Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಐದು ರಾಶಿಯವರಿಗೆ ವಂಚನೆ, ಮೋಸ ಆಗುವುದು ಹೆಚ್ಚು; ಇಲ್ಲಿವೆ ಜ್ಯೋತಿಷ್ಯ ಕಾರಣಗಳು

ಪದೇ ಪದೇ ಮೋಸ ಹೋಗಲು ಕಾರಣವೇನು ಎಂಬುದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಉತ್ತರವಿದೆ. ದ್ವಾದಶ ರಾಶಿಗಳಲ್ಲಿ ಯಾರು ಹೆಚ್ಚು ಬೇಗ ಇತರರನ್ನು ನಂಬಿ, ಮೋಸ ಹೋಗುತ್ತಾರೆ ಎಂಬುದರ ಬಗ್ಗೆ ಇಲ್ಲಿ ಲೇಖನ ನೀಡಲಾಗಿದೆ. ಈ ರಾಶಿಯವರು ಒಮ್ಮೆ ಓದಿಕೊಳ್ಳಿ. ಸಾಧ್ಯವಾದಲ್ಲಿ ಜಾಗ್ರತೆಯಿಂದ ಇರಿ.

ಈ ಐದು ರಾಶಿಯವರಿಗೆ ವಂಚನೆ, ಮೋಸ ಆಗುವುದು ಹೆಚ್ಚು; ಇಲ್ಲಿವೆ ಜ್ಯೋತಿಷ್ಯ ಕಾರಣಗಳು
ಸಾಂದರ್ಭಿಕ ಚಿತ್ರImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Sep 05, 2023 | 12:36 PM

ಕೆಲವು ವ್ಯಕ್ತಿಗಳನ್ನು ಗಮನಿಸಿ, ಅವರು ಪದೇಪದೇ ವಂಚನೆಗೆ ಒಳಗಾಗುತ್ತಲೇ ಇರುತ್ತಾರೆ. ಇಲ್ಲ, ಈ ಸಲ ಪಾಠ ಕಲಿತಿದ್ದೀನಿ. ಇನ್ನು ಮುಂದೆ ಹೀಗೆ ಮೋಸ ಹೋಗಲ್ಲ ಅನ್ನುತ್ತಾರೆ. ಆದರೆ ಹೊಸ ಬಗೆಯ ಇನ್ನೊಂದು ಟೋಪಿಗೆ ತಲೆ ಒಡ್ಡಿರುತ್ತಾರೆ. ಪದೇ ಪದೇ ಮೋಸ, ವಂಚನೆಗೆ ಒಳಗಾಗುವುದು ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುತ್ತಾ ಹೋಗುತ್ತದೆ. ಜೊತೆಗೆ ದೈನಂದಿನ ಜೀವನದಲ್ಲಿ ಸಾಕಷ್ಟು ಅಡ್ಡಿಯುಂಟು ಮಾಡಿ, ಜೀವನದ ಬಗೆಗೆಗಿನ ನಿರೀಕ್ಷೆಗಳನ್ನು ಕಳೆದುಕೊಂಡು ಬಿಡುತ್ತಾರೆ. ಆದ್ದರಿಂದ ಪದೇ ಪದೇ ಈ ರೀತಿಯಾಗಲು ಕಾರಣವೇನು ಎಂಬುದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಉತ್ತರವಿದೆ. ದ್ವಾದಶ ರಾಶಿಗಳಲ್ಲಿ ಯಾರು ಹೆಚ್ಚು ಬೇಗ ಇತರರನ್ನು ನಂಬಿ, ಮೋಸ ಹೋಗುತ್ತಾರೆ ಎಂಬುದರ ಬಗ್ಗೆ ಇಲ್ಲಿ ಲೇಖನ ನೀಡಲಾಗಿದೆ. ಈ ರಾಶಿಯವರು ಒಮ್ಮೆ ಓದಿಕೊಳ್ಳಿ. ಸಾಧ್ಯವಾದಲ್ಲಿ ಜಾಗ್ರತೆಯಿಂದ ಇರಿ.

ದ್ವಾದಶ ರಾಶಿಗಳಲ್ಲಿ ಈ ಕೆಳಗಿನ ರಾಶಿಯವರು  ಹೆಚ್ಚು ಬೇಗ ಇತರರನ್ನು ನಂಬಿ, ಮೋಸ ಹೋಗುತ್ತಾರೆ:

ವೃಷಭ:

ಈ ರಾಶಿಯವರ ಉದ್ದೇಶ ಬಹಳ ಚೆನ್ನಾಗಿರುತ್ತದೆ. ಜತೆಯಲ್ಲಿದ್ದವರು, ಪರಿಚಯಸ್ಥರು, ಸಂಬಂಧಿಕರು ಬೆಳೆಯುತ್ತಾರೆ- ಹಣ ಗಳಿಸುತ್ತಾರೆ ಅಂದರೆ ಯಾಕಾಗಬಾರದು, ಬೇರೆ ಯಾರಿಗೋ ಕೊಡುವ ಬದಲು ನಮ್ಮವರಿಗೇ ಸಿಗಲಿ, ಪರಿಚಯಸ್ಥರೇ ಲಾಭ ಮಾಡಿಕೊಳ್ಳಲಿ ಎಂಬ ಉದಾತ್ತವಾದ ಆಲೋಚನೆ ಇವರದು. ಆದರೆ ಎದುರಿಗಿರುವ ವ್ಯಕ್ತಿಯ ಸಾಮರ್ಥ್ಯ, ಉದ್ದೇಶ ಏನು ಅಂತ ಕೂಡ ತಿಳಿದುಕೊಳ್ಳಬೇಕು ಅಲ್ಲವಾ? ಅದನ್ನು ಇವರು ಮಾಡುವುದೇ ಇಲ್ಲ. ಜತೆಗೆ ಈ ವೃಷಭ ರಾಶಿಯವರ ಬಳಿ ಸಹಾಯ ಕೇಳಿಕೊಂಡು ಬರುವವರಿಗೆ ಅಥವಾ ಪ್ರಾಜೆಕ್ಟ್, ಪ್ಲಾನ್ ತೆಗೆದುಕೊಂಡು ಬರುವವರಿಗೆ ಈ ಜನರ ದೌರ್ಬಲ್ಯ ತುಂಬ ಚೆನ್ನಾಗಿ ಗೊತ್ತಾಗಿ ಬಿಟ್ಟಿರುತ್ತದೆ. “ಕಳೆದ ಸಲ ಎಂಟು ಸಾವಿರ ಇಸ್ಕೊಂಡಿದ್ದ, ಇನ್ನೂ ಎರಡು ಸಾವಿರ ಕೊಟ್ಟಿಬಿಡಿ, ಒಟ್ಟಿಗೆ ಹತ್ತು ಸಾವಿರ ವಾಪಸ್ ಮಾಡ್ತೀನಿ ಅಂದ. ಅದಕ್ಕೆ ಎರಡು ಸಾವಿರವೂ ಕೊಟ್ಟೆ. ಎಂಟು ಸಾವಿರ ತಗೊಂಡು ಹತ್ತು ತಿಂಗಳು, ಈ ಎರಡು ಸಾವಿರ ತಗೊಂಡು ನಾಲ್ಕು ತಿಂಗಳ ಆಯಿತು. ಮತ್ತೆ ಈ ಕಡೆ ಬಂದಿಲ್ಲ,” ಅಂತ ಯಾರಾದರೂ ಹೇಳಿದರೆ ಅವರು ವೃಷಭ ರಾಶಿಯವರು ಅಂತ ಅಂದುಕೊಳ್ಳಬಹುದು.

ಕರ್ಕಾಟಕ:

ಅಯ್ಯೋ ಪಾಪ, ಬಹಳ ಕಷ್ಟದಲ್ಲಿದ್ದ. ಅದಕ್ಕೆ ನನ್ನ ಹತ್ತಿರ ಇಲ್ಲದಿದ್ದರೂ ಬೇರೆಯವರ ಹತ್ತಿರ ಕೇಳಿ ಹಣ ಕೊಡಿಸಿದ್ದೆ. ಮೂರು ತಿಂಗಳ ಮೇಲಾಯಿತು, ಆ ಹಣ ತಗೊಂಡ ಮೇಲೆ ಈ ಕಡೆ ಬಂದಿಲ್ಲ ಅಂತ ಯಾರಾದರೂ ಹೇಳಿದರೆ ಅದು ಕರ್ಕಾಟಕ ರಾಶಿಯವರೇ ಆಗಿರುತ್ತಾರೆ. ಎಮೋಷನಲ್ ಅಥವಾ ಭಾವನಾತ್ಮಕವಾಗಿ ಕರ್ಕಾಟಕ ರಾಶಿಯವರು ಬಹಳ ಬೇಗ ಕರಗಿ ಬಿಡ್ತಾರೆ. ಒಂದು ವೇಳೆ ತಮ್ಮ ಹತ್ತಿರ ಸಹಾಯ ಮಾಡುವುದಕ್ಕೆ ಹಣ ಇಲ್ಲದಿದ್ದಲ್ಲಿ ಬೇರೆಯವರ ಬಳಿ, ತಾವೇ ಜಾಮೀನಾಗಿ ನಿಂತು ಹಣ ಕೊಡಿಸುತ್ತಾರೆ. ಆದರೆ ಇವರಿಗೆ ಎದುರಿಗೆ ಇರುವ ವ್ಯಕ್ತಿ ಹೇಳುವ ಕಾರಣವು ಭಾವನಾತ್ಮಕವಾಗಿ ತಗುಲಬೇಕು. ಆದರೆ ಇವರ ಈ ಅಯ್ಯೋ ಪಾಪ ಇದೆಯಲ್ಲಾ ಇದರಿಂದ ಸಮಸ್ಯೆಗಳಿಗೆ ಕೊನೆಯೇ ಇರಲ್ಲ. ಇವರ ಬಳಿ ಸಹಾಯ ಕೇಳಿಕೊಂಡು ಬರುವವರಲ್ಲಿ ಸಂಬಂಧಿಕರು, ಆಪ್ತರಾದವರೇ ಹೆಚ್ಚು. ಶ್ಯೂರಿಟಿ ಹಾಕುವುದು, ಜಾಮೀನಾಗಿ ನಿಲ್ಲುವುದು, ತಮ್ಮದೇ ಆಸ್ತಿಪತ್ರ, ಒಡವೆಗಳನ್ನು ಅಡಮಾನ ಮಾಡುವುದಕ್ಕೆ ಕೊಡುವವರು ಇದೆಲ್ಲ ಈ ಕರ್ಕಾಟಕ ರಾಶಿಯವರೇ ಜಾಸ್ತಿ. ಮತ್ತೆ ಇವರು ಬದಲಾಗುವ ಸಾಧ್ಯತೆ ತುಂಬ ತುಂಬ ಕಡಿಮೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 5ರ ದಿನಭವಿಷ್ಯ

ಕನ್ಯಾ:

ಮನೆ ಇದೆ, ಸಿಕ್ಕಾಪಟ್ಟೆ ಒಡವೆ ಹಾಕಿಕೊಳ್ತಾರೆ. ನಾವು ಯಾವಾಗ ಹೋಟೆಲ್ ಗೆ ಹೋದರೂ ಅವರೇ ಬಿಲ್ ಕೊಡ್ತಾರೆ. ಇಷ್ಟೆಲ್ಲ ಇರುವ ವ್ಯಕ್ತಿ ಮೋಸ ಮಾಡುವುದಕ್ಕೆ ಸಾಧ್ಯವಾ? ಕನ್ಯಾ ರಾಶಿಯವರು ಆಲೋಚನೆ ಮಾಡುವುದು ಹೀಗೆ. ಹಣಕಾಸಿನ ವಿಚಾರದಲ್ಲಿ ಎದುರಿಗಿರುವ ವ್ಯಕ್ತಿ ಹೆವಿ ವೇಯ್ಟ್ ಅಂತ ಇವರು ಅಂದುಕೊಂಡು ಬಿಟ್ಟರೆ ಮುಗಿಯಿತು. ತಾವಷ್ಟೇ ಹಣ ಕೊಡುವುದಲ್ಲ. ಸ್ನೇಹಿತರು- ಸಂಬಂಧಿಕರಿಂದಲೂ ಹಣ ಕೊಡಿಸಿಬಿಡುತ್ತಾರೆ. ಜತೆಗೆ ಕನ್ಯಾ ರಾಶಿಯವರಿಗೆ ಒಂದು ಇಮೇಜ್ ಇರುತ್ತದೆ. ಅದೇನೆಂದರೆ, ದುಡ್ಡು- ಕಾಸಿನ ವಿಚಾರದಲ್ಲಿ ಬಹಳ ಲೆಕ್ಕಾಚಾರದ ಜನ, ಅದರಲ್ಲೂ ಯಾರಿಗೂ ಎಮೋಷನಲಿ ಬೇಗ ಕನೆಕ್ಟ್ ಆಗದವರು. ಎಲ್ಲವನ್ನೂ ವಾಸ್ತವ ನೆಲೆಗಟ್ಟಿನಲ್ಲಿಯೇ ನೋಡುವವರು ಎಂಬ ಇಮೇಜ್ ಅದು. ಇವರೂ ಅಷ್ಟೇ ಸಾಮಾಜಿಕ ಸ್ಥಾನ-ಮಾನ, ಹಣಕಾಸು, ಕ್ರೆಡಿಟ್ ವರ್ಥಿನೆಸ್ ಇವೆಲ್ಲವನ್ನೂ ನೋಡಿಯೇ ವ್ಯವಹಾರ ಮಾಡುತ್ತಾರೆ. ಆದರೆ ಅದರಲ್ಲಿಯೇ ಮೋಸ ಹೋಗ್ತಾರೆ, ಪದೇ ಪದೇ ಮೋಸ ಹೋಗ್ತಾರೆ.

ಧನುಸ್ಸು:

ಯಾರಿಗೆ ದೈವ ಭಕ್ತಿ ಹೆಚ್ಚು ಎಂದು ಮೇಲ್ನೋಟಕ್ಕೆ ಕಂಡರೂ ಧನು ರಾಶಿಯವರು ಬೇಗ ಕರಗಿ ಹೋಗುತ್ತಾರೆ. ಯಾಕೆಂದರೆ ಇವರಿಗೆ ದೈವ ಭಕ್ತಿ ಸಾಮಾನ್ಯವಾಗಿ ಹೆಚ್ಚು. ಆದರೆ ಕೆಲವರು ಅದನ್ನು ತೋರಿಸಿಕೊಳ್ಳುವುದಕ್ಕೆ ಹೋಗಲ್ಲ. ಒಂದು ವೇಳೆ ಇವರ ಬಳಿ ದೈವ ಭಕ್ತಿ ಇರುವ ವ್ಯಕ್ತಿ ಬಂದರೆ ಹೇಗೋ ತಗಲಾಕಿಕೊಂಡು ಬಿಡ್ತಾರೆ. ಸಂಸ್ಥೆಗೆ ಇರುವ ಹೆಸರು ದೇವರದ್ದಾದರೆ, ವ್ಯಕ್ತಿಯ ಇರುವ ಹೆಸರು ದೇವರದ್ದಾದರೆ ಧನುಸ್ಸು ಬಾಗಿ ಬಿಡುತ್ತದೆ. ಮೋಸ ಅಥವಾ ವಂಚನೆ ಆದ ನಂತರದಲ್ಲಿ ಇವರ ಮಾತುಗಳನ್ನು ಕೇಳಿಸಿಕೊಳ್ಳುವುದಿದೆಯಲ್ಲ ಅದರಲ್ಲಿ ಬೇರೆಯವರಿಗೆ ಬಹಳ ಒಳ್ಳೆ ಪಾಠಗಳು ಇರುತ್ತವೆ. ಸಜ್ಜನರ ವೇಷಧಾರಿಗಳಿಗೆ ಮೋಸ ಹೋಗುವುದರಲ್ಲಿ ಧನು ರಾಶಿಯವರು ಮೊದಲನೆಯವರು. ಮತ್ತು ಇವರು ತಮ್ಮ ಅನುಭವಗಳನ್ನು ಬೇಗ ಮರೆತು ಬಿಡುತ್ತಾರೆ. ಹೊಸ ಉತ್ಸಾಹದೊಂದಿಗೆ ಸಿದ್ಧರಾಗಿ ಬಿಡುತ್ತಾರೆ.

ಮೀನ:

ಹನ್ನೆರಡು ರಾಶಿಗಳ ಪೈಕಿ ಯಾರಾದರೂ ತಾವಾಗಿಯೇ ಹುಡುಕಿಕೊಂಡು ಹೋಗಿ, ಮೋಸ ಹೋಗುವವರು ಅಂತ ಇದ್ದರೆ ಅದು ಮೀನ ರಾಶಿಯವರು. ಈ ಮೀನ ರಾಶಿಯವರು ಬುದ್ಧಿವಂತರು. ಸದಾ ಒಂದಿಲ್ಲೊಂದು ವಿಚಾರ ಯೋಚನೆ ಮಾಡುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾ, ಯಾವುದೋ ವೆಬ್ ಸೈಟ್, ಟೀವಿ ಅಡ್ವರ್ಟೈಸ್ ಮೆಂಟ್, ಯೂಟ್ಯೂಬ್ ಇಂಥವುಗಳನ್ನು ನೋಡಿ, ಬೇಗ ಮನಸ್ಸು ಮಾಡಿಬಿಡುವಂಥ ಜನ ಇವರು. ಯಾವುದೋ ಸ್ಕೀಮ್, ಇನ್ನೇನೋ ಲಾಭ ಹೀಗೆ ಬರುವಂಥ ಮಾಹಿತಿಯನ್ನು ಓದಿ ಹುಡುಕಿಕೊಂಡು ಹೊರಟು ಬಿಡ್ತಾರೆ. ಪಬ್ಲಿಸಿಟಿಗೋಸ್ಕರ ಮಾಡುವಂಥ ಪ್ರಯತ್ನಗಳಿಗೆ ಬೇಗ ಪಿಗ್ಗಿ ಬೀಳುವವರು ಮೀನ ರಾಶಿಯವರು. ಇವರನ್ನು ಎಚ್ಚರಿಸುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ, ತಮ್ಮನ್ನು ತಾವು ಬಹಳ ಸರಿ ಎಂದು ಬಲವಾಗಿ ನಂಬಿರುತ್ತಾರೆ. ಏನಾದರೂ ಹೇಳುವುದಕ್ಕೆ ಸ್ನೇಹಿತರೋ ಸಂಬಂಧಿಕರೋ ಪ್ರಯತ್ನಿಸಿದರೆ ತಾವು ನಂಬಿಕೊಂಡಿದ್ದನ್ನೇ ವಾದವಾಗಿ ಮುಂದಿಡುತ್ತಾರೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Tue, 5 September 23

ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್