್ಲಿ ಬಹುಮುಖ್ಯ. ಪ್ರೀತಿಯೊಂದಿಗೆ ಹೊಂದಾಣಿಕೆ, ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲುವುದು ಮುಖ್ಯವಾಗುತ್ತದೆ. ಪ್ರೀತಿಯಿದ್ದ ಕಡೆಯಲ್ಲಿ ಸಣ್ಣ ಪುಟ್ಟ ಮುನಿಸುಗಳು, ಕೋಪ ತಾಪಗಳು ಸರ್ವೇ ಸಾಮಾನ್ಯವಾಗಿರುತ್ತದೆ.ಈ ಸಮಯದಲ್ಲಿ ಇಬ್ಬರೂ ಸಣ್ಣ ಪುಟ್ಟ ಮುನಿಸುಗಳನ್ನು ಮುಂದುವರಿಸದೆ ಸೋಲುತ್ತಾ ಜೊತೆಯಾಗಿ ಸಾಗಬೇಕು. ಆದರೆ ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ ಶಿಪ್ ಆಗಲ್ಲ. ದೂರ ಇದ್ದುಕೊಂಡೆ ಪ್ರೀತಿಸುತ್ತಾ ಸಂಬಂಧವನ್ನು ಕಾಪಾಡಬೇಕಾಗುತ್ತದೆ. ಹೀಗಾಗಿ ದೂರವಿದ್ದಾಗ ನಿಮ್ಮ ಸಂಬಂಧವು ಇನ್ನಷ್ಟು ಸುಂದರವಾಗಿಸಿಕೊಳ್ಳಲು ಕೆಲವು ಟಿಪ್ಸ್ ಗಳನ್ನು ಪಾಲಿಸುವುದು ಒಳ್ಳೆಯದು.

Relationship Tips: ಲಾಂಗ್ ಡಿಸ್ಟೆನ್ಸ್ ರಿಲೇಷನ್ ಶಿಪ್​​​​​ನಲ್ಲಿ ಸದಾಕಾಲ ಪ್ರೀತಿಯನ್ನು  ಜೀವಂತವಾಗಿರಿಸಬೇಕೇ? ಇಲ್ಲಿದೆ ಸಿಂಪಲ್ ಟಿಪ್ಸ್
Long distance relationshipImage Credit source: Pinterest
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ|

Updated on: Feb 03, 2024 | 2:52 PM

Share

ಒಬ್ಬರ ಪ್ರೀತಿಗಾಗಿ ಹಾಗೂ ಒಬ್ಬರ ಬರುವಿಕೆಗಾಗಿ ಕಾಯುವ ಅನುಭವವೇ ಬೇರೆ. ಲಾಂಗ್ ಡಿಸ್ಟೆನ್ಸ್ ರಿಲೇಷನ್ ಶಿಪ್ ನಲ್ಲಿದ್ದವರಿಗೆ ಈ ಅನುಭವವಾಗಿರಬಹುದು. ಬಹುತೇಕರು ಈ ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ ನಲ್ಲಿ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುತ್ತಾರೆ. ಆದರೆ ಎಷ್ಟೋ ಸಂಬಂಧಗಳು ಲಾಂಗ್ ಡಿಸ್ಟೆನ್ಸ್ ರಿಲೇಷನ್ ಶಿಪ್ ನಿಂದಲೇ ಗಟ್ಟಿಯಾಗುವುದು. ದೂರವಿದ್ದಾಗಲೇ ಒಬ್ಬರಿಗೆ ಇನ್ನೊಬ್ಬರ ಬೆಲೆ ತಿಳಿಯುವುದು. ಸಂಗಾತಿಗಳಿಬ್ಬರೂ ದೂರವಿದ್ದಾಗಲೇ ಭಿನ್ನಾಭಿಪ್ರಾಯ, ಜಗಳ ಕಡಿಮೆಯಾಗಿ ಪ್ರೀತಿಯೂ ಬೆಳೆಯುವುದು. ಸಂಗಾತಿಗಳಿಬ್ಬರೂ ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ ನಲ್ಲಿ ಪ್ರೀತಿಯನ್ನು ಹೆಚ್ಚಿಸಿ ಇನ್ನಷ್ಟು ಹತ್ತಿರವಾಗಬಹುದು.

ನಿಮ್ಮ ಲಾಂಗ್ ಡಿಸ್ಟೆನ್ಸ್ ರಿಲೇಷನ್ ಶಿಪ್ ಚೆನ್ನಾಗಿರಲು ಸಂಗಾತಿಯೊಂದಿಗೆ ಹೀಗೆ ಇರಿ:

  1. ದೂರವಿದ್ದರೂ ಹತ್ತಿರವಾಗಿರಿ : ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ ನಲ್ಲಿ ದೂರವೇ ನಿಜವಾದ ಶತ್ರು. ದೈಹಿಕವಾಗಿ ದೂರವಿದ್ದರೂ ಮಾನಸಿಕವಾಗಿ ಒಬ್ಬರಿಗೊಬ್ಬರು ಹತ್ತಿರವಾಗಿರುವುದು ಬಹಳ ಮುಖ್ಯ. ಸಂಗಾತಿಗಳಿಬ್ಬರೂ ತಮ್ಮ ಪ್ರೀತಿ ಪಾತ್ರರಿಗೆ ಹತ್ತಿರವಾಗುವ ಕೆಲಸವನ್ನು ಮಾಡಿ.
  2. ದೂರದಿಂದಲೇ ಡೇಟ್ ಮಾಡಿ : ದೂರ ಕೆಲವೇ ನೆಪಕಸ್ಟೇ. ಹೀಗಾಗಿ ಸಂಗಾತಿಗಳಿಬ್ಬರೂ ವಾರಾಂತ್ಯದಲ್ಲಿ ಹೆಚ್ಚು ಸಮಯ ನೀಡುವ ಮೂಲಕ ವಿಡಿಯೋ ಕರೆಗಳನ್ನು ಮಾತನಾಡಿ. ಇಬ್ಬರೂ ವಿಡಿಯೋ ಕರೆಯಲ್ಲಿದ್ದುಕೊಂಡೇ ಒಂದೊಳ್ಳೆ ಅಡುಗೆ ಮಾಡಿ ಸವಿಯಿರಿ. ದೂರವಿದ್ದರೂ ಕೂಡ ಆ ದಿನವನ್ನು ಸುಂದರ ನೆನಪಿನ ಬುತ್ತಿಯೊಳಗೆ ಸೇರಿಸಿಕೊಳ್ಳಿ.
  3. ಸಂದೇಶ ಹಾಗೂ ಕರೆಯ ಮೂಲಕ ಸಂಪರ್ಕದಲ್ಲಿರಿ : ಸಂಬಂಧವು ಚೆನ್ನಾಗಿರಬೇಕೆಂದರೆ ದೈಹಿಕವಾಗಿ ಹತ್ತಿರವಿರುವುದು ಮುಖ್ಯವಾಗುವುದಿಲ್ಲ. ದೂರವಿದ್ದರೂ ಮೆಸೇಜ್ ಹಾಗೂ ಕರೆ ಮಾಡಿ ತಮ್ಮ ಸಂಗಾತಿಯ ಜೊತೆಗೆ ಮಾತನಾಡುವ ಮೂಲಕ ಹತ್ತಿರವಿದ್ದು ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ ಅನ್ನು ಕಾಪಾಡಿಕೊಳ್ಳಬಹುದು.
  4. ಸಂಗಾತಿಗೆ ಉಡುಗೊರೆಯನ್ನು ಕಳುಹಿಸುತ್ತಾ ಇರಿ: ದೂರವೆನ್ನುವುದು ಸಂಬಂಧಕ್ಕೆ ಪ್ರೀತಿಗೆ ಅಡ್ಡಿಯಾಗುವುದಿಲ್ಲ. ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ ಅನ್ನು ಕಾಯ್ದುಕೊಳ್ಳಲು ಸಂಗಾತಿಗೆ ದೂರದಿಂದಲೇ ಸರ್ಪ್ರೈಸ್ ಗಿಫ್ಟ್ಗಳನ್ನು ಕಳುಹಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಸಂಗಾತಿಗೆ ಖುಷಿಯಾಗುತ್ತದೆ.
  5. ಆಗಾಗ ರೋಮ್ಯಾಂಟಿಕ್ ಸಂಭಾಷಣೆಯಿರಲಿ: ದೂರವಿದ್ದರೇನಂತೆ ಸಂಗಾತಿಗಳಿಬ್ಬರೂ ಬಿಡುವಿನ ಸಮಯದಲ್ಲಿ ಪ್ರೀತಿಯ ಸಂಭಾಷಣೆಯನ್ನು ತೊಡಗುವುದು ಮುಖ್ಯ. ಸಂಭಾಷಣೆಯೂ ದೂರವಿದ್ದೇವೆ ಎನ್ನುವುದನ್ನು ಮರೆಸುತ್ತದೆ.
  6. ಸಂಗಾತಿ ಮೇಲಿನ ಪ್ರೀತಿಯನ್ನು ಪದಗಳ ಮೂಲಕ ತಿಳಿಸಿ: ಸಂಗಾತಿಗೆ ಕಾಲ್ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುವುದು ಕಷ್ಟವಾಗಬಹುದು. ಹೀಗಾಗಿ ನಿಮ್ಮ ಪ್ರೀತಿಯನ್ನು ಸಂಗಾತಿಗೆ ಫೋಟೋ, ಇಮೋಜಿ, ಇನ್ ಬಾಕ್ಸ್ ಮೆಸೇಜ್ ಕಳುಹಿಸುವ ಮೂಲಕ ತಿಳಿಸಿ. ಒಂದೇ ಒಂದು ಮೆಸೇಜ್ ಸಂಗಾತಿಯ ಮುಖದಲ್ಲಿ ನಗು ತರಿಸುತ್ತದೆ, ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ.
  7. ಅತಿಯಾದ ಸಂಭಾಷಣೆಯೂ ಸಂಬಂಧವನ್ನು ದುರ್ಬಲಗೊಳಿಸದಂತಿರಲಿ : ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್ ನಲ್ಲಿ ಒಬ್ಬರಿಗೊಬ್ಬರು ಸಮಯ ನೀಡುವುದು ಬಹಳ ಮುಖ್ಯ. ಸಂದೇಶ ಕಳುಹಿಸುವುದು ಪ್ರೀತಿ ಹಾಗೂ ಕಾಳಜಿಯನ್ನು ತೋರಿಸುತ್ತದೆ. ಆದರೆ ಅತಿಯಾದ ಸಂದೇಶಗಳು ಒಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಹುದು. ಹೀಗಾಗಿ ಸಂಗಾತಿಯ ಬಳಿ ಬೆಳಗ್ಗಿನಿಂದ ಸಂಜೆಯವರೆಗೆ ಫೋನ್ ಅಥವಾ ಮೆಸೇಜ್ ಕಳುಹಿಸುತ್ತ ಇರಿ ಎನ್ನುವುದು ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದಲ್ಲದೇ ಕೆಲಸದಲ್ಲಿ ತೊಡಗಿಕೊಳ್ಳಲು ಕಷ್ಟವಾಗಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ