Look at your toenails: ನಿಮ್ಮ ಕಾಲ್ಬೆರಳಿನ ಉಗುರಿನ ಬಣ್ಣದ ಆಧಾರದ ಮೇಲೆ ನಿಮ್ಮ ಆರೋಗ್ಯ ನಿರ್ಧಾರ ಮಾಡಬಹುದು? ಅದು ಹೇಗೆ?
ಆರೋಗ್ಯದ ಸ್ಥಿತಿಯನ್ನು ಪಾದಗಳ ಚರ್ಮ ಅಥವಾ ಉಗುರುಗಳ ಆಕಾರದಿಂದ ನಿರ್ಧರಿಸಬಹುದು ಎಂದು ಅನೇಕರಿಗೆ ತಿಳಿದಿಲ್ಲ, ಕಾಲ್ಬೆರಳ ಉಗುರುಗಳ ಬಣ್ಣವೂ ದೇಹದಲ್ಲಿ ಆಗುವ ಆರೋಗ್ಯ ವ್ಯಾತ್ಯಾಸದ ಸುಳಿವುಗಳನ್ನು ನೀಡಬಹುದು ಎಂದು ವೈದ್ಯರು ಹೇಳುತ್ತಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ನೀವು ದೇಹದ ಬೇರೆ ಭಾಗಗಳಿಗೆ ನೀಡುವ ಗಮನದ ಜೊತೆಗೆ ನಿಮ್ಮ ಪಾದಗಳಿಗೆ ಮತ್ತು ಕಾಲಿನ ಬೆರಳುಗಳಿಗೆ ಅದೇ ರೀತಿಯಲ್ಲಿ ಕಾಳಜಿ ತೋರಿಸಬೇಕು. ಸಣ್ಣ ಉಗುರು ಎಂದು ಅದರ ಬಗ್ಗೆ ಹೆಚ್ಚಿನ ಗಮನ ಹರಿಸದೆಯೇ ನಿಷ್ಕಾಳಜಿ ತೋರಿದಲ್ಲಿ ಮುಂದೆ ಉಗುರಿನ ಬಣ್ಣ ನಿಮ್ಮ ಆರೋಗ್ಯದ ಬಗ್ಗೆ ನೀಡಿದ ಸುಳಿವುಗಳು ನಿಮಗೆ ಅರಿವಾಗದೇ ಇರಬಹುದು. ಉಗುರಿನ ಬಣ್ಣಗಳು ಸಹ ನಿಮ್ಮ ಆರೋಗ್ಯದ ಏರುಪೇರುಗಳ ಬಗ್ಗೆ ನಿಮಗೆ ಸೂಚನೆ ನೀಡಬಹುದು ಎಂಬುದನ್ನು ಅರಿತುಕೊಳ್ಳದವರು ಅನೇಕರಿದ್ದಾರೆ. ಆರೋಗ್ಯದ ಸ್ಥಿತಿಯನ್ನು ಪಾದಗಳ ಚರ್ಮ ಅಥವಾ ಉಗುರುಗಳ ಆಕಾರದಿಂದ ನಿರ್ಧರಿಸಬಹುದು ಎಂದು ಹಲವರು ಭಾವಿಸಬಹುದಾದರೂ, ಕಾಲ್ಬೆರಳ ಉಗುರುಗಳ ಬಣ್ಣವೂ ಸುಳಿವುಗಳನ್ನು ನೀಡಬಹುದು ಎಂದು ವೈದ್ಯರು ಹೇಳುತ್ತಾರೆ.
ನಿಮ್ಮ ಕಾಲ್ಬೆರಳಿನ ಉಗುರಿನ ಬಣ್ಣವು ಆರೋಗ್ಯದ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿಯಲು ಇಲ್ಲಿದೆ ಮಾಹಿತಿ:
ನೀಲಿ ಉಗುರುಗಳು: ಉಗುರುಗಳು ನೀಲಿ ಅಥವಾ ಜಜ್ಜಿದಂತೆ ಕಂಡುಬಂದರೆ, ಸಾಧ್ಯವಾದಷ್ಟು ಬೇಗ ವೈದ್ಯರಿಗೆ ತೋರಿಸಿ, ಎಷ್ಟು ದಿನಗಳಿಂದ ನಿಮ್ಮ ಉಗುರು ನೀಲಿ ಬಣ್ಣಕ್ಕೆ ತಿರುಗಿದೆ ಎನ್ನುವುದನ್ನು ಅವರಿಗೆ ತಿಳಿಸಿ. ಈ ಬಗ್ಗೆ ಮುಕ್ತವಾಗಿ ವೈದ್ಯರ ಬಳಿ ಮಾತನಾಡಿ, ಏಕೆಂದರೆ ಇದು ಕಡಿಮೆ ಆಮ್ಲಜನಕದ ಮಟ್ಟ, ಶ್ವಾಸಕೋಶ ಅಥವಾ ಹೃದಯದ ಅಸ್ವಸ್ಥತೆಯನ್ನು ಸೂಚಿಸುತ್ತದೆ.
ಮಸುಕಾದ ಉಗುರುಗಳು: ಇರುವ ಬಣ್ಣಕ್ಕಿಂತ ಬ್ಲೀಚ್ ಆಗಿರುವ ಉಗುರುಗಳು ಸಂಭಾವ್ಯ ರಕ್ತದ ಅಸ್ವಸ್ಥತೆಯನ್ನು ಸೂಚಿಸಬಹುದು. ಅಥವಾ ಕಳಪೆ ರಕ್ತ ಪರಿಚಲನೆ ಅಥವಾ ರಕ್ತಹೀನತೆಯ ಅಪಾಯವನ್ನು ಸಹ ಸೂಚಿಸಬಹುದು. ಅವು ಯಕೃತ್ತು ಅಥವಾ ಹೃದಯದ ಅಸಮರ್ಪಕ ಕಾರ್ಯನಿರ್ವಹಣೆಯ ಸೂಚಕವಾಗಿರಬಹುದು.
ಕಪ್ಪು ಉಗುರುಗಳು: ಕಪ್ಪು ಅಥವಾ ತೀವ್ರ ಗಾಯಗೊಂಡ ಉಗುರುಗಳು ಕೆಲವರಲ್ಲಿ ಇರಬಹುದು. ಇದು ಮೂತ್ರಪಿಂಡದ ಕಾಯಿಲೆಗಳು, ಹೃದ್ರೋಗಗಳು, ಮಧುಮೇಹ ಅಥವಾ ರಕ್ತಹೀನತೆಯ ಲಕ್ಷಣವಾಗಿರಬಹುದು.
ಇದನ್ನೂ ಓದಿ: Health Tips for Women: 40 ವರ್ಷ ದಾಟಿದ ಮಹಿಳೆಯರು ತಿನ್ನಲೇಬೇಕಾದ 8 ಆಹಾರಗಳಿವು
ಬಿಳಿ ಚುಕ್ಕೆಗಳು: ಉಗುರುಗಳ ಮೇಲೆ ಬಿಳಿ ಕಲೆಗಳು ಸಾಮಾನ್ಯವಾಗಿ ಸೂಕ್ಷ್ಮ ಆಘಾತ ಅಥವಾ ಗಾಯದಿಂದಾಗಿ ಉಂಟಾಗಬಹುದು. ಇವು ಸಾಮಾನ್ಯ ಘಟನೆಗಳಾಗಿದ್ದರೂ, ಅವು ಶಿಲೀಂಧ್ರ ಸೋಂಕುಗಳು ಅಥವಾ ಸತುವಿನ ಕೊರತೆಯೊಂದಿಗೆ ಸಂಬಂಧ ಹೊಂದಿರಬಹುದು. ಹಾಗಾಗಿ ಈ ಸಮಸ್ಯೆ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ.
ಹಳದಿ ಉಗುರುಗಳು: ಕೆಲವೊಮ್ಮೆ ನಿಮ್ಮ ಉಗುರಿನ ಬಣ್ಣ ಬದಲಾಗಬಹುದು ಹಾಗಾಗಿ ಮೆಹೆಂದಿ ಅಥವಾ ನಿಮ್ಮ ಉಗುರುಗಳಿಗೆ ಬಣ್ಣ ಹಚ್ಚುವುದರಿಂದ ಕೆಲವು ದಿನ ವಿರಾಮ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಕೆಲವೊಮ್ಮೆ, ಶಿಲೀಂಧ್ರಗಳ ಸೋಂಕಿನಿಂದಾಗಿ ಅಸ್ವಾಭಾವಿಕ ಬಣ್ಣವು ಕಾಣಸಿಗುತ್ತದೆ. ಹಳದಿ ಮಾತ್ರವಲ್ಲ, ಅಂತಹ ಸಂದರ್ಭಗಳಲ್ಲಿ, ಉಗುರುಗಳು ಕಂದು ಬಣ್ಣಕ್ಕೆ ತಿರುಗಬಹುದು ಮತ್ತು ಗಾತ್ರದಲ್ಲಿಯೂ ಬೆಳೆಯಬಹುದು. ಶಿಲೀಂಧ್ರ ಹರಡಿದರೆ, ಉಗುರುಗಳು ಒಡೆಯಬಹುದು ಮತ್ತು ಅಹಿತಕರ ವಾಸನೆಯು ಸಹ ಬರಬಹುದು. ಹಳದಿ ಉಗುರುಗಳು ಸೋರಿಯಾಸಿಸ್, ಮಧುಮೇಹ ಅಥವಾ ಥೈರಾಯ್ಡ್ ಅಸ್ವಸ್ಥತೆಗಳೊಂದಿಗೆ ಸಂಬಂಧ ಹೊಂದಿದೆ ಎನ್ನುತ್ತಾರೆ ವೈದ್ಯರು. ಹಾಗಾಗಿ ಬೆರಳಿನ ಬಗ್ಗೆ ಆದಷ್ಟು ಹೆಚ್ಚಿನ ಕಾಳಜಿ ತೋರಿಸಿ, ಆರೋಗ್ಯವಾಗಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ