AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ವೆಯಾಗಿದ್ದರೂ ಪ್ರಿಯಕರನ ಜತೆ ಲಿವ್​ ಇನ್ ರಿಲೇಷನ್ ಶಿಪ್: ಏಕಾಏಕಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್​ನಲ್ಲಿದ್ದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಯುವತಿಗೆ ಈಗಾಗಲೇ ಮದ್ವೆಯಾಗಿದ್ದರೂ ಸಹ ಬೆಂಗಳೂರಿನಲ್ಲಿ ಪ್ರಿಯಕರನ ಜೊತೆ ಲಿವ್​ ಇನ್ ರಿಲೇಷನ್ ಶಿಪ್​ನಲ್ಲಿದ್ದಳು. ಈ ವಿಷಯ ಆಕೆಯ ಗಂಡನಿಗೆ ಗೊತ್ತಾಗಿದೆ. ಬಳಿಕ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮದ್ವೆಯಾಗಿದ್ದರೂ ಪ್ರಿಯಕರನ ಜತೆ ಲಿವ್​ ಇನ್ ರಿಲೇಷನ್ ಶಿಪ್: ಏಕಾಏಕಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
TV9 Web
| Edited By: |

Updated on: Nov 07, 2023 | 8:30 AM

Share

ಬೆಂಗಳೂರು, (ನವೆಂಬರ್ 06): ಮದ್ವೆಯಾಗಿದ್ದರೂ ಪತಿಯಿಂದ ದೂರವಾಗಿ ಪ್ರಿಯತಮನ ಜೊತೆ ಲಿವಿಂಗ್ ಟುಗೆದರ್​ನಲ್ಲಿದ್ದ(living together relationship) ನರ್ಸಿಂಗ್‍ ವಿದ್ಯಾರ್ಥಿನಿ ಆತ್ಮಹತ್ಯೆಗೆ(Suicide) ಶರಣಾಗಿದ್ದಾಳೆ. ಬೆಂಗಳೂರಿನಲ್ಲಿ(Bengaluru)  ನರ್ಸಿಂಗ್ ವಿದ್ಯಾರ್ಥಿನಿ ಹಾಗೂ ಆಕೆಯ ಪ್ರಿಯತಮ ಒಟ್ಟಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳ ಮೂಲದ ಸೌಮಿನಿ ದಾಸ್ (20) ಹಾಗೂ ಹೋಂ ನರ್ಸ್ ಮಾಡುತ್ತಿದ್ದ ಕೇರಳ ಮೂಲದ ಅಭಿಲ್ ಅಬ್ರಹಾಂ (29) ಆತ್ಮಹತ್ಯೆ ಮಾಡಿಕೊಂಡುವರು ಎಂದು ಗುರುತಿಸಲಾಗಿದೆ.

ಸೌಮಿನಿ ದಾಸ್ ವಿವಾಹವಾಗಿದ್ದು, ನರ್ಸಿಂಗ್ ವಿದ್ಯಾಭ್ಯಾಸ ಸಂಬಂಧ ನಗರದಲ್ಲಿ ವಾಸವಾಗಿದ್ದಳು. ಆ ಸಂದರ್ಭದಲ್ಲಿ ಕೇರಳ ಮೂಲದ ಹೋಂ-ನರ್ಸಿಂಗ್ ಕೆಲಸ ಮಾಡುತ್ತಿದ್ದ ಅಭಿಲ್ ಅಬ್ರಹಾಂ ಪರಿಚಯವಾಗಿದೆ. ತದನಂತರದಲ್ಲಿ ಅಬ್ರಹಾಂ ಜೊತೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರು ದೊಡ್ಡಗುಬ್ಬಿ ಗ್ರಾಮದ ಡಿಎಸ್ ಮ್ಯಾಕ್ಸ್ ಸ್ಟ್ರಿಂಗ್ ಫೀಲ್ಡ್ ಅಪಾರ್ಟ್‍ಮೆಂಟ್‍ನ ನಾಲ್ಕನೇ ಮಹಡಿಯ ಬಿ ಬ್ಲಾಕ್ ಪ್ಲಾಟ್ ನಂ. 422ರಲ್ಲಿ ವಾಸವಾಗಿ ಸಹಜೀವನ ನಡೆಸುತ್ತಿದ್ದರು.

ಇದನ್ನೂ ಓದಿ: ಅನುಮಾನಕ್ಕೆ ಬಾಣಂತಿ ಪತ್ನಿಯನ್ನೇ ಕೊಂದ ಪತಿ: ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪೊಲೀಸಪ್ಪ

ಮತ್ತೆ ಬರುವುದಿಲ್ಲ ಎಂದು ಹೇಳಿ ಬಂದಿದ್ದಳು

ಸೌಮಿನಿ ದಾಸ್ ಮೂರು ತಿಂಗಳ ಹಿಂದೆ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಳು. ಆ ವೇಳೆ ಗಂಡನ ಜೊತೆ ಜಗಳ ಮಾಡಿಕೊಂಡಿದ್ದಳು. ನಿನ್ನ ಜೊತೆ ನಾನು ಇರುವುದಿಲ್ಲ. ನನ್ನ ತಂಟೆಗೆ ಬರಬೇಡ. ನಾನು ಮತ್ತೆ ಬರುವುದಿಲ್ಲ ಎಂದು ಗಂಡನಿಗೆ ಹೇಳಿ ಬೆಂಗಳೂರಿಗೆ ಬಂದಿದ್ದಳು. ಪತ್ನಿಯ ನಡೆಯಿಂದ ಅನುಮಾನಗೊಂಡು ವಿಚಾರಿಸಿದಾಗ ಆಕೆಯ ಲಿವ್ ಇನ್ ರಿಲೇಷನ್ ಶಿಪ್​ನಲ್ಲಿರುವ ಸಂಗತಿ ಬೆಳಕಿಗೆ ಬಂದಿತ್ತು. ಆಗ ಪತಿ, ಸೌಮಿನಿ ದಾಸ್​ಗೆ ತರಾಟೆಗೆ ತೆಗೆದುಕೊಂಡಿದ್ದ. ಇದಾದ ಬಳಿಕ ಸೌಮಿನಿ ದಾಸ್ ಹಾಗೂ ಆಕೆ ಲವರ್ ಅಬಿಲ್ ಅಬ್ರಾಹಂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮ್ಮ ಪ್ರೀತಿ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಅವರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ, ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇವರ ಪ್ಲಾಟ್‍ನಿಂದ ಕಿರುಚಾಟ ಕೇಳಿ ಅಕ್ಕಪಕ್ಕದವರು ಬಂದು ನೋಡುವಷ್ಟರಲ್ಲಿ ಸೌಮಿನಿ ದಾಸ್ ಸಂಪೂರ್ಣ ಸುಟ್ಟು ಮೃತಪಟ್ಟಿದ್ದಳು. ಗಂಭೀರ ಸ್ವರೂಪದ ಗಾಯಗಳಾಗಿದ್ದ ಅಭಿಲ್ ಅಬ್ರಹಾಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದು ಕೊತ್ತನೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ