ಉಗುರುಗಳನ್ನು ಉಜ್ಜಿದರೆ ಕೂದಲು ಉದ್ದವಾಗುತ್ತಾ?

ನಿಮ್ಮ ಉಗುರುಗಳನ್ನು ಉಜ್ಜುವುದು ಶಾಂತಗೊಳಿಸುವ ವ್ಯಾಯಾಮವಾಗಿದ್ದು ಅದು ನಿಮಗೆ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ನೆತ್ತಿಯ ರಕ್ತದ ಹರಿವು ಸುಧಾರಿಸುತ್ತದೆ, ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಉಗುರುಗಳನ್ನು ಉಜ್ಜಿದರೆ ಕೂದಲು ಉದ್ದವಾಗುತ್ತಾ?
ಉಗುರುಗಳನ್ನು ಉಜ್ಜುವುದು Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 07, 2023 | 4:45 PM

ಕೂದಲು ಮತ್ತು ಉಗುರುಗಳನ್ನು ಯೋಗ ಮತ್ತು ಆಯುರ್ವೇದದಲ್ಲಿ ಚಯಾಪಚಯ ಪ್ರಕ್ರಿಯೆಗಳ ಉಪಉತ್ಪನ್ನಗಳು ಎಂದು ಪರಿಗಣಿಸಲಾಗುತ್ತದೆ. ಯೋಗ ತಜ್ಞರ ಪ್ರಕಾರ, ಕೂದಲಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಗೆ ಮುದ್ರೆಗಳಿಂದ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು. ಕೂದಲು ಮತ್ತೆ ಬೆಳೆಯುವಂತೆ ಮಾಡುವುದು, ಮುಂಚಿನ ಕೂದಲು ತೆಳುವಾಗುವುದು, ಬೋಳು ತಲೆ ಮತ್ತು ಇತರ ಅನೇಕ ಕೂದಲಿನ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿದೆ.

ಬಾಲಯಂ ಮುದ್ರೆಯಿಂದ ಕೂದಲ ಆರೋಗ್ಯ ಮತ್ತು ಬೆಳವಣಿಗೆಯನ್ನು ಹೆಚ್ಚಿಸಬಹುದು ಎಂದು ಅಕ್ಷರ ಯೋಗ ಸಂಸ್ಥೆಗಳು, ಹಿಮಾಲಯ ಯೋಗ ಆಶ್ರಮ ಮತ್ತು ವಿಶ್ವ ಯೋಗ ಸಂಸ್ಥೆಯ ಸಂಸ್ಥಾಪಕ ಹಿಮಾಲಯನ್ ಸಿದ್ಧಾ ಅಕ್ಷರ್ ಹಿಂದುಸ್ತಾನ್ ಟೈಮ್ಸ್​​ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Hair Care: ವಯಸ್ಸಾಗುವ ಮೊದಲೇ ಕೂದಲು ಬೆಳ್ಳಗಾಗಲು ಕಾರಣವೇನು?

ಬಾಲಯಂ ಮುದ್ರೆಯನ್ನು ಮಾಡುವ ವಿಧಾನ ಹೀಗಿದೆ.

– ನಿಮ್ಮ ಬೆರಳುಗಳನ್ನು ಒಳಕ್ಕೆ ತಿರುಗಿಸುವ ಮೂಲಕ ಅರ್ಧ ಮುಷ್ಟಿಯನ್ನು ಮಾಡಿಕೊಳ್ಳಿ.

– ಆ ಮುಷ್ಟಿಯಿಂದ ನಿಮ್ಮ ಹೆಬ್ಬೆರಳನ್ನು ಹೊರತೆಗೆಯಿರಿ.

– ನಿಮ್ಮ ಅಂಗೈಗಳನ್ನು ಪರಸ್ಪರ ಎದುರಿಟ್ಟು ನಿಮ್ಮ ಬೆರಳುಗಳ ಉಗುರುಗಳು ಪರಸ್ಪರ ಸ್ಪರ್ಶಿಸುವಂತೆ ಮಾಡಿ.

– ಬಳಿಕ ನಿಮ್ಮ ಎರಡೂ ಕೈಯ ಉಗುರುಗಳನ್ನು ಪರಸ್ಪರ ವಿರುದ್ಧವಾಗಿ ಉಜ್ಜಿಕೊಳ್ಳಿ.

– ನೆನಪಿಡಿ, ನೀವು ನಿಮ್ಮ ಬೆರಳುಗಳ ಉಗುರುಗಳನ್ನು ಮಾತ್ರ ರಬ್ ಮಾಡಬೇಕೇ ವಿನಃ ಹೆಬ್ಬೆರಳನ್ನಲ್ಲ.

ಇದನ್ನೂ ಓದಿ: Hair Loss: ಕೂದಲು ಉದುರಲು ಕಾರಣವೇನು? ತಡೆಗಟ್ಟಲು ಏನು ಮಾಡಬೇಕು?

ಬಾಲಯಂ ಮುದ್ರೆಯಿಂದ ಏನು ಉಪಯೋಗ?:

– ನಿಮ್ಮ ಉಗುರುಗಳನ್ನು ಉಜ್ಜುವುದು ಶಾಂತಗೊಳಿಸುವ ವ್ಯಾಯಾಮವಾಗಿದ್ದು ಅದು ನಿಮಗೆ ವಿಶ್ರಾಂತಿಗೆ ಸಹಾಯ ಮಾಡುತ್ತದೆ.

– ನೆತ್ತಿಯ ರಕ್ತದ ಹರಿವು ಸುಧಾರಿಸುತ್ತದೆ, ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

– ಕೂದಲು ಬಿಳಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಕೂದಲಿನ ರಚನೆ, ಟೋನ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ.

– ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ಉತ್ತಮ ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ಉತ್ತೇಜಿಸುತ್ತದೆ.

ಮುದ್ರೆಗಳು ನಮ್ಮ ಕೂದಲಿಗೆ ಒಂದು ವರವಾಗಿದೆ. ಏಕೆಂದರೆ ಅವು ಮತ್ತೆ ಕೂದಲು ಬೆಳೆಯಲು ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಉಗುರುಗಳನ್ನು ಉಜ್ಜಿದಾಗ ಆಮ್ಲಜನಕ ಮತ್ತು ರಕ್ತದ ಹರಿವು ಹೆಚ್ಚಾಗುತ್ತದೆ. ಇದನ್ನು ನಿರಂತರವಾಗಿ ದೀರ್ಘಾವಧಿಯವರೆಗೆ ಮಾಡಿದರೆ ಮಾತ್ರ ಪ್ರಯೋಜನ ಸಿಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್