Updated on: Sep 05, 2023 | 6:05 PM
'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ಶಾಲಿನಿ ಪಾಂಡೆ ಸಿನಿಮಾ ಜರ್ನಿ ಸಖತ್ ರೋಚಕ
ಸಿನಿಮಾ ನಟಿಯಾಗುವ ಆಸೆಯಿಂದ ಮನೆ ಬಿಟ್ಟು ಓಡಿ ಬಂದಿದ್ದರು ಶಾಲಿನಿ ಪಾಂಡೆ.
ಅಪ್ಪನಿಗೆ ಮಗಳು ಎಂಜಿನಿಯರ್ ಆಗಬೇಕೆಂಬ ಕನಸು ಆದರೆ ಶಾಲಿನಿಗೆ ನಟನೆಯ ಆಸೆ.
ಮನೆಯಿಂದ ಓಡಿ ಹೋಗಿ ಗೆಳೆಯರ ಮನೆಗಳನ್ನು, ಪಿಜಿಗಳಲ್ಲಿ ವಾಸಿಸಿ ಜಬಲ್ಪುರದಲ್ಲಿ ನಾಟಕ ಮಾಡುತ್ತಿದ್ದರು ಶಾಲಿನಿ.
ಅರ್ಜುನ್ ರೆಡ್ಡಿ, ಶಾಲಿನಿ ಪಾಂಡೆಯ ಮೊತ್ತ ಮೊದಲ ಸಿನಿಮಾ, ಆ ಸಿನಿಮಾದಲ್ಲಿ ಅದ್ಭುತವಾಗಿ ಶಾಲಿನಿ ನಟಿಸಿದ್ದಾರೆ.
ಆ ಸಿನಿಮಾದ ಬಳಿಕ ಶಾಲಿನಿ ಪಾಂಡೆಯ ಅದೃಷ್ಟ ಬದಲಾಯ್ತು, ಬಾಲಿವುಡ್ನಿಂದಲೂ ಅವಕಾಶಗಳು ಬಂದವು.
ರಣ್ವೀರ್ ಸಿಂಗ್ ಎದುರು ನಾಯಕಿಯಾಗಿ ಶಾಲಿನಿ ಪಾಂಡೆ ನಟಿಸಿದರು, ಆದರೆ 'ಜಯೇಷ್ಭಾಯ್ ಜೋರ್ದಾರ್' ಸಿನಿಮಾ ಫ್ಲಾಪ್ ಆಯ್ತು.
'ಅರ್ಜುನ್ ರೆಡ್ಡಿ' ಸಿನಿಮಾದ ಬಳಿಕ ಕೆಲವು ತೆಲುಗು, ತಮಿಳು ಸಿನಿಮಾಗಳಲ್ಲಿ ಶಾಲಿನಿ ನಟಿಸಿದರು. ಈಗಲೂ ಹಿಂದಿ, ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.