Crime News: ಲಿವ್ ಇನ್ ರಿಲೇಷನ್ ಶಿಪ್ನಲ್ಲಿದ್ದ ಪ್ರೇಮಿಗಳ ಗಲಾಟೆ ಕೊಲೆಯಲ್ಲಿ ಅಂತ್ಯ
ಪ್ರಿಯಕರ, ಪ್ರಿಯತಮೆಯನ್ನು ಕೊಲೆ ಮಾಡಿರುವ ಘಟನೆ ನಗರದ ಟಿ.ಸಿ.ಪಾಳ್ಯದಲ್ಲಿ ನಡೆದಿದೆ.
ಬೆಂಗಳೂರು: ಪ್ರಿಯಕರ (Lover) , ಪ್ರಿಯತಮೆಯನ್ನು (Girl Friend) ಕೊಲೆ ಮಾಡಿರುವ ಘಟನೆ ನಗರದ ಟಿ.ಸಿ.ಪಾಳ್ಯದಲ್ಲಿ ನಡೆದಿದೆ. ನೇಪಾಳ ಮೂಲದ ಕೃಷ್ಣಕುಮಾರಿ (23) ಕೊಲೆಯಾದ ಯುವತಿ. ಯುವತಿ ಕೃಷ್ಣಕುಮಾರಿ ಪ್ರಿಯಕರ ಸಂತೋಷ್ ದಾಮಿ(27) ಯೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದಳು. ಕೃಷ್ಣಕುಮಾರಿ ಸ್ಪಾ ಒಂದರಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಸಂತೋಷ್ ಸಲೂನ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದನು. ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಲಿವ್ ಇನ್ ರಿಲೇಷನ್ ಶಿಪ್ನಲ್ಲಿದ್ದರು.
ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು, ಆದರೆ ಇತ್ತೀಚಿಗೆ ಪರಸ್ಪರ ಒಬ್ಬರ ಮೇಲೊಬ್ಬರಿಗೆ ಅಸಮಾಧಾನ ವಿತ್ತು. ಸಂತೋಷ್ ಆಗಾಗ ತನ್ನ ಸ್ನೇಹಿತರನ್ನು ಕರೆದುಕೊಂಡು ಮನೆಗೆ ಬರುತ್ತಿದ್ದನು. ಸಂತೋಷ್ಗೆ ಕೃಷ್ಣಕುಮಾರಿ ಸದಾ ಫೋನಿನಲ್ಲಿರುತ್ತಾಳೆ ಎಂಬ ಅಸಮಾಧಾನವಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ನಿನ್ನೆ (ನ.29) ಗಲಾಟೆ ನಡೆದಿದೆ. ಗಲಾಟೆ ತಾರಕ್ಕೇರಿ ಸಂತೋಷ, ಪ್ರಿಯತಮೆ ಕೃಷ್ಣಕುಮಾರಿ ತಲೆಗೆ ರಾಡ್ನಿಂದ ಹೊಡೆದಿದ್ದಾನೆ. ಬಳಿಕ ಕೃಷ್ಣಕುಮಾರಿ ನೋವಿನಲ್ಲಿ ಸ್ನೇಹಿತೆಗೆ ವಿಡಿಯೋ ಕಾಲ್ ಮಾಡಿ ವಿಚಾರ ತಿಳಿಸಿದ್ದಾಳೆ. ನಂತರ ಸಂತೋಷ, ಕೃಷ್ಣಕುಮಾರಿಯ ಕತ್ತು ಹಿಸುಕಿದ್ದಾನೆ.
ಇದನ್ನೂ ಓದಿ: ಉಂಡು ಹೋದ..ಚಿನ್ನದ ಒಡವೆ ಕೊಂಡು ಹೋದ: ಮದ್ವೆ ಆಗ್ತೀನಿ ಎಂದು ಬಂದವ ವಿಧವೆ ಬಾಳಲ್ಲಿ ಚೆಲ್ಲಾಟ
ಈ ವೇಳೆ ಕೃಷ್ಣಕುಮಾರಿ ಸ್ನೇಹಿತೆ ಮನೆಗೆ ಬಂದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಕುಮಾರಿ ಮೃತಪಟ್ಟಿದ್ದಾಳೆ. ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನೂ ಕೃಷ್ಣಕುಮಾರಿ ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದಳು. ಒಂದು ಮಗು ಸಹ ಇತ್ತು. ಪ್ರೇಮಿಗಳ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ ಅಂತ ಗಲಾಟೆಯಾಗಿದೆ
ಕಳೆದ ರಾತ್ರಿ 1:30 ಕ್ಕೆ ಆಸ್ಪತ್ರೆಯಿಂದ ಕರೆ ಬಂದಿದೆ. ಕೂಡಲೇ ಪೊಲೀಸರು ಆಸ್ಪತ್ರೆಗೆ ಹೋಗಿ ನೋಡಿದ್ದಾರೆ. ಈ ವೇಳೆ ಕೃಷ್ಣಕುಮಾರಿ ಎಂಬ ಯುವತಿ ಸಾವನ್ನಪ್ಪಿದ್ದಳು. ಮೂಲತಹ ನೇಪಾಳದವಳಾದ ಯುವತಿ ಎರಡು ವರ್ಷಗಳಿಂದ ಸಂತೋಷ್ ಎಂಬಾತನ ಜೊತೆ ಒಂದೇ ಮನೆಯಲ್ಲಿ ಇದ್ದಳು. ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ ಅಂತ ಗಲಾಟೆಯಾಗಿದೆ. ಹಾಗೇ ಮನೆಗೆ ಬಂದರು ಬರೀ ಫೋನ್ನಲ್ಲಿ ಇರುತ್ತಾಳೆಂದು ಗಲಾಟೆಯಾಗಿ ಕೊನೆಗೆ ಕೊಲೆಲ್ಲಿ ಅಂತ್ಯವಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಸಂತೋಷ್ ಕೂಡ ಮೂಲತಹ ನೇಪಾಳದವನೆ. ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದನು. ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ಮೃತ ಮಹಿಳೆಯ ಕುಟುಂಬಸ್ಥರ ಸಂಪರ್ಕ ಸಿಗುತ್ತಿಲ್ಲ. ಸಂಪರ್ಕ ಮಾಡಿ ಕುಟುಂಬಸ್ಥರಿಗೆ ಮಾಹಿತಿ ನೀಡುತ್ತೇವೆ ಎಂದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Wed, 30 November 22