ಭಾರತವನ್ನು ವಿಭಜನೆ ಮಾಡಿದ ಹೊಣೆ ಯಾರಿಗೆ ನೀಡಬೇಕು?

Partition Horrors Remembrance Day 2024 : ಭಾರತೀಯರಿಗೆ ಆಗಸ್ಟ್ 15 ಸ್ವಾತಂತ್ರ್ಯದ ಸಿಕ್ಕ ಸಂಭ್ರಮದ ದಿನ. ಆದರೆ ಆಗಸ್ಟ್ 14 ಕರಾಳ ದಿನವಾಗಿದೆ. ಈ ದಿನದಂದು ಪಾಕಿಸ್ತಾನ ಹಾಗೂ ಭಾರತ ವಿಭಜನೆಯಾಗಿ ಸ್ವತಂತ್ರ್ಯ ರಾಷ್ಟ್ರವಾಗಿ ಘೋಷಣೆಯಾಯಿತು. ಆದರೆ ಈ ವಿಭಜನೆಯ ವೇಳೆ ಅನೇಕರ ಭಾವನೆಗಳಿಗೆ ನೋವಂಟಾಯಿತು. ದಂಗೆಗಳು ಇದ್ದವು, ರಕ್ತಪಾತದಿಂದಾಗಿ ಲಕ್ಷಾಂತರ ಜನರು ಪ್ರಾಣವನ್ನು ಕಳೆದುಕೊಂಡರು. ಆದರೆ ಭಾರತದ ವಿಭಜನೆಗೆ ಕಾರಣವಾದ ಆ ವ್ಯಕ್ತಿ ಯಾರು ಎನ್ನುವುದು ಇವತ್ತಿಗೂ ಪ್ರಶ್ನೆಯಾಗಿಯೇ ಉಳಿದಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತವನ್ನು ವಿಭಜನೆ ಮಾಡಿದ ಹೊಣೆ ಯಾರಿಗೆ ನೀಡಬೇಕು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 14, 2024 | 11:59 AM

ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯಕ್ಕೆ ಸಿಕ್ಕೇ ಬಿಟ್ಟಿತು. ಬ್ರಿಟಿಷರನ್ನು ಭಾರತದಿಂದ ಓಡಿಸುವಲ್ಲಿ ಭಾರತೀಯರು ಯಶಸ್ವಿಯಾದರು. ಭಾರತವು ಸ್ವಾತಂತ್ರ್ಯವಾಯಿತು ಎನ್ನುವ ಸಂಭ್ರಮದ ನಡುವೆ ಆಗಸ್ಟ್ 14 ರಂದು ನಡೆದ ಹಿಂಸೆ, ನೋವು ರಕ್ತಪಾತವನ್ನು ಭಾರತವು ಎಂದೆಂದಿಗೂ ಮರೆಯುವುದೇ ಇಲ್ಲ. ಹೀಗಾಗಿ 2021 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 14 ರಂದು ವಿಭಜನೆಯ ಕರಾಳ ನೆನಪಿನ ದಿನವನ್ನು ಘೋಷಿಸಿದ್ದರು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 14 ರಂದು ವಿಭಜನೆಯ ಕರಾಳ ನೆನಪಿನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ದೇಶ ವಿಭಜನೆಗೆ ಕಾರಣವಾದ ಆ ವ್ಯಕ್ತಿಯೂ ಇವರೇನಾ?

ದೇಶದ ವಿಭಜನೆಯ ದುರಂತಕ್ಕೆ ಬ್ರಿಟಿಷರ ‘ಒಡೆದು ಆಳುವ’ ನೀತಿಯೇ ಮೊದಲನೇ ಕಾರಣವಾಗಿತ್ತು. ಅವರಿಗೆ ವಿಧೇಯವಾಗಿ ಉಳಿಯುವ ಒಂದು ರಾಷ್ಟ್ರದ ಅವಶ್ಯಕತೆಯಿತ್ತು. ಹೀಗಾಗಿ ಬ್ರಿಟಿಷರ ತಾವು ಅಂದುಕೊಂಡದ್ದನ್ನು ಸಾಧಿಸಲು ದ್ವಿ-ರಾಷ್ಟ್ರ ಸಿದ್ಧಾಂತವನ್ನು ತಂದರು. ಈ ಸಿದ್ಧಾಂತವನ್ನು ಮೂಲತಃ ಪ್ರತಿಪಾದಿಸಿದವರು ಸಾವರ್ಕರ್. ಎರಡನೇ ಕಾರಣವಾಗಿ ಈ ನಡುವೆ ‘‘ಮುಸ್ಲಿಮರಿಗೊಂದು ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನ ಬೇಕು’’ ಎಂಬ ಜಿನ್ನಾರವರ ಹೇಳಿಕೆಯೂ ಸೇರಿಕೊಂಡಿತ್ತು. ಆದರೆ ಭಾರತದ ವಿಭಜನೆಗೆ ಗಾಂಧೀಜಿಯವರ ತೀವ್ರ ವಿರೋಧವಿತ್ತು ಎಂದು ಒಂದು ಕಡೆ ವಾದವಾಗಿತ್ತು.

ಜಿನ್ನಾ ಮತ್ತು ಸಾವರ್ಕರ್ ಪ್ರಕಾರ ಮುಸ್ಲಿಂ ಮತ್ತು ಹಿಂದೂ ಸಮುದಾಯಗಳು ವಿಭಿನ್ನವಾದ ರಾಷ್ಟ್ರೀಯತೆಗಳನ್ನು ಹೊಂದಿದ್ದು, ಹೀಗಾಗಿ ಈ ಸಮುದಾಯಗಳು ಒಂದು ರಾಷ್ಟ್ರವಾಗಿರಲು ಸಾಧ್ಯವಿಲ್ಲ ಎನ್ನುವ ಸಿದ್ಧಾಂತವಾಗಿತ್ತು. ಇನ್ನೊಂದೆಡೆ ಪ್ರಧಾನಿ ಪಟ್ಟವು ತಮಗೆ ಸಿಗಬೇಕೆನ್ನುವ ನೆಹರೂರವರ ಹೆಬ್ಬಯಕೆಯೂ ಕೂಡ ಭಾರತದ ವಿಭಜನೆಗೆ ಮೂರನೇ ಕಾರಣವಾಯಿತು ಎನ್ನಲಾಗಿದೆ.

ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡಲು ಮುಂದಾದ ಸಂದರ್ಭದಲ್ಲಿ ಭಾರತದ ಪ್ರಧಾನಿಗಳು ಯಾರಾಗಬೇಕೆಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ವೇಳೆಯಲ್ಲಿ ಸ್ವಾತ್ರ್ಯಂತ್ಯ ಹೋರಾಟದ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಮುಸ್ಲಿಂ ಲೀಗ್ ಈ ಎರಡು ಪಕ್ಷಗಳು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಈ ಎರಡು ಉಭಯ ಪಕ್ಷದವರಿದ್ದವರಿಗೆ ಪ್ರಧಾನಿ ಪಟ್ಟವು ತಮಗೆ ಸಿಗಬೇಕೆಂದು ಎನ್ನುವುದಿತ್ತು.

ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಬ್ಬಿದ್ದ ಕರ್ನಾಟಕದ ಸ್ಥಳಗಳಿವು

ಆ ಸಂದರ್ಭದಲ್ಲಿ ನೆಹರು ಅಧಿಕಾರದ ಆಸೆಗೆ ಬಲಿಯಾಗಿ 1940 ರಿಂದಲೂ ಧರ್ಮದ ಆಧಾರದ ಮೇಲೆ ಪ್ರತ್ಯೇಕ ದೇಶವನ್ನು ಬೇಡಿಕೆ ಇಡುತ್ತಿದ್ದ ಮೊಹಮ್ಮದ್ ಅಲಿ ಜಿನ್ನಾರವರ ಆ ಆಸೆಯನ್ನು ಮುಂದಿಟ್ಟುಕೊಂಡರು. ಈ ವೇಳೆಯಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ನೊಂದಿಗೆ ಉತ್ತಮ ಸ್ನೇಹವನ್ನು ನೆಹರು ಹೊಂದಿದ್ದರು. ಹೀಗಾಗಿ ಬ್ರಿಟಿಷರಿಂದ ಭಾರತದ ವಿಭಜನೆಯನ್ನು ಮಾಡಿಸಿಯೇ ಬಿಟ್ಟರು. ಈ ವೇಳೆಯಲ್ಲಿ ಭಾರತ ಹಾಗೂ ಪಾಕಿಸ್ತಾನವು ಎರಡು ರಾಷ್ಟ್ರಗಳು ಹುಟ್ಟಿಕೊಳ್ಳಲು ಕಾರಣವಾಯಿತು ಎನ್ನಲಾಗಿದೆ.

ಸ್ವಾತಂತ್ರ್ಯ ದಿನದ ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
ಲಾರಿಯಡಿ ಸಿಲುಕಿದ ಬೈಕ್; ಪವಾಡದಂತೆ ಬಚಾವಾದ ಚಾಲಕ
ಲಾರಿಯಡಿ ಸಿಲುಕಿದ ಬೈಕ್; ಪವಾಡದಂತೆ ಬಚಾವಾದ ಚಾಲಕ