ಉಗುರುಗಳ ಆರೋಗ್ಯಕ್ಕೆ ಮನೆಯಲ್ಲೇ ಈ ದುಬಾರಿ ಮೆನಿಕ್ಯೂರ್ ಮಾಡಿ ನೋಡಿ

ಮೆನಿಕ್ಯೂರ್ ಮಾಡುವುದರಿಂದ ಉಗುರಿನ ಹೊರಪೊರೆಯನ್ನು ತೆಗೆದುಹಾಕಿ, ಡೆಡ್​ಸ್ಕಿನ್​ಗಳನ್ನು ರಿಮೂವ್ ಮಾಡಿ, ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಹಾಟ್ ಆಯಿಲ್ ಮೆನಿಕ್ಯೂರ್ ಅತ್ಯುತ್ತಮ ಆಯ್ಕೆ. ನೀವು ಮನೆಯಲ್ಲೇ ಈ ಮೆನಿಕ್ಯೂರ್ ಮಾಡಿಕೊಳ್ಳಬಹುದು.

ಉಗುರುಗಳ ಆರೋಗ್ಯಕ್ಕೆ ಮನೆಯಲ್ಲೇ ಈ ದುಬಾರಿ ಮೆನಿಕ್ಯೂರ್ ಮಾಡಿ ನೋಡಿ
ಮೆನಿಕ್ಯೂರ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 18, 2023 | 6:13 PM

ತಮ್ಮ ಉಗುರಿನ ಬಗ್ಗೆ ಕಾಳಜಿ ವಹಿಸದವರು ಯಾರಿದ್ದಾರೆ? ಅದರಲ್ಲೂ ಯುವತಿಯರಿಗಂತೂ ಉಗುರುಗಳು ಕೂಡ ಅವರ ಸೌಂದರ್ಯದ ಒಂದು ಅವಿಭಾಜ್ಯ ಅಂಗ. ಉಗುರುಗಳನ್ನು ಸುಂದರವಾಗಿ ಕಾಣುವಂತೆ ಮಾಡಲು ನಾನಾ ರೀತಿಯ ಮೆನಿಕ್ಯೂರ್ ಥೆರಪಿ, ನೇಲ್ ಆರ್ಟ್​, ನೇಲ್ ಕೇರ್ ರೊಟೀನ್​ಗಳನ್ನು ಮಾಡಿಸಿಕೊಳ್ಳುವವರಿದ್ದಾರೆ. ಉಗುರುಗಳು ಸುಂದರವಾಗಿ ಕಾಣಲು ಮಾತ್ರವಲ್ಲದೆ ಆರೋಗ್ಯವಾಗಿರಲು ಕೂಡ ಮೆನಿಕ್ಯೂರ್ ಬಹಳ ಅಗತ್ಯ.

ಮೆನಿಕ್ಯೂರ್ ಮಾಡುವುದರಿಂದ ಉಗುರಿನ ಹೊರಪೊರೆಯನ್ನು ತೆಗೆದುಹಾಕಿ, ಡೆಡ್​ಸ್ಕಿನ್​ಗಳನ್ನು ರಿಮೂವ್ ಮಾಡಿ, ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಹಾಟ್ ಆಯಿಲ್ ಮೆನಿಕ್ಯೂರ್ ಅತ್ಯುತ್ತಮ ಆಯ್ಕೆ. ನೀವು ಮನೆಯಲ್ಲೇ ಈ ಮೆನಿಕ್ಯೂರ್ ಮಾಡಿಕೊಳ್ಳಬಹುದು.

ಹಾಟ್ ಆಯಿಲ್ ಮೆನಿಕ್ಯೂರ್ ಸ್ಪಾಗಳಲ್ಲಿ ಮಾಡಲಾಗುವ ದುಬಾರಿ ಮತ್ತು ಐಷಾರಾಮಿ ಉಗುರಿನ ಚಿಕಿತ್ಸೆಗಳಲ್ಲಿ ಒಂದಾಗಿದೆ. ನಿಮ್ಮ ಉಗುರುಗಳು ಮತ್ತು ಕೈಗಳನ್ನು ಆರೋಗ್ಯಯುತವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ಇದು ಉತ್ತಮವಾದ ಮಾರ್ಗ. ಇದು ನಿಮ್ಮ ಉಗುರುಗಳು ಮತ್ತು ಹೊರಪೊರೆ ಎರಡಕ್ಕೂ ಪೋಷಣೆಯನ್ನು ನೀಡುತ್ತದೆ. ಬಿಸಿ ಎಣ್ಣೆಯ ಮೆನಿಕ್ಯೂರ್‌ಗಳು ಅತ್ಯಂತ ಕಷ್ಟಕರವಾದ ಚಿಕಿತ್ಸೆಗಳಲ್ಲಿ ಒಂದಾಗಿದೆ ಮತ್ತು ದುಬಾರಿ ಸ್ಪಾಗಳಲ್ಲಿ ಮಾತ್ರ ಕಂಡುಬರುತ್ತವೆ. ಆದರೆ ನೀವು ಜಾಸ್ತಿ ಖರ್ಚಿಲ್ಲದೆ ಮನೆಯಲ್ಲೇ ಈ ಮೆನಿಕ್ಯೂರ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Pedicure Tips: ಸಲೂನ್​ಗಿಂತ ಚೆನ್ನಾಗಿ ಮನೆಯಲ್ಲೇ ಪೆಡಿಕ್ಯೂರ್ ಮಾಡಿಕೊಳ್ಳುವುದು ಹೇಗೆ?

ಹಾಟ್ ಆಯಿಲ್ ಮೆನಿಕ್ಯೂರ್​ಗೆ ಬೇಕಾಗುವ ಸಾಮಗ್ರಿಗಳು:

– ಸೂರ್ಯಕಾಂತಿ ಎಣ್ಣೆ ಮತ್ತು ಹರಳೆಣ್ಣೆ

– ಸ್ವಲ್ಪ ಬಾದಾಮಿ ಎಣ್ಣೆ

– ವಿಟಮಿನ್ ಇ ಎಣ್ಣೆ ಮತ್ತು ಆಲಿವ್ ಎಣ್ಣೆ

– ಟೀ ಟ್ರೀ ಎಣ್ಣೆ

– ವಿಟಮಿನ್ ಇ ಕ್ಯಾಪ್ಸೂಲ್​ಗಳು

ಈ ಮೆನಿಕ್ಯೂರ್ ಮಾಡುವುದು ಹೇಗೆ?:

ಈ ಮೇಲಿನ ಎಲ್ಲಾ ಪದಾರ್ಥಗಳನ್ನು ಮಿಕ್ಸ್​ ಮಾಡಿಕೊಳ್ಳಿ. ಆ ಮಿಶ್ರಣವನ್ನು ಸುಮಾರು 30 ಸೆಕೆಂಡುಗಳ ಕಾಲ ಮೈಕ್ರೊವೇವ್​ನಲ್ಲಿ ಬಿಸಿ ಮಾಡಲು ಇಡಿ. ನೀವು ವಿಟಮಿನ್ ಇ ಕ್ಯಾಪ್ಸುಲ್​ಗಳನ್ನು ಓಪನ್ ಮಾಡಿ ಈ ಮಿಶ್ರಣಕ್ಕೆ ಸೇರಿಸಬಹುದು. ಎಣ್ಣೆಯನ್ನು ಕೊಂಚ ತಣ್ಣಗಾಗಲು ಬಿಡಿ. ನಂತರ ಎಣ್ಣೆಗಳ ಮಿಶ್ರಣ ಸಂಪೂರ್ಣವಾಗಿ ತಣ್ಣಗಾಗುವವರೆಗೆ ನಿಮ್ಮ ಉಗುರುಗಳನ್ನು ಅದರಲ್ಲಿ ಅದ್ದಿರಿ. ಬೇಕಾದರೆ, ಮತ್ತೆ ಎಣ್ಣೆಯನ್ನು 10 ಸೆಕೆಂಡ್ ಬಿಸಿ ಮಾಡಿ ಮತ್ತೊಮ್ಮೆ ನಿಮ್ಮ ಕೈಗಳನ್ನು ಅದರಲ್ಲಿ ಅದ್ದಬಹುದು.

ಇದನ್ನೂ ಓದಿ: Nail Care: ನೀವು ಉಗುರುಗಳನ್ನು ಆರೋಗ್ಯಕರ ಮತ್ತು ಸುಂದರವಾಗಿರಿಸಲು ಬಯಸಿದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ

ನಂತರ, ನಿಮ್ಮ ಕೈಗಳಿಗೆ ಮತ್ತು ಮಣಿಕಟ್ಟಿಗೆ ಆ ಮಿಶ್ರಣದಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ನೀವು ಇದನ್ನು ಮಾಡಿದ ನಂತರ ಸ್ವಚ್ಛವಾದ ನೀರಿನಿಂದ ನಿಮ್ಮ ಕೈಗಳನ್ನು ತೊಳೆಯಿರಿ. ಬಳಿಕ, ಸ್ವಚ್ಛವಾದ ಟವೆಲ್​ನಿಂದ ಒರೆಸಿಕೊಳ್ಳಿ. ಹೀಗೆ ಮಾಡಿದರೆ ಹಾಟ್ ಆಯಿಲ್ ಮೆನಿಕ್ಯೂರ್ ಪೂರ್ಣಗೊಳ್ಳುತ್ತದೆ. ರಾತ್ರಿ ಮಲಗುವ ಮುನ್ನ ನೀವು ಇದನ್ನು ವಾರಕ್ಕೆ 2 ಬಾರಿ ಮಾಡಬಹುದು. ಇದಾದ ನಂತರ ನಿಮ್ಮ ಕೈಗಳನ್ನು ಮಾಯಿಶ್ಚರೈಸಿಂಗ್ ಲೋಷನ್‌ನಿಂದ ಮಸಾಜ್ ಮಾಡಲು ಮರೆಯದಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ