Independence Day 2024: ‘ಜನಗಣಮನ’ವನ್ನು ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಿಕೊಂಡದ್ದು ಹೇಗೆ? ಈ ಹಾಡಿನ ಅರ್ಥವೇನು?

National Anthem of India : ರಾಷ್ಟ್ರಗೀತೆ ಜನಗಣಮನ ಭಾರತದ ವೈಭವ ಮತ್ತು ಸಾರ್ವಭೌಮತೆಯ ಸಂಕೇತವಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಸಾಹಿತ್ಯವು ರಾಷ್ಟ್ರಗೀತೆಯಲ್ಲಿ ಭಾರತದ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ತುಂಬಿದೆ. ಹಾಗಾದ್ರೆ ಈ ಜನಗಣಮನ ಗೀತೆಯನ್ನು ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಿಕೊಂಡದ್ದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿಯು ಇಲ್ಲಿದೆ.

Independence Day 2024: 'ಜನಗಣಮನ'ವನ್ನು ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಿಕೊಂಡದ್ದು ಹೇಗೆ? ಈ ಹಾಡಿನ ಅರ್ಥವೇನು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 13, 2024 | 2:55 PM

ನಮ್ಮ ರಾಷ್ಟ್ರ ಗೀತೆ ಜನಗಣಮನ ವನ್ನು ಕೇಳಿದಾಗ ಒಂದು ಕ್ಷಣ ಮೈ ಮನವೆಲ್ಲಾ ರೋಮಾಂಚನವಾಗುತ್ತದೆ. ಜನಗಣಮನ ಗೀತೆಯು ಭಾರತದ ವೈಭವ ಮತ್ತು ಸಾರ್ವಭೌಮತೆಯ ಸಂಕೇತವಾಗಿದೆ. ವಿಶ್ವಮಾನ್ಯ ಕವಿ ರವೀಂದ್ರನಾಥ್ ಟ್ಯಾಗೋರ್ ಅವರು ರಚಿಸಿದ ಜನಗಣಮನ ಈ ಗೀತೆಯ ಸಾಹಿತ್ಯದಲ್ಲಿ ಭಾರತದ ಸಂಸ್ಕೃತಿ ಮತ್ತು ವೈವಿಧ್ಯತೆ, ರಾಷ್ಟ್ರೀಯ ಪರಂಪರೆಯ, ದೇಶಭಕ್ತಿಯು ತುಂಬಿ ತುಳುಕುತ್ತಿದೆ.

ಜನಗಣಮನ ಗೀತೆಯನ್ನು ಮೊದಲು ಹಾಡಿದ್ದು ಯಾವಾಗ?

1911ರಲ್ಲಿ ಕೋಲ್ಕತ್ತದಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆಂದೇ ಈ ಹಾಡನ್ನು ರವೀಂದ್ರನಾಥ ಟ್ಯಾಗೋರರು ಸಂಯೋಜನೆ ಮಾಡಿದರು. ಹಾಡಿಗೆ ಭಾಗ್ಯವಿಧಾತ’ ಎಂದು ಹೆಸರಿಡಲಾಗಿತ್ತು. ಆದರೆ ಅದಕ್ಕಿಂತ ಮುನ್ನ ಪ್ರತಿಭಟನೆಗಳಲ್ಲಿ ವಂದೇ ಮಾತರಂ ಗೀತೆಯು ಗಟ್ಟಿಯಾಗಿ ಕೇಳಿಸುತ್ತಿತ್ತು. ಹೀಗಿರುವಾಗ 1911 ರ ಡಿಸೆಂಬರ್ 27ರಂದು ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಎರಡನೇ ದಿನ ಪ್ರಾರ್ಥನೆಯ ರೂಪದಲ್ಲಿ ಜನಗಣಮನವನ್ನು ಹಾಡಲಾಯಿತು. ಆ ದಿನದಂದು ಟ್ಯಾಗೋರರ ಸಹೋದರಿಯ ಮಗಳು ಸರಳಾದೇವಿ ಚೌಧುರಾಣಿ `ಜನಗಣಮನ ಗೀತೆಯನ್ನು ಹಾಡಿದ್ದರು. ಕೋಲ್ಕತಾ ಸಮ್ಮೇಳನದಲ್ಲಿ ಹಾಡಿದ ಜನಗಣಮನ ಹಾಡು ರಾಷ್ಟ್ರೀಯತೆಯನ್ನು ಪ್ರತಿಧ್ವನಿಸಿದ್ದು ಮಾತ್ರವಲ್ಲದೇ, ಅಲ್ಲಿ ಸೇರಿದ್ದವರನ್ನು ಭಾವುಕರನ್ನಾಗಿಸಿತ್ತು.

ರಾಷ್ಟ್ರಗೀತೆಯ ಒಳಅರ್ಥವೇನು?

ಟ್ಯಾಗೋರ್ ಅವರು ಹೇಳುವಂತೆ ಈ ಗೀತೆಯೂ “ಭಾರತದ ಭಾಗ್ಯ ವಿಧಾತ (ಅದೃಷ್ಟದ ದೇವರು) ಭಾರತದ ರಥದ ಹಿಡಿತವನ್ನು ದೃಢವಾಗಿ ಹಿಡಿದು ವಿಜಯವನ್ನು ಆಚರಿಸುತ್ತಾರೆ ಎನ್ನುವುದಾಗಿದೆ. ಆದರೆ ನಮ್ಮ ರಾಷ್ಟ್ರಗೀತೆಯ ಮೂಲ ಅರ್ಥವೇ ಬಹುತ್ವ. ಇದು ಸಂಸ್ಕೃತಿ, ಜಾತಿ ಮತ್ತು ಧರ್ಮದ ವ್ಯತ್ಯಾಸಗಳು ಮತ್ತು ಏಕತೆಯ ಭಾವನೆಯನ್ನು ಈ ಗೀತೆಯು ತಿಳಿಸುತ್ತದೆ.

ಇದನ್ನೂ ಓದಿ: ಚೆನ್ನಾಗಿ ಭಾಷಣ ಮಾಡಬೇಕು ಎನ್ನುವವರು ಈ ಸಲಹೆಯನ್ನು ಪಾಲಿಸಿ

ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಿಕೊಂಡಿದ್ದು ಯಾವಾಗ?

ಟ್ಯಾಗೋರರು 1919ರಲ್ಲಿ ಜನಗಣಮನ ಗೀತೆಯನ್ನು ಸ್ವತಃ ಇಂಗ್ಲೀಷ್ ಭಾಷೆಗೆ ಅನುವಾದಿಸಿದರು. ಇದಕ್ಕೆ ‘ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ’ ಎಂದು ಶೀರ್ಷಿಕೆ ಕೊಟ್ಟರು. ಆದರೆ ಇದರ ಮೂಲಗೀತೆಯನ್ನು ಸಂಸ್ಕೃತ ಭೂಯಿಷ್ಠ ಬಂಗಾಳಿ ಭಾಷೆಯಲ್ಲಿ ಟ್ಯಾಗೋರರು ಬರೆದಿದ್ದರು. ಐದು ಚರಣಗಳ ಹಾಡಿನಲ್ಲಿ ಮೊದಲ ಒಂದು ಚರಣವಷ್ಟೇ ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಿಕೊಳ್ಳಲಾಯಿತು.1950, ಜನವರಿ 24ರಂದು ಸಾಂವಿಧಾನಿಕ ಸಭೆಯಲ್ಲಿ ಈ ಗೀತೆಯನ್ನು ಭಾರತದ ರಾಷ್ಟ್ರಗೀತೆ ಎಂದು ಅನುಮೋದಿಸಲಾಯಿತು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು