ಕೂದಲು ತೆಳ್ಳಗಾಗಿದೆ ಎಂದು ಚಿಂತಿಸಬೇಡಿ; ಮನೆಯಲ್ಲೇ ಇದೆ ಪರಿಹಾರ!

ಕೂದಲು ಪ್ರೋಟೀನ್ ಎಳೆಗಳಿಂದ ಮಾಡಲ್ಪಟ್ಟಿದೆ. ಕೂದಲಿನ ಕೋಶಕದ ಸರಾಸರಿ ಜೀವಿತಾವಧಿಯು 2 ರಿಂದ 7 ವರ್ಷ. ನಂತರ ಕೂದಲು ಉದುರಿಹೋಗುತ್ತದೆ ಮತ್ತು ಹೊಸ ಕೂದಲು ಬರುತ್ತದೆ. ಕೂದಲು ತೆಳ್ಳಗಾಗುವುದಕ್ಕೆ ಪರಿಹಾರ ಪಡೆಯಲು ಈ ಕೆಳಗಿನ ಮನೆಮದ್ದುಗಳನ್ನು ಬಳಸಬಹುದು.

ಕೂದಲು ತೆಳ್ಳಗಾಗಿದೆ ಎಂದು ಚಿಂತಿಸಬೇಡಿ; ಮನೆಯಲ್ಲೇ ಇದೆ ಪರಿಹಾರ!
ಕೂದಲು ತೆಳ್ಳಗಾಗುವುದುImage Credit source: iStock
Follow us
|

Updated on: Oct 14, 2023 | 12:37 PM

ಪರಿಸರ ಮಾಲಿನ್ಯ, ಕೂದಲನ್ನು ಅತಿಯಾಗಿ ಒಣಗಿಸುವುದು, ಉತ್ತಮ ಶಾಂಪೂ ಬಳಸದಿರುವುದು, ನೀರಿನ ತೊಂದರೆ, ಅನಾರೋಗ್ಯ, ಹಾರ್ಮೋನುಗಳ ಬದಲಾವಣೆ ಹೀಗೆ ನಾನಾ ಕಾರಣಗಳಿಂದ ನಮ್ಮ ಕೂದಲು ತೆಳ್ಳಗಾಗುವುದು, ಉದುರುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ನಮ್ಮ ಕೂದಲು ನಮ್ಮ ಸೌಂದರ್ಯದ ಮುಖ್ಯ ಅಂಗವಾಗಿದೆ. ಕೂದಲು ಆರೋಗ್ಯವಾಗಿದ್ದರೆ ನಾವು ಕೂಡ ಆರೋಗ್ಯಯುತವಾಗಿ ಕಾಣುತ್ತೇವೆ. ವಯಸ್ಸಾದಂತೆ ನಮ್ಮ ದೇಹವು ಹೆಚ್ಚು-ಹೆಚ್ಚು ಕೂದಲನ್ನು ಕಳೆದುಕೊಳ್ಳುತ್ತದೆ. ಇದು ಬಹುತೇಕ ಎಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆಂದೇ ಅನೇಕ ರೀತಿಯ ತೈಲಗಳು, ಔಷಧಿಗಳು, ಸಿರಪ್​ಗಳು, ಸೀರಮ್​ಗಳು, ಶಾಂಪೂಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ಮನೆಯಲ್ಲೇ ನಮ್ಮ ಕೂದಲ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಕೂದಲು ಪ್ರೋಟೀನ್ ಎಳೆಗಳಿಂದ ಮಾಡಲ್ಪಟ್ಟಿದೆ. ಕೂದಲಿನ ಕೋಶಕದ ಸರಾಸರಿ ಜೀವಿತಾವಧಿಯು 2 ರಿಂದ 7 ವರ್ಷ. ನಂತರ ಕೂದಲು ಉದುರಿಹೋಗುತ್ತದೆ ಮತ್ತು ಹೊಸ ಕೂದಲು ಬರುತ್ತದೆ. ವಯಸ್ಸಾಗುತ್ತಿದ್ದಂತೆ ನಮ್ಮ ಕೂದಲು ತನ್ನ ಪೌಷ್ಟಿಕಾಂಶವನ್ನು ಕಳೆದುಕೊಂಡು, ತೆಳ್ಳಗಾಗಲಾರಂಭಿಸುತ್ತದೆ. ಕೂದಲು ತೆಳ್ಳಗಾಗುವುದಕ್ಕೆ ಪರಿಹಾರ ಪಡೆಯಲು ಈ ಕೆಳಗಿನ ಮನೆಮದ್ದುಗಳನ್ನು ಬಳಸಬಹುದು.

ಇದನ್ನೂ ಓದಿ: ಸಿಕ್ಕುಗಟ್ಟಿದ ಕೂದಲಿಗೆ ಹೊಳಪು ತರಲು ಈ 7 ಮನೆಮದ್ದುಗಳನ್ನು ಬಳಸಿ ನೋಡಿ

ವಯಸ್ಸಾದಂತೆ, ಕೂದಲಿನ ಎಳೆಯು ಚಿಕ್ಕದಾಗುತ್ತದೆ, ಹಾಗೇ ಬಿಳಿ ಬಣ್ಣಕ್ಕೆ ತಿರುಗಲಾರಂಬಿಸುತ್ತದೆ. ಪುರುಷರಲ್ಲಿ ಕೂದಲು ಉದುರುವಿಕೆ ಮತ್ತು ಮಹಿಳೆಯರಲ್ಲಿ ಕೂದಲು ತೆಳುವಾಗುವುದಕ್ಕೆ ಆಂಡ್ರೊಜೆನಿಕ್ ಅಲೋಪೆಸಿಯಾ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಆಂಡ್ರೊಜೆನಿಕ್ ಅಲೋಪೆಸಿಯಾವು ಎಂ ಆಕಾರದ ಮಾದರಿಯಲ್ಲಿ ಕೂದಲು ತೆಳುವಾಗಲು ಕಾರಣವಾಗುತ್ತದೆ. ಮನೆಯಲ್ಲೇ ಈ ಕೆಲವು ಮಾರ್ಗಗಳನ್ನು ಅನುಸರಿಸುವ ಮೂಲಕ ಕೂದಲು ತೆಳ್ಳಗಾಗುವುದನ್ನು ಮತ್ತು ಉದುರುವುದನ್ನು ತಡೆಯಬಹುದು.

1. ಆಯಿಲ್ ಮಸಾಜ್ ಮಾಡಿ ನೋಡಿ. ನೆತ್ತಿಯ ಮಸಾಜ್ ಮಾಡುವುದರಿಂದ ಕೂದಲಿನ ದಪ್ಪವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

2. ನೆಲ್ಲಿ ಕಾಯಿ ಬಳಸಿ. ಕೂದಲನ್ನು ಶಾಂಪೂ ಮಾಡಲು ನೀವು ಒಣ ನೆಲ್ಲಿಕಾಯಿ ಪುಡಿಯನ್ನು ಬಳಸಬಹುದು. ಇದನ್ನು ಹೇರ್ ಟಾನಿಕ್ ಆಗಿಯೂ ಬಳಸಬಹುದು. ಕೂದಲಿನ ಆರೈಕೆಗೆ ನೆಲ್ಲಿಕಾಯಿ ಉತ್ತಮ ಆಯ್ಕೆ.

3. ಸೀಗೆಕಾಯಿ, ಸೀಗೆಪುಡಿಯನ್ನು ಬಳಸಿ ನಿಮ್ಮ ತಲೆಯನ್ನು ವಾಶ್ ಮಾಡಿ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ಸೀಳುವುದನ್ನು ತಡೆಯಲು ನೀವು ಸೀಗೆಕಾಯಿಯ ಒಣ ಪುಡಿಯನ್ನು ಬಳಸಬಹುದು. ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಮತ್ತು ಕೂದಲನ್ನು ಅದರ ಮೂಲ ಬಣ್ಣದಲ್ಲಿ ಇಡಲು ಇದನ್ನು ಬಳಸಲಾಗುತ್ತದೆ.

4. ಬ್ರಾಹ್ಮಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಬ್ರಾಹ್ಮಿ ಎಲೆಯ ಎಣ್ಣೆಯನ್ನು ಕೂಡ ಬಳಸಬಹುದು. ಬ್ರಾಹ್ಮಿಯಲ್ಲಿರುವ ಕೆಲವು ಆಲ್ಕಲಾಯ್ಡ್‌ಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ.

5. ಮೆಂತ್ಯ ಹೇರ್ ಪ್ಯಾಕ್, ಮೆಂತ್ಯ ಆಯಿಲ್ ಬಳಸುವ ಮೂಲಕ ಕೂದಲು ಉದುರುವಿಕೆಯನ್ನು ತಡೆಯಬಹುದು. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮೆಂತ್ಯವು ಸಹಕಾರಿಯಾಗಿದೆ.

6. ಚೀನಾ ಗುಲಾಬಿಯ ಎಲೆಗಳು ಮತ್ತು ಹೂವುಗಳನ್ನು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಬಳಸಲಾಗುತ್ತದೆ. ಕೂದಲಿನ ಉದ್ದವನ್ನು ಹೆಚ್ಚಿಸಲು ಚೀನಾ ಗುಲಾಬಿ ಸಹಕಾರಿಯಾಗಿದೆ.

ಇದನ್ನೂ ಓದಿ: Rosemary Oil: ರೋಸ್ಮರಿ ಎಣ್ಣೆ ಬಳಸಿ, ಕೂದಲ ಸಮಸ್ಯೆಗಳಿಗೆ ಗುಡ್​ಬೈ ಹೇಳಿ

7. ರೋಸ್ಮರಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ರೋಸ್ಮರಿ ಎಣ್ಣೆಯೊಂದಿಗೆ ಅರೋಮಾಥೆರಪಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪ್ರಯೋಜನಕಾರಿಯಾಗಿದೆ.

8. ಈರುಳ್ಳಿ ರಸವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಚಟುವಟಿಕೆಯನ್ನು ಹೊಂದಿದೆ. ಕೂದಲು ಉದುರಿದ ಜಾಗದಲ್ಲಿ ಈರುಳ್ಳಿ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಈರುಳ್ಳಿ ಕಬ್ಬಿಣ ಮತ್ತು ಸತುವಿನಂತಹ ಖನಿಜಗಳನ್ನು ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

9. ಕ್ಯಾಪ್ಸಿಕಂ ಅನ್ನು ಅದರ ಪೌಷ್ಟಿಕಾಂಶದ ಮೌಲ್ಯಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಕ್ಯಾಪ್ಸಿಕಂನಲ್ಲಿರುವ ರಾಸಾಯನಿಕ ಅಂಶಗಳು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

10. ಲ್ಯಾವೆಂಡರ್ ಎಣ್ಣೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಬಳಸಲಾಗುತ್ತದೆ. ಇದನ್ನು ಬಳಸುವ ಮೊದಲು, ಲ್ಯಾವೆಂಡರ್ ಎಣ್ಣೆಯನ್ನು ಕ್ಯಾರಿಯರ್ ಎಣ್ಣೆಗಳೊಂದಿಗೆ ಬೆರೆಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ