ಮೊಸರು ಬಳಸಿ ಹೇಗೆಲ್ಲ ಫೇಸ್​ಪ್ಯಾಕ್ ಮಾಡಿಕೊಳ್ಳಬಹುದು ಗೊತ್ತಾ?

Curd Face Pack: ಮೊಸರಿನ ಫೇಸ್​ಪ್ಯಾಕ್ ಚರ್ಮದ ಹೊಳಪನ್ನು ಉತ್ತೇಜಿಸುತ್ತದೆ, ಚರ್ಮವನ್ನು ಚೆನ್ನಾಗಿ ಹೈಡ್ರೇಟ್ ಮಾಡುತ್ತದೆ. ಮುಖದ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ. ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ.

ಮೊಸರು ಬಳಸಿ ಹೇಗೆಲ್ಲ ಫೇಸ್​ಪ್ಯಾಕ್ ಮಾಡಿಕೊಳ್ಳಬಹುದು ಗೊತ್ತಾ?
ಮೊಸರಿನ ಫೇಸ್​ ಪ್ಯಾಕ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 18, 2023 | 7:16 PM

ಮುಖದ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಿಕೊಳ್ಳಲು ನಾವು ಮನೆಯಲ್ಲಿ ದಿನನಿತ್ಯ ಬಳಸುವ ಕೆಲವು ವಸ್ತುಗಳನ್ನು ಬಳಸಿ ಫೇಸ್​ಪ್ಯಾಕ್ ತಯಾರಿಸಿಕೊಳ್ಳಬಹುದು. ಸ್ಪಾಗೆ ಹೋಗಿ ಸಾವಿರಾರು ರೂ. ಕೊಟ್ಟು ಕೆಮಿಕಲ್​ಯುಕ್ತ ಫೇಸ್​ಪ್ಯಾಕ್ ಮಾಡಿಸಿಕೊಳ್ಳುವುದರ ಬದಲು ಮನೆಯಲ್ಲೇ ನೈಸರ್ಗಿಕವಾಗಿ ಲಭ್ಯವಿರುವ ಪದಾರ್ಥಗಳಿಂದ ಮುಖದ ಚರ್ಮದ ಆರೈಕೆ ಮಾಡಬಹುದು. ಮೊಸರು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಈ ಮೊಸರು ನಮ್ಮ ಚರ್ಮದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾದ ಪದಾರ್ಥವಾಗಿದೆ.

ಮೊಸರನ್ನು ಯಾವುದರ ಜೊತೆ ಬೆರೆಸಿ ಫೇಸ್​ಪ್ಯಾಕ್ ಮಾಡಿಕೊಳ್ಳಬಹುದು?:

ಮೊಸರು ಮತ್ತು ಸೌತೆಕಾಯಿಯ ಫೇಸ್​ಪ್ಯಾಕ್ ಅನ್ನು ವಾರಕ್ಕೊಮ್ಮೆ ಮಾಡಿಕೊಳ್ಳಿ. ಮೊಸರು ಮತ್ತು ಟೊಮ್ಯಾಟೊ ಫೇಸ್​ಪ್ಯಾಕ್, ಮೊಸರು ಮತ್ತು ಅರಿಶಿನದ ಫೇಸ್​ಪ್ಯಾಕ್, ಮೊಸರು ಮತ್ತು ಆಲೂಗಡ್ಡೆಯ ಫೇಸ್​ಪ್ಯಾಕ್ ಅನ್ನು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಬಳಸಬಹುದು. ಇವುಗಳು ಎಲ್ಲಾ ಚರ್ಮದ ಪ್ರಕಾರಗಳಿಗೂ ಹೊಂದಿಕೆಯಾಗುತ್ತವೆ.

ಇದನ್ನೂ ಓದಿ: ಎಣ್ಣೆ ಚರ್ಮದವರಿಗೆ ಮೊಡವೆ ನಿವಾರಿಸಲು ಬೆಸ್ಟ್ ಫೇಸ್​ಪ್ಯಾಕ್ ಇಲ್ಲಿದೆ

ಮೊಸರು ಮತ್ತು ಜೇನುತುಪ್ಪ ಬೆರೆಸಿ ವಾರಕ್ಕೊಮ್ಮೆ ಫೇಸ್​ಪ್ಯಾಕ್ ಮಾಡಿಕೊಳ್ಳಿ. ಇದು ನಾರ್ಮಲ್ ಮತ್ತು ಒಣ ಚರ್ಮದವರಿಗೆ ಹೊಂದಿಕೆಯಾಗುತ್ತದೆ. ಮೊಸರು ಮತ್ತು ಕಡಲೆಹಿಟ್ಟು ಬಳಸಿ ವಾರಕ್ಕೊಮ್ಮೆ ಫೇಸ್​ಪ್ಯಾಕ್ ಮಾಡಿಕೊಳ್ಳಿ. ಇದು ಸಾಮಾನ್ಯ ಚರ್ಮದಿಂದ ಎಣ್ಣೆಯುಕ್ತ ಚರ್ಮದವರಿಗೆ ಹೊಂದಿಕೆಯಾಗುತ್ತದೆ. ಮೊಸರು ಮತ್ತು ನಿಂಬೆ ಹಣ್ಣಿನ ಫೇಸ್​ಪ್ಯಾಕನ್ನು ವಾರಕ್ಕೊಮ್ಮೆ ಬಳಸಬಹುದು. ಇದು ಸಾಮಾನ್ಯ ಚರ್ಮದಿಂದ ಎಣ್ಣೆಯುಕ್ತ ಚರ್ಮದವರಿಗೆ ಅತ್ಯುತ್ತಮವಾದ ಫೇಸ್​ಪ್ಯಾಕ್.

ಎಣ್ಣೆಯ ಚರ್ಮ ಹೊಂದಿದವರು ಮೊಸರು ಮತ್ತು ಓಟ್ಸ್ ಮಿಕ್ಸ್​ ಮಾಡಿ ವಾರಕ್ಕೊಮ್ಮೆ ಫೇಸ್​ಪ್ಯಾಕ್ ಮಾಡಿಕೊಳ್ಳಿ. ಅಥವಾ ಮೊಸರು ಮತ್ತು ಕಿತ್ತಳೆ ಸಿಪ್ಪೆಯ ಪುಡಿ ಬೆರೆಸಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಫೇಸ್​ಪ್ಯಾಕ್ ಮಾಡಿಕೊಳ್ಳಬಹುದು. ಇದರ ಜೊತೆಗೆ ಮೊಸರಿನೊಂದಿಗೆ ಲೋಳೆಸರ, ಕ್ಯಾಮೊಮೈಲ್, ಕಾಫಿ, ಅಕ್ಕಿ ಹಿಟ್ಟು, ರೋಸ್ ವಾಟರ್ ಬೆರೆಸಿ ಫೇಸ್​ಪ್ಯಾಕ್ ಮಾಡಿಕೊಳ್ಳಬಹುದು. ಇದರಿಂದಲೂ ಮುಖದ ಕಾಂತಿ ಹೆಚ್ಚುತ್ತದೆ.

ಇದನ್ನೂ ಓದಿ: ಚರ್ಮ, ಮುಖದ ಸೌಂದರ್ಯಕ್ಕೆ ಮೊಸರಿನಿಂದ ಆಗುವ 10 ಪ್ರಯೋಜನಗಳಿವು

ಮೊಸರಿನ ಫೇಸ್​ಪ್ಯಾಕ್ ಮಾಡಿಕೊಳ್ಳುವುದರಿಂದ ಏನೆಲ್ಲ ಪ್ರಯೋಜನಗಳಿವೆ?:

ಮೊಸರಿನ ಫೇಸ್​ಪ್ಯಾಕ್ ಸತ್ತ ಚರ್ಮದ ಕೋಶಗಳನ್ನು ಎಫ್ಫೋಲಿಯೇಟ್ ಮಾಡುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡುತ್ತದೆ ಮತ್ತು ಚರ್ಮದ ಹೊಳಪನ್ನು ಉತ್ತೇಜಿಸುತ್ತದೆ. ಚರ್ಮವನ್ನು ಚೆನ್ನಾಗಿ ಹೈಡ್ರೇಟ್ ಮಾಡುತ್ತದೆ. ಮುಖದ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ. ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ