Onion Cutting Hacks: ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತದೆ ಎಂಬ ಚಿಂತೆಯೇ; ಈ ಸರಳ ವಿಧಾನ ಮೂಲಕ ಸಮಸ್ಯೆಗೆ ವಿದಾಯ ಹೇಳಿ
ಹೆಚ್ಚಿನವರು ಅಡುಗೆ ಮಾಡುವಾಗ ಈರುಳ್ಳಿ ಕತ್ತರಿಸಲು ಹಿಂಜರಿಯುತ್ತಾರೆ. ಏಕೆಂದರೆ ಇದನ್ನು ಕತ್ತರಿಸುವಾಗ ಕಣ್ಣೀರು ಬರುತ್ತದೆ ಅಲ್ಲದೆ ಇದರಿಂದ ಕಣ್ಣಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಆದರೆ ಕೆಲವು ಸುಲಭ ಸಲಹೆಗಳನ್ನು ಅನುಸರಿಸುವ ಮೂಲಕ ಈ ಒಂದು ಸಮಸ್ಯೆಗೆ ಮುಕ್ತಿ ಪಡೆಯಬಹುದು.
ಸಾಮಾನ್ಯವಾಗಿ ಪ್ರತಿಯೊಂದು ಅಡುಗೆಯಲ್ಲೂ ಈರುಳ್ಳಿ ಬಳಸಲಾಗುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ, ಬಿ6, ಸಿ ಮತ್ತು ವಿಟಮಿ ಇ, ಸೋಡಿಯಂ, ಕಬ್ಬಿಣಾಂಶ ಮತ್ತು ಫೈಬರ್ ಸೇರಿದಂತೆ ಅಗತ್ಯ ಪೋಷಕಾಂಶಗಳಿವೆ. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೆಚ್ಚಿನವರಿಗೆ ಈರುಳ್ಳಿ ತುಂಬಾನೇ ಇಷ್ಟ, ಆದರೆ ಈರುಳ್ಳಿಯನ್ನು ಕತ್ತರಿಸುವುದೇ ದೊಡ್ಡ ಚಿಂತೆಯಾಗಿರುತ್ತದೆ. ಏಕೆಂದರೆ ಈರುಳ್ಳಿ ಅಡುಗೆಯ ರುಚಿಯನ್ನು ಹೇಗೆ ಹೆಚ್ಚಿಸುತ್ತದೆಯೋ ಅದನ್ನು ಕತ್ತರಿಸುವಾಗ ಅಷ್ಟೇ ಕಣ್ಣೀರನ್ನು ತರಿಸುತ್ತದೆ. ಅಲ್ಲದೆ ಇದರಿಂದ ಕಣ್ಣುಗಳಲ್ಲಿ ತೀವ್ರ ಉರಿ ಕಾಣಿಸಿಕೊಳ್ಳುತ್ತದೆ. ಈರುಳ್ಳಿ ಕತ್ತರಿಸುವಾಗ ಅದರಲ್ಲಿನ ಸಲ್ಫರ್ ಸಂಯುಕ್ತ ಹೊರಸೂಸುವ ಕಾರಣ ಕಣ್ಣಲ್ಲಿ ನೀರು ಬರುತ್ತದೆ. ಇದು ಮಾತ್ರವಲ್ಲದೆ ಈರುಳ್ಳಿ ಸೈನ್ ಪ್ರೊಪನೆಥಿಯಲ್-ಎಸ್-ಆಕ್ಸೈಡ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಈ ರಾಸಾಯನಿಕವು ಕಣ್ಣುಗಳ ಲ್ಯಾಕ್ರಿಮಲ್ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಕಣೀರು ಬರುತ್ತದೆ. ಆದರೆ ಕೆಲವು ಸುಲಭ ಸಲಹೆಗಳನ್ನು ಅನುಸರಿಸುವ ಮೂಲಕ ಈ ಒಂದು ಸಮಸ್ಯೆಗೆ ಮುಕ್ತಿ ಪಡೆಯಬಹುದು.
ಈರುಳ್ಳಿಯನ್ನು ಕತ್ತರಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ:
ಈರುಳ್ಳಿಯನ್ನು ನೀರಿನಲ್ಲಿ ನೆನೆಸಿ:
ಈರುಳ್ಳಿ ಕತ್ತರಿಸುವ ಮೊದಲು ಅದನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ಇದು ಸಲ್ಫರ್ ಅನಿಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮತ್ತು ಇದರಿಂದ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದಿಲ್ಲ.
ಈರುಳ್ಳಿಯನ್ನು ಫ್ರೀಜರ್ ನಲ್ಲಿ ಇರಿಸಿ:
ಈರುಳ್ಳಿಯನ್ನು ಕತ್ತರಿಸುವ ಮೊದಲು ಅದನ್ನು ಸ್ವಲ್ಪ ಹೊತ್ತು ಫ್ರೀಜರ್ ನಲ್ಲಿ ಇರಿಸಿ. ಏಕೆಂದರೆ ಶೀತ ವಾವಾರಣಕ್ಕೆ ಸಲ್ಫರ್ ಗ್ಯಾಸ್ ಪ್ರಮಾಣ ಕಡಿಮೆಯಾಗುತ್ತದೆ. ಮತ್ತು ಇದರಿಂದ ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದಿಲ್ಲ.
ಇದನ್ನೂ ಓದಿ: ನಿಮ್ಮ ಈ ಕೆಲವೊಂದು ವೈಯಕ್ತಿಕ ಬಳಕೆ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ;ಸೋಂಕುಗಳು ಹರಡಬಹುದು
ವಿನೆಗರ್ ಸಹಾಯವನ್ನು ತೆಗೆದುಕೊಳ್ಳಿ:
ಈರುಳ್ಳಿಯಿಂದ ಬಿಡುಗಡೆಯಾಗುವ ಕಿಣ್ವಗಳ ಪರಿಣಾಮವನ್ನು ಕಡಿಮೆ ಮಾಡಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಈರುಳ್ಳಿ ಕತ್ತರಿಸುವ ಮೊದಲು ಅದನ್ನು ವಿನೆಗರ್ ನಲ್ಲಿ ನೆನೆಸಿ ನಂತರ ಕತ್ತರಿಸಿ. ವಿನೆಗರ್ ಕೂಡಾ ಆಮ್ಲವನ್ನು ಹೊಂದಿರುತ್ತದೆ. ಇದು ಈರುಳ್ಳಿಯಲ್ಲಿರುವ ಕಿಣ್ವಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಕನಿಷ್ಟ 15 ರಿಂದ 20 ನಿಮಿಷಗಳ ಕಾಲ ಈರುಳ್ಳಿಯನ್ನು ವಿನೆಗರ್ ನಲ್ಲಿ ನೆನೆಸಿ. ಇದರಿಂದ ಕಣ್ಣಿನಲ್ಲಿ ಉರಿಯೂ ಕಾಣಿಸಿಕೊಳ್ಳುವುದಿಲ್ಲ.
ಚಾಕುವಿನ ಮೇಲೆ ನಿಂಬೆ ರಸವನ್ನು ಅನ್ವಯಿಸಿ:
ಈರುಳ್ಳಿಯನ್ನು ಕತ್ತರಿಸುವ ಮೊದಲು ನೀವು ಚಾಕುವಿನ ಮೇಲೆ ನಿಂಬೆ ರಸವನ್ನು ಅನ್ವಯಿಸಿದರೆ, ಅದು ಈರುಳ್ಳಿಯಿಂದ ಬಿಡುಗಡೆಯಾಗುವ ಕಿಣ್ವಗಳ ಪರಿಣಾಮವನ್ನು ಹೆಚ್ಚಿನ ಪ್ರಮಣದಲ್ಲಿ ತಟಸ್ಥಗೊಳಿಸುತ್ತದೆ. ಇದರಿಂದ ನಿಮ್ಮ ಕಣ್ಣುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಕಣ್ಣೀರು ಬರುವುದಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: