Horoscope: ದಿನಭವಿಷ್ಯ; ಈ ರಾಶಿಯವರ ಹಳೆಯ ಸಂಬಂಧವು ಮತ್ತೆ ಚಿಗುರಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 15) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ; ಈ ರಾಶಿಯವರ ಹಳೆಯ ಸಂಬಂಧವು ಮತ್ತೆ ಚಿಗುರಬಹುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 15, 2023 | 12:30 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ವಿಶಾಖಾ, ಯೋಗ: ವೈಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 11 ನಿಮಿಷಕ್ಕೆ, ರಾಹು ಕಾಲ ಸಂಜೆ 04:43 ರಿಂದ 06:12ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:18 ರಿಂದ 01:47ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:15 ರಿಂದ 04:43ರ ವರೆಗೆ.

ಸಿಂಹ ರಾಶಿ : ಇಂದು ಸಹೋದರರ ನಡುವೆ ವಾಗ್ವಾದವು ಅಗಲಿದ್ದು ಹಿರಿಯ ಮಧ್ಯಸ್ತಿಕೆಯಿಂದ ಶಾಂತವಾಗುವುದು. ‌ಶಿಸ್ತಿನಿಂದ‌ ಇಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಅನಾದರ ತೋರುವುದು ಬೇಡ. ನಿಮ್ಮ ಬಗ್ಗೆ ನಿಮಗೇ ಪೂರ್ಣ ಪ್ರಮಾಣದ ನಂಬಿಕೆ ಸಾಲದು. ನೌಕರರಿಂದ ಕೆಟ್ಟ ಹೆಸರು ಬರಬಹುದು. ನೇರ ಮಾತು ಎಲ್ಲ ಸಂದರ್ಭಗಳಲ್ಲಿಯೂ ಪ್ರಯೋಜನಕ್ಕೆ ಬಾರದು. ಪ್ರೀತಿಯಿಂದ ಹೇಳಿ ಕೆಲಸವನ್ನು ಮಾಡಿಸಿಕೊಳ್ಳಿ. ಕೈ ತುಂಬ ಕೆಲಸಗಳಿದ್ದರೂ ಯಾವುದನ್ನೂ ಮಾಡುವ ಮನಸ್ಸು ಇರದು. ನೀವು ಇಂದು ಸಣ್ಣ ಅಪಮಾನವನ್ನು ಸಲಿಸಲಾರಿರಿ.

ಕನ್ಯಾ ರಾಶಿ : ಪ್ರಯಾಣ ಮಾಡಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಹತ್ತಿರದವರನ್ನು ನೀವು ಕಳೆದುಕೊಳ್ಳಬೇಕಾದೀತು. ನಿಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲವನ್ನೂ ಹೇಳುವಿರಿ. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ. ಇಂದು ಹೆಚ್ಚಿನ ಜನರ ಜೊತೆ ಒಡನಾಟ ಮಾಡುವಿರಿ. ಆಸ್ತಿಯ ಕಲಹವನ್ನು ಸರಿ ಮಾಡಿಕೊಳ್ಳಲು ಹಣವನ್ನು ಖರ್ಚು ಮಾಡುವುದು ಅನಿವಾರ್ಯವಾಗಬಹುದು. ನಿಮ್ಮ ಮಾತನ್ನು ಯಾರೂ ಕಿವಿಗೆ ಹಾಕಿಕೊಳ್ಳದೇ ಇರುವುದು ನಿಮಗೆ ಸಿಟ್ಟನ್ನು ತರಿಸುವುದು. ಅಸೂಯಯಿಂದ ನಿಮ್ಮ ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ. ಇಂದು ನಿಮಗೆ ಇಷ್ಟವಿಲ್ಲದವರ ಜೊತೆ ಇಡನಾಡುವಿರಿ. ನಿಮಗೆ ಜವಾಬ್ದಾರಿಗಳು ಸಾಕೆನಿಸುವುದು.

ತುಲಾ ರಾಶಿ : ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ. ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಕಾಣಿಸುವುದು. ನಿಮ್ಮ ಜವಾಬ್ದಾರಿಯ ಕಾರ್ಯಕ್ಕೆ ಕೆಲವು ಅಡೆತಡೆಗಳು ಬರಬಹುದು. ಹೇಳಬೇಕಾದುದನ್ನು ನೇರವಾಗಿ, ಸ್ಪಷ್ಟವಾಗಿ ಹೇಳುವುದು ಉಚಿತ. ವ್ಯಾಪರದಿಂದ ಆದ ಲಾಭವು ನಿಮಗೆ ಇನ್ನಷ್ಟು ಉತ್ಸಾಹವನ್ನು ವರ್ಧಿಸುವುದು. ಸಹೋದರಿಯ ವಿವಾಹದ ಜವಾಬ್ದಾರಿಯು ಇರಲಿದೆ. ಅಪರಿಚಿತ ಕರೆಗಳಿಂದ ನಿಮಗೆ ಹಿಂಸೆ ಆಗಬಹುದು. ಹಣದ ವಿಚಾರಕ್ಕೆ ದಾಂಪತ್ಯದಲ್ಲಿ ಮುಸುಕಿನ ಗುದ್ದಾಟವು ಇರಲಿದೆ. ಶತ್ರುಗಳ ಜೊತೆ ವ್ಯವಹಾರವನ್ನು ಮಾಡಲು ಕಲಿಯಬೇಕಾಗುವುದು. ಇಂದು ಮಾನಸಿಕವಾಗಿ ದುರ್ಬಲರಾದಂತೆ ಕಾಣುವಿರಿ. ಗೋಗ್ರಾಸವನ್ನು ನೀಡಿ, ಗೋಸೇವೆಯನ್ನು ಮಾಡಿ.

ವೃಶ್ಚಿಕ ರಾಶಿ : ಸಾಹಿತ್ಯಾಸಕ್ತರಿಗೆ ಕಲಾವಿದರಿಗೆ ಸಮ್ಮಾನಾದಿಗಳು ಸಿಗುವುದು. ಹಿತಶತ್ರುಗಳನ್ನು ನೀವು ದೂರ ಮಾಡಿಕೊಳ್ಳಲಾಗದು. ಉಗುಳಲೂ ನುಂಗಲೂ ಆಗದ ತುಪ್ಪದಂತೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ. ಹಳೆಯ ಸಂಬಂಧವು ಮತ್ತೆ ಚಿಗುರಬಹುದು. ಆಕಸ್ಮಿಕವಾಗಿ ಶುಭ ಸಮಾಚಾರವು ಬರಬಹುದು ಎಂಬ ನಿರೀಕ್ಷೆಯು ಸುಳ್ಳಾಗುವುದು. ಪ್ರಭಾವೀ ವ್ಯಕ್ತಿಗಳ ಕಡೆಯಿಂದ ನಿಮಗೆ ಉದ್ಯೋಗವು ಸಿಗುವುದು. ಶ್ರಮಕ್ಕೆ ತಕ್ಕ ಫಲವು ಸಿಗದೇ ಇರುವುದು ನಿಮಗೆ ಚಿಂತೆಯಾಗುವುದು. ಕೃಷಿಯಲ್ಲಿ ಆಸಕ್ತಿ ಇರುವವರು ಏನಾದರೂ ಹೊಸತನ್ನು ಮಾಡುವಿರಿ. ನಿಮ್ಮ ಆರ್ಥಿಕ‌ಗುಟ್ಟನ್ನು ಯಾರಾದರೂ ಹೊರ ತೆಗೆದಾರು.