ನಿಮ್ಮ ಹಳದಿ ಹಲ್ಲುಗಳನ್ನು ಬೆಳ್ಳಗೆ ಹೊಳೆಯುವಂತೆ ಮಾಡಲು ಈ ರೀತಿ ಮಾಡಿ

ಬಾಯಿಯ ನೈರ್ಮಲ್ಯದ ಕೊರತೆ, ಹಲ್ಲುಗಳಿಗೆ ಗಾಯವಾಗುವುದು, ತಂಬಾಕು ಬಳಕೆ, ಧೂಮಪಾನ, ಅತಿಯಾದ ಕಾಫಿ, ಟೀ, ಕೋಲಾ ಅಥವಾ ರೆಡ್ ವೈನ್ ಕುಡಿಯುವುದು ಹೀಗೆ ನಾನಾ ಕಾರಣಗಳಿಂದ ಹಲ್ಲುಗಳು ಹಳದಿಗಟ್ಟುತ್ತವೆ. ಹಲ್ಲುಗಳು ಹಳದಿಯಾಗುವುದನ್ನು ತಪ್ಪಿಸಲು 5 ಮನೆಮದ್ದುಗಳು ಇಲ್ಲಿವೆ...

ನಿಮ್ಮ ಹಳದಿ ಹಲ್ಲುಗಳನ್ನು ಬೆಳ್ಳಗೆ ಹೊಳೆಯುವಂತೆ ಮಾಡಲು ಈ ರೀತಿ ಮಾಡಿ
ಹಲ್ಲುImage Credit source: iStock
Follow us
ಸುಷ್ಮಾ ಚಕ್ರೆ
|

Updated on:Oct 11, 2023 | 6:21 PM

ಪ್ರತಿಯೊಬ್ಬರೂ ಸುಂದರವಾದ ನಗುವನ್ನು ಬಯಸುತ್ತಾರೆ. ನಿಮ್ಮ ನಗು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಹಳದಿ ಬಣ್ಣದ ಹಲ್ಲುಗಳು ನಿಮ್ಮ ನಗುವನ್ನು ಹಾಳು ಮಾಡುವುದು ಮಾತ್ರವಲ್ಲದೆ ನಿಮ್ಮ ಆತ್ಮವಿಶ್ವಾಸವನ್ನು ಕೂಡ ಕುಗ್ಗಿಸುತ್ತವೆ. ಹಲ್ಲುಗಳ ಮೇಲೆ ಕಲೆ ಮೂಡುವುದು, ಹಳದಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಅದಕ್ಕೆ ಮನೆಯಲ್ಲಿಯೇ ಕೆಲವು ಚಿಕಿತ್ಸೆ ನೀಡುವ ಮೂಲಕ ನಿಮ್ಮ ಹಲ್ಲುಗಳನ್ನು ಬೆಳ್ಳಗೆ ಹೊಳೆಯುವಂತೆ ಮಾಡಬಹುದು.

ಬಾಯಿಯ ನೈರ್ಮಲ್ಯದ ಕೊರತೆ, ಹಲ್ಲುಗಳಿಗೆ ಗಾಯವಾಗುವುದು, ತಂಬಾಕು ಬಳಕೆ, ಧೂಮಪಾನ, ಅತಿಯಾದ ಕಾಫಿ, ಟೀ, ಕೋಲಾ ಅಥವಾ ರೆಡ್ ವೈನ್ ಕುಡಿಯುವುದು ಹೀಗೆ ನಾನಾ ಕಾರಣಗಳಿಂದ ಹಲ್ಲುಗಳು ಹಳದಿಗಟ್ಟುತ್ತವೆ. ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸುವ ನೈಸರ್ಗಿಕ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ. ಇದಕ್ಕಾಗಿ, ನಿಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಹಣ್ಣುಗಳು ಮತ್ತು ಇತರ ಪದಾರ್ಥಗಳನ್ನು ನೀವು ಬಳಸಬಹುದು.

ಹಲ್ಲು ಬಿಳಿಯಾಗಲು ಸರಳವಾದ ಮನೆಮದ್ದುಗಳು ಇಲ್ಲಿವೆ:

ಪಪ್ಪಾಯಿ: ಪಪ್ಪಾಯಿ ಕಾಯಿ ಉತ್ತಮ ಬ್ಲೀಚಿಂಗ್ ಏಜೆಂಟ್ ಆಗಿದೆ. ಏಕೆಂದರೆ ಇದು ಪಾಪೈನ್ ಮತ್ತು ಚೈಮೊಪಪೈನ್ ಎಂಬ ಕಿಣ್ವಗಳನ್ನು ಹೊಂದಿರುತ್ತದೆ. ಈ ಕಿಣ್ವಗಳು ಹಣ್ಣಾದ ಪಪ್ಪಾಯಿಗಿಂತ ಹೆಚ್ಚಾಗಿ ಪಪ್ಪಾಯಿ ಕಾಯಿಯಲ್ಲಿ ಕಂಡುಬರುತ್ತವೆ. ಪಾಪೈನ್ ಕಿಣ್ವವು ಹಲ್ಲುಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಮತ್ತು ಹಲ್ಲುಗಳಲ್ಲಿನ ಪ್ಲೇಕ್ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.

ಪಪ್ಪಾಯಿ ಕಾಯಿಯನ್ನು ತೊಳೆಯಿರಿ. ಅದರ ಸಿಪ್ಪೆ ಮತ್ತು ಬೀಜಗಳನ್ನು ತೆಗೆದುಹಾಕಿ. ಅದನ್ನು ಬ್ಲೆಂಡರ್ ಆಗಿ ಮಿಶ್ರಣ ಮಾಡಿ. ತೆಳುವಾದ ಕಾಟನ್ ಬಟ್ಟೆಯನ್ನು ಬಳಸಿ ತಿರುಳನ್ನು ಸ್ಕ್ವೀಝ್ ಮಾಡಿ ಮತ್ತು ಹೈಡ್ರೋಜನ್ ಪೆರಾಕ್ಸೈಡ್​ನೊಂದಿಗೆ ಆ ರಸವನ್ನು ನಿಮ್ಮ ಹಲ್ಲುಗಳನ್ನು ಬ್ಲೀಚ್ ಮಾಡಲು ಬಳಸಿ. ಇದನ್ನು ಹಲ್ಲಿನ ಮೇಲೆ ಉಜ್ಜುವುದರಿಂದ ಹಲ್ಲು ಬಿಳಿಯಾಗುತ್ತದೆ.

ಇದನ್ನೂ ಓದಿ: ಬೆಳಗ್ಗೆ ಹಲ್ಲುಜ್ಜದೆ ಆಹಾರ ತಿನ್ನುವ ಅಭ್ಯಾಸವಿದೆಯೇ? ಇದರಿಂದ ನಿಮ್ಮ ವಸಡಿಗೆ ಮಾತ್ರವಲ್ಲ ಹೃದಯಕ್ಕೂ ಅಪಾಯ

ಅನಾನಸ್: ಪೈನಾಪಲ್ ಬ್ರೋಮೆಲಿನ್ ಎಂಬ ಕಿಣ್ವವನ್ನು ಹೊಂದಿರುತ್ತದೆ. ಇದು ನೈಸರ್ಗಿಕ ಸ್ಟೇನ್ ರಿಮೂವರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಹಲ್ಲಿನ ಪ್ಲೇಕ್ ನಿರ್ಮಾಣ ಮತ್ತು ಹಲ್ಲುಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪೈನಾಪಲ್ ಹಣ್ಣನ್ನು ಹಾಗೇ ತಿನ್ನಬಹುದು. ಅಥವಾ ಜ್ಯೂಸ್ ಮಾಡಿಕೊಂಡು ಕೂಡ ಕುಡಿಯಬಹುದು.

ಸ್ಟ್ರಾಬೆರಿಗಳು:

ಸ್ಟ್ರಾಬೆರಿಗಳು ಮಾಲಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ನೈಸರ್ಗಿಕವಾಗಿ ಹಲ್ಲುಗಳ ದಂತಕವಚವನ್ನು ಬಿಳಿಯಾಗಿಸುತ್ತದೆ. ಇದು ಆಂಟಿ-ಕಾರ್ಯೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ. ಒಂದು ಅಥವಾ ಎರಡು ಸ್ಟ್ರಾಬೆರಿಗಳನ್ನು ಕಿವುಚಿ, ಪೇಸ್ಟ್ ರೀತಿ ಮಾಡಿಕೊಳ್ಳಿ. ಅದಕ್ಕೆ ಅರ್ಧ ಟೀಚಮಚ ಅಡಿಗೆ ಸೋಡಾವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಹಲ್ಲುಗಳಿಗೆ ಹಚ್ಚಿಕೊಂಡು ಸ್ವಲ್ಪ ಕಾಲ ಕುಳಿತುಕೊಳ್ಳಿ. ಆಮೇಲೆ ಬ್ರೆಶ್​ನಿಂದ ಹಲ್ಲನ್ನು ಉಜ್ಜಿ ತೊಳೆದುಕೊಳ್ಳಿ.

ಇದನ್ನೂ ಓದಿ: ಹಲ್ಲು ನೋವು ಕಾಡುತ್ತಿದೆಯೇ?; ಈ ಆಯುರ್ವೇದ ಮದ್ದುಗಳನ್ನು ಬಳಸಿ

ಬಾಳೆಹಣ್ಣಿನ ಸಿಪ್ಪೆ:

ನಾವೆಲ್ಲರೂ ಬಾಳೆಹಣ್ಣು ತಿಂದು ಸಿಪ್ಪೆಯನ್ನು ಬಿಸಾಡುತ್ತೇವೆ. ಆ ಸಿಪ್ಪೆಗಳು ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯವಾದ ಖನಿಜಗಳಿಂದ ತುಂಬಿರುತ್ತವೆ. ಈ ಖನಿಜಗಳು ಹಲ್ಲಿನ ಮೇಲ್ಮೈಯಲ್ಲಿ ಹೀರಲ್ಪಟ್ಟು, ಅವುಗಳು ಬಿಳಿಯಾಗಿ ಕಾಣುವಂತೆ ಮಾಡುತ್ತದೆ. ಆದ್ದರಿಂದ, ಬಾಳೆಹಣ್ಣಿನ ಸಿಪ್ಪೆಗಳನ್ನು ಎಸೆಯುವ ಮೊದಲು, ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸಲು ಅವುಗಳನ್ನು ಬಳಸಿ.

ಬಾಳೆಹಣ್ಣಿನ ಸಿಪ್ಪೆಯ ಕೆಳಭಾಗದಿಂದ ನಿಮ್ಮ ಹಲ್ಲುಗಳನ್ನು ಉಜ್ಜಬಹುದು. ಒಮ್ಮೆ ಉಜ್ಜಿದಾಗ ಕನಿಷ್ಠ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಹಲ್ಲುಜ್ಜುವ ಬ್ರಷ್ ಅನ್ನು ತೆಗೆದುಕೊಂಡು ನಿಮ್ಮ ಹಲ್ಲುಗಳ ಮೇಲೆ ಬ್ರಶ್ ಮಾಡಿ.

ನಿಂಬೆಹಣ್ಣು:

ಹಲ್ಲುಗಳನ್ನು ಬಿಳುಪಾಗಿಸಲು ನಿಂಬೆ ಹಣ್ಣಿನ ರಸ ಮತ್ತು ಸಿಪ್ಪೆಗಳನ್ನು ಬಳಸಬಹುದು. ಅವುಗಳು ಹೆಚ್ಚಿನ ಪ್ರಮಾಣದ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತವೆ. ಹೀಗಾಗಿ, ಹಲ್ಲನ್ನು ಬ್ಲೀಚ್ ಮಾಡುತ್ತವೆ. ನಿಂಬೆಹಣ್ಣುಗಳು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ. ಅದು ಹಲ್ಲಿನ ಪ್ಲೇಕ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಲೆಯಾದ ಹಲ್ಲುಗಳ ಮೇಲೆ ನಿಂಬೆ ಸಿಪ್ಪೆಯನ್ನು ಉಜ್ಜಬಹುದು ಅಥವಾ ಹಲ್ಲುಗಳ ಮೇಲೆ ನಿಂಬೆ ರಸವನ್ನು ಹಚ್ಚಿಕೊಳ್ಳಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Wed, 11 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ