Personal Hygiene: ನಿಮ್ಮ ಈ ಕೆಲವೊಂದು ವೈಯಕ್ತಿಕ ಬಳಕೆ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ;ಸೋಂಕುಗಳು ಹರಡಬಹುದು
ರೋಗಗಳು ಮತ್ತು ಸೋಂಕುಗಳ ವಿರುದ್ಧ ರಕ್ಷಣೆಯನ್ನು ಪಡೆಯಬೇಕೆಂದರೆ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಜೊತೆಗೆ ನಿಮ್ಮ ಈ ಕೆಲವೊಂದು ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು, ಏಕೆಂದರೆ ಅದು ಸೋಂಕುಗಳನ್ನು ಹರಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಈ ಬಗ್ಗೆ ಜಾಗರೂಕರಾಗಿರಬೇಕು.
ಹೆಚ್ಚಿನವರು ಕಾಳಜಿಯ ವಿಷಯವಾಗಿ ತಮ್ಮ ವಸ್ತುಗಳನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ನೀರಿನ ಬಾಟಲಿ, ಮೇಕಪ್ ಕಿಟ್, ಬಟ್ಟೆ, ಚಾಚಣಿಕೆ ಹೀಗೆ ಹಲವು ವಸ್ತುಗಳನ್ನು ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಹಂಚಿಕೊಂಡು ಬಾಳುವುದು ಒಳ್ಳೆಯ ಅಭ್ಯಾಸ. ಆದರೆ ಈ ಕೆಲವೊಂದು ವೈಯಕ್ತಿಯ ಬಳಕೆಯ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಏಕೆಂದರೆ ಇದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕುಗಳು ಮತ್ತು ರೋಗಗಳು ಹರಡುವ ಸಾಧ್ಯತೆಯಿರುತ್ತದೆ. ಹಾಗಾಗಿ ವಿಷಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ.
ನಿಮ್ಮ ಕೆಲವೊಂದು ವೈಯಕ್ತಿಯ ಬಳಕೆಯ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:
ಹಲ್ಲುಜ್ಜುವ ಬ್ರಷ್:
ಕುಟುಂಬದ ಸದಸ್ಯರು ಅಥವಾ ಸ್ನೇಹಿತರೇ ಆಗಿರಲಿ, ಹಲ್ಲುಜ್ಜುವ ಬ್ರಷ್ ನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಹಲ್ಲುಜ್ಜುವ ಬ್ರಷ್ ನ್ನು ಪರಸ್ಪರ ಬಳಸುವುದರಿಂದ ಸೋಂಕು ಹರಡಬಹುದು ಮತ್ತು ಹಲ್ಲಿನ ಕೊಳೆಯಂತಹ ಸಮಸ್ಯೆಗಳು ಉಂಟಾಬಹುದು.
ಟವೆಲ್:
ನೀವು ಯಾರೊಂದಿಗೂ ಟವೆಲ್ ಹಂಚಿಕೊಳ್ಳಬಾರದು, ನಿಮ್ಮ ಮನೆಯಲ್ಲಿ ಮುಖ ಒರೆಸಲು ಅಥವಾ ಕೈ ಒರೆಸಿಕೊಳ್ಳಲು ಒಂದೇ ಟವೆಲ್ ನ್ನು ಬಳಸುತ್ತಿದ್ದರೆ, ಈ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ. ಏಕೆಂದರೆ ಯಾವುದೇ ರೀತಿಯ ಸೋಂಕು ಒಬ್ಬರಿಂದ ಒಬ್ಬರಿಗೆ ಟವೆಲ್ ಮೂಲಕ ಹರಡುತ್ತದೆ. ಮನೆಯಲ್ಲಿ ಯಾರಿಗಾದರೂ ರಿಂಗ್ ವರ್ಮ್ ಸಮಸ್ಯೆ ಅಥವಾ ಇತರ ಚರ್ಮದ ಸಮಸ್ಯೆಗಳು ಇದ್ದರೆ, ಅವರು ಬಳಸುವ ಟವೆಲ್ ನ್ನು ಮನೆಯ ಇತರ ಸದಸ್ಯರೂ ಬಳಸಿದರೆ, ಅವರಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಲಿಪ್ ಬಾಮ್:
ಅನೇಕ ಬಾರಿ ಜನರು ತಮ್ಮ ಲಿಪ್ ಬಾಮ್ ನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಲಿಪ್ ಬಾಮ್ ನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಬ್ಯಾಕ್ಟೀರಿಯಾಗಳು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಅಂಟಿಕೊಳ್ಳಬಹುದು.
ಇದನ್ನೂ ಓದಿ: ಊಟವಾದ ಮೇಲೆ ಹೊಟ್ಟೆ ಉರಿಯುತ್ತಾ?; ಕಾರಣ ಇಲ್ಲಿದೆ
ಡಿಯೋಡರೆಂಟ್:
ಜನರು ಹೆಚ್ಚಾಗಿ ಬೆವರಿನ ವಾಸನೆಯನ್ನು ತೆಗೆದುಹಾಕಲು ಡಿಯೋಡರೆಂಟ್ ನ್ನು ಬಳಸುತ್ತಾರೆ. ಆದರೆ ಇದನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಏಕೆಂದರೆ ಇದನ್ನು ನೇರವಾಗಿ ದೇಹದ ಮೇಲೆ ಅನ್ವಯಿಸಲಾಗುವುದರಿಂದ ಬ್ಯಾಕ್ಟೀರಿಯಾಗಳು ಇನ್ನೊಬ್ಬರ ದೇಹದ ಮೇಲೆ ಅಂಟಿಕೊಳ್ಳುವ ಸಾಧ್ಯತೆಯಿರುತ್ತದೆ.
ಬಾಚಣಿಕೆ:
ಸಾಮಾನ್ಯವಾಗಿ ಹೆಚ್ಚಿನವರ ಮನೆಯಲ್ಲಿ ಎಲ್ಲರೂ ಒಂದೇ ಬಾಚಣಿಕೆಯಿಂದ ತಮ್ಮ ಕೂದಲನ್ನು ಬಾಚುತ್ತಾರೆ. ನೀವು ಹೀಗೆ ಮಾಡುತ್ತಿದ್ದರೆ, ಈ ಅಭ್ಯಾಸವನ್ನು ತಕ್ಷಣ ನಿಲ್ಲಿಸಿ. ಏಕೆಂದರೆ ತಲೆಹೊಟ್ಟು, ಕೂದಲಿನಲ್ಲಿ ಇನ್ಫೆಕ್ಷನ್ ನಂತಹ ಸಮಸ್ಯೆಗಳಿದ್ದರೆ, ಬೇರೆಯವರು ಅದೇ ಬಾಚಣಿಕೆ ಬಳಸಿದರೆ ಅವರಿಗೂ ಸೋಂಕು ತಗಲುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬಾಚಣಿಕೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: