Global day of parents 2026: ಪೋಷಕರೇ ಮಕ್ಕಳ ಪಾಲಿನ ನಿಜವಾದ ಸೂಪರ್ ಹೀರೋ
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲೂ ಮೊದಲ ಹೀರೋ ಮತ್ತು ಸರಿಯಾದ ಮಾರ್ಗದರ್ಶಕರು ಇದ್ದರೆ, ಅದು ಪೋಷಕರು ಮಾತ್ರ. ಹೀಗೆ ಮಕ್ಕಳ ಭವಿಷ್ಯವನ್ನು ಸುಂದರವಾಗಿ ರೂಪಿಸಲು ಎಂತಹ ತ್ಯಾಗಕ್ಕೂ ಸಿದ್ಧರಿರುವ ಪೋಷಕರನ್ನು ಗೌರವಿಸಲು ಹಾಗೂ ಪೋಷಕರ ನಿಸ್ವಾರ್ಥ ಪ್ರೀತಿಯನ್ನು ಸ್ಮರಿಸಲು ಪ್ರತಿವರ್ಷ ಜೂನ್ 1 ರಂದು ಜಾಗತಿಕ ಪೋಷಕರ ದಿನವನ್ನು ಆಚರಿಸಲಾಗುತ್ತದೆ.

ಪೋಷಕಾರಗುವುದು (Parents) ಅಷ್ಟು ಸುಲಭದ ಮಾತಲ್ಲ, ಮಕ್ಕಳನ್ನು ಸಂಸ್ಕಾರಯುತರನ್ನಾಗಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ, ಉತ್ತಮ ಪ್ರಜೆಯಾಗಿ ರೂಪಿಸುವುದು ಸವಾಲಿನ ಕೆಲಸವೇ ಸರಿ. ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಪ್ರತಿಯೊಬ್ಬ ಪೋಷಕರು ಮಕ್ಕಳನ್ನು ಬೆಳೆಸುವಲ್ಲಿ ತಮ್ಮ ಕೈ ಮೀರಿದ ಪ್ರಯತ್ನಗಳನ್ನು ಮಾಡುತ್ತಾರೆ, ಮಕ್ಕಳ ಲಾಲನೆ ಪಾಲನೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಹೀಗೆ ಪ್ರತಿ ಮಕ್ಕಳ ಜೀವನವನ್ನೂ ಉತ್ತಮವಾಗಿ ರೂಪಿಸುವಲ್ಲಿ ಪೋಷಕರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಒಂದು ಲೆಕ್ಕದಲ್ಲಿ ಪೋಷಕರು ಮಕ್ಕಳ ಪಾಲಿನ ನಿಜವಾದ ದೇವರು ಎಂದರೆ ತಪ್ಪಾಗಲಾರದು. ಮಕ್ಕಳ ಬದುಕನ್ನು ಸುಂದರವಾಗಿ ನಿರ್ಮಿಸಲು ಎಂತಹ ತ್ಯಾಗಕ್ಕೂ ಸಿದ್ಧರಿರುವವರ ತಂದೆ ತಾಯಂದಿರ ಪ್ರೀತಿ, ತ್ಯಾಗ ಮತ್ತು ಸಮರ್ಪಣೆಯನ್ನು ನೆನೆಸಿಕೊಳ್ಳಲು, ಅವರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಜೂನ್ 1 ರಂದು ಜಾಗತಿಕ ಪೋಷಕರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.
ಜಾಗತಿಕ ಪೋಷಕರ ದಿನದ ಇತಿಹಾಸವೇನು?
ಜಾಗತಿಕ ಪೋಷಕರ ದಿನದ ಇತಿಹಾಸವನ್ನು ನೋಡುವುದಾದರೆ, ಅದು 1994 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪೋಷಕರನ್ನು ಗೌರವಿಸುವ ಸಲುವಾಗಿ ಪೋಷಕರ ದಿನವನ್ನು ಆಚರಿಸುವ ಕಲ್ಪನೆ ಮೂಡಿತು. ನಂತರ 2012 ರಲ್ಲಿ , ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 1 ಅನ್ನು ‘ ಪೋಷಕರ ಜಾಗತಿಕ ದಿನ’ ಎಂದು ಗುರುತಿಸಿತು. ಜಾಗತಿಕ ಮಟ್ಟದಲ್ಲಿ ಪ್ರಪಂಚದಾದ್ಯಂತದ ಪೋಷಕರ ಕೊಡುಗೆಯನ್ನು ಶ್ಲಾಘಿಸುವುದು ಈ ದಿನದ ಉದ್ದೇಶವಾಗಿತ್ತು. ಇದು ಕೇವಲ ಒಂದು ದಿನವಲ್ಲ, ಬದಲಾಗಿ ನಮ್ಮ ಹೆತ್ತವರ ಪ್ರೀತಿ, ತ್ಯಾಗ ಮತ್ತು ತಾಳ್ಮೆ ಯಾವುದೇ ಪ್ರಶಸ್ತಿಗಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದು ನೆನಪಿಸುವ ದಿನವಾಗಿದೆ.
ಇದನ್ನೂ ಓದಿ: ವಿಶ್ವ ಹಾಲು ದಿನವನ್ನು ಯಾವ ಉದ್ದೇಶಕ್ಕಾಗಿ ಆಚರಿಸಲಾಗುತ್ತದೆ?
ಜಾಗತಿಕ ಪೋಷಕರ ದಿನದ ಮಹತ್ವವೇನು?
- ಪೋಷಕರ ತ್ಯಾಗ ಮತ್ತು ಸಮರ್ಪಣೆಯನ್ನು ಗೌರವಿಸಲು ಸಲುವಾಗಿ ಪ್ರತಿ ವರ್ಷ ಜೂನ್ 1 ರಂದು ಜಾಗತಿಕ ಪೋಷಕರ ದಿನವನ್ನು ಆಚರಿಸಲಾಗುತ್ತದೆ.
- ಈ ದಿನವು ಪೋಷಕರು ಜನ್ಮ ನೀಡುವವರು ಮಾತ್ರವಲ್ಲದೆ ಜೀವನದ ಶ್ರೇಷ್ಠ ಶಿಕ್ಷಕರು ಮತ್ತು ರಕ್ಷಕರು ಎಂಬುದನ್ನು ನೆನಪಿಸಿಕೊಳ್ಳಲು ಒಂದು ಅವಕಾಶವನ್ನು ನೀಡುತ್ತದೆ.
- ಜಾಗತಿಕ ಪೋಷಕರ ದಿನವು ನಮ್ಮ ಹೆತ್ತವರ ಬಗ್ಗೆ ನಮ್ಮ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ಮುಕ್ತ ಹೃದಯದಿಂದ ವ್ಯಕ್ತಪಡಿಸುವ ಒಂದು ಅವಕಾಶವಾಗಿದೆ.
- ಈ ವಿಶೇಷ ದಿನದಂದು ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮ, ಪ್ರದರ್ಶನಗಳು ಸೇರಿದಂತೆ ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





