Global Hand Washing Day: ಕೈಗಳನ್ನು ತೊಳೆಯುವುದು ಏಕೆ ಮುಖ್ಯ?  ಕೈ ತೊಳೆಯುವ ದಿನದ ಇತಿಹಾಸ, ಮಹತ್ವ ಇಲ್ಲಿದೆ

ಸಾಬೂನಿನಿಂದ ಕೈಗಳನ್ನು ತೊಳೆಯುವುದರ ಪ್ರಾಮುಖ್ಯತೆ ಮತ್ತು ಸೋಂಕುಗಳು ಹಾಗೂ ರೋಗಗಳು ಬಾರದಂತೆ ತಡೆಗಟ್ಟಲು ಅದು ನಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 15 ರಂದು ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತದೆ.

Global Hand Washing Day: ಕೈಗಳನ್ನು ತೊಳೆಯುವುದು ಏಕೆ ಮುಖ್ಯ?  ಕೈ ತೊಳೆಯುವ ದಿನದ ಇತಿಹಾಸ, ಮಹತ್ವ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2023 | 3:38 PM

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರೋಗಾಣುಗಳು  ಬಾಧಿಸದಂತೆ ನೋಡಿಕೊಳ್ಳಲು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ನಮ್ಮ ಕೈಗಳನ್ನು  ಆಗಾಗ್ಗೆ ಸಾಬೂನು ಮತ್ತು ಸ್ವಚ್ಛ ನೀರಿನಿಂದ ತೊಳೆಯುವುದು. ಅದರಲ್ಲೂ ಕೋವಿಡ್ ಸಾಂಕ್ರಮಿಕ ರೋಗ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಸಂದರ್ಭದಲ್ಲಿ ಹಾಗೂ ಅದರ  ನಂತರ ನಿಯಮಿತವಾಗಿ ಕೈ ತೊಳೆಯುವ ಅಭ್ಯಾಸವು  ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆ ಸಂದರ್ಭದಲ್ಲಿ ಕೈ ತೊಳೆಯುವ ಅಭ್ಯಾಸವು ಸೋಂಕುಗಳು ಮತ್ತು ಬ್ಯಾಕ್ಟೀರಿಯಗಳು ನಮ್ಮ ದೇಹವನ್ನು ಪ್ರವೇಶಿಸುವುದನ್ನು ತಪ್ಪಿಸಿದೆ.  ಇದಲ್ಲದೆ ಆಗಾಗ್ಗೆ ಕೈ ತೊಳೆಯುವುದರಿಂದ ವೈರಲ್ ಸೋಂಕುಗಳು ಮತ್ತು ಜ್ವರ ಹರಡುವುದನ್ನು ಕೂಡಾ ತಡೆಯಬಹುದು. ಹಾಗಾಗಿ ನಾವು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿರಲು ಸಾಬೂನಿನಿಂದ ಆಗಾಗ್ಗೆ ಕೈ ತೊಳೆಯುವು ಬಹಳ ಮುಖ್ಯ  ಎಂಬುದನ್ನು ನೆನಪಿಸುವ ಸಲುವಾಗಿ ಅಕ್ಟೋಬರ್ 15 ರಂದು ಕೈ ತೊಳೆಯುವ ದಿನವನ್ನು ಜಗತ್ತಿನಾದ್ಯತ ಆಚರಿಸಲಾಗುತ್ತದೆ.

ಆಗಾಗ್ಗೆ ಕೈ ತೊಳೆಯುವುದು ಏಕೆ ಮುಖ್ಯ:

ಕೈಗಳನ್ನು ತೊಳೆಯುವುದು ಬಹಳ ಮುಖ್ಯ. ಏಕೆಂದರೆ ಕೈಗಳನ್ನು ತೊಳೆಯದಿದ್ದರೆ ಅಥವಾ ಸರಿಯಾಗಿ ಕೈ ತೊಳೆಯದಿದ್ದರೆ, ವೈರಸ್ ಅಥವಾ ಬ್ಯಾಕ್ಟೀರಿಯಾವು ನಮ್ಮ ದೇಹವನ್ನು ಸುಲಭವಾಗಿ ಪ್ರವೇಶಿಸಬಹುದು.  ಇದರಿಂದಾಗಿ ನಾವು ಅನಾರೋಗ್ಯಕ್ಕೆ ಒಳಗಾಗಬಹುದು. ಆದ್ದರಿಂದ ಕೈಗಳನ್ನು ಸಾಬೂನಿನಿಂದ  ತೊಳೆದರೆ  ಅನೇಕ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.  ಕೈ ತೊಳೆಯಲು 1 ನಿಮಿಷ ಅಲ್ಲ, ಕೇವಲ 10 ಸೆಕೆಂಡು ಸಾಕು ಎಂಬ ಜಾಹೀರಾತನ್ನು ನೋಡಿರಬಹುದು. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಾಬೂನಿನಿಂದ ಕೈ ತೊಳೆಯುವಾಗ ಕನಿಷ್ಠ 40 ರಿಂದ 60 ಸೆಕೆಂಡುಗಳ ಕಾಲ ಕೈಗಳನ್ನು ಸಾಬೂನಿನಿಂದ  ಉಜ್ಜುವುದು ಅವಶ್ಯಕ. ಅದೇ ರೀತಿ ಸ್ಯಾನಿಟೈಸರ್ನ್ನು ಕನಿಷ್ಠ 20 ರಿಂದ 30 ಸೆಕೆಂಡುಗಳ ಕಾಲ ಕೈಗಳಿಗೆ ಉಜ್ಜಿಕೊಳ್ಳಬೇಕು.    ಬರಿ ಕೈತೊಳೆದರೆ ಸಾಕಾಗುವುದಿಲ್ಲ,  ಕೈಗಳನ್ನು ಸರಿಯಾಗಿ ತೊಳೆಯುವುದು ಮುಖ್ಯ. ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆದ ಬಳಿಕ  ನಿಮ್ಮ ಕೈಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಹೀಗೆ ಮಾಡುವುದರಿಂದ ಕೈಗಳ ಮೂಲಕ ಹರಡುವ ಕಾಯಿಲೆಯನ್ನು ತಡೆಯಬಹುದು.

ಜಾಗತಿಕ ಕೈ ತೊಳೆಯುವ ದಿನದ ಇತಿಹಾಸ:

ಗ್ಲೋಬಲ್ ಹ್ಯಾಂಡ್ ವಾಶಿಂಗ್ ಪಾರ್ಟ್ನರ್ಶಿಪ್ ಎಂಬ ಸಂಸ್ಥೆ   ಜಾಗತಿಕ ಕೈ ತೊಳೆಯುವ ದಿನದ ಅಭಿಯಾನವನ್ನು   ಮೊದಲ ಬಾರಿಗೆ 2008 ರಲ್ಲಿ ಪ್ರಾರಂಭಿಸಿತು.   ಸ್ವೀಡನ್ನ   ಸ್ಟಾಕ್ ಹೋಮ್​ನಲ್ಲಿ ಮೊದಲ ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಲಾಯಿತು.  ಅಲ್ಲದೆ ಮೊದಲ ಜಾಗತಿಕ ಕೈ ತೊಳೆಯುವ ದಿನದಂದು 73 ದೇಶಗಳ 120 ಮಿಲಿಯನ್ ಮಕ್ಕಳು ತಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯುವ ಮೂಲಕ ಈ ಆಚರಣೆಗೆ ಅದ್ದೂರಿ ಚಾಲನೆಯನ್ನು ನೀಡಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಅಕ್ಟೋಬರ್ 15 ರಂದು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಒತ್ತಡ ನಿರ್ವಹಣೆಗೆ ದೈನಂದಿನ ಜೀವನಶೈಲಿಯಲ್ಲಿ ಈ ಸರಳ ಅಭ್ಯಾಸ ರೂಢಿಸಿಕೊಳ್ಳಿ

ಜಾಗತಿಕ ಕೈ ತೊಳೆಯುವ ದಿನದ ಮಹತ್ವ:

ಜಾಗತಿಕ ಕೈ ತೊಳೆಯುವ ದಿನವು ಪ್ರತಿಯೊಬ್ಬರೂ ಸ್ವಚ್ಛವಾಗಿ  ಕೈ ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಉತ್ತೇಜಿಸುತ್ತದೆ.  ವರದಿಗಳ ಪ್ರಕಾರ ಅತಿಸಾರ ಕಾಯಿಲೆ ಪ್ರಕರಣಗಳಲ್ಲಿ  3 ರಲ್ಲಿ 1,  ಶೀತ ಅಥವಾ ಜ್ವರದಂತಹ ಪ್ರಕರಣಗಳಲ್ಲಿ 5 ರಲ್ಲಿ 1% ಕಾಯಿಲೆಗಳು  ಕೈಯಲ್ಲಿರುವ ಸೂಕ್ಷ್ಮ ಜೀವಿಗಳು ಮತ್ತು ಬ್ಯಾಕ್ಟೀರಿಯಾದ ಕಾರಣ ಹರಡುತ್ತವೆ.

ಅಲ್ಲದೆ ಸರಿಯಾಗಿ ಕೈ ತೊಳೆಯುವ ಅಭ್ಯಾಸವು ಅತಿಸಾರದಂತಹ ಕಾಯಿಲೆಯನ್ನು  24 ರಿಂದ 40% ರಷ್ಟು, ಮಕ್ಕಳಲ್ಲಿ ಜಠರಗರುಳಿನ ಕಾಯಿಲೆಯನ್ನು 29 ರಿಂದ 57% ರಷ್ಟು ಮತ್ತು ಶೀತ, ಜ್ವರ ಮುಂತಾದ ವೈರಲ್ ಕಾಯಿಲೆಗಳನ್ನು 16 ರಿಂದ 20% ರಷ್ಟು ಕಡಿಮೆ ಮಾಡುತ್ತದೆ ಎಂದು ವರದಿಗಳು ಹೇಳಿವೆ. ಅದಕ್ಕಾಗಿಯೇ ನೀವು ಶೌಚಾಲಯಕ್ಕೆ ಹೋಗಿ ಬಂದ ನಂತರ, ಅಡುಗೆ ಮಾಡುವ ಮೊದಲು, ಊಟಕ್ಕೆ ಮೊದಲು ಮತ್ತು ಸೀನುವಿಕೆ ಅಥವಾ ಕೆಮ್ಮಿದ ನಂತರ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದು ಬಹಳ ಅವಶ್ಯಕ.  ಜಾಗತಿಕ ಕೈ ತೊಳೆಯುವ ದಿನದ ಮುಖ್ಯ ಉದ್ದೇಶವೆಂದರೆ ಜನರಿಗೆ  ತಮ್ಮ ಕೈಗಳ ನೈರ್ಮಲ್ಯದ  ಬಗ್ಗೆ ಅರಿವು ಮೂಡಿಸುವುದು.

ಈ ದಿನ  ವಿಶ್ವದಾದ್ಯಂತ ಆರೋಗ್ಯ ಸಂಸ್ಥೆಗಳು, ಸರ್ಕಾರಿ  ಹಾಗೂ ಸರ್ಕಾರೇತರ  ಸಂಸ್ಥೆಗಳು ಸಾಬೂನು ಮತ್ತು ಶುದ್ಧ ನೀರಿನಿಂದ ಕೈ ತೊಳೆದುಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ  ಜನರಿಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

ಸೇಲಂ ಹೈವೇಯಲ್ಲಿ ಟ್ರಕ್‌ನಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ
ಸೇಲಂ ಹೈವೇಯಲ್ಲಿ ಟ್ರಕ್‌ನಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ
ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆ ನನಗೆ ಬೇಸರ ಇಲ್ಲ: ಭವ್ಯಾ ಗೌಡ
ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆ ನನಗೆ ಬೇಸರ ಇಲ್ಲ: ಭವ್ಯಾ ಗೌಡ
ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ಜೈಪುರ ಸಾಹಿತ್ಯ ಉತ್ಸವ; ಕಲ್ ಪೆನ್ ಜೊತೆ ಟಿವಿ9 ಸಿಇಒ ಬರುಣ್ ದಾಸ್ ಸಂವಾದ
ಜೈಪುರ ಸಾಹಿತ್ಯ ಉತ್ಸವ; ಕಲ್ ಪೆನ್ ಜೊತೆ ಟಿವಿ9 ಸಿಇಒ ಬರುಣ್ ದಾಸ್ ಸಂವಾದ
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್