
ಆಪ್ಟಿಕಲ್ ಇಲ್ಯೂಷನ್ನಂತಹ (Optical Illusion) ಮೋಜಿನ ಒಗಟಿನ ಆಟಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಒಂದು ರೀತಿ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳು ನಮ್ಮ ಕಣ್ಣು ಮತ್ತು ಬುದ್ಧಿವಂತಿಗೆ ಸವಾಲೋಡುತ್ತವೆ. ಇವು ಟೈಮ್ ಪಾಸ್ ಮತ್ತು ಮನೋರಂಜನೆಯ ಆಟ ಮಾತ್ರವಲ್ಲದೆ, ಮೆದುಳಿಗೆ ವ್ಯಾಯಾಮ ನೀಡುವ, ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸುವ ಒಂದೊಳ್ಳೆ ಮಾರ್ಗವಾಗಿದೆ. ಇಲ್ಲೊಂದು ಇಂತಹದ್ದೇ ಆಪ್ಟಿಕಲ್ ಇಲ್ಯೂಷನ್ ಚಿತ್ರ ವೈರಲ್ ಆಗಿದ್ದು, ಅದರಲ್ಲಿ ಆಯತಗಳ ನಡುವೆ ಅಡಗಿರುವ 16 ವೃತ್ತಗಳನ್ನು (find the circles hidden between rectangles) ಹುಡುಕಲು ಸವಾಲನ್ನು ನೀಡಲಾಗಿದೆ.
ಬಿಬಿಸಿ ವರದಿಯ ಪ್ರಕಾರ, ಈ ಆಪ್ಟಿಕಲ್ ಇಲ್ಯೂಷನ್ನ್ನು ಸ್ಟ್ಯಾನ್ಫೋರ್ಡ್ ದೃಷ್ಟಿ ವಿಜ್ಞಾನಿ ಆಂಥೋನಿ ನಾರ್ಸಿಯಾ ರಚಿಸಿದ್ದಾರೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ 2006 ರಲ್ಲಿ ವರ್ಷದ ಅತ್ಯುತ್ತಮ ಇಲ್ಯೂಷನ್ ಬಿರುದನ್ನು ಪಡೆದುಕೊಂಡಿದೆ. ಈ ನಿರ್ದಿಷ್ಟ ಚಿತ್ರದಲ್ಲಿ ಮೊದಲ ನೋಟದಲ್ಲಿ, ಟೈಲ್ಡ್ ಶೈಲಿಯಲ್ಲಿ ಜೋಡಿಸಿರುವ ಕಪ್ಪು ಬಿಳುಪಿನ ಆಯತಾಕಾರದ ಆಕಾರ ಮಾತ್ರ ಕಾಣಿಸುತ್ತವೆ. ಆದರೆ ಈ ಆಯತಗಳ ನಡುವೆ 16 ವೃತ್ತ ಅಡಗಿದೆ. ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಗೇವಿನ್ ಬಕಿಂಗ್ಹ್ಯಾಮ್ (Gavin Buckingham) ಎಂಬವರು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪೋಸ್ಟ್ ಇಲ್ಲಿದೆ ನೋಡಿ:
ಇವಾನ್ ಕ್ರೌಪಿನ್ ನೇತೃತ್ವದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನ ಸಂಶೋಧಕರು, ಇತ್ತೀಚಿಗೆ ನಡೆಸಿದ ಸಂಶೋಧನೆಯಲ್ಲಿ “ಈ ಸಂಶೋಧನೆಗೆ ಒಳಪಟ್ಟ ಯುಎಸ್ ಮತ್ತು ಯುಕೆಯ ನಗರ ಪ್ರದೇಶ ಜನರಿಗೆ ಹೋಲಿಸಿದರೆ, ಈ ಸಂಶೋಧನೆಗೆ ಒಳಪಟ್ಟ ನಮೀಬಿಯಾದ ಗ್ರಾಮೀಣ ಪ್ರದೇಶದ ಜನರು ವೃತ್ತವನ್ನು ಮೊದಲು ಗುರುತಿಸಿದ್ದಾರೆ. ಇದು ಪರಿಸರವು ನಾವು ನೋಡುವುದರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಮೇಲೆ ಅವಲಂಬಿಸಿದೆ” ಎಂದಿದ್ದಾರೆ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ನಾಯಿಯನ್ನು ಕೇವಲ 7 ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?
ನೀವು ಮೊದಲು ಚಿತ್ರವನ್ನು ನೋಡಿದಾಗ, ಆಯತಾಕಾರದ ಫಲಕಗಳು ಈ ಚಿತ್ರದಲ್ಲಿ ಪ್ರಮುಖವಾದ ವಿಷಯವಾಗಿ ಕಾಣಿಸಬಹುದು. ಬರೀ ಆಯಾತಗಳೇ ಕಾಣಿಸುತ್ತದೆ. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ, ಆಯತಗಳ ನಡುವೆ ಇರುವ ವೃತ್ತಗಳು ಕಾಣಿಸುತ್ತದೆ. ಈ ಚಿತ್ರದ ಮಧ್ಯ ಭಾಗವನ್ನು ದಿಟ್ಟಿಸಿ ನೋಡಿದಾಗ ನಿಮಗೆ ವೃತ್ತಾಕಾರ ಗೋಚರಿಸುತ್ತದೆ. ಈ ಚಿತ್ರದಲ್ಲಿ ಒಟ್ಟು 16 ವೃತ್ತಗಳಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ