AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hair Loss: ಕೂದಲು ಉದುರಲು ಕಾರಣವೇನು? ತಡೆಗಟ್ಟಲು ಏನು ಮಾಡಬೇಕು?

ಪುರುಷರಲ್ಲಿ ಕೂದಲು ಉದುರುವಿಕೆಯು ಸಾಮಾನ್ಯವಾಗಿ ನೆತ್ತಿಯಲ್ಲಿ ಪ್ರಾರಂಭವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹೆಂಗಸರಲ್ಲಿ ಕೂದಲು ವಿಪರೀತ ತೆಳುವಾಗುವುದರಿಂದ ಸಮಸ್ಯೆ ಆರಂಭವಾಗುತ್ತದೆ. ಅಗತ್ಯ ಪೋಷಕಾಂಶಗಳು, ಹಾರ್ಮೋನುಗಳು ಮತ್ತು ಥೈರಾಯ್ಡ್ ಮಟ್ಟಗಳಲ್ಲಿನ ಅಸಮತೋಲನವು ಕೂದಲು ಉದುರಲು ಕಾರಣವಾಗಬಹುದು.

Hair Loss: ಕೂದಲು ಉದುರಲು ಕಾರಣವೇನು? ತಡೆಗಟ್ಟಲು ಏನು ಮಾಡಬೇಕು?
ಕೂದಲು ಉದುರುವಿಕೆ Image Credit source: iStock
ಸುಷ್ಮಾ ಚಕ್ರೆ
|

Updated on: Oct 21, 2023 | 1:28 PM

Share

ನಮ್ಮ ಕೂದಲು ನಮ್ಮ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಕೂದಲು ಆರೋಗ್ಯವಾಗಿದ್ದರೆ ನಾವೂ ಆರೋಗ್ಯಯುತವಾಗಿರುತ್ತೇವೆ. ಕೂದಲು ಉದುರುವುದು ಎಲ್ಲರಿಗೂ ಬಹಳ ಬೇಸರದ ಸಂಗತಿ. ಅದು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಯುವಕರಿಂದ ವೃದ್ಧರವರೆಗೆ ಎಲ್ಲರಿಗೂ ಕೂದಲು ಉದುರುವಿಕೆ ದೊಡ್ಡ ಸಮಸ್ಯೆಯಾಗಿದೆ. ಪ್ರತಿದಿನ 50ರಿಂದ 100 ಕೂದಲು ಉದುರುವುದು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಹೊಸ ಕೂದಲು ಆ ಜಾಗದಲ್ಲಿ ಮತ್ತೆ ಬೆಳೆಯುತ್ತವೆ.

ಕೂದಲು ಉದುರುವುದು ಒಂದೇ ರೀತಿಯ ಸಮಸ್ಯೆಯಲ್ಲ. ಇದು ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ. ಅತಿಯಾದ ಕೂದಲು ಉದುರುವಿಕೆ ಮತ್ತು ತೆಳುವಾಗುವುದು ಮೊದಲು ಕಾಣಿಸಿಕೊಳ್ಳುವ ತೊಂದರೆ. ಅನುವಂಶಿಕ ಅಂಶಗಳು ಹೆಚ್ಚಾಗಿ ಕೂದಲು ತೆಳುವಾಗುವುದಕ್ಕೆ ಒಂದು ಮುಖ್ಯ ಕಾರಣವಾಗಿದೆ. ಇದು ಗಂಡು ಮತ್ತು ಹೆಣ್ಣುಗಳಲ್ಲಿ ವಿಭಿನ್ನವಾಗಿ ಪ್ರಕಟವಾಗುತ್ತದೆ. ಪುರುಷರಲ್ಲಿ ಕೂದಲು ಉದುರುವಿಕೆಯು ಸಾಮಾನ್ಯವಾಗಿ ನೆತ್ತಿಯಲ್ಲಿ ಪ್ರಾರಂಭವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹೆಂಗಸರಲ್ಲಿ ಕೂದಲು ವಿಪರೀತ ತೆಳುವಾಗುವುದರಿಂದ ಸಮಸ್ಯೆ ಆರಂಭವಾಗುತ್ತದೆ. ಅಗತ್ಯ ಪೋಷಕಾಂಶಗಳು, ಹಾರ್ಮೋನುಗಳು ಮತ್ತು ಥೈರಾಯ್ಡ್ ಮಟ್ಟಗಳಲ್ಲಿನ ಅಸಮತೋಲನವು ಕೂದಲು ಉದುರಲು ಕಾರಣವಾಗಬಹುದು. ಸಮತೋಲಿತ ಆಹಾರವನ್ನು ಸೇವಿಸುವುದು ಮತ್ತು ಪೌಷ್ಠಿಕಾಂಶದ ಕೊರತೆಯನ್ನು ಪರಿಹರಿಸುವುದು ಅತ್ಯಗತ್ಯ.

ಇದನ್ನೂ ಓದಿ: Hair Care Tips: ಮರದ ಬಾಚಣಿಗೆ ಬಳಸಿದರೆ ಕೂದಲು ಉದ್ದವಾಗಿ ಬೆಳೆಯುತ್ತಾ?

ಬೆಂಗಳೂರಿನಂತಹ ಮಹಾನಗರಗಳಲ್ಲಿ, ರಿಬಾಂಡಿಂಗ್, ಸ್ಟ್ರೈಟ್ನಿಂಗ್ ಮತ್ತು ಕಲರಿಂಗ್‌ನಂತಹ ಸೌಂದರ್ಯ ಚಿಕಿತ್ಸೆಗಳು ಸಾಮಾನ್ಯವಾಗಿದೆ. ಈ ಚಿಕಿತ್ಸೆಗಳು ಸಾಮಾನ್ಯವಾಗಿ ರಾಸಾಯನಿಕಗಳ ಬಳಕೆಯನ್ನು ಒಳಗೊಂಡಿರುತ್ತದೆ. ಇದು ಕೂದಲನ್ನು ಹಾನಿಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಉಲ್ಬಣಗೊಳಿಸುತ್ತದೆ.

ಕೂದಲು ಉದುರುವಿಕೆ ಅಲೋಪೆಸಿಯಾ ಅರೆಟಾ ಮತ್ತು ಗಾಯದ ಬೊಕ್ಕತಲೆಯಂತಹ ಪರಿಸ್ಥಿತಿಗಳಿಂದ ಕೂಡ ಉಂಟಾಗುತ್ತದೆ. ಈ ಸಮಸ್ಯೆಗಳಿಗೆ ವಿಶೇಷ ಚಿಕಿತ್ಸೆಗಳು ಬೇಕಾಗುತ್ತವೆ. ಅರ್ಹ ಚರ್ಮರೋಗತಜ್ಞರಿಂದ ಇದಕ್ಕೆ ಚಿಕಿತ್ಸೆ ಪಡೆಯಬೇಕು. ಅಲೋಪೆಸಿಯಾ ಮತ್ತು ಬೊಕ್ಕತಲೆ ಎಲ್ಲಾ ವಯೋಮಾನದವರಿಗೂ ಬರಲು ಹಲವು ಕಾರಣಗಳಿವೆ. ಬಾಲ್ಯದಿಂದ ವೃದ್ಧಾಪ್ಯದವರೆಗೆ ಈ ಸಮಸ್ಯೆ ಕಂಡುಬರುತ್ತದೆ. ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಇದನ್ನೂ ಓದಿ: Beauty Tips: ಚರ್ಮ ಮತ್ತು ಕೂದಲಿನ ಸೌಂದರ್ಯಕ್ಕೆ ರಾಗಿಯ ಚಮತ್ಕಾರ

ಪುರುಷರ ತಲೆ ಅಲ್ಲಲ್ಲಿ ಬೋಳಾಗುವುದಕ್ಕೆ ಆಂಡ್ರೊಜೆನಿಕ್ ಅಲೋಪೆಸಿಯಾ ಎಂಬ ಸಮಸ್ಯೆ ಕಾರಣವಾಗಿದೆ. 25% ಪುರುಷರ ತಲೆ ಬೋಳಾಗುವ ಪ್ರಕರಣಗಳಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಹೆಚ್ಚಾಗಿದ್ದಾರೆ. ಇದಕ್ಕೆ ಅನುವಂಶಿಕ ಅಥವಾ ಕೆಲವು ಔಷಧಿಗಳೂ ಕಾರಣವಿರಬಹುದು. ಆದರೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿದರೆ ಪುರುಷರ ತಲೆ ಬೋಳಾಗುವುದನ್ನು ನಿಯಂತ್ರಿಸಬಹುದು. ಮಹಿಳೆಯರಲ್ಲಿ ಅತಿಯಾಗಿ ಕೂದಲು ಉದುರಲು ಅವರ ಹಾರ್ಮೋನುಗಳಲ್ಲಿ ಆಗುವ ಬದಲಾವಣೆಗಳೂ ಕಾರಣ. ಇದು ನೆತ್ತಿಯ ಮೇಲೆ ಸಣ್ಣ ಬೋಳು ತೇಪೆಗಳೊಂದಿಗೆ ಪ್ರಾರಂಭವಾಗುತ್ತದೆ. ಇದು ಕ್ರಮೇಣ ಹೆಚ್ಚಾಗುತ್ತದೆ. ಕೂದಲು ಉದುರುವಿಕೆ ಹೆಚ್ಚಾದರೆ ಕೂದಲು ಕಸಿ, ಔಷಧಿಗಳು ಮತ್ತು ಇಂಜೆಕ್ಷನ್​ಗಳು, ಮೆಸೊಥೆರಪಿ ಮತ್ತು ಪ್ಲೇಟ್ಲೆಟ್-ರಿಚ್ ಪ್ಲಾಸ್ಮಾ ಹೀಗೆ ಕೆಲವು ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ