Finger Watch: ಬಂದಿದೆ ಬೆರಳುಗಳಿಗೂ ಗಡಿಯಾರ! ಇದು ವಿಚಿತ್ರ ಆದರೂ ಜಪಾನೀಯರು ಸಚಿತ್ರ ಮಾಡಿದ್ದಾರೆ!

ವಾಚ್ ತಯಾರಿಕೆಯಲ್ಲಿ ಮತ್ತೊಂದು ಹೊಸ ಅಧ್ಯಯನ ಆರಂಭವಾಗಿದೆ. ಕೈಗಡಿಯಾರದ ಹೆಸರನ್ನೇ ಬದಲಾಯಿಸುವಂತೆ ಹೊಸ ವಾಚ್‌ಗಳು ಬರುತ್ತಿವೆ! ಈ ಗಡಿಯಾರಗಳನ್ನು ಯಾವ ಹೆಸರಿನಿಂದ ಕರೆಯಬೇಕು ಎಂಬುದು ನಿಜಕ್ಕೂ ಸೋಜಿಗವಾಗಿದೆ. ಜಪಾನಿನ ಕಂಪನಿ ಕ್ಯಾಸಿಯೊ ಇತ್ತೀಚೆಗೆ ಬೆರಳು ಉಂಗುರಗಳನ್ನು ತಯಾರಿಸಲು ಸ್ಟಾನ್ಲಿ ಸ್ಟ್ಯಾಂಡ್ ಸ್ಟೋನ್ಸ್ ಜೊತೆ ಕೈಜೋಡಿಸಿದೆ. ಜಪಾನಿನ ವಾಚ್ ಕಂಪನಿ ಈ ಫಿಂಗರ್ ವಾಚ್‌ಗಳನ್ನು ಬಿಡುಗಡೆ ಮಾಡಿದೆ. ವಿವರಗಳಿಗಾಗಿ ಇಲ್ಲಿ ಪರಿಶೀಲಿಸಿ

Finger Watch: ಬಂದಿದೆ ಬೆರಳುಗಳಿಗೂ ಗಡಿಯಾರ! ಇದು ವಿಚಿತ್ರ ಆದರೂ ಜಪಾನೀಯರು ಸಚಿತ್ರ ಮಾಡಿದ್ದಾರೆ!
Finger Watch: ಬಂದಿದೆ ಬೆರಳು ಗಡಿಯಾರ

Updated on: Sep 05, 2023 | 5:16 PM

ಕಾಲಕ್ಕೆ ತಕ್ಕಂತೆ ಜೀವನಶೈಲಿಗೆ ತಕ್ಕಂತೆ ಟ್ರೆಂಡ್ ಯಾವಾಗ ಬದಲಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ದಿನಕ್ಕೊಂದು ಹೊಸ ಬಗೆಯ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಔಟ್ ಡೇಟ್ ಎಂದುಕೊಂಡಿರುವುದು ಈಗ ಮತ್ತೆ ಹೊಸತಾಗಿ ನಮ್ಮ ಮುಂದೆ ಧುತ್ತನೆ ಬಂದುಬಿಡುತ್ತವೆ. ಒಂದು ಕಾಲದಲ್ಲಿ ಗಡಿಯಾರಗಳು ನಮ್ಮ ಅಸ್ತಿತ್ವದ ಸಂಕೇತವಾಗಿತ್ತು. ಲೇಟೆಸ್ಟ್​ ಆಗಿ ಸ್ಮಾರ್ಟ್ ವಾಚ್‌ಗಳು ಈಗ ನಮ್ಮ ಕೈಗಳನ್ನು ಅಲಂಕರಿಸತೊಡಗಿವೆ. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಹೊಚ್ಚ ಹೊಸ ಬಗೆಯ ವಾಚ್‌ಗಳು ಮಾರುಕಟ್ಟೆಗೆ ಬರುತ್ತಿವೆ.

ಒಂದಾನೊಂದು ಕಾಲದಲ್ಲಿ ಗಡಿಯಾರವು ಸಮಯವನ್ನು ಹೇಳಲು ಬಳಸುವ ಸಾಧನವಾಗಿತ್ತು. ಸ್ಮಾರ್ಟ್ ವಾಚ್‌ಗಳ ಪರಿಚಯದ ನಂತರ, ಅವುಗಳ ಜನಪ್ರಿಯತೆ ಕ್ರಮೇಣ ಕಡಿಮೆಯಾಗತೊಡಗಿತ್ತು. ಯಾವಾಗ ಮಾರುಕಟ್ಟೆಯಲ್ಲಿ ವಿಭಿನ್ನ, ಬಹುಪಯೋಗಿ ಸ್ಮಾರ್ಟ್ ವಾಚ್‌ಗಳು ಸದ್ದು ಮಾಡುತೊಡಗಿದವೋ ಆಗ ಜನ ಅವುಗಳತ್ತ ಮುಖ ಮಾಡತೊಡಗಿದರು. ಸ್ಮಾರ್ಟ್ ವಾಚ್‌ಗಳನ್ನು ಬಳಸುವುದು ಈಗ ಟ್ರೆಂಡ್ ಆಗಿದೆ.

ಇದನ್ನೂ ಓದಿ: ನಿಮ್ಮ ನೆಚ್ಚಿನ ಶಿಕ್ಷಕರಿಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ

ಇದೇ ವೇಳೆ ವಾಚ್ ತಯಾರಿಕೆಯಲ್ಲಿ ಮತ್ತೊಂದು ಹೊಸ ಅಧ್ಯಯನ ಆರಂಭವಾಗಿದೆ. ಕೈಗಡಿಯಾರದ ಹೆಸರನ್ನೇ ಬದಲಾಯಿಸುವಂತೆ ಹೊಸ ವಾಚ್‌ಗಳು ಬರುತ್ತಿವೆ! ಈ ಗಡಿಯಾರಗಳನ್ನು ಯಾವ ಹೆಸರಿನಿಂದ ಕರೆಯಬೇಕು ಎಂಬುದು ನಿಜಕ್ಕೂ ಸೋಜಿಗವಾಗಿದೆ. ಜಪಾನಿನ ಕಂಪನಿ ಕ್ಯಾಸಿಯೊ ಇತ್ತೀಚೆಗೆ ಬೆರಳು ಉಂಗುರಗಳನ್ನು ತಯಾರಿಸಲು ಸ್ಟಾನ್ಲಿ ಸ್ಟ್ಯಾಂಡ್ ಸ್ಟೋನ್ಸ್ ಜೊತೆ ಕೈಜೋಡಿಸಿದೆ.

ಮಾಮೂಲಿ ಗಡಿಯಾರವನ್ನು ಹೋಲುವ ಇವುಗಳನ್ನು ಬೆರಳುಗಳಿಗೆ ಧರಿಸಬಹುದು. ಈ ಗಡಿಯಾರಗಳನ್ನು ವಿವಿಧ ಮಾದರಿಗಳಲ್ಲಿ ತಯಾರಿಸಲಾಗುತ್ತದೆ. ಬರೀ ಸಮಯವನ್ನಷ್ಟೇ ತೋರಿಸುವುದಲ್ಲ ಇವುಗಳು ಕ್ಯಾಲ್ಕುಲೇಟರ್, ಡಿಜಿಟಲ್ ಡಿಸ್​​ಪ್ಲೇ ಅಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿವೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ