Healthy Eating: ದಿನನಿತ್ಯದ ಆಹಾರ ಸೇವನೆಯಲ್ಲಿ ರಾಗಿಯನ್ನು ಹೇಗೆ ಸೇರಿಸಿಕೊಳ್ಳಬಹುದು?

ರಾಗಿ ಪೌಷ್ಠಿಕಾಂಶದ ಧಾನ್ಯವಾಗಿದ್ದು, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ದಿನನಿತ್ಯದ ಆಹಾರ ಪದಾರ್ಥದಲ್ಲಿ ಯಾವ ರೀತಿಯಲ್ಲಿ ರಾಗಿಯನ್ನು ಸೇರಿಸಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Healthy Eating: ದಿನನಿತ್ಯದ ಆಹಾರ ಸೇವನೆಯಲ್ಲಿ ರಾಗಿಯನ್ನು ಹೇಗೆ ಸೇರಿಸಿಕೊಳ್ಳಬಹುದು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 05, 2023 | 4:23 PM

ನಿಮ್ಮ ದಿನನಿತ್ಯದ ಆಹಾರ ಪದಾರ್ಥದಲ್ಲಿ ರಾಗಿಯ ಸೇವನೆಯು ನಿಮ್ಮ ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡಲಿದೆ. ಅನಗತ್ಯ ತೂಕವನ್ನು ಕಳೆದುಕೊಳ್ಳಬೇಕು ಎಂದೆನಿಸಿದಾಗ ನಿಮ್ಮ ಆಹಾರ ಪದಾರ್ಥಗಳ ಪಟ್ಟಿಗೆ ರಾಗಿಯನ್ನು ಸೇರಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ರಾಗಿಯನ್ನು ಅತಿಯಾಗಿ ಕೀಟನಾಶಕಗಳನ್ನು ಬಳಸದೆಯೇ ಬೆಳೆಯಲಾಗುತ್ತದೆ. ಇದರಲ್ಲಿ ಕಬ್ಬಿಣಾಂಶ, ಕ್ಯಾಲ್ಶಿಯಂ, ಮಿನರಲ್ ಗಳು, ಪ್ರೊಟೀನ್ ಹಾಗೂ ಬಹಳ ಹೆಚ್ಚಾದ ಆಂಟಿಆಕ್ಸಿಡೆಂಟ್ ಗಳು ಇವೆ. ಆದರೆ ಅತಿಯಾದ ಸೇವನೆ ಒಳ್ಳೆಯದಲ್ಲ. ರಾಗಿಯನ್ನು ಬೆಳಿಗ್ಗೆ ಅಥವಾ ರಾತ್ರಿ ಸೇವಿಸಬೇಕಾ? ಎಂದು ನೀವು ಆಯ್ಕೆ ಮಾಡಿಕೊಳ್ಳಬಹುದು.

1. ಬೆಳಗಿನ ಉಪಾಹಾರದಲ್ಲಿ ರಾಗಿ:

ರಾಗಿ ಗಂಜಿ: ಬೆಳಗ್ಗಿನ ತಿಂಡಿಗೆ ರಾಗಿಯ ದಪ್ಪ ಗಂಜಿ ತಯಾರಿಸಿಕೊಳ್ಳಬಹುದು. ಇದನ್ನು ಸುಲಭವಾಗಿ ಮಾಡಬಹುದು. ಹೇಗೆಂದರೆ, ನೀವು ರಾಗಿ ಹಿಟ್ಟನ್ನು ನೀರು ಅಥವಾ ಹಾಲಿನೊಂದಿಗೆ ಬೇಯಿಸಿಕೊಳ್ಳಬಹುದು. ಎರಡೂ ಬೇರೆ ಬೇರೆ ರೀತಿಯ ರುಚಿ ಕೊಡುವುದರಿಂದ ನಿಮಗೆ ಇಷ್ಟವಾಗುವಂತೆ ಮಾಡಿಕೊಳ್ಳಬಹುದು. ನಿಮಗೆ ಹೆಚ್ಚುವರಿ ಪರಿಮಳ ಮತ್ತು ಚೆನ್ನಾಗಿ ಕಾಣಬೇಕಾದಲ್ಲಿ, ಕತ್ತರಿಸಿದ ಹಣ್ಣು, ಬೀಜಗಳು ಅಥವಾ ಜೇನುತುಪ್ಪ, ಬೆಲ್ಲದಂತಹ ಆರೋಗ್ಯಕರ ಸಿಹಿಕಾರಕಗಳನ್ನು ಸೇರಿಸಿಕೊಳ್ಳಬಹುದು.

ರಾಗಿ ಇಡ್ಲಿ ಅಥವಾ ದೋಸೆ: ಅಕ್ಕಿ ಅಥವಾ ರವೆ ಇಡ್ಲಿ ತಿಂದಿರುತ್ತೀರಿ ಆದರೆ ಒಮ್ಮೆ ರಾಗಿಯ ಇಡ್ಲಿ ಅಥವಾ ದೋಸೆ ಮಾಡಿ ನೋಡಿ. ಹಿಟ್ಟನ್ನು ತಯಾರಿಸುವಾಗ ಅಕ್ಕಿಯ ಬದಲು ರಾಗಿ ಹಿಟ್ಟು ಇರುತ್ತದೆ ಬಿಟ್ಟರೇ ಬೇರೆ ಏನು ಬದಲಾವಣೆ ಇರುವುದಿಲ್ಲ, ಜೊತೆಗೆ ರುಚಿಯಲ್ಲೂ ಎರಡು ವಿಭಿನ್ನ. ಈ ರೀತಿ ತಿಂಗಳಲ್ಲಿ ಒಮ್ಮೆಯಾದರೂ ಬೆಳಗಿನ ಉಪಾಹಾರಕ್ಕಾಗಿ ಪೌಷ್ಟಿಕ ರಾಗಿ ಇಡ್ಲಿ ಅಥವಾ ದೋಸೆ ಮಾಡಿದಲ್ಲಿ ಆರೋಗ್ಯಕ್ಕೂ ಒಳ್ಳೆಯದು ಸುಲಭವೂ ಹೌದು. ಹಾಗಾಗಿ ಶಾಲೆ ಕಾಲೇಜು, ಆಫೀಸ್ ಹೋಗುವವರಿಗೆ ಇದು ಒಂದು ಅಚ್ಚುಮೆಚ್ಚಿನ ತಿಂಡಿ ಆಗುವುದರಲ್ಲಿ ಸಂಶಯವೇ ಇಲ್ಲ.

ರಾಗಿ ಪ್ಯಾನ್ ಕೇಕ್: ರಾಗಿ ಹಿಟ್ಟನ್ನು ಗೋಧಿ ಅಥವಾ ಓಟ್ಸ್ ನಂತಹ ಇತರ ಹಿಟ್ಟು ಮತ್ತು ಮಜ್ಜಿಗೆಯೊಂದಿಗೆ ಬೆರೆಸಿ ಪ್ಯಾನ್ ಕೇಕ್ ತಯಾರಿಸಿ. ಹಣ್ಣುಗಳು ಅಥವಾ ಮೊಸರಿನಂತಹ ನಿಮ್ಮ ನೆಚ್ಚಿನ ಟಾಪಿಂಗ್ ಗಳೊಂದಿಗೆ ಅವುಗಳನ್ನು ಸರ್ವ್ ಮಾಡಿ.

ಇದನ್ನೂ ಓದಿ: Healthy Food: ನೀವು ಊಹಿಸಿದಷ್ಟು ಆರೋಗ್ಯಕರವಲ್ಲದ 5 ಆಹಾರ ಪದ್ಧತಿಗಳು

2. ಮಧ್ಯಾಹ್ನದ ಊಟದಲ್ಲಿ ರಾಗಿ

ರಾಗಿ ರೊಟ್ಟಿ: ರಾಗಿ ಹಿಟ್ಟನ್ನು ಗೋಧಿ ಹಿಟ್ಟಿನೊಂದಿಗೆ ಬೆರೆಸಿ, ನಿಮಗೆ ಬೇಕಾದ ಮಸಾಲೆಗಳು, ಕತ್ತರಿಸಿದ ತರಕಾರಿಗಳನ್ನು ಸೇರಿಸಿ, ಹಿಟ್ಟನ್ನು ಸರಿಯಾಗಿ ಕಲಸಿ, ಆರೋಗ್ಯಕರ ರಾಗಿ ರೊಟ್ಟಿಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ನೀವು ತವಾ ಅಥವಾ ಗ್ರಿಡ್ಲ್ ಮೇಲೆ ಬೇಯಿಸಿಕೊಳ್ಳಬಹುದು. ಅವುಗಳನ್ನು ಪಲ್ಯ ಅಥವಾ ಮೊಸರಿನೊಂದಿಗೆ ಬಡಿಸಿ. ಇದು ತಿನ್ನುವುದಕ್ಕೂ ರುಚಿ ಹಾಗೂ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ರಾಗಿ ಉಪ್ಮಾ: ರಾಗಿ ಹಿಟ್ಟನ್ನು ಹುರಿದು ತರಕಾರಿಗಳು, ಮಸಾಲೆಗಳು ಮತ್ತು ನೀರಿನೊಂದಿಗೆ ಬೇಯಿಸುವ ಮೂಲಕ ಉಪ್ಮಾ ತಯಾರಿಸಿ. ಇದು ಆರೋಗ್ಯಕರ ಮತ್ತು ಸ್ವಲ್ಪ ತಿಂದರೂ ಕೂಡ ಬೇಗ ಹೊಟ್ಟೆ ತುಂಬುವ ಊಟದ ಆಯ್ಕೆಯಾಗಿದೆ. ನೀವು ಇದನ್ನು ಬೆಳಗ್ಗಿನ ತಿಂಡಿಗೂ ಮಾಡಿಕೊಳ್ಳಬಹುದು.

ರಾಗಿ ಸಲಾಡ್: ರಾಗಿ ಬೀಜಗಳನ್ನು ಮೊಳಕೆಯೊಡೆದ ನಂತರ ಅದಕ್ಕೆ ಕತ್ತರಿಸಿದ ತರಕಾರಿಗಳು, ಕಾಳುಗಳನ್ನು ಮತ್ತು ನಿಮ್ಮ ಆಯ್ಕೆಯ ನೆನೆಸಿಟ್ಟುಕೊಂಡ ಬೀಜಗಳನ್ನು ಸೇರಿಸಿಕೊಳ್ಳಬಹುದು. ಬಳಿಕ ಅವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸಲಾಡ್ ತಯಾರಿಸಿಕೊಳ್ಳಬಹುದು. ಇದು ನಿಮ್ಮ ಮಧ್ಯಾಹ್ನದ ಊಟಕ್ಕೆ ಅಧಿಕ ಪೌಷ್ಠಿಕಾಂಶ ನೀಡುವ ಪ್ರಮುಖ ಆಯ್ಕೆಯಾಗಿದೆ.

3. ರಾತ್ರಿ ಊಟದಲ್ಲಿ ರಾಗಿ

ರಾಗಿ ಸೂಪ್: ರಾಗಿ ಹಿಟ್ಟನ್ನು ಕತ್ತರಿಸಿದ ತರಕಾರಿಗಳು ಮತ್ತು ಮಸಾಲೆಗಳೊಂದಿಗೆ ಬೇಯಿಸಿ ರಾಗಿ ಸೂಪ್ ತಯಾರಿಸಿ. ಇದು ರಾತ್ರಿಯೂಟಕ್ಕೆ ಆರಾಮದಾಯಕ ಮತ್ತು ಪೋಷಣೆಯ ಆಯ್ಕೆಯಾಗಿದೆ.

ರಾಗಿ ಪಾಸ್ತಾ: ರಾಗಿ ಹಿಟ್ಟನ್ನು ಗೋಧಿ ಹಿಟ್ಟಿನೊಂದಿಗೆ ಬೆರೆಸಿ ರಾಗಿ ಪಾಸ್ತಾ ತಯಾರಿಸಿ. ಪಾಸ್ತಾವನ್ನು ಬೇಯಿಸಿ ಮತ್ತು ಅದನ್ನು ನಿಮ್ಮ ನೆಚ್ಚಿನ ಸಾಸ್ ಮತ್ತು ತರಕಾರಿಗಳೊಂದಿಗೆ ಮಿಶ್ರಣ ಮಾಡಿ ತಿನ್ನಬಹುದು.

ರಾಗಿ ಖಿಚಡಿ: ರಾಗಿಯನ್ನು ಅಕ್ಕಿ, ಬೇಳೆ ಕಾಳುಗಳು ಮತ್ತು ತರಕಾರಿಗಳೊಂದಿಗೆ ಬೆರೆಸಿ ಆರೋಗ್ಯಕರ ಖಿಚಡಿ ತಯಾರಿಸಿ. ಇದನ್ನು ಮಸಾಲೆಗಳೊಂದಿಗೆ ಸೇರಿಸಿ ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಬಡಿಸಬಹುದು.

ಜೊತೆಗೆ ಮಧುಮೇಹ ಸ್ನೇಹಿಯಾಗಿರುವವರು ರಾಗಿ ಮತ್ತು ತೆಂಗಿನಕಾಯಿ ಬೆರೆಸಿದ ಲಡ್ಡುಗಳೊಂದಿಗೆ ನಿಮ್ಮ ರಾತ್ರಿ ಊಟವನ್ನು ಮುಗಿಸಬಹುದು. ಆದರೆ ಮಧುಮೇಹಿಗಳಿಗೆ ಶಿಫಾರಸು ಮಾಡಲಾದ ರಾಗಿ ಅಥವಾ ಇತರ ಯಾವುದೇ ಆಹಾರವಾದರೂ ಕೂಡ ದೈನಂದಿನ ಸೇವನೆಯುಲ್ಲಿ ಬದಲಾಗಬಹುದು ಎಂದು ತಜ್ಞರು ಹೇಳುತ್ತಾರೆ. ಇದು ನಿಮ್ಮ ಒಟ್ಟಾರೆ ಆರೋಗ್ಯ, ಔಷಧೋಪಚಾರ, ಚಟುವಟಿಕೆಯ ಮಟ್ಟ ಮತ್ತು ವಿವಿಧ ಆಹಾರಗಳಿಗೆ ನಿಮ್ಮ ದೇಹದ ಪ್ರತಿಕ್ರಿಯೆಗೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಮಧುಮೇಹಿಗಳು ರಾಗಿಯನ್ನು ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್