Avocado Face Mask: ಶುಷ್ಕ ತ್ವಚೆಯ ಸಮಸ್ಯೆ ನಿಮ್ಮನ್ನು ಭಾದಿಸಿದರೆ, ಮುಖಕ್ಕೆ ಈ ಫೇಸ್ ಮಾಸ್ಕ್ ಹಚ್ಚಿ
ಇನ್ನೇನು ಚಳಿಗಾಲ ಆರಂಭವಾಗಲಿದೆ. ಈ ಚಳಿಗಾಲದಲ್ಲಿ ತ್ವಚೆಯಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುವಂತಹದ್ದು, ಶುಷ್ಕ ತ್ವಚೆಯ ಸಮಸ್ಯೆ ಹೀಗೆ ಹಲವಾರು ರೀತಿಯ ತ್ವಚೆ ಸಂಬಂಧಿ ಸಮಸ್ಯೆಗಳು ಹೆಚ್ಚಿನವರನ್ನು ಕಾಡುತ್ತದೆ. ನೀವೂ ಕೂಡಾ ಶುಷ್ಕ ತ್ವಚೆಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ತ್ವಚೆಗೆ ಅವಕಾಡೊ ಹಣ್ಣಿನ ಫೇಸ್ ಮಾಸ್ಕ್ ಅನ್ವಯಿಸುವ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು.
ಅಕ್ಟೋಬರ್ ತಿಂಗಳಿನಲ್ಲಿ ಹವಮಾನದಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಚಳಿಗಾಲ ಆರಂಭವಾಗುವ ಈ ಸಮಯದಲ್ಲಿ ಬೀಸುವ ತಂಪಾದ ಗಾಳಿಯು ಚರ್ಮದ ಶುಷ್ಕತೆಯನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರ ತ್ವಚೆಯು ಚಳಿಗಾಲಕ್ಕೂ ಮುನ್ನವೇ ಒಣಗತೊಡಗುತ್ತದೆ. ಮತ್ತು ಚರ್ಮವು ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ. ಅಲ್ಲದೆ ದೀರ್ಘಕಾಲದವರೆಗೆ ಮುಖದಲ್ಲಿ ಶುಷ್ಕತೆಯಿಂದಾಗಿ ಸುಕ್ಕುಗಳ ಸಮಸ್ಯೆ ಬೇಗನೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಹೀಗಿರುವಾಗ ನಿಮ್ಮ ಚರ್ಮವನ್ನು ತೇವವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ನೀವು ಅವಕಾಡೊ ಫೇಸ್ ಮಾಸ್ಕ್ ಅನ್ವಯಿಸಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅವಕಾಡೊ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಗೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಬಳಕೆಯಿಂದ ಸುಕ್ಕುಗಳ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೆ ಇದು ಕಲೆಗಳ ಸಮಸ್ಯೆಯನ್ನು ನಿವಾರಿಸಿ ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ. ಈ ಚಳಿಗಾಲದಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ ಅವಕಾಡೊ ಹಣ್ಣಿನ ಫೇಸ್ ಮಾಸ್ಕ್ ಅನ್ವಯಿಸಿ. ಅವಕಾಡೋ ಫೇಸ್ ಮಾಸ್ಕ್ ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಅವಕಾಡೊ ಫೇಸ್ ಮಾಸ್ಕ್ ತಯಾರಿಸುವುದು ಹೇಗೆ:
ಅವಕಾಡೊ ಫೇಸ್ ಮಾಸ್ಕ್ ಮಾಡಲು ಮೊದಲು ½ ಅವಕಾಡೊ ತಿರುಳನ್ನು ತೆಗೆದುಕೊಂಡು, ಅದಕ್ಕೆ ಕಪ್ ಮೊಸರು, ಕೆಲವು ಹನಿ ಜೇನುತುಪ್ಪ ಮತ್ತು 1 ಟೀಚಮಚ ಅರಶಿನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಮುಖವನ್ನು ಸ್ವಚ್ಛಗೊಳಿಸಿ, ಅವಕಾಡೊ ಫೇಸ್ ಮಾಸ್ಕ್ ಅನ್ವಯಿಸಿ. 10 ರಿಂದ 15 ನಿಮಿಷಗಳ ಫೇಸ್ ಪ್ಯಾಕ್ ಒಣಗಲು ಬಿಡಿ. ಬಳಿಕ ಕೈಯಿಂದ ಮೆಲ್ಲನೆ ಮಸಾಜ್ ಮಾಡುತ್ತಾ, ಮುಖವನ್ನು ಸ್ವಚ್ಛ ನೀರಿನಿಂದ ತೊಳೆಯಿರಿ. ಇದು ನಿಮ್ಮ ತ್ವಚೆಗೆ ಮೃದುತ್ವವನ್ನು ನೀಡುತ್ತದೆ. ಮತ್ತು ತ್ವಚೆಯನ್ನು ತೇವಭರಿತವಾಗಿರಿಸುತ್ತದೆ. ವಾರಕ್ಕೆ ಎರಡರಿಂದ ಮೂರು ಬಾರಿ ಈ ಫೇಸ್ ಮಾಸ್ಕ್ನ್ನು ತ್ವಚೆಗೆ ಅನ್ವಯಿಸಬಹುದು.
ಇದನ್ನೂ ಓದಿ: ಆವಕಾಡೊ ಹಣ್ಣು ಆರೋಗ್ಯದ ಜತೆಗೆ ಸೌಂದರ್ಯಕ್ಕೂ ಒಳ್ಳೆಯದು
ಅವಕಾಡೊ ಹಣ್ಣಿನಿಂದ ಚರ್ಮಕ್ಕೆ ಲಭಿಸುವ ಪ್ರಯೋಜನಗಳು:
• ಅವಕಾಡೊ ತ್ವಚೆಗೆ ತುಂಬಾ ಪ್ರಯೋಜನಕಾರಿಯಾದ ಹಣ್ಣಾಗಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದು ಚರ್ಮವನ್ನು ತೇವವಾಗಿಡಲು ಸಹಾಯ ಮಾಡುತ್ತದೆ.
• ಅವಕಾಡೊ ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಅಲ್ಲದೆ ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಡಿ ಮತ್ತು ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ ಇದು ತ್ವಚೆಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.
• ಅವಕಾಡೊ ಹಣ್ಣಿನ ಫೇಸ್ ಮಾಸ್ಕ್ ಮುಖಕ್ಕೆ ಅನ್ವಯಿಸುವುದರಿಂದ ಚರ್ಮದ ಸುಕ್ಕುಗಳ ಸಮಸ್ಯೆಯನ್ನು ತೊಡೆದುಹಾಕಬಹುದು ಮತ್ತು ಇದು ತ್ವಚೆ ಹೊಳೆಯುವಂತೆ ಮಾಡಲು ಸಹಕಾರಿಯಗಿದೆ.
• ಅವಕಾಡೊ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇದು ನಿಮಗೆ ಮೊಡವೆಗಳ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.
• ಅವಕಾಡೊ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ವಿಟಮಿನ್ಹಾಗೂ ಮೊನೊಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದ್ದು, ಇದು ಚರ್ಮವನ್ನು ತೇವಭರಿತವಾಗಿಡಲು ಹಾಗೂ ಮೃದುವಾಗಿರಿಸಲು ಸಹಾಯಕವಾಗಿದೆ.
• ಅವಕಾಡೊ ವಿಟಮಿನ್ ಇ, ಕೊಬ್ಬಿನಾಮ್ಲಗಳು ಮತ್ತು ಒಲೀಕ್ ಆಮ್ಲದಿಂದ ಸಮೃದ್ಧವಾಗಿದ್ದು, ಇದು ಚರ್ಮದಲ್ಲಿನ ಕಪ್ಪು ಕಲೆಗಳ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:04 pm, Sat, 21 October 23