ನಿಮ್ಮ ಸಂಗಾತಿಯೊಂದಿಗಿನ ಉತ್ತಮ ಸಂಬಂಧಕ್ಕೆ ಈ ಸಣ್ಣಪುಟ್ಟ ಸಂಗತಿಗಳೇ ಬುನಾದಿ

ನಾವು ಹೇಳುವುದನ್ನು ಬೇರೆಯವರು ಕೇಳಬೇಕೆಂದು ನಮಗೆ ಹೇಗೆ ಆಸೆ ಇರುತ್ತದೋ ಅದೇ ರೀತಿ ಅವರಿಗೂ ತಾವು ಹೇಳುವುದನ್ನು ನಾವು ಕೇಳಬೇಕೆಂಬ ಬಯಕೆ ಇರುತ್ತದೆ. ನಮ್ಮ ಪಾರ್ಟನರ್ ಹೇಳಿದ್ದನ್ನು ಕುಳಿತು ಕೇಳಿಸಿಕೊಳ್ಳಬೇಕಾದ ವ್ಯವಧಾನ ನಮಗೆ ಇರಬೇಕು.

ನಿಮ್ಮ ಸಂಗಾತಿಯೊಂದಿಗಿನ ಉತ್ತಮ ಸಂಬಂಧಕ್ಕೆ ಈ ಸಣ್ಣಪುಟ್ಟ ಸಂಗತಿಗಳೇ ಬುನಾದಿ
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 20, 2023 | 7:13 PM

ಗಂಡ-ಹೆಂಡತಿ ಇರಲಿ ಅಥವಾ ಪ್ರೇಮಿಗಳೇ ಇರಲಿ; ಅವರ ನಡುವೆ ಉತ್ತಮ ಸಂಬಂಧ ರೂಪುಗೊಳ್ಳಲು ಹಲವು ಅಂಶಗಳು ಕಾರಣವಾಗುತ್ತವೆ. ಇಬ್ಬರ ನಡುವಿನ ಮಾತುಕತೆ, ನಂಬಿಕೆ, ನಿಷ್ಠೆ ಮತ್ತು ತಿಳುವಳಿಕೆಯು ಸುರಕ್ಷಿತ, ಸಂತೋಷ ಮತ್ತು ಆರೋಗ್ಯಕರ ಸಂಬಂಧದ ಅಡಿಪಾಯವನ್ನು ರೂಪಿಸುತ್ತದೆ. ಕೆಲವೊಮ್ಮೆ ಸಣ್ಣಪುಟ್ಟ ವಿಷಯಗಳಿಗೂ ಜಗಳವಾಗುವುದು ಸಾಮಾನ್ಯ. ಆದರೆ, ಅದೆಲ್ಲವನ್ನೂ ಮೀರಿ ನಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಸಂಬಂಧಗಳನ್ನು ಉತ್ತಮಗೊಳಿಸಲು ಸಹಾಯ ಮಾಡುವ ಕೆಲವು ಸಣ್ಣ ಸಣ್ಣ ಸಂಗತಿಗಳು ಇಲ್ಲಿವೆ.

ತಾಳ್ಮೆಯಿಂದಿರಿ:

ನಿಮ್ಮ ಪಾರ್ಟನರ್​ನ ಮನಸಿನಲ್ಲಿ ಏನಿದೆ ಎಂಬುದನ್ನು ತಿಳಿಯಸಲು ಅವರ ಮನಸ್ಸನ್ನು ಓದುವುದು ಅಸಾಧ್ಯವಾದರೂ, ಅವರ ಇಷ್ಟ-ಕಷ್ಟಗಳನ್ನು ತಿಳಿಯಬಹುದು. ಪ್ರತಿಯೊಬ್ಬರಿಗೂ ಅವರದೇ ಆದ ಸಮಸ್ಯೆಗಳಿರುತ್ತದೆ. ನಾವು ವಿನಾಕಾರಣ ನಮ್ಮ ಭಾವನೆಗಳನ್ನು ಅವರ ಮೇಲೆ ಹೇರುವ ಬದಲು ತಾಳ್ಮೆಯಿಂದ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

ಉತ್ತಮ ಕೇಳುಗರಾಗಿರಿ:

ನಾವು ಹೇಳುವುದನ್ನು ಬೇರೆಯವರು ಕೇಳಬೇಕೆಂದು ನಮಗೆ ಹೇಗೆ ಆಸೆ ಇರುತ್ತದೋ ಅದೇ ರೀತಿ ಅವರಿಗೂ ತಾವು ಹೇಳುವುದನ್ನು ನಾವು ಕೇಳಬೇಕೆಂಬ ಬಯಕೆ ಇರುತ್ತದೆ. ನಮ್ಮ ಪಾರ್ಟನರ್ ಹೇಳಿದ್ದನ್ನು ಕುಳಿತು ಕೇಳಿಸಿಕೊಳ್ಳಬೇಕಾದ ವ್ಯವಧಾನ ನಮಗೆ ಇರಬೇಕು. ನೀವು ಉತ್ತಮ ಕೇಳುಗರಾದರೆ ನಿಮ್ಮ ಸಂಗಾತಿ ನಿಮ್ಮ ಮೇಲೆ ಹೆಚ್ಚು ನಂಬಿಕೆ ಇಟ್ಟು ಎಲ್ಲ ವಿಷಯಗಳನ್ನೂ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: ಆಲೂ ಚಿಪ್ಸ್, ಐಸ್​ಕ್ರೀಂ ತಿನ್ನುವುದು ಕೂಡ ಕೊಕೇನ್​ನಂತೆಯೇ ಒಂದು ಚಟ!

ಒಬ್ಬರನ್ನೊಬ್ಬರು ಗೌರವಿಸಿ:

ಆರೋಗ್ಯಕರ ಸಂಬಂಧದ ಪ್ರಾಥಮಿಕ ಅಂಶವೆಂದರೆ ಪರಸ್ಪರ ಗೌರವಿಸುವುದು. ಇದು ಸಂಬಂಧದಲ್ಲಿ ಮೌಲ್ಯಯುತ ಭಾವನೆ ಮತ್ತು ಪಾರ್ಟನರ್​ಗಳ ನಡುವಿನ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಚೆಕ್-ಇನ್:

ನಾವು ನಮ್ಮ ಪಾಲುದಾರರೊಂದಿಗೆ ನಿಯಮಿತವಾಗಿ ಚೆಕ್-ಇನ್ ಮಾಡಬೇಕು. ಅವರಿಗೆ ನಮ್ಮ ಬಗ್ಗೆ ಉತ್ತಮ ಭಾವನೆ ಮೂಡಿಸಲು ಪ್ರಯತ್ನಿಸಬೇಕು. ಸಂಬಂಧವನ್ನು ಸುಧಾರಿಸುವ ಮತ್ತು ಸಮಸ್ಯೆಗಳನ್ನು ಒಟ್ಟಿಗೆ ಪರಿಹರಿಸುವ ವಿಧಾನಗಳನ್ನು ಇಬ್ಬರೂ ಚರ್ಚಿಸಬೇಕು.

ಗೌಪ್ಯತೆಯನ್ನು ಕಾಪಾಡಿಕೊಳ್ಳಿ:

ನಮ್ಮಲ್ಲಿ ಪ್ರತಿಯೊಬ್ಬರೂ ಸಂಬಂಧದ ಹೊರಗೆ ಒಂದು ಜೀವನವನ್ನು ಹೊಂದಿರುತ್ತಾರೆ ಎಂಬ ಅಂಶವನ್ನು ನಾವು ಗೌರವಿಸಬೇಕು. ಅದರ ಪ್ರಕಾರ, ನಾವು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಗಂಡ ಅಥವಾ ಹೆಂಡತಿ ಆದ ಮಾತ್ರಕ್ಕೆ ಎಲ್ಲವನ್ನೂ ಹೇಳಲೇಬೇಕೆಂದು ಬಯಸುವುದು ತಪ್ಪು. ಅವರಿಗೂ ಸ್ವಲ್ಪ ಪ್ರೈವಸಿ ನೀಡಿ.

ಇದನ್ನೂ ಓದಿ: ಮನೆಯಲ್ಲೇ ಜೇನುತುಪ್ಪದ ಫೇಸ್​ ಸ್ಕ್ರಬ್ ತಯಾರಿಸುವುದು ಹೇಗೆ?

ಸಮಯ ನೀಡಿ:

ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನಮ್ಮ ಬಿಡುವಿಲ್ಲದ ಕೆಲಸದ ನಡುವೆ ಸ್ವಲ್ಪ ಸಮಯವನ್ನು ಮಾಡಿಕೊಳ್ಳಿ. ಅಂತಹ ಕ್ಷಣಗಳು ಬಂಧವನ್ನು ಬಲಪಡಿಸಲು ಮತ್ತು ಅನ್ಯೋನ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸಿ:

ಯಾರೂ ಈ ಜಗತ್ತಿನಲ್ಲಿ ಪರಿಪೂರ್ಣರಲ್ಲ. ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಗೌರವಿಸಲು ಕಲಿಯಿರಿ. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರುವುದಿಲ್ಲ. ಎಲ್ಲದರಲ್ಲೂ ಹೋಲಿಕೆಗಳನ್ನು ಹುಡುಕುವ ಬದಲು ನಾವು ವ್ಯತ್ಯಾಸಗಳನ್ನು ಒಪ್ಪಿಕೊಳ್ಳಬೇಕು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್