ಎಣ್ಣೆ ಚರ್ಮದವರಿಗೆ ಮೊಡವೆ ನಿವಾರಿಸಲು ಬೆಸ್ಟ್ ಫೇಸ್​ಪ್ಯಾಕ್ ಇಲ್ಲಿದೆ

ನಿಮ್ಮ ಮನೆಯಲ್ಲಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸುವ ಮೂಲಕ ಎಣ್ಣೆ ಚರ್ಮದವರು ಮೊಡವೆಗಳನ್ನು ನಿಯಂತ್ರಿಸಬಹುದು. ಮೊಡವೆ ನಿವಾರಣೆಗೆ ಯಾವ್ಯಾವುದೋ ಕ್ರೀಂ ಬಳಸುವುದಕ್ಕಿಂತ ಅಡ್ಡ ಪರಿಣಾಮಗಳಿಲ್ಲದ ಈ ಫೇಸ್​ಲ್ಯಾಕ್ ಬಳಸಿದರೆ ಮೊಡವೆಯೂ ಕಡಿಮೆಯಾಗುತ್ತದೆ, ಮುಖದ ಕಾಂತಿಯೂ ಹೆಚ್ಚುತ್ತದೆ.

ಎಣ್ಣೆ ಚರ್ಮದವರಿಗೆ ಮೊಡವೆ ನಿವಾರಿಸಲು ಬೆಸ್ಟ್ ಫೇಸ್​ಪ್ಯಾಕ್ ಇಲ್ಲಿದೆ
ಮೊಡವೆImage Credit source: iStock
Follow us
|

Updated on:Sep 29, 2023 | 7:25 PM

ಮೊಡವೆಗಳು ಮಹಿಳೆಯರಿಗೆ ದೊಡ್ಡ ತಲೆನೋವಿನ ಸಂಗತಿ. ಮುಖದಲ್ಲಿ ಏಳುವ ಮೊಡವೆಗಳಿಂದ ಮುಖದ ಸೌಂದರ್ಯವೇ ಹಾಳಾಗುತ್ತದೆ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ನಿಮಗೆ ಯಾವಾಗ ಮೊಡವೆ ಏಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಮನೆಯಲ್ಲಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸುವ ಮೂಲಕ ಎಣ್ಣೆ ಚರ್ಮದವರು ಮೊಡವೆಗಳನ್ನು ನಿಯಂತ್ರಿಸಬಹುದು. ಮೊಡವೆ ನಿವಾರಣೆಗೆ ಯಾವ್ಯಾವುದೋ ಕ್ರೀಂ ಬಳಸುವುದಕ್ಕಿಂತ ಅಡ್ಡ ಪರಿಣಾಮಗಳಿಲ್ಲದ ಈ ಫೇಸ್​ಲ್ಯಾಕ್ ಬಳಸಿದರೆ ಮೊಡವೆಯೂ ಕಡಿಮೆಯಾಗುತ್ತದೆ, ಮುಖದ ಕಾಂತಿಯೂ ಹೆಚ್ಚುತ್ತದೆ.

ನಿಂಬೆ ರಸ ಮತ್ತು ಜೇನುತುಪ್ಪದ ಫೇಸ್​ಪ್ಯಾಕ್:

ಎಣ್ಣೆಯುಕ್ತ ಚರ್ಮಕ್ಕೆ ನಿಂಬೆ ಅತ್ಯುತ್ತಮ ಮನೆಮದ್ದು. ನಿಂಬೆ ರಸವು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಎಣ್ಣೆಯುಕ್ತ ಚರ್ಮದ ತೈಲ ಸ್ರವಿಸುವಿಕೆಯನ್ನು ಕಡಿಮೆಗೊಳಿಸುತ್ತದೆ. ಇದು ಮೊಡವೆಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಸಿಟ್ರಿಕ್ ಆಮ್ಲವು ಮೊಡವೆಗಳನ್ನು ಉಂಟುಮಾಡುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ಇದು ಮುಚ್ಚಿಹೋಗಿರುವ ರಂಧ್ರಗಳನ್ನು ಸ್ವಚ್ಛಗೊಳಿಸಲು ಮತ್ತು ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೇಹದಲ್ಲಿ ಕೊಬ್ಬು ಹೇಗೆ ಸಂಗ್ರಹವಾಗುತ್ತದೆ? ಅಧಿಕ ಕೊಲೆಸ್ಟ್ರಾಲ್ ನಿಯಂತ್ರಿಸುವುದು ಹೇಗೆ?

ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮದ ತೇವಾಂಶ ಹೆಚ್ಚಿಸುತ್ತದೆ. ಜೇನುತುಪ್ಪವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸಹ ಹೊಂದಿದ. ಇದು ನಿಮಗೆ ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ನೀಡುತ್ತದೆ. ಮೊಡವೆ ಮತ್ತು ವೈಟ್‌ಹೆಡ್ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

ಫೇಸ್​ಪ್ಯಾಕ್ ತಯಾರಿಸುವುದು ಹೇಗೆ?:

– 1 ಚಮಚ ತಾಜಾ ನಿಂಬೆ ರಸವನ್ನು ಹಿಂಡಿಕೊಂಡು, ಒಂದು ಬಟ್ಟಲಿನಲ್ಲಿ ಅದೇ ಪ್ರಮಾಣದ ಜೇನುತುಪ್ಪವನ್ನು ತೆಗೆದುಕೊಳ್ಳಿ. ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

– ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸಿದ ನಂತರ ಆ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.

– ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಲು ಹತ್ತಿ ಉಂಡೆಯನ್ನು ಬಳಸಿ.

– ಮಿಶ್ರಣವನ್ನು ಮುಖದ ಮೇಲೆ 15ರಿಂದ 20 ನಿಮಿಷಗಳ ಕಾಲ ಬಿಡಿ.

– 15 ನಿಮಿಷಗಳ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 pm, Fri, 29 September 23