AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day 2024: ಆಗಸ್ಟ್ 14 ಭಾರತೀಯರ ಪಾಲಿಗೆ ಕರಾಳ ದಿನ ಏಕೆ? ಅಂದು ನಡೆದದ್ದೇನು?

Partition Horrors Remembrance Day 2024: ಭಾರತೀಯರಿಗೆ ಆಗಸ್ಟ್ 15 ಸಂಭ್ರಮವೋ ದಿನ, ಆದರೆ ಸ್ವಾತಂತ್ರ್ಯ ಪಡೆದ ಹಿಂದಿನ ದಿನ ಅಂದರೆ ಇಂದು ಕರಾಳ ದಿನವು ಕೂಡ ಆಗಿದೆ. ಹೌದು, ದೇಶದ ಜನರ ಮನಸ್ಸಿನಿಂದ ಇನ್ನೂ ದೇಶ ವಿಭಜನೆಯ ಕಾಲದಲ್ಲಿ ಮತ್ತು ನಂತರದಲ್ಲಾದ ಆ ದುರಂತಗಳು ಮಾಸಿಲ್ಲ. ಹೀಗಾಗಿಯೇ ಪ್ರತಿ ವರ್ಷ ಆಗಸ್ಟ್ 14ನ್ನು 'ದೇಶ ವಿಭಜನೆ ಕರಾಳ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

Independence Day 2024: ಆಗಸ್ಟ್ 14 ಭಾರತೀಯರ ಪಾಲಿಗೆ ಕರಾಳ ದಿನ ಏಕೆ? ಅಂದು ನಡೆದದ್ದೇನು?
ಇಂದು ಕರಾಳ ದಿನ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 14, 2024 | 9:52 AM

Share

ಸರಿಸುಮಾರು 200 ವರ್ಷಗಳ ಬ್ರಿಟಿಷರ ಆಳ್ವಿಕೆಯನ್ನು ಹೋಗಲಾಡಿಸಲು ಭಾರತದಲ್ಲಿ ಹಲವು ಹೋರಾಟಗಳು, ಸತ್ಯಾಗ್ರಹಗಳು, ರಕ್ತಪಾತಗಳು ನಡೆದವು. ಕೊನೆಗೂ ಬ್ರಿಟಿಷರನ್ನು ಭಾರತದಿಂದ ಓಡಿಸುವಲ್ಲಿ ಭಾರತೀಯರು ಯಶಸ್ವಿಯಾದರು. ಈ ವೇಳೆಯಲ್ಲಿ ಲಕ್ಷಾಂತರ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗನ್ನು ಮಾಡಿದರು. ಆದರೆ ಭಾರತವು ಸ್ವಾತಂತ್ರ್ಯವಾಯಿತು ಎನ್ನುವ ಸಂಭ್ರಮದ ನಡುವೆ ಆದರೆ ಅದಕ್ಕೂ ಮುನ್ನ ನಡೆದ ಹತ್ಯೆ, ಹಿಂಸೆ, ದಂಗೆ ಹಾಗೂ ಆತ್ಯಾಚಾರಗಳನ್ನೂ ಭಾರತ ದೇಶವು ಇವತ್ತಿಗೂ ಮರೆತಿಲ್ಲ. ಹೀಗಾಗಿ ಆಗಸ್ಟ್ 14 ರಂದು ವಿಭಜನೆಯ ಕರಾಳ ನೆನಪಿನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಭಜನೆಯ ಕರಾಳ ನೆನಪಿನ ದಿನವನ್ನು ಘೋಷಿಸಿದ್ದ ಮೋದಿ

2021 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ‘ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು. ದ್ವೇಷ ಮತ್ತು ಹಿಂಸಾಚಾರದಿಂದಾಗಿ ನಮ್ಮ ಲಕ್ಷಾಂತರ ಸಹೋದರ ಸಹೋದರಿಯರು ಸ್ಥಳಾಂತರಗೊಂಡಿದ್ದರು. ಅನೇಕರು ಪ್ರಾಣ ಕಳೆದುಕೊಂಡಿದ್ದರು. ನಮ್ಮ ಜನರು ಪಟ್ಟ ಪಾಡುಗಳು ಮತ್ತು ತ್ಯಾಗದ ನೆನಪಿಗಾಗಿ ಆಗಸ್ಟ್ 14 ಅನ್ನು ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಪರಿಗಣಿಸಲಾಗುವುದು’ ಎಂದು ಘೋಷಿಸಿದ್ದರು. ಅಂದಿನಿಂದ ಆಗಸ್ಟ್ 14 ರಂದು ವಿಭಜನೆಯ ಕರಾಳ ನೆನಪಿನ ದಿನವನ್ನಾ ಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ‘ಜನಗಣಮನ’ವನ್ನು ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಿಕೊಂಡದ್ದು ಹೇಗೆ? ಈ ಹಾಡಿನ ಅರ್ಥವೇನು?

ಆಗಸ್ಟ್ 14 ರ ಆ ದಿನ ನಡೆದಿದ್ದೇನು?

ಭಾರತದ ಇತಿಹಾಸದಲ್ಲಿ ಆಗಸ್ಟ್ 14 ರ ದಿನವು ಕಹಿ ನೆನಪಾಗಿಯೇ ಉಳಿದುಕೊಂಡಿದೆ. ಪಾಕಿಸ್ತಾನವನ್ನು 14 ಆಗಸ್ಟ್ 1947 ರಂದು ಮತ್ತು ಭಾರತವನ್ನು 15 ಆಗಸ್ಟ್ 1947 ರಂದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲಾಯಿತು. ಆದರೆ ಈ ವಿಭಜನೆಯ ಮೂಲಕ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಅದೇ ಈ ವೇಳೆಯಲ್ಲಿ ಕೋಟ್ಯಂತರ ಜನರ ಭಾವನೆಗಳಿಗೆ ಪೆಟ್ಟದದ್ದು ಮಾತ್ರವಲ್ಲದೇ ಸಂಬಂಧಗಳು ಮತ್ತು ಕುಟುಂಬಗಳೇ ದೂರವಾಯಿತು. ಆ ದಿನ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಂದ ದೂರವಾಗಿ ತಮ್ಮ ಜನ್ಮ ಭೂಮಿಯನ್ನೇ ಬಿಟ್ಟು ಲಕ್ಷಾಂತರ ಜನರು ಹೋಗುತ್ತಿದ್ದರು. ಈ ಸಮಯದಲ್ಲಿ ಯಾರಿಗೆ ಪಾಕಿಸ್ತಾನ ಸುರಕ್ಷಿತವೆನಿಸಿತ್ತೋ ಅವರು ಆ ಕಡೆಗೆ ಪ್ರಯಾಣ ಬೆಳೆಸಿದರೆ, ಭಾರತ ಸುರಕ್ಷಿತವೆನ್ನುವವರು ಈ ಕಡೆಗೆ ಬಂದರು. ಇದನ್ನೇ ಸಂದರ್ಭವಾಗಿ ಬಳಸಿಕೊಂಡ ಕೆಲವರು ಭಾವನೆಗಳನ್ನು ಪ್ರಚೋದಿಸುವ ಕೆಲಸವು ಮಾಡಿದರು. ಆದರೆ ಈ ವೇಳೆಯಲ್ಲೋ ದಂಗೆಗಳಾಗಿ ರಕ್ತಪಾತಕ್ಕೂ ಕಾರಣವಾಗಿ ಸರಿಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.

ಸ್ವಾತಂತ್ರ್ಯ ದಿನದ ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?