Rangoli Garden: ಕರುನಾಡ ಹಳ್ಳಿಯ ಸೊಬಗನ್ನು ಪರಿಚಯಿಸುತ್ತಿದೆ ಬೆಂಗಳೂರಿನ ರಂಗೋಲಿ ಗಾರ್ಡನ್

ಕರ್ನಾಟಕದ ಸಾಂಸ್ಕೃತಿಕ ವಾಸ್ತುಕಲೆಗಳನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರಗಳನ್ನು ಬೆಂಗಳೂರಿನ ರಂಗೋಲಿ ಗಾರ್ಡನ್​​ನಲ್ಲಿ ಕಣ್ತುಂಬಿಸಿಕೊಳ್ಳಬಹುದು. ಇನ್ನಷ್ಟು ವಿವರ ಇಲ್ಲಿ ತಿಳಿದುಕೊಳ್ಳಿ.

Rangoli Garden: ಕರುನಾಡ ಹಳ್ಳಿಯ ಸೊಬಗನ್ನು ಪರಿಚಯಿಸುತ್ತಿದೆ ಬೆಂಗಳೂರಿನ ರಂಗೋಲಿ ಗಾರ್ಡನ್
Rangoli Garden BangaloreImage Credit source: SUSHEELA NAIR
Follow us
ಅಕ್ಷತಾ ವರ್ಕಾಡಿ
|

Updated on:Jul 05, 2023 | 6:35 PM

ಹಚ್ಚಹಸಿರಿನ ಸುಂದರ ಪರಿಸರ, ಕೃಷಿ ಪ್ರಧಾನ ಅವಿಭಕ್ತ ಕುಟುಂಬ, ಜಾತ್ರೆ, ಹಬ್ಬ ಹರಿದಿನ ಸಂಭ್ರಮ ಕಣ್ಣಿಗೊಂದು ಹಬ್ಬ. ಹಳ್ಳಿ ಜೀವನವೇ ಸ್ವರ್ಗಕ್ಕೆ ಸಮ. ಆದರೆ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಹುಟ್ಟಿದ ಮಕ್ಕಳಿಗೆ ಹಳ್ಳಿ ಜೀವನ ಬಗ್ಗೆ ಅರಿವೇ ಇರುವುದಿಲ್ಲ. ಆದರೆ ಹಳ್ಳಿಗೆ ಹೋಗದೆಯೇ ನಿಮ್ಮ ಮಕ್ಕಳಿಗೆ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಹಳ್ಳಿ ಸೊಬಗು ಸಂಸ್ಕೃತಿಯನ್ನು ಪರಿಚಯಿಸಬಹುದು. ಹೌದು ಕಾರ್ನಾಟಕದ ಸಾಂಸ್ಕೃತಿಕ ವಾಸ್ತುಕಲೆಗಳನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರಗಳನ್ನು ಬೆಂಗಳೂರಿನ ರಂಗೋಲಿ ಗಾರ್ಡನ್​​ನಲ್ಲಿ ಕಣ್ತುಂಬಿಸಿಕೊಳ್ಳಬಹುದು.

ಎಲ್ಲಿದೆ ರಂಗೋಲಿ ಗಾರ್ಡನ್​​?

ಬೆಂಗಳೂರಿನ ಸಿಟಿ ಸ್ಟೇಷನ್​​ನಿಂದ ಸುಮಾರು 18 ಕಿ.ಮೀ ದೂರದಲ್ಲಿ ಜಕ್ಕೂರಿನ ರಾಚೇನಾ ಹಳ್ಳಿಯ ಶ್ರೀರಾಂಪುರ ಕ್ರಾಸ್​​​ ಬಳಿಯ ಮಹಾತ್ಮಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್ ಒಳಗೆ ರಂಗೋಲಿ ಗಾರ್ಡನ್ಸ್ (ಮಾದರಿ ಕಲಾ ಗ್ರಾಮ) ಇದೆ. ನೀವಿಲ್ಲಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ಒಳಗಾಗಿ ಭೇಟಿ ನೀಡಬಹುದು. ಜೊತೆಗೆ ಇಲ್ಲಿ ಮಕ್ಕಳಿಗೆ(3-12ವರ್ಷ) 100 ರೂಪಾಯಿ ಹಾಗೂ ಉಳಿದವರಿಗೆ 200 ರೂಪಾಯಿ ಪ್ರವೇಶ ಶುಲ್ಕ ನೀಡಬೇಕು.

ಕರ್ನಾಟಕದ ಸಂಸ್ಕೃತಿಕ ವಾಸ್ತು ಕಲೆಗಳ ಸ್ತಬ್ಧ ಚಿತ್ರಗಳು:

ಹಳ್ಳಿಯ ಕುಲ ಕಸುಬು ಬಿಟ್ಟು ನಗರದ ಜೀವನಕ್ಕೆ ಒಡ್ಡಿಕೊಂಡು ಜೀವನ ನಡೆಸುತ್ತಿರುವ ಬೆಂಗಳೂರಿಗರಿಗೆ ತಮ್ಮ ಹುಟ್ಟೂರಿನ ಭಾಂಧವ್ಯವನ್ನು ಮತ್ತೆ ಬೆಸೆಯುವಂತೆ ಮಾದರಿ ಕಲಾ ಗ್ರಾಮವನ್ನು ನಿರ್ಮಾಣಗೊಳಿಸಲಾಗಿದೆ. ಇಲ್ಲಿನ ಸ್ತಬ್ಧ ಚಿತ್ರಗಳಲ್ಲಿ ನೀವು ಕೃಷಿ ಪ್ರಧಾನ ಕುಟುಂಬ, ಸಾಕು ಪ್ರಾಣಿಗಳು, ಜಾತ್ರೆ, ಗೋಲಿ ಆಡುವ ಮಕ್ಕಳ ಸೈನ್ಯ ಮುಂತಾದವುಗಳನ್ನು ಬಿಂಬಿಸಲಾಗಿದೆ.

ಇದನ್ನೂ ಓದಿ: ಒಂದು ದಿನದಲ್ಲಿ ಭೇಟಿ ನೀಡಬಹುದಾದ ಬೆಂಗಳೂರು ಗ್ರಾಮಾಂತರ ಪ್ರದೇಶದ ಪ್ರವಾಸಿ ತಾಣಗಳು

ಅನ್ಯಭಾಷಿಗರಿಗೂ ಕರ್ನಾಟಕದ ಹಳ್ಳಿ ಸೊಬಗನ್ನು ಪರಿಚಯಿಸಿ:

ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಬೇರೆ ಬೇರೆ ರಾಜ್ಯಗಳಿಂದ ಬಂದವರೇ ಹೆಚ್ಚು. ಆದ್ದರಿಂದ ನಿಮ್ಮ ಬಿಡುವಿನ ಅಥವಾ ವಾರಾಂತ್ಯದಲ್ಲಿ ನಿಮ್ಮ ಅನ್ಯ ರಾಜ್ಯಗಳ ಸಹೋದ್ಯೋಗಿಗಳನ್ನು ಹಾಗೂ ಗೆಳೆಯರನ್ನು ಈ ಮಾದರಿ ಕಲಾ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅನ್ಯಭಾಷಿಗರಿಗೂ ಕನ್ನಡದ ಹಳ್ಳಿ ಸೊಬಗನ್ನು ಪರಿಚಯಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 6:33 pm, Wed, 5 July 23

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ