ಆಲೂ ಚಿಪ್ಸ್, ಐಸ್​ಕ್ರೀಂ ತಿನ್ನುವುದು ಕೂಡ ಕೊಕೇನ್​ನಂತೆಯೇ ಒಂದು ಚಟ!

ಅತಿಯಾಗಿ ಸಂಸ್ಕರಿಸಿದ ಆಹಾರಗಳು, ಅಥವಾ UPFಗಳು, 10 ಜನರಲ್ಲಿ 1ಕ್ಕಿಂತ ಹೆಚ್ಚು ಜನರನ್ನು ತನ್ನತ್ತ ಸೆಳೆಯುತ್ತಿವೆ. ಇದು ನಿಕೋಟಿನ್, ಕೊಕೇನ್ ಅಥವಾ ಹೆರಾಯಿನ್‌ನಂತೆಯೇ ವ್ಯಸನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಆಲೂ ಚಿಪ್ಸ್, ಐಸ್​ಕ್ರೀಂ ತಿನ್ನುವುದು ಕೂಡ ಕೊಕೇನ್​ನಂತೆಯೇ ಒಂದು ಚಟ!
ಐಸ್ ಕ್ರೀಂ
Follow us
ಸುಷ್ಮಾ ಚಕ್ರೆ
|

Updated on: Oct 19, 2023 | 5:21 PM

ಐಸ್​ ಕ್ರೀಂ, ಚಾಕೋಲೇಟ್, ಚಿಪ್ಸ್​ ಎಂದರೆ ಇಷ್ಟಪಡದವರಾದರೂ ಯಾರಿದ್ದಾರೆ? ನೀವೂ ಆ ಪೈಕಿ ಒಬ್ಬರಾ? ಹಾಗಿದ್ದರೆ ನಿಮಗೊಂದು ಆಘಾತಕಾರಿ ಸಂಗತಿ ಇಲ್ಲಿದೆ. ಆಲೂಗಡ್ಡೆ ಚಿಪ್ಸ್​ ಮತ್ತು ಐಸ್ ಕ್ರೀಂ ಕೊಕೇನ್​ನಷ್ಟೇ ಚಟ ಎಂಬ ವಿಷಯವನ್ನು ಹೊಸ ಸಂಶೋಧನೆ ಬಯಲು ಮಾಡಿದೆ. ಈ ಎರಡು ವಸ್ತುಗಳು ಕೂಡ ನಿಮಗೆ ಕೊಕೇನ್ ಅಥವಾ ಹೆರಾಯಿನ್‌ನಂತಹ ಕಿಕ್ ನೀಡುತ್ತದೆ ಎನ್ನಲಾಗಿದೆ.

ಅತಿಯಾಗಿ ಸಂಸ್ಕರಿಸಿದ ಆಹಾರಗಳು, ಅಥವಾ UPFಗಳು, 10 ಜನರಲ್ಲಿ 1ಕ್ಕಿಂತ ಹೆಚ್ಚು ಜನರನ್ನು ತನ್ನತ್ತ ಸೆಳೆಯುತ್ತಿವೆ. ಇದು ನಿಕೋಟಿನ್, ಕೊಕೇನ್ ಅಥವಾ ಹೆರಾಯಿನ್‌ನಂತೆಯೇ ವ್ಯಸನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. 36 ವಿವಿಧ ದೇಶಗಳಲ್ಲಿ 281 ಅಧ್ಯಯನಗಳ ಬಗ್ಗೆ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಇದರಲ್ಲಿ ಆಘಾತಕಾರಿ ಸಂಗತಿ ಹೊರಬಿದ್ದಿದೆ.

ಯುಪಿಎಫ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನ ಸಂಯೋಜನೆಯು ಮೆದುಳಿನ ಪ್ರತಿಫಲ ವ್ಯವಸ್ಥೆಗಳ ಮೇಲೆ ಬಹಳ ಪರಿಣಾಮವನ್ನು ಬೀರುತ್ತದೆ. ಇದು ಆಹಾರಗಳ ವ್ಯಸನಕಾರಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ನಿಮ್ಮ ಹಳದಿ ಹಲ್ಲುಗಳನ್ನು ಬೆಳ್ಳಗೆ ಹೊಳೆಯುವಂತೆ ಮಾಡಲು ಈ ರೀತಿ ಮಾಡಿ

ನೈಸರ್ಗಿಕ ಮೂಲದ ಆಹಾರಗಳು ಹೆಚ್ಚು ಕಾರ್ಬೋಹೈಡ್ರೇಟ್‌ಗಳು ಅಥವಾ ಹೆಚ್ಚಿನ ಕೊಬ್ಬನ್ನು ಹೊಂದಿರುತ್ತವೆ. ಆದರೆ, ಎರಡರಲ್ಲೂ ಹೆಚ್ಚಿನ ಮಟ್ಟದಲ್ಲಿರುವುದಿಲ್ಲ. UPFಗಳಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಎರಡೂ ಅಸಮಾನವಾದ ಮಟ್ಟವನ್ನು ಹೊಂದಿರುತ್ತವೆ. ಇದಕ್ಕಾಗಿಯೇ ನೀವು ಮನೆಯಲ್ಲಿ ತಯಾರಿಸಿದ ಆಲೂಗೆಡ್ಡೆ ಚಿಪ್‌ಗಳಿಗೆ ಹೆಚ್ಚು ವ್ಯಸನಿಯಾಗುವುದಿಲ್ಲ. ಆದರೆ, ಪ್ಯಾಕ್ ಮಾಡಿದ ಚಿಪ್ಸ್​ಗೆ ಅಡಿಕ್ಟ್​ ಆಗುವುದರಲ್ಲಿ ಅನುಮಾನವಿಲ್ಲ.

ಈ ರೀತಿ ಕೆಲವು ಅತಿ ಹೆಚ್ಚು ಸಂಸ್ಕರಿಸಿದ ಆಹಾರಗಳ ಒಲವನ್ನು ಮೀರಿಸುವುದು ಸವಾಲಿನದ್ದಾಗಿರಬಹುದು. ಆದರೆ ಅದು ಕಷ್ಟವೇನಲ್ಲ. ವ್ಯಸನವನ್ನು ತೊಡೆದುಹಾಕಲು ಸಹಾಯ ಮಾಡುವ ಕೆಲವು ತಂತ್ರಗಳು ಇಲ್ಲಿವೆ.

– ನಿಮಗೆ ಯಾವ ಆಹಾರ ಸೇವಿಸಿದರೆ ಪ್ರಚೋದನೆ ಸಿಗುತ್ತದೆ ಮತ್ತು ಆ ಆಹಾರವನ್ನು ಯಾವ ಸಮಯದಲ್ಲಿ ನೀವು ಹೆಚ್ಚು ತಿನ್ನುತ್ತೀರಿ ಎಂಬುದನ್ನು ಗುರುತಿಸಿಕೊಳ್ಳಿ.

ಇದನ್ನೂ ಓದಿ: ಗಟ್ಟಿಮುಟ್ಟಾದ ಹಲ್ಲುಗಳು ನಿಮ್ಮದಾಗಲು 5 ಸಲಹೆಗಳು ಇಲ್ಲಿವೆ

– ನಿಮ್ಮನ್ನು ಪ್ರಚೋದಿಸುವ ಆಹಾರವನ್ನು ಒಂದೇ ಬಾರಿ ಬಿಡುವ ಬದಲು ಅಂತಹ ಆಹಾರಗಳ ಸೇವನೆಯನ್ನು ಕ್ರಮೇಣ ಕಡಿಮೆ ಮಾಡಿ.

– ಐಸ್​ ಕ್ರೀಂ, ಚಿಪ್ಸ್​ ಬದಲು ಹಣ್ಣುಗಳು, ತರಕಾರಿಗಳು, ನಟ್ಸ್ ಮತ್ತು ಮೊಸರುಗಳಂತಹ ಸಂಪೂರ್ಣವಾದ ಮತ್ತು ಸಂಸ್ಕರಿಸದ ಆಹಾರಗಳನ್ನು ಸೇವಿಸಿ.

– ಅತಿಯಾಗಿ ತಿನ್ನುವ ಸಾಧ್ಯತೆಯನ್ನು ಕಡಿಮೆ ಮಾಡಲು ಈ ಆಹಾರಗಳನ್ನು ಮಿತವಾಗಿ ಸೇವಿಸಿ.

-ನಿಮಗೆ ಯಾವುದಾದರೂ ಆಹಾರವನ್ನು ಬಿಟ್ಟು ಇರಲಾಗುವುದಿಲ್ಲ ಎನಿಸಿದರೆ ಆ ಬಗ್ಗೆ ವೈದ್ಯರ ಜೊತೆ ಮಾತನಾಡಿ, ಸಲಹೆ ಪಡೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್