Independence Day Speech Tips in Kannada: ಚೆನ್ನಾಗಿ ಭಾಷಣ ಮಾಡಬೇಕು ಎನ್ನುವವರು ಈ ಸಲಹೆಯನ್ನು ಪಾಲಿಸಿ
"ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ?" ಎಂಬ ಮಾತಿನಂತೆ ಚಿಕ್ಕ ವಯಸ್ಸಿನಲ್ಲಿ ಹೇಳಿ ಕೊಡದಿದ್ದರೆ ಮಕ್ಕಳು ದೊಡ್ಡವರಾದ ಮೇಲೆ ನಮ್ಮ ತಾಯ್ನಡಿನ ಬಗ್ಗೆ ತಿಳಿದುಕೊಳ್ಳಲು ಹೇಗೆ ಸಾಧ್ಯ? ಇದಕ್ಕೆ ಪೂರಕವಾಗಿ ಶಾಲೆಗಳಲ್ಲಿ ಭಾಷಣಗಳನ್ನು ಹೇಳಿ ಕೊಡಲಾಗುತ್ತದೆ, ಕೆಲವೊಮ್ಮೆ ಮಕ್ಕಳು ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡು ಮಾತನಾಡಬೇಕಾಗುತ್ತದೆ. ಆದರೆ ವೇದಿಕೆ ಮೇಲೆ ನಿಂತು, ಭಾಷಣ ಮಾಡುವುದು ಸುಲಭದ ಮಾತಲ್ಲ. ಮನಸ್ಸು ಮಾಡಿದರೆ ಕಷ್ಟವೂ ಅಲ್ಲ. ಹಾಗಾಗಿ ಯಾವ ರೀತಿ ಭಾಷಣ ಮಾಡಬೇಕು? ಅದನ್ನು ಬಂದಂತಹ ಅತಿಥಿಗಳ ಮುಂದೆ ಹೇಗೆ ಪ್ರಸ್ತುತ ಪಡಿಸಬೇಕು? ತಯಾರಿ ಹೇಗಿರಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯನಿಗೂ ಹಬ್ಬದ ದಿನ. ಅದಕ್ಕೊಂದು ವಿಶೇಷ ಸ್ಥಾನವಿದೆ. ಈ ದಿನದ ವಿಶೇಷತೆ, ಇತಿಹಾಸದ ಬಗ್ಗೆ ಮಕ್ಕಳಿಗೆ ಈಗಿನಿಂದಲೇ ತಿಳಿ ಹೇಳುವುದು ಬಹಳ ಮುಖ್ಯ. ಏಕೆಂದರೆ “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ?” ಎಂಬ ಮಾತಿನಂತೆ ಚಿಕ್ಕ ವಯಸ್ಸಿನಲ್ಲಿ ಹೇಳಿ ಕೊಡದಿದ್ದರೆ ಮಕ್ಕಳು ದೊಡ್ಡವರಾದ ಮೇಲೆ ನಮ್ಮ ತಾಯ್ನಡಿನ ಬಗ್ಗೆ ತಿಳಿದುಕೊಳ್ಳಲು ಹೇಗೆ ಸಾಧ್ಯ? ಇದಕ್ಕೆ ಪೂರಕವಾಗಿ ಶಾಲೆಗಳಲ್ಲಿ ಭಾಷಣಗಳನ್ನು ಹೇಳಿ ಕೊಡಲಾಗುತ್ತದೆ, ಕೆಲವೊಮ್ಮೆ ಮಕ್ಕಳು ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡು ಮಾತನಾಡಬೇಕಾಗುತ್ತದೆ. ಆದರೆ ವೇದಿಕೆ ಮೇಲೆ ನಿಂತು, ಭಾಷಣ ಮಾಡುವುದು ಸುಲಭದ ಮಾತಲ್ಲ. ಮನಸ್ಸು ಮಾಡಿದರೆ ಕಷ್ಟವೂ ಅಲ್ಲ. ಹಾಗಾಗಿ ಯಾವ ರೀತಿ ಭಾಷಣ ಮಾಡಬೇಕು? ಅದನ್ನು ಬಂದಂತಹ ಅತಿಥಿಗಳ ಮುಂದೆ ಹೇಗೆ ಪ್ರಸ್ತುತ ಪಡಿಸಬೇಕು? ತಯಾರಿ ಹೇಗಿರಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾಷಣ ಮಾಡುವುದು ಒಂದು ಕಲೆ. ಮನಸ್ಸು ಕೊಟ್ಟು ಮಾಡಿದರೆ, ವೇದಿಕೆ ನಿಮ್ಮದೆ ಆಗುತ್ತದೆ. ಆದರೆ ಹೆದರುತ್ತಾ ಬರೆದದ್ದನ್ನು ಕಂಠಪಾಠ ಮಾಡಿ ಹೇಳುವುದರಿಂದ ನೀವು ಹೇಳುತ್ತಿರುವ ವಿಷಯ ಚೆನ್ನಾಗಿದ್ದರೂ ಕೂಡ ನಿಮ್ಮ ಮುಂದೆ ಕುಳಿತಿರುವವರಿಗೆ ಅದನ್ನು ಕೇಳಲು ಇಷ್ಟವಾಗುವುದಿಲ್ಲ. ಹಾಗಾದರೆ ಭಾಷಣ ಎಲ್ಲರಿಗೂ ಇಷ್ಟವಾಗುವಂತೆ ಹೇಳುವುದು ಹೇಗೆ? ತಿಳಿಯಿರಿ.
- ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಒಂದು ದಿನ ಮಾತ್ರ ಬಾಕಿ ಇರುವುದರಿಂದ, ನೀವು ಮಾಡಬೇಕಾದ ಭಾಷಣ, ಅದರ ವಿಷಯದ ಬಗ್ಗೆ ಯಾವುದೇ ರೀತಿಯ ಸಂದೇಹ ಇರದಂತೆ ಮೊದಲು ಓದಿ, ಅರ್ಥ ಮಾಡಿಕೊಳ್ಳಿ.
- ನೀವು ಮಾಡುವ ಭಾಷಣ ತುಂಬಾ ಸರಳವಾಗಿರಲಿ, ಕಷ್ಟ ಅಥವಾ ಶಬ್ದದ ಅರ್ಥ ತಿಳಿಯದ ಪದ ಬಳಕೆ ಮಾಡಬೇಡಿ, ಏಕೆಂದರೆ ಇನ್ನೊಂದು ಮಕ್ಕಳಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಮತ್ತು ನಿಮಗೆ ಅದನ್ನು ಉಚ್ಚರಿಸಲು ಕೂಡ ಕಷ್ಟವಾಗುತ್ತದೆ.
- ನಿಮ್ಮ ಭಾಷಣದಲ್ಲಿ ಯಾವ ವಾಕ್ಯ ಮುಗಿದ ಬಳಿಕ ಯಾವ ವಿಷಯ ಬರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ ಇದರಿಂದ ಭಾಷಣ ನೆನಪಿನಲ್ಲಿ ಇರುವುದರ ಜೊತೆಗೆ ಜನರ ಮುಂದೆ ಅದನ್ನು ನಿರ್ಗಗಳವಾಗಿ ಮಾತನಾಡಲು ಸುಲಭವಾಗುತ್ತದೆ.
- ನಿಮ್ಮ ಭಾಷಣದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮತ್ತು ಅಂದಿನ ಪ್ರಮುಖ ಘಟನೆಗಳು ಅಥವಾ ತ್ಯಾಗವನ್ನು ನೆನಪು ಮಾಡಿಕೊಂಡು ಅದರ ಬಗ್ಗೆ ವಿವರವಾಗಿ ಹೇಳುವುದು ಒಳ್ಳೆಯದು.
- ನಿಮ್ಮ ಮುಂದೆ ನೆರೆದಿರುವ ಸಭಿಕರ ಗಮನ ಸೆಳೆಯಲು ನಿಮ್ಮ ಭಾಷಣದಲ್ಲಿ ಪ್ರಬಲವಾದ ಉಲ್ಲೇಖ ಅಥವಾ ಸ್ವಾತಂತ್ರ್ಯ ದಿನದ ಇತಿಹಾಸದ ಬಗ್ಗೆ ಅಥವಾ ಅಂದಿನ ದಿನಗಳ ಮೈ ನವಿರೇಳಿಸುವ ಘಟನೆಗಳ ಮೇಲೆ ಬೆಳಕು ಚೆಲ್ಲಿ.
- ರಾಷ್ಟ್ರದ ಭವಿಷ್ಯವನ್ನು ಧನಾತ್ಮಕವಾಗಿ ಪ್ರಭಾವಿಸುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ದೇಶ ಪ್ರೇಮಿಗಳನ್ನು ಪ್ರೇರೇಪಿಸುವಂತಹ ಮಾತುಗಳನ್ನಾಡಿ.
- ಇದೆಲ್ಲದಕ್ಕಿಂತ ಮುಖ್ಯವಾಗಿ ವೇದಿಕೆ ಮೇಲೆ ನಿಂತಾಗ ಹೆದರಬೇಡಿ. ಇದರಿಂದ ಏನು ಮಾತನಾಡಬೇಕು ಎಂಬುದು ಮರೆತು ಹೋಗುತ್ತದೆ. ಹಾಗಾಗಿ ವೇದಿಕೆ ಮೇಲೆ ಹೋಗುತ್ತಿದ್ದಂತೆ ಎಲ್ಲರನ್ನು ಒಮ್ಮೆ ನೋಡಿ ನಮಸ್ಕರಿಸಿ, ನಿಮ್ಮ ಭಾಷಣ ಆರಂಭಿಸಿ.
- ನಿಮಗೆ ಕೊಟ್ಟ ಅವಕಾಶ ಸದುಪಯೋಗಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಹಾಗಾಗಿ ನಿಮ್ಮ ಮುಂದೆ ಯಾರೇ ಕುಳಿತಿದ್ದರೂ ಅವರನ್ನು ನೋಡಿ ಹೆದರದೆಯೇ ಸರಿಯಾಗಿ ಮಾತನಾಡಿ. ನೀವು ತಿಳಿದಿರುವ ವಿಷಯವನ್ನು ಚೆನ್ನಾಗಿ ಹೇಳಲು ಪ್ರಯತ್ನಿಸಿ.
- ಆತ್ಮವಿಶ್ವಾಸ ಎಲ್ಲಕ್ಕಿಂತಲೂ ಮುಖ್ಯ. ಹಾಗಾಗಿ ಭಾಷಣ ಮಾಡುವಾಗ ಜನರನ್ನು ನೋಡಿ ಮಾತನಾಡಿ. ಇದರಿಂದ ನಿಮ್ಮ ಭಾಷಣ ಇನ್ನು ಚೆಂದವಾಗುತ್ತದೆ. ಕೇಳುವವರ ಮನಮುಟ್ಟುತ್ತದೆ.
ಪೋಷಕರ ಪಾತ್ರವೇನು?
ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ, ಪ್ರಬಂಧ ಬರೆಯುವ ಸ್ಪರ್ಧೆಗಳಲ್ಲಿ ನಿಮ್ಮ ಮಕ್ಕಳು ಚೆನ್ನಾಗಿ ಭಾಗವಹಿಸಲು ಪೋಷಕರ ಪಾತ್ರ ಬಹಳ ಮುಖ್ಯವಾಗುತ್ತದೆ. ಭಾಷಣ ಬರೆಯುವಾಗ ಮಕ್ಕಳಿಗೆ ಒಳ್ಳೆಯ ಸಲಹೆ ನೀಡಿ. ಬೇಕಾದರೆ ಮಕ್ಕಳಿಗೆ ವಿಷಯಗಳನ್ನು ಕಲೆಹಾಕಲು ಸಹಾಯ ಮಾಡಿ. ಮಕ್ಕಳ ಭಾಷಣದಲ್ಲಿ ಯಾವುದೇ ತಪ್ಪುಗಳು ಇರದಂತೆ ನೋಡಿಕೊಳ್ಳಿ. ನೀವು ಆತುರ ಪಡದೇ ಮಕ್ಕಳು ಯಾವ ರೀತಿ ಮಾತನಾಡಬೇಕು ಎಂಬುದನ್ನು ಅವರಿಗೆ ಸರಿಯಾಗಿ ಹೇಳಿಕೊಡಿ. ಆದಷ್ಟು ಅವರಿಗೆ ಆತ್ಮವಿಶ್ವಾಸ ತುಂಬಿ ಹುರಿದುಂಬಿಸಿ. ಇದು ದೊಡ್ಡ ಯುದ್ಧವಲ್ಲ ಎಂದು ಮನದಟ್ಟು ಮಾಡಿಸಿ, ವೇದಿಕೆ ಮೇಲೆ ಹೋದಾಗ ಆಗುವ ಆ ಭಯವನ್ನು ನಿವಾರಿಸಿ. ಜೊತೆಗೆ ನಿಮ್ಮ ಮಕ್ಕಳು, ನಾವು ಮೇಲೆ ಹೇಳಿರುವ ಸಲಹೆಗಳನ್ನು ಪಾಲಿಸುವಂತೆ ನೋಡಿಕೊಳ್ಳಿ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ