ಸರಿಸುಮಾರು 200 ವರ್ಷಗಳ ಬ್ರಿಟಿಷರ ಆಳ್ವಿಕೆಯನ್ನು ಹೋಗಲಾಡಿಸಲು ಭಾರತದಲ್ಲಿ ಹಲವು ಹೋರಾಟಗಳು, ಸತ್ಯಾಗ್ರಹಗಳು, ರಕ್ತಪಾತಗಳು ನಡೆದವು. ಕೊನೆಗೂ ಬ್ರಿಟಿಷರನ್ನು ಭಾರತದಿಂದ ಓಡಿಸುವಲ್ಲಿ ಭಾರತೀಯರು ಯಶಸ್ವಿಯಾದರು. ಈ ವೇಳೆಯಲ್ಲಿ ಲಕ್ಷಾಂತರ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗನ್ನು ಮಾಡಿದರು. ಆದರೆ ಭಾರತವು ಸ್ವಾತಂತ್ರ್ಯವಾಯಿತು ಎನ್ನುವ ಸಂಭ್ರಮದ ನಡುವೆ ಆದರೆ ಅದಕ್ಕೂ ಮುನ್ನ ನಡೆದ ಹತ್ಯೆ, ಹಿಂಸೆ, ದಂಗೆ ಹಾಗೂ ಆತ್ಯಾಚಾರಗಳನ್ನೂ ಭಾರತ ದೇಶವು ಇವತ್ತಿಗೂ ಮರೆತಿಲ್ಲ. ಹೀಗಾಗಿ ಆಗಸ್ಟ್ 14 ರಂದು ವಿಭಜನೆಯ ಕರಾಳ ನೆನಪಿನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
2021 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ‘ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು. ದ್ವೇಷ ಮತ್ತು ಹಿಂಸಾಚಾರದಿಂದಾಗಿ ನಮ್ಮ ಲಕ್ಷಾಂತರ ಸಹೋದರ ಸಹೋದರಿಯರು ಸ್ಥಳಾಂತರಗೊಂಡಿದ್ದರು. ಅನೇಕರು ಪ್ರಾಣ ಕಳೆದುಕೊಂಡಿದ್ದರು. ನಮ್ಮ ಜನರು ಪಟ್ಟ ಪಾಡುಗಳು ಮತ್ತು ತ್ಯಾಗದ ನೆನಪಿಗಾಗಿ ಆಗಸ್ಟ್ 14 ಅನ್ನು ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಪರಿಗಣಿಸಲಾಗುವುದು’ ಎಂದು ಘೋಷಿಸಿದ್ದರು. ಅಂದಿನಿಂದ ಆಗಸ್ಟ್ 14 ರಂದು ವಿಭಜನೆಯ ಕರಾಳ ನೆನಪಿನ ದಿನವನ್ನಾ ಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ‘ಜನಗಣಮನ’ವನ್ನು ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಿಕೊಂಡದ್ದು ಹೇಗೆ? ಈ ಹಾಡಿನ ಅರ್ಥವೇನು?
ಭಾರತದ ಇತಿಹಾಸದಲ್ಲಿ ಆಗಸ್ಟ್ 14 ರ ದಿನವು ಕಹಿ ನೆನಪಾಗಿಯೇ ಉಳಿದುಕೊಂಡಿದೆ. ಪಾಕಿಸ್ತಾನವನ್ನು 14 ಆಗಸ್ಟ್ 1947 ರಂದು ಮತ್ತು ಭಾರತವನ್ನು 15 ಆಗಸ್ಟ್ 1947 ರಂದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲಾಯಿತು. ಆದರೆ ಈ ವಿಭಜನೆಯ ಮೂಲಕ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಅದೇ ಈ ವೇಳೆಯಲ್ಲಿ ಕೋಟ್ಯಂತರ ಜನರ ಭಾವನೆಗಳಿಗೆ ಪೆಟ್ಟದದ್ದು ಮಾತ್ರವಲ್ಲದೇ ಸಂಬಂಧಗಳು ಮತ್ತು ಕುಟುಂಬಗಳೇ ದೂರವಾಯಿತು. ಆ ದಿನ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಂದ ದೂರವಾಗಿ ತಮ್ಮ ಜನ್ಮ ಭೂಮಿಯನ್ನೇ ಬಿಟ್ಟು ಲಕ್ಷಾಂತರ ಜನರು ಹೋಗುತ್ತಿದ್ದರು. ಈ ಸಮಯದಲ್ಲಿ ಯಾರಿಗೆ ಪಾಕಿಸ್ತಾನ ಸುರಕ್ಷಿತವೆನಿಸಿತ್ತೋ ಅವರು ಆ ಕಡೆಗೆ ಪ್ರಯಾಣ ಬೆಳೆಸಿದರೆ, ಭಾರತ ಸುರಕ್ಷಿತವೆನ್ನುವವರು ಈ ಕಡೆಗೆ ಬಂದರು. ಇದನ್ನೇ ಸಂದರ್ಭವಾಗಿ ಬಳಸಿಕೊಂಡ ಕೆಲವರು ಭಾವನೆಗಳನ್ನು ಪ್ರಚೋದಿಸುವ ಕೆಲಸವು ಮಾಡಿದರು. ಆದರೆ ಈ ವೇಳೆಯಲ್ಲೋ ದಂಗೆಗಳಾಗಿ ರಕ್ತಪಾತಕ್ಕೂ ಕಾರಣವಾಗಿ ಸರಿಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.
ಸ್ವಾತಂತ್ರ್ಯ ದಿನದ ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ