Personality Test: ನಿಮ್ಮ ಉಗುರಿನ ಆಕಾರದಿಂದ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು

|

Updated on: Jul 06, 2023 | 12:59 PM

ನಿಮ್ಮ ಉಗುರಿನ ಆಕಾರದಿಂದ ನಿಮ್ಮ ವ್ಯಕ್ತಿತ್ವದ ಲಕ್ಷಣಗಳು, ಸಾಮರ್ಥ್ಯ, ದೌರ್ಬಲ್ಯ, ಸ್ವಭಾವ, ನಡವಳಿಕೆ ಮತ್ತು ಮನಸ್ಥಿತಿಯನ್ನು ಕಂಡುಹಿಡಿಯಬಹುದು.

Personality Test: ನಿಮ್ಮ ಉಗುರಿನ ಆಕಾರದಿಂದ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು
ಉಗುರಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ
Image Credit source: jagranjosh
Follow us on

ನಿಮ್ಮ ಉಗುರಿನ ಆಕಾರವು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕೆಲವು ತಜ್ಞರ ಪ್ರಕಾರ, ನಿಮ್ಮ ಉಗುರುಗಳ ಆಕಾರವು ನಿಮ್ಮ ವ್ಯಕ್ತಿತ್ವದ ಲಕ್ಷಣಗಳನ್ನು ಬಹಿರಂಗಪಡಿಸಬಹುದು. ವಿವಿಧ ಉಗುರು ಆಕಾರಗಳು ಮತ್ತು ವ್ಯಕ್ತಿತ್ವದ ಗುಣಲಕ್ಷಣಗಳ ನಡುವೆ ಪರಸ್ಪರ ಸಂಬಂಧವಿದೆ ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ. ನಿಮ್ಮ ಉಗುರಿನ ಆಕಾರದಿಂದ ನಿಮ್ಮ ವ್ಯಕ್ತಿತ್ವದ ಲಕ್ಷಣಗಳು, ಸಾಮರ್ಥ್ಯ, ದೌರ್ಬಲ್ಯ, ಸ್ವಭಾವ, ನಡವಳಿಕೆ ಮತ್ತು ಮನಸ್ಥಿತಿಯನ್ನು ಕಂಡುಹಿಡಿಯಬಹುದು.

ಲಂಬವಾಗಿ ಉದ್ದವಾದ ಆಕಾರದ ಉಗುರು:

ನೀವು ಲಂಬವಾಗಿ ಉದ್ದವಾದ ಉಗುರು ಆಕಾರದ ಉಗುರನ್ನು ಹೊಂದಿದ್ದರೆ, ನೀವು ಶಾಂತ, ಸ್ವತಂತ್ರ ಮತ್ತು ಕಲಾತ್ಮಕವಾಗಿರುವ ವ್ಯಕ್ತಿತ್ವವನ್ನು ಹೊಂದಿರುತ್ತೀರಿ ಎಂದರ್ಥ. ನಿಮ್ಮ ಎಡ ಮೆದುಳುಗಿಂತ ನಿಮ್ಮ ಬಲ ಮೆದುಳು ಹೆಚ್ಚು ಅಭಿವೃದ್ಧಿ ಹೊಂದಿದೆ ಎಂಬುದನ್ನು ತಿಳಿಸುತ್ತದೆ. ಯಾವುದೇ ವ್ಯಕ್ತಿಯನ್ನು ಸುಲಭವಾಗಿ ನಂಬಿ ಬಿಡುತ್ತೀರಿ.

ಅಗಲವಾದ ಆಕಾರದ ಉಗುರು:

ನೀವು ಆಯತಾಕಾರದ ಉಗುರುಗಳನ್ನು ಹೊಂದಿದ್ದರೆ, ನೇರ ಅಥವಾ ಮುಕ್ತ ಮನಸ್ಸಿನ, ಅಭಿವ್ಯಕ್ತಿಶೀಲ, ವಿಶ್ವಾಸಾರ್ಹ, ಮತ್ತು ಜವಾಬ್ದಾರಿಯ ತೀಕ್ಷ್ಣ ಪ್ರಜ್ಞೆಯನ್ನು ಹೊಂದಿರಬಹುದು. ನಿಮ್ಮ ಆತ್ಮ ವಿಶ್ವಾಸ ಬಲವಾಗಿ ಇರುವುದರಿಂದ ನೀವು ಸಾಮಾನ್ಯವಾಗಿ ನೇರ ಮತ್ತು ಮುಕ್ತ ಮನಸ್ಸಿನಿಂದ ಮಾತನಾಡುತ್ತೀರಿ. ಹೊಸ ಆಲೋಚನೆಗಳು ನಿಮ್ಮ ಸ್ವಂತದ್ದಕ್ಕಿಂತ ಭಿನ್ನವಾಗಿದ್ದರೂ ಸಹ ನೀವು ಯಾವಾಗಲೂ ಕೇಳಲು ಸಿದ್ಧರಿರುತ್ತೀರಿ.

ಇದನ್ನೂ ಓದಿ: ಕರುನಾಡ ಹಳ್ಳಿಯ ಸೊಬಗನ್ನು ಪರಿಚಯಿಸುತ್ತಿದೆ ಬೆಂಗಳೂರಿನ ರಂಗೋಲಿ ಗಾರ್ಡನ್

ರೌಂಡ್ ಅಥವಾ ಅಂಡಾಕಾರದ ಉಗುರು:

ನಿಮ್ಮ ಉಗುರುಗಳು ದುಂಡಗಿನ ತುದಿಗಳೊಂದಿಗೆ ವೃತ್ತಾಕಾರದ ಅಂಚುಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಗೊಂದಲಕ್ಕೊಳಗಾಗುವುದಿಲ್ಲ ಅಥವಾ ಒತ್ತಡಕ್ಕೊಳಗಾಗುವುದಿಲ್ಲ. ನೀವು ವಿಷಯಗಳನ್ನು ನಿಧಾನವಾಗಿ ತೆಗೆದುಕೊಳ್ಳಲು ಒಲವು ತೋರುತ್ತೀರಿ. ಜೊತೆಗೆ ಅಧಿಕ ಒತ್ತಡವನ್ನು ನಿಭಾಯಿಸುವ ಶಕ್ತಿ ನಿಮಗಿದೆ ಎಂಬ ವ್ಯಕ್ತಿತ್ವವನ್ನು ತೋರಿಸುತ್ತದೆ.

ಚೌಕಕಾರದ ಉಗುರು:

ನಿಮ್ಮ ಉಗುರುಗಳು ನೇರವಾದ ಬದಿ, ಸಮತಟ್ಟಾದ ತುದಿ ಮತ್ತು ಪರಿಪೂರ್ಣವಾದ 90-ಡಿಗ್ರಿ ಕೋನದಲ್ಲಿ ಅಂಚುಗಳನ್ನು ಹೊಂದಿದ್ದರೆ, ನೀವು ಚೌಕಕಾರದ ಉಂಗುರುಗಳನ್ನು ಹೊಂದಿರುತ್ತೀರಿ. ನೀವು ಇತರರು ನೀಡುವ ಸಲಹೆಗಳನ್ನು ಇಷ್ಟ ಪಡುವುದಿಲ್ಲ. ನಿಮ್ಮ ಸ್ವಂತ ಆಯ್ಕೆಗಳನ್ನು ಇಷ್ಟಪಡುತ್ತೀರಿ. ಇದು ಜವಾಬ್ದಾರಿಯನ್ನು ತೆಗೆದುಕೊಳ್ಳುವಲ್ಲಿ ನಿಮ್ಮನ್ನು ಉತ್ತಮಗೊಳಿಸುತ್ತದೆ ಮತ್ತು ಹೆಚ್ಚಾಗಿ ಸಮಸ್ಯೆಗಳಿಗೆ ನಿಮ್ಮ ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ನೀವು ಯಾವಾಗಲೂ ಕೆಲಸಗಳನ್ನು ಮಾಡಲು ಹೊಸ ಮತ್ತು ನವೀನ ಮಾರ್ಗಗಳನ್ನು ಹುಡುಕುತ್ತಿದ್ದೀರಿ. ನೀವು ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: