AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Towing of Vehicles: ಎಚ್ಚರ..ಎಚ್ಚರ.. ಬೆಂಗಳೂರಿನಲ್ಲಿ ಮತ್ತೆ ರಸ್ತೆಗೆ ಇಳಿಯಲಿವೆ ಟೋಯಿಂಗ್ ವಾಹನಗಳು

ಈಗ ಹಳೆಯ ಪದ್ದತಿಯನ್ನ ಮತ್ತೆ ತರಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದ್ದು, ಮತ್ತೆ ಟೋಯಿಂಗ್ ರೀ(Towing Service) ಎಂಟ್ರಿ ಕೊಡಲಿದೆ.

Towing of Vehicles: ಎಚ್ಚರ..ಎಚ್ಚರ.. ಬೆಂಗಳೂರಿನಲ್ಲಿ ಮತ್ತೆ ರಸ್ತೆಗೆ ಇಳಿಯಲಿವೆ ಟೋಯಿಂಗ್ ವಾಹನಗಳು
ಸಾಂದರ್ಭಿಕ ಚಿತ್ರ
Jagadisha B
| Updated By: ಆಯೇಷಾ ಬಾನು|

Updated on:Jul 05, 2023 | 3:00 PM

Share

ಬೆಂಗಳೂರು: ನಗರದಲ್ಲಿ ವಿಪರೀತವಾದ ಟ್ರಾಫಿಕ್ ಸಮಸ್ಯೆಯಿಂದ(Bengaluru Traffic) ಜನರು ನಿಜಕ್ಕೂ ಬೇಸತ್ತಿದ್ದಾರೆ. ಅದರ ನಡುವೆ ಕೆಲ ವಾಹನ ಸವಾರರ ನಿರ್ಲಕ್ಷ್ಯ ಕೂಡ ಅದರಲ್ಲಿದೆ. ಅದಕ್ಕೆ ಪೂರಕ ಎಂಬಂತೆ ಪಾರ್ಕಿಂಗ್ ಸಮಸ್ಯೆ ಕೂಡ ಇದೆ. ಈ ಹಿನ್ನಲೆ ಈಗ ಹಳೆಯ ಪದ್ದತಿಯನ್ನ ಮತ್ತೆ ತರಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದ್ದು, ಮತ್ತೆ ಟೋಯಿಂಗ್ ರೀ(Towing Service) ಎಂಟ್ರಿ ಕೊಡುವ ಮುನ್ಸೂಚನೆ ಸಿಕ್ಕಿದೆ.

ಮತ್ತೆ ಟೋಯಿಂಗ್ ವಾಹನ ರಸ್ತೆಗಿಳಿಯುತ್ತಾ? ಹೌದು, ಈ ಪ್ರಶ್ನೆಗೆ ಪೂರಕವಾಗಿ ಮತ್ತೆ ಟೋಯಿಂಗ್ ವಾಹನಕ್ಕೆ ಮರುಜೀವ ನೀಡಲು ಸಂಚಾರಿ ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ. ಇದಕ್ಕೆ ಕಾರಣ ಎಲ್ಲಂದರಲ್ಲಿ ಪಾರ್ಕಿಂಗ್ ಮಾಡುವ ವಾಹನಗಳು. ಅದರಿಂದಾಗುತ್ತಿರುವ ಟ್ರಾಫಿಕ್ ಸಮಸ್ಯೆಗಳು.

ನೋ ಪಾರ್ಕಿಂಗ್ ಜಾಗದಲ್ಲಿ ಅಥವಾ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಿದ್ದ ವಾಹನಗಳನ್ನ ಈ ಹಿಂದೆ ಟೋಯಿಂಗ್ ವಾಹನ ಮೂಲಕ ತೆಗೆದು ರಸ್ತೆ ಕ್ಲಿಯರ್ ಮಾಡಬಹುದಿತ್ತು. ಟೋಯಿಂಗ್ ಬಂದ್ ಆದ ಬಳಿಕ ಅದಕ್ಕೆ ಪರ್ಯಾಯವಾಗಿ ಬಳಕೆಯಾಗಿದ್ದು ವೀಲ್ ಲಾಕ್ ಸಿಸ್ಟಮ್. ಒಂದು ಬಾರಿ ವೀಲ್ ಲಾಕ್ ಮಾಡಿ ಹೋದರೆ ಅದು ಮಾಲೀಕನ ಗಮನಕ್ಕೆ ಬಂದು ದಂಡ ಕಟ್ಟಿದ ಬಳಿಕ ವಾಹನ ಅಲ್ಲಿಂದ ತೆರವಾಗುತ್ತದೆ. ಇದರಿಂದ ಟ್ರಾಫಿಕ್ ಸಮಸ್ಯೆಯಲ್ಲಿ ಬದಲಾವಣೆ ಏನೂ ಆಗುತ್ತಿರಲಿಲ್ಲ. ತಕ್ಷಣದ ಮಟ್ಟಿಗೆ ವಾಹನ ತೆರವುಗೊಳಿಸಲು ಟೋಯಿಂಗ್ ವಾಹನದ ಅವಶ್ಯಕತೆ ಇದೆ. ಇನ್ನು ಈ ಹಿಂದೆ ಟೋಯಿಂಗ್ ವಾಹನ ಸಿಬ್ಬಂದಿಗಳ ಬೇಜವಬ್ಧಾರಿಯಿಂದ ಟೋಯಿಂಗ್ ಸಿಸ್ಟಮ್ ಗೆ ಜನರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಸಂಚಾರಿ ಪೊಲೀಸರು ಒಂದು ಹೊಸ ಯೋಚನೆಯನ್ನು ಸರ್ಕಾರದ ಮುಂದಿಡಲು ಹಿರಿಯ ಅಧಿಕಾರಿಗಳ ಮುಂದೆ ಸಂಗತಿ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: Brand Bengaluru: ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್: ಸುರಂಗ ಮಾರ್ಗ ನಿರ್ಮಿಸಲು ಚಿಂತನೆ

ಸಂಚಾರಿ ಪೊಲೀಸ್ ಅಧಿಕಾರಿಗಳು ಡಿಜಿಐಜಿಪಿಗೆ ಸಭೆಯಲ್ಲಿ ಪ್ರಸ್ತಾಪ ಮಾಡಿದಂತೆ ನಗರದ ಟ್ರಾಫಿಕ್ ನಿರ್ವಾಹಣೆಗೆ 10 ಸಬ್ ಡಿವಿಷನ್ ಗಳಿಗಾಗಿ ಒಟ್ಟು 10 ಟೊಯಿಂಗ್ ವಾಹನಗಳ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದು ಈ ಮೂಲಕ ಸಂಬಂಧ ಪಟ್ಟ ಉಪವಿಭಾಗದ ಹೆಚ್ಚು ನೋ ಪಾರ್ಕ್ ಆಗುವ ಸ್ಥಳಗಳಲ್ಲಿ ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಡಿಜಿಐಜಿಪಿ ಮಾಹಿತಿ ಪಡೆದಿದ್ದು, ಈವರೆಗೂ ಯಾವುದೇ ಉತ್ತರ ಬಂದಿಲ್ಲ.

ಸದ್ಯ, ಸರ್ಕಾರದ ವತಿಯಿಂದಲೇ ಟೋಯಿಂಗ್ ವಾಹನವನ್ನು ರಸ್ತೆಗಿಳಿಸಿ ಅದಕ್ಕೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನೇ ಬಳಕೆ ಮಾಡುವ ಮೂಲಕ ನಿಂತಿದ್ದ ಟೋಯಿಂಗ್ ಪ್ರಕ್ರಿಯೆ ಆರಂಭಿಸಲು ಸಂಚಾರಿ ಪೊಲೀಸರು ಚಿಂತನೆ ಮಾಡಿದ್ದಾರೆ. ಸದ್ಯ ಈ ಚಿಂತನೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಸರ್ಕಾರ ಈ ಬಗ್ಗೆ ಮುಂದಿನ ದಿನದಲ್ಲಿ ಯಾವ ನಿರ್ಧಾರ ಕೈಗೊಳ್ಳತ್ತೆ ಅನ್ನೊದು ಸದ್ಯದ ಕುತೂಹಲವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:57 pm, Wed, 5 July 23