Hair Care: ದಿನಕ್ಕೆ ಎಷ್ಟು ಬಾರಿ ಕೂದಲು ಬಾಚಿಕೊಳ್ಳಬೇಕು? ಕೂದಲು ಬಾಚಿಕೊಳ್ಳುವುದರಿಂದ ಲಭಿಸುವ ಪ್ರಯೋಜನಗಳೇನು?

ಪ್ರತಿನಿತ್ಯ ಕೂದಲನ್ನು ಬಾಚಿಕೊಳ್ಳುವುದು ಬಹಳ ಮುಖ್ಯ. ಕೂದಲನ್ನು ಸರಿಯಾಗಿ ಬಾಚದಿದ್ದರೆ ತಲೆಹೊಟ್ಟು ಮತ್ತು ಚರ್ಮದ ಸೋಂಕು ಮುಂತಾದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಕೂದಲನ್ನು ಬಲವಾಗಿ, ದಟ್ಟವಾಗಿ ಮತ್ತು ಆರೋಗ್ಯಕರವಾಗಿಡಲು ನೀವು ಬಯಸಿದರೆ, ನಿಮ್ಮ ಕೂದಲನ್ನು ದಿನಕ್ಕೆ ಎಷ್ಟು ಬಾರಿ ಬಾಚಿಕೊಳ್ಳಬೇಕು ಮತ್ತು ಇದರಿಂದ ಲಭಿಸುವ ಪ್ರಯೋಜನಗಳೇನು ಎಂಬುದನ್ನು ತಿಳಿಯಿರಿ.

Hair Care: ದಿನಕ್ಕೆ ಎಷ್ಟು ಬಾರಿ ಕೂದಲು ಬಾಚಿಕೊಳ್ಳಬೇಕು?  ಕೂದಲು ಬಾಚಿಕೊಳ್ಳುವುದರಿಂದ ಲಭಿಸುವ ಪ್ರಯೋಜನಗಳೇನು?
Hair CareImage Credit source: Pinterest
Follow us
| Updated By: ಅಕ್ಷತಾ ವರ್ಕಾಡಿ

Updated on: Oct 08, 2023 | 6:10 AM

ಕೂದಲು ಆರೋಗ್ಯಕರವಾಗಿರಲು ಸಮತೋಲಿತ ಆಹಾರ ಸೇವನೆ ಎಷ್ಟು ಮುಖ್ಯವೋ ಅದೇ ರೀತಿ ಕೂದಲಿನ ಆರೈಕೆಯೂ ಅಷ್ಟೇ ಮುಖ್ಯ. ನಿಮ್ಮ ಕೂದಲನ್ನು ಬಲವಾಗಿ, ದಟ್ಟವಾಗಿ ಮತ್ತು ಆರೋಗ್ಯರವಾಗಿಡಲು ಬಯಸಿದರೆ ಕೂದಲಿನ ಆರೈಕೆಗೆ ಸಂಬಂಧಿಸಿದ ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ವಿಶೇಷ ಗಮನ ಹರಿಸಬೇಕು. ಕೂದಲಿನ ಆರೈಕೆಯಲ್ಲಿ ಕೂದಲು ಬಾಚಿಕೊಳ್ಳುವುದು ಕೂಡಾ ಒಂದು ಪ್ರಮುಖ ಹಂತವಾಗಿದೆ. ನೀವು ಕೂದಲನ್ನು ಸರಿಯಾಗಿ ಬಾಚಿಕೊಳ್ಳದಿದ್ದರೆ, ಕೂದಲ ಬೇರುಗಳು ದುರ್ಬಲಗೊಂಡು ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮತ್ತು ಕೂದಲು ವೇಗವಾಗಿ ಒಡೆದುಹೋಗಲು ಆರಂಭಿಸುತ್ತದೆ. ಇಂತಹ ಅನೇಕ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ಕೂದಲನ್ನು ಸರಿಯಾಗಿ ಬಾಚಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಕನಿಷ್ಠ ಪಕ್ಷ ದಿನಕ್ಕೆ ಎಷ್ಟು ಬಾರಿ ಕೂದಲನ್ನು ಬಾಚಿಕೊಳ್ಳಬೇಕು, ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ದಿನಕ್ಕೆ ಎಷ್ಟು ಬಾರಿ ಕೂದಲನ್ನು ಬಾಚಿಕೊಳ್ಳಬೇಕು?

ಕೂದಲು ಆರೋಗ್ಯಕರವಾಗಿರಲು ಮತ್ತು ಉತ್ತಮವಾಗಿರಲು ಪ್ರತಿನಿತ್ಯ ಕೂದನ್ನು ಬಾಚಿಕೊಳ್ಳುವುದು ಮುಖ್ಯ. ಕೂದಲು ಬಾಚುವುದರಿಂದ ಕೂದಲಿನ ಬುಡದಲ್ಲಿನ ರಕ್ತ ಸಂಚಾರ ಹೆಚ್ಚುತ್ತದೆ, ಕೂದಲು ಬಲವಾಗಿರುತ್ತದೆ ಮತ್ತು ಇದು ಕೂದಲಿನಲ್ಲಿ ಸಿಕ್ಕನ್ನು ಉಂಟುಮಾಡುವುದಿಲ್ಲ. ಹಾಗೂ ಇದು ಕೂದಲಿನ ಹೊಳಪನ್ನು ಕೂಡಾ ಹೆಚ್ಚಿಸುತ್ತದೆ. ಹೀಗಿರುವಾಗ ದಿನಕ್ಕೆ ಎಷ್ಟು ಬಾರಿ ಕೂದಲನ್ನು ಬಾಚಿಕೊಂಡರೆ ಸೂಕ್ತ ಎಂಬ ಪ್ರಶ್ನೆ ಹೆಚ್ಚಿನವರ ಮನದಲ್ಲಿ ಮೂಡುತ್ತದೆ. ಕೂದಲು ದಟ್ಟವಾಗಿ ಮತ್ತು ಆರೋಗ್ಯಕರವಾಗಿರಲು ದಿನಕ್ಕೆ ಕನಿಷ್ಠ ಪಕ್ಷ ಎರಡು ಬಾರಿಯಾದರು ಬಾಚಿಕೊಳ್ಳಬೇಕು. ಬೆಳಗ್ಗೆ ಒಂದು ಬಾರಿ ಕೂದಲು ಬಾಚಿದರೆ ಇನ್ನೊಂದು ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಕೂದಲನ್ನು ಬಾಚಿಕೊಳ್ಳಬೇಕು. ಇದಲ್ಲದೆ ಕೂದಲಿ ಉದ್ದಕ್ಕೆ ಅನುಗುಣವಾಗಿ ನೀವು ದಿನದ ಇತರ ಸಮಯದಲ್ಲಿಯೂ ಸಹ ಕೂದಲನ್ನು ಬಾಚಿಕೊಳ್ಳಬಹುದು. ತುಂಬಾ ಉದ್ದವಿರುವ ಕೂದಲು ಸುಲಭವಾಗಿ ಸಿಕ್ಕು ಕಟ್ಟಿಕೊಳ್ಳುತ್ತವೆ. ಆದ್ದರಿಂದ ಈ ಸಮಸ್ಯೆಯನ್ನು ತಪ್ಪಿಸಲು ದಿನಕ್ಕೆ ಕನಿಷ್ಠ 3 ಬಾರಿಯಾದರು ಕೂದಲು ಬಾಚಿಕೊಳ್ಳುವುದು ಅವಶ್ಯಕ. ಇದು ಕೂದಲು ಉದುರುವುದು ಮತ್ತು ದುರ್ಬಲಗೊಳ್ಳುವುದನ್ನು ತಪ್ಪಿಸುತ್ತದೆ.

ಇದನ್ನೂ ಓದಿ: ಆಯುರ್ವೇದದ ಪ್ರಕಾರ ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಕೂದಲನ್ನು ಬಾಚಿಕೊಳ್ಳುವುದರಿಂದ ಲಭಿಸುವ ಪ್ರಯೋಜನಗಳು:

  • ಕೂದಲನ್ನು ಪ್ರತಿನಿತ್ಯ ಬಾಚಿಕೊಳ್ಳುವುದರಿಂದ ಕೂದಲಿನ ಸಿಕ್ಕನ್ನು ಸುಲಭವಾಗಿ ಬಿಡಿಸಬಹುದು. ಮತ್ತು ಇದು ಕೂದಲನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.
  • ಇದು ಕೂದಲಿನ ಬುಡದಲ್ಲಿನ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.
  • ಕೂದಲು ಬಾಚಿಕೊಳ್ಳುವುದರಿಂದ ಕೂದಲಿನ ಬುಡದಲ್ಲಿರುವ ಸತ್ತ ಚರ್ಮವನ್ನು ತೆಗೆದುಹಾಕಬಹುದು ಮತ್ತು ಇದು ಹೊಸ ಕೂದಲು ಬೆಳೆಯಲು ದಾರಿ ಮಾಡಿಕೊಡುತ್ತದೆ.
  • ಇದು ಕೂದಲಿಗೆ ನೈಸರ್ಗಿಕ ಎಣ್ಣೆಯನ್ನು ತುಂಬುತ್ತದೆ, ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಹೊಳಪನ್ನು ಕೂಡಾ ಹೆಚ್ಚಿಸುತ್ತದೆ.
  • ಕೂದಲನ್ನು ಬಾಚುವುದರಿಂದ ಕೂದಲಿನಲ್ಲಿ ಸಂಗ್ರಹವಾಗುವ ಧೂಳು ಮತ್ತು ಇತರೆ ಕಲ್ಮಶಗಳು ನಿವಾರಣೆಯಾಗುತ್ತದೆ.
  • ಇದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ರೋಗಾಣುಗಳಿಂದ ನಿಮ್ಮ ಕೂದಲನ್ನು ರಕ್ಷಿಸುತ್ತದೆ.
  • ನಿಯಮಿತ ಕೂದಲು ಬಾಚುವುದರಿಂದ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಬಹುದು ಮತ್ತು ಇದು ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.
  • ಪ್ರತಿನಿತ್ಯ ಕೂದಲನ್ನು ಬಾಚಿಕೊಳ್ಳುವುದರಿಂದ ಕೂದಲು ದಟ್ಟವಾಗಿ ಕಾಣುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ