Hair Care: ಕೂದಲು ಉದುರುತ್ತಿದ್ದರೆ ಯಾವಾಗ ನೀವು ತಲೆಕೆಡಿಸಿಕೊಳ್ಳಬೇಕು?

Hair Care Tips: ಒಬ್ಬ ಸಾಮಾನ್ಯ ವ್ಯಕ್ತಿಗೆ ದಿನಕ್ಕೆ ಗರಿಷ್ಠ 100 ಕೂದಲಿನ ಎಳೆಗಳು ಉದುರುತ್ತವೆ. ಆದರೆ ಪ್ರೌಢಾವಸ್ಥೆಗೆ ಬಂದ ಕೂಡಲೇ ಹೆಚ್ಚು ಕೂದಲು ಉದುರುವ ಸಾಧ್ಯತೆ ಇರುತ್ತದೆ. ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದಾಗಿ ಈ ಬದಲಾವಣೆ ಆಗುತ್ತದೆ.

Hair Care: ಕೂದಲು ಉದುರುತ್ತಿದ್ದರೆ ಯಾವಾಗ ನೀವು ತಲೆಕೆಡಿಸಿಕೊಳ್ಳಬೇಕು?
ಕೂದಲು ಉದುರುವುದುImage Credit source: iStock
Follow us
|

Updated on: Oct 18, 2023 | 4:18 PM

‘ಅಯ್ಯೋ, ನನ್ನ ಕೂದಲನ್ನು ಬಾಚೋಕೇ ಮನಸಾಗಲ್ಲ. ಬಾಚಿದಷ್ಟೂ ಬಾಚಣಿಗೆಯಲ್ಲಿ ಕೂದಲು ಕಿತ್ತುಕೊಂಡು ಬರುತ್ತೆ’, ‘ತಲೆಸ್ನಾನ ಮಾಡಿದ್ರೆ ಬಾತ್ ರೂಂ ತುಂಬ ನನ್ನ ಕೂದಲೇ ತುಂಬಿರುತ್ತೆ’, ‘ಈ ಕೂದಲು ಉದುರೋದನ್ನು ನೋಡೋಕಾಗ್ತಿಲ್ಲ, ಬಾಬ್​ಕಟ್ ಮಾಡಿಸ್ಕೊಂಡು ಬಿಡ್ತೀನಿ’. ಇದು ಎಲ್ಲ ಯುವತಿಯರ ಗೊಣಗಾಟ. ಇದು ಯುವಕರಿಗೂ ಹೊರತಾಗಿಲ್ಲ. ಕೂದಲು ಉದುರುವುದನ್ನು ಸಹಿಸಲಾಗದೆ ಬೋಳುತಲೆ ಮಾಡಿಸಿಕೊಂಡವರೂ ಇದ್ದಾರೆ! ಯುವಕ-ಯುವತಿಯರಲ್ಲಿ ಕೂದಲು ಉದುರುವಿಕೆ ಬಹಳ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ.

ವಯಸ್ಸಾದಾಗ ಕೂದಲು ಉದುರುವುದು ಸಾಮಾನ್ಯ ಲಕ್ಷಣವಾಗಿದೆ. ಆದರೆ, ಹದಿಹರೆಯದಲ್ಲಿ ವಿಪರೀತ ಕೂದಲು ಉದುರುವುದು ಅವರ ಆತ್ಮವಿಶ್ವಾಸ, ಮನಸಿನ ಮೇಲೂ ಪರಿಣಾಮ ಬೀರುತ್ತದೆ. ಕೂದಲು ಉದುರುವಿಕೆಗೆ ಅನುವಂಶಿಕ ಅಂಶಗಳು, ವೈದ್ಯಕೀಯ ಸಮಸ್ಯೆಗಳು ಅಥವಾ ಹಾರ್ಮೋನುಗಳ ಬದಲಾವಣೆಗಳಂತಹ ಕಾರಣಗಳು ಹದಿಹರೆಯದವರಲ್ಲಿ ತೀವ್ರವಾದ ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತಿವೆ.

ಇದನ್ನೂ ಓದಿ: ಕೂದಲು ತೆಳ್ಳಗಾಗಿದೆ ಎಂದು ಚಿಂತಿಸಬೇಡಿ; ಮನೆಯಲ್ಲೇ ಇದೆ ಪರಿಹಾರ!

ಹದಿಹರೆಯದ ಕೂದಲು ಉದುರುವಿಕೆಯ ಆರಂಭಿಕ ಚಿಹ್ನೆಗಳು ಮತ್ತು ಲಕ್ಷಣಗಳ ಬಗ್ಗೆ ಮಾಹಿತಿ ಇಲ್ಲಿದೆ.

1. ಕೂದಲ ಬೆಳವಣಿಗೆ ನಿಧಾನಗೊಳ್ಳುವುದು

2. ನೆತ್ತಿಯ ಮೇಲೆ ತೇಪೆಗಳು

3. ದಿನಕ್ಕೆ 100ಕ್ಕೂ ಹೆಚ್ಚು ಕೂದಲು ಉದುರುವುದು

4. ನೀವು ಎಚ್ಚರವಾದಾಗ ದಿಂಬಿನ ಮೇಲೆ ಕೂದಲಿನ ಎಳೆಗಳು ಅಂಟಿರುವುದು

5. ಕೂದಲು ಹಠಾತ್ ಉದುರಲಾರಂಭಿಸುವುದು

6. ತಲೆಯ ಕೆಲವೆಡೆ ಬೋಳಾಗುವುದು

7. ನಿಮ್ಮ ತಲೆಯ ನೆತ್ತಿಯ ಮೇಲೆ ಕೂದಲು ತೆಳುವಾಗುವುದು

8. ಮುಂಭಾಗದ ನೆತ್ತಿಯಲ್ಲಿ ಕೂದಲು ಉದುರುವುದು

ಒಬ್ಬ ಸಾಮಾನ್ಯ ವ್ಯಕ್ತಿಗೆ ದಿನಕ್ಕೆ ಗರಿಷ್ಠ 100 ಕೂದಲಿನ ಎಳೆಗಳು ಉದುರುತ್ತವೆ. ಆದರೆ ಪ್ರೌಢಾವಸ್ಥೆಗೆ ಬಂದ ಕೂಡಲೇ ಹೆಚ್ಚು ಕೂದಲು ಉದುರುವ ಸಾಧ್ಯತೆ ಇರುತ್ತದೆ. ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದಾಗಿ ಈ ಬದಲಾವಣೆ ಆಗುತ್ತದೆ. ಕೂದಲು ಪ್ರೋಟೀನ್ ಎಳೆಗಳಿಂದ ಮಾಡಲ್ಪಟ್ಟಿದೆ. ಕೂದಲಿನ ಕೋಶಕದ ಸರಾಸರಿ ಜೀವಿತಾವಧಿಯು 2 ರಿಂದ 7 ವರ್ಷ. ನಂತರ ಕೂದಲು ಉದುರಿಹೋಗುತ್ತದೆ ಮತ್ತು ಹೊಸ ಕೂದಲು ಬರುತ್ತದೆ. ವಯಸ್ಸಾಗುತ್ತಿದ್ದಂತೆ ನಮ್ಮ ಕೂದಲು ತನ್ನ ಪೌಷ್ಟಿಕಾಂಶವನ್ನು ಕಳೆದುಕೊಂಡು, ತೆಳ್ಳಗಾಗಲಾರಂಭಿಸುತ್ತದೆ.

ಇದನ್ನೂ ಓದಿ: Hair Care Tips: ಮರದ ಬಾಚಣಿಗೆ ಬಳಸಿದರೆ ಕೂದಲು ಉದ್ದವಾಗಿ ಬೆಳೆಯುತ್ತಾ?

ಕೂದಲು ತೆಳ್ಳಗಾಗುವುದಕ್ಕೆ ಪರಿಹಾರ ಪಡೆಯಲು ಈ ಮನೆಮದ್ದುಗಳನ್ನು ಬಳಸಬಹುದು. ಆಯಿಲ್ ಮಸಾಜ್ ಮಾಡಿ ನೋಡಿ. ನೆತ್ತಿಯ ಮಸಾಜ್ ಮಾಡುವುದರಿಂದ ಕೂದಲಿನ ದಪ್ಪವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೂದಲನ್ನು ಶಾಂಪೂ ಮಾಡಲು ನೀವು ಒಣ ನೆಲ್ಲಿಕಾಯಿ ಪುಡಿಯನ್ನು ಬಳಸಬಹುದು. ಇದನ್ನು ಹೇರ್ ಟಾನಿಕ್ ಆಗಿಯೂ ಬಳಸಬಹುದು. ಕೂದಲಿನ ಆರೈಕೆಗೆ ನೆಲ್ಲಿಕಾಯಿ ಉತ್ತಮ ಆಯ್ಕೆ. ಸೀಗೆಕಾಯಿ, ಸೀಗೆಪುಡಿಯನ್ನು ಬಳಸಿ ನಿಮ್ಮ ತಲೆಯನ್ನು ವಾಶ್ ಮಾಡಿ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ಸೀಳುವುದನ್ನು ತಡೆಯಲು ನೀವು ಸೀಗೆಕಾಯಿಯ ಒಣ ಪುಡಿಯನ್ನು ಬಳಸಬಹುದು. ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಮತ್ತು ಕೂದಲನ್ನು ಅದರ ಮೂಲ ಬಣ್ಣದಲ್ಲಿ ಇಡಲು ಇದನ್ನು ಬಳಸಲಾಗುತ್ತದೆ.

ಬ್ರಾಹ್ಮಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಬ್ರಾಹ್ಮಿ ಎಲೆಯ ಎಣ್ಣೆಯನ್ನು ಕೂಡ ಬಳಸಬಹುದು. ಬ್ರಾಹ್ಮಿಯಲ್ಲಿರುವ ಕೆಲವು ಆಲ್ಕಲಾಯ್ಡ್‌ಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ. ಮೆಂತ್ಯ ಹೇರ್ ಪ್ಯಾಕ್, ಮೆಂತ್ಯ ಆಯಿಲ್ ಬಳಸುವ ಮೂಲಕ ಕೂದಲು ಉದುರುವಿಕೆಯನ್ನು ತಡೆಯಬಹುದು. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮೆಂತ್ಯವು ಸಹಕಾರಿಯಾಗಿದೆ. ಈರುಳ್ಳಿ ರಸವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಚಟುವಟಿಕೆಯನ್ನು ಹೊಂದಿದೆ. ಕೂದಲು ಉದುರಿದ ಜಾಗದಲ್ಲಿ ಈರುಳ್ಳಿ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಈರುಳ್ಳಿ ಕಬ್ಬಿಣ ಮತ್ತು ಸತುವಿನಂತಹ ಖನಿಜಗಳನ್ನು ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ