Sleep Apnea: ಹಗಲಿನಲ್ಲಿ ಅತಿಯಾದ ನಿದ್ರೆ ಮಾಡುವವರಿಗೆ ಸೂಕ್ತ ಚಿಕಿತ್ಸೆ: ಇಲ್ಲಿದೆ ಸಂಶೋಧನ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 12, 2023 | 2:36 PM

ಅತಿಯಾದ ಹಗಲಿನ ನಿದ್ರೆ ಮತ್ತು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (ಪ್ರತಿರೋಧಕ ನಿದ್ರಾ ಉಸಿರುಕಟ್ಟುವಿಕೆ) ಹೊಂದಿರುವ ಜನರಿಗೆ ಸೋಲ್ರಿಯಂಫೆಟಾಲ್ ಔಷಧವು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಗಳಲ್ಲಿ ಒಂದಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Sleep Apnea: ಹಗಲಿನಲ್ಲಿ ಅತಿಯಾದ ನಿದ್ರೆ ಮಾಡುವವರಿಗೆ ಸೂಕ್ತ ಚಿಕಿತ್ಸೆ: ಇಲ್ಲಿದೆ ಸಂಶೋಧನ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ನಮ್ಮ ಪೂರ್ವಜರ ಜೀವನಶೈಲಿಯಂತೆ ನಾವು ಬದುಕುತ್ತಿಲ್ಲ. ಈಗ ಒತ್ತಡ ಎನ್ನುವುದು ಎಲ್ಲರನ್ನೂ ಆವರಿಸಿಕೊಂಡಿದೆ. ಇದರಿಂದ ಯಾವ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ನಾವು ಮರೆತೇ ಬಿಟ್ಟಿದ್ದೇವೆ. ಊಟ, ತಿಂಡಿ, ನಿದ್ದೆ ಎಲ್ಲವೂ ಸಮಯಕ್ಕೆ ತಕ್ಕಂತೆ ನಡೆಯುವುದಿಲ್ಲ. ಸಮಯ ಮೀರುತ್ತದೆ. ಇದರಿಂದ ನಮ್ಮ ದೇಹ ನಾನಾ ರೀತಿಯ ಖಾಯಿಲೆಗಳ ಆವಾಸಸ್ಥಾನವಾಗಿದೆ. ಈ ರೀತಿಯ ಸಮಸ್ಯೆಗಳಲ್ಲಿ ಹೆಚ್ಚಾಗಿ ಕಾಡುವುದು ಅತಿಯಾದ ಹಗಲು ಹೊತ್ತಿನ ನಿದ್ದೆ. ಈ ಬಗ್ಗೆ ನೀವು ಕೇಳಿರಬಹುದು. ಇದನ್ನು ಇಡಿಎಸ್ ಎಂದು ಕರೆಯುತ್ತಾರೆ. ಮತ್ತೊಂದು ಸಮಸ್ಯೆ ಎಂದರೆ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ(OSA ) ಇತ್ತೀಚಿನ ದಿನಗಳಲ್ಲಿ ಇದೊಂದು ಸಾಮಾನ್ಯ ಅಸ್ವಸ್ಥತೆ ಆಗಿದೆ. ಇದು ನಿದ್ರೆಗೆ ಸಂಬಂಧಿಸಿದ ಉಸಿರಾಟದ ಸಮಸ್ಯೆ. ಇದರಿಂದ ನಿದ್ದೆ ಮಾಡುವಾಗ ಉಸಿರಾಟಕ್ಕೆ ತೊಂದರೆಯುಂಟು ಮಾಡುತ್ತದೆ. ಉಸಿರಾಟ ನಿಂತು ಮತ್ತೆ ಆರಂಭವಾಗುತ್ತದೆ.

ಈ ಕಾಯಿಲೆಗಳ ಬಗ್ಗೆ ಅನೇಕ ಸಂಶೋಧನೆಗಳು ನಡೆಯುತ್ತಿದ್ದು ಅದರಲ್ಲಿ ಮೆಕ್ ಮಾಸ್ಟರ್ ವಿಶ್ವವಿದ್ಯಾಲಯದ ದೇನಾ ಜೆರಾಟ್ಕರ್ ಮತ್ತು ಟೈಲರ್ ಪಿಟ್ರೆ ಅವರು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (ಒಎಸ್ಎ) ಹೊಂದಿರುವ ವ್ಯಕ್ತಿಗಳಲ್ಲಿ ಮತ್ತು ಅತಿಯಾದ ಹಗಲಿನ ನಿದ್ರೆಗೆ (ಇಡಿಎಸ್) ಸೋಲ್ರಿಯಂಫೆಟಾಲ್ ಔಷಧಿ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಕಂಡುಹಿಡಿದಿದ್ದಾರೆ.

ಒಎಸ್ಎ ಹೊಂದಿರುವ ಕೆಲವು ರೋಗಿಗಳು ಇಡಿಎಸ್ ಹೊಂದಿದ್ದಾರೆ. ಇದರಿಂದಾಗಿ ಆಯಾಸ ವಿರೋಧಿ ಔಷಧಿಯಿಂದ ಪ್ರಯೋಜನ ಪಡೆಯಬಹುದು. ಜೆರಾಟ್ಕರ್ ಮತ್ತು ಪಿತ್ರೆ ತಮ್ಮ ಸಂಶೋಧನೆಗಳನ್ನು ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ನಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಕೆಲವು ಅಂಶಗಳನ್ನು ಸ್ಪಷ್ಟಪಡಿಸಿದ್ದಾರೆ. “ಒಎಸ್ಎ ಹೊಂದಿರುವ ಜನರು ಮಾಡಬೇಕಾದ ಪ್ರಮುಖ ವಿಷಯವೆಂದರೆ ತಮ್ಮ ಪಿಎಪಿ ಯಂತ್ರವನ್ನು ಬಳಸುವುದು, ಅದರ ಜೊತೆಗೆ ಅವರ ದಣಿವನ್ನು ಕಡಿಮೆ ಮಾಡಲು ಔಷಧಿಗಳ ರೂಪದಲ್ಲಿ ಆಯ್ಕೆಗಳಿವೆ” ಎಂದು ಮೆಕ್ಮಾಸ್ಟರ್ ವಿಶ್ವವಿದ್ಯಾಲಯದ ವೈದ್ಯ ಮತ್ತು ಲೇಖಕ ಟೈಲರ್ ಪಿಟ್ರೆ ತಿಳಿಸಿದ್ದಾರೆ.

“ಉತ್ತರ ಅಮೆರಿಕಾದಲ್ಲಿ 15 ರಿಂದ 30 ಪ್ರತಿಶತದಷ್ಟು ಜನರು ಒಎಸ್ಎ ರೋಗನಿರ್ಣಯವನ್ನು ಗೊತ್ತುಪಡಿಸಿಕೊಂಡಿದ್ದಾರೆ. ಮತ್ತು ಇತರ ಅನೇಕರು ರೋಗನಿರ್ಣಯ ಮಾಡದ ಕಾರಣ ರೋಗ ಹರಡುವಿಕೆಯು ಹೆಚ್ಚಾಗಿದೆ. ಇದು ಕೆನಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಹೆಚ್ಚಿನ ದೇಶಗಳಲ್ಲಿ ಹಲವು ಜನರ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದ್ದಾರೆ.

“ಆ ರೋಗಿಗಳಲ್ಲಿ, ಅನೇಕರು ಇಡಿಎಸ್ ಹೊಂದಿರುತ್ತಾರೆ, ಇದು ಅವರ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಮತ್ತು ಇತರ ಮಾನಸಿಕ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಪರಿಸ್ಥಿತಿಯನ್ನು ಸುಧಾರಿಸುವುದು ವೈದ್ಯರಿಗೆ ಅತ್ಯಂತ ಮಹತ್ವದ್ದಾಗಿದೆ. ಒಎಸ್ಎ ಜಾಗತಿಕವಾಗಿ ಸುಮಾರು ಒಂದು ಶತಕೋಟಿ ಜನರ ಮೇಲೆ ಪರಿಣಾಮ ಬೀರುತ್ತದೆ. ಅವರಲ್ಲಿ ಅನೇಕರು ಇಡಿಎಸ್ನ ಅಪಾಯದಲ್ಲಿಯೂ ಇದ್ದಾರೆ ಎಂದು ಪಿಟ್ರೆ ಹೇಳಿದರು.

ಇದನ್ನೂ ಓದಿ:Sleep Apnea: ನಿದ್ರೆಯ ಅಸ್ವಸ್ಥತೆಯು ಹೃದಯ ಸಂಬಂಧಿ ಕಾಯಿಲೆಗಳ ಹುಟ್ಟಿಗೆ ಕಾರಣವಾಗುವುದೇ?

3,085 ಜನರನ್ನು ಒಳಗೊಂಡ ಆಯಾಸ-ನಿರೋಧಕ ಔಷಧಿಗಳ 14 ಕ್ಲಿನಿಕಲ್ ಪ್ರಯೋಗಗಳ ವ್ಯವಸ್ಥಿತ ವಿಮರ್ಶೆಯನ್ನು ನಡೆಸುವ ಮೂಲಕ ಜೆರಾಟ್ಕರ್ ಮತ್ತು ಪಿಟ್ರೆ ತಮ್ಮ ಸಂಶೋಧನೆಗಳನ್ನು ಮಾಡಿದ್ದಾರೆ. ಜೊತೆಗೆ ನಿರ್ದಿಷ್ಟ ನೆಟ್ವರ್ಕ್ ಮೆಟಾ-ವಿಶ್ಲೇಷಣೆಯಲ್ಲಿ ಮೆಡ್ಲೈನ್, ಸೆಂಟ್ರಲ್, EMBASE ಮತ್ತು ClinicalTrials.gov ಡೇಟಾವನ್ನು ವಿಶ್ಲೇಷಿಸಿದರು. ಅವರು ಅಕ್ಟೋಬರ್ 2022 ರಿಂದ ಜನವರಿ 2023 ರವರೆಗೆ ತಮ್ಮ ಸಂಶೋಧನೆಯನ್ನು ನಡೆಸಿರುವ ಬಗ್ಗೆ ವರದಿಗಳಲ್ಲಿ ಮಾಹಿತಿ ನೀಡಿದ್ದಾರೆ.

ಹಿರಿಯ ಲೇಖಕ ಜೆರಾಟ್ಕರ್ ಅವರು, ಸೋಲ್ರಿಯಂಫೆಟಾಲ್ ಇಡಿಎಸ್ಗೆ ಉತ್ತಮ ಔಷಧಿಯಾಗಿದ್ದರೂ, ಆರ್ಮೊಡಾಫಿನಿಲ್-ಮೊಡಾಫಿನಿಲ್ ಮತ್ತು ಪಿಟೊಲಿಸೆಂಟ್ ಔಷಧಿಗಳು ಆಯಾಸವನ್ನು ಎದುರಿಸುವಲ್ಲಿ ಪರಿಣಾಮಕಾರಿಯಾಗಿವೆ ಎಂದು ಹೇಳಿದ್ದಾರೆ. ಸೋಲ್ರಿಯಂಫೆಟಾಲ್ ರಕ್ತದೊತ್ತಡವನ್ನು ಹೆಚ್ಚಿಸಬಹುದು, ವಿಶೇಷವಾಗಿ ಒಎಸ್ಎ ಹೊಂದಿರುವ ಜನರಿಗೆ ಅಪಾಯಕಾರಿ, ಏಕೆಂದರೆ ಅವರಲ್ಲಿ ಅನೇಕರು ಹೃದಯರಕ್ತನಾಳದ ಸಮಸ್ಯೆಗಳನ್ನು ಸಹ ಹೊಂದಿದ್ದಾರೆ ಎಂದು ಎಚ್ಚರಿಸಿದ್ದಾರೆ.

“ದೀರ್ಘಕಾಲದ ಆಯಾಸ, ಕೋವಿಡ್ನಂತಹ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಈ ಆಯಾಸ ವಿರೋಧಿ ಔಷಧಿಗಳು ಎಷ್ಟು ಪರಿಣಾಮಕಾರಿಯಾಗಿರುತ್ತವೆ ಎಂಬುದನ್ನು ನಾವು ನೋಡಿದ್ದೇವೆ. ಈಗ ಅವು ಇದೇ ರೀತಿಯ ಸ್ಥಿತಿಗೆ ಕೆಲಸ ಮಾಡುತ್ತವೆ ಎಂದು ನಮಗೆ ತಿಳಿದಿದೆ” ಎಂದು ಅರಿವಳಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಜೆರಾಟ್ಕರ್ ಹೇಳಿದರು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: