- Kannada News Photo gallery suffering from toothache get relief with these natural Ayurvedic remedies
ಹಲ್ಲು ನೋವು ಕಾಡುತ್ತಿದೆಯೇ?; ಈ ಆಯುರ್ವೇದ ಮದ್ದುಗಳನ್ನು ಬಳಸಿ
ಹಲ್ಲು ನೋವಿನಿಂದ ಪಾರಾಗಲು ರಾತ್ರಿ ಮಲಗುವ ಮುನ್ನ ನೀವು ತಣ್ಣನೆಯ, ಅತಿ ಗಟ್ಟಿಯಾದ ಅಥವಾ ಆಮ್ಲೀಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ನೋವಿರುವ ಹಲ್ಲಿನ ಮೇಲೆ ಲವಂಗದ ತುಂಡುಗಳನ್ನು ಇಟ್ಟುಕೊಂಡು ಅಗಿಯಿರಿ. ನಿಮ್ಮ ಹಲ್ಲು, ಒಸಡುಗಳ ಮೇಲೆ ದಿನವೂ ನೆಲ್ಲಿಕಾಯಿಯ ಪುಡಿ ಹಚ್ಚಿಕೊಳ್ಳಿ.
Updated on: Sep 05, 2023 | 5:00 PM

ಹಲ್ಲುನೋವು ನೋಡುವವರಿಗೆ ಸರಳವಾಗಿ ಕಂಡರೂ ಅದನ್ನು ಅನುಭವಿಸಿದವರಿಗೇ ಅದರ ಕಷ್ಟ ಗೊತ್ತು. ಈ ಹಲ್ಲು ನೋವಿಗೆ ತಾತ್ಕಾಲಿಕ ಪರಿಹಾರ ಬೇಕೆಂದರೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಬಹುದು.

ಆಯುರ್ವೇದ ವೈದ್ಯರಾದ ಡಾ. ಡಿಂಪಲ್ ಜಂಗ್ಡಾ ತಮ್ಮ ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಲ್ಲುನೋವು ನಿವಾರಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ಪರಿಹಾರಗಳನ್ನು ಹಂಚಿಕೊಂಡಿದ್ದಾರೆ.

ನೆಲ್ಲಿಕಾಯಿ ತಲೆಹೊಟ್ಟಿಗೆ ರಾಮಬಾಣವಾಗಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಪುಡಿ ಮಾಡಿದ ನೆಲ್ಲಿಕಾಯಿಯನ್ನು ಮೊಸರಿನೊಂದಿಗೆ ಕಲೆಸಿ, ಹಚ್ಚಿಕೊಂಡರೆ ತಲೆಹೊಟ್ಟು ಕಡಿಮೆಯಾಗುತ್ತದೆ.

ಲವಂಗ: ಲವಂಗದ ಎಣ್ಣೆಯು ಯುಜೆನಾಲ್ ಅನ್ನು ಹೊಂದಿರುತ್ತದೆ. ಇದು ನೋವನ್ನು ಗುಣಪಡಿಸುವ ಗುಣ ಹೊಂದಿದೆ. ಇದು ಹಲ್ಲಿನ ಒಳಗಿನ ನರಗಳನ್ನು ಶಮನಗೊಳಿಸುತ್ತದೆ. ನೋವಿರುವ ಹಲ್ಲಿನ ಮೇಲೆ ಕೆಲವು ಲವಂಗದ ತುಂಡುಗಳನ್ನು ಇಟ್ಟುಕೊಂಡು ಅಗಿಯಿರಿ. ಲವಂಗದ ರಸ ಹಲ್ಲಿಗೆ ತಾಗುತ್ತಿದ್ದಂತೆ ಹಲ್ಲು ನೋವು ಕಡಿಮೆಯಾಗುತ್ತದೆ.

ಅರಿಶಿನ: ಸಾಸಿವೆ ಎಣ್ಣೆಯೊಂದಿಗೆ ನುಣ್ಣಗೆ ಪುಡಿ ಮಾಡಿದ ಅರಿಶಿನವನ್ನು ಮಿಶ್ರಣ ಮಾಡಿ, ಪೇಸ್ಟ್ ಮಾಡಿ ನೋವಿರುವ ಹಲ್ಲಿಗೆ ಹಚ್ಚಿಕೊಳ್ಳಿ. ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಹಲ್ಲಿನ ನೋವನ್ನು ತಡೆಯಲು ಸಹಾಯ ಮಾಡುತ್ತದೆ.

ವೀಟ್ ಗ್ರಾಸ್: ಇದು ಹಲ್ಲಿನ ನೋವನ್ನು ನಿವಾರಿಸಲು ಮತ್ತು ಹಲ್ಲಿನ ಕೊಳೆಯುವಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಹಲ್ಲು ನೋವಿನಿಂದ ಪಾರಾಗಲು ರಾತ್ರಿ ಮಲಗುವ ಮುನ್ನ ನೀವು ತಣ್ಣನೆಯ, ಅತಿ ಗಟ್ಟಿಯಾದ ಅಥವಾ ಆಮ್ಲೀಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಹಾಗೇ, ಮಲಗುವಾಗ ದಿಂಬಿನ ಮೇಲೆ ತಲೆಯಿಟ್ಟು ಮಲಗಿ. ಇದರಿಂದ ತಲೆಗೆ ರಕ್ತ ಸಂಚಲನ ಕಡಿಮೆಯಾಗಿ, ಹಲ್ಲು ನೋವು ನಿಯಂತ್ರಣಕ್ಕೆ ಬರುತ್ತದೆ.




