AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಕ್ತದ ಗುಂಪಿನ ಜನರು ಪ್ರೀತಿಯಲ್ಲಿ ಹೆಚ್ಚು ಮೋಸ ಹೋಗುತ್ತಾರಂತೆ

ಸಂಗಾತಿಯಿದ್ದರೂ ಇತರರ ಮೋಹಕ್ಕೆ ಸಿಲುಕಿ ಸಂಗಾತಿಗೆ ಮೋಸ ಮಾಡುವವರು ಒಂದು ಕಡೆಯಾದರೆ, ಪ್ರತಿ ಬಾರಿಯೂ ಪ್ರೀತಿಯಲ್ಲಿ ಮೋಸ ಹೋಗುವವರು ಇನ್ನೊಂದು ಕಡೆ. ಅದರಲ್ಲೂ ಈ ರಕ್ತದ ಗುಂಪಿನ ಜನರು ಪ್ರೀತಿಯಲ್ಲಿ ಮೋಸ ಹೋಗೋದು ಜಾಸ್ತಿಯಂತೆ. ಹಾಗಾದ್ರೆ ಯಾವ ರಕ್ತದ ಗುಂಪಿನ ಜನರು ಲವ್‌ ವಿಷಯದಲ್ಲಿ ಮೋಸ ಹೋಗುತ್ತಾರೆ ಎಂಬುದನ್ನು ನೋಡೋಣ ಬನ್ನಿ.

ಈ ರಕ್ತದ ಗುಂಪಿನ ಜನರು ಪ್ರೀತಿಯಲ್ಲಿ ಹೆಚ್ಚು ಮೋಸ ಹೋಗುತ್ತಾರಂತೆ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 20, 2025 | 8:06 PM

Share

ಮಾನವನ ದೇಹದಲ್ಲಿ ರಕ್ತ ಬಹು ಮುಖ್ಯ ಪಾತ್ರ ವಹಿಸುತ್ತದೆ. A+, A-, AB+, AB-, O+, O- ಇವಿಷ್ಟು ರಕ್ತದ ಗುಂಪುಗಳಾಗಿದ್ದು (blood group), ಒಬ್ಬಬ್ಬರ ದೇಹದಲ್ಲಿ ಒಂದೊಂದು ಗುಂಪಿನ ರಕ್ತವಿರುತ್ತದೆ.. ಈ ರಕ್ತದ ಗುಂಪಿನ ಆಧಾರದ ಮೇಲೆ ವ್ಯಕ್ತಿಗಳ ವ್ಯಕ್ತಿತ್ವವನ್ನು ಸಹ ತಿಳಿಯಬಹುದಾಗಿದೆ ಅಲ್ವಾ. ಅದೇ ರೀತಿ ಈ ಬ್ಲಡ್‌ ಗ್ರೂಪ್‌ ಮುಖಾಂತರ ಪ್ರೀತಿಯಲ್ಲಿ ಅತೀ ಹೆಚ್ಚು ಮೋಸ ಹೋಗೋರು ಯಾರು ಎಂಬುವುದನ್ನು ಸಹ ತಿಳಿಯಬಹುದಂತೆ. ವ್ಯಕ್ತಿತ್ವ ಪರೀಕ್ಷೆಯಂತಹ ಕೆಲವೊಂದು ವಿಧಾನಗಳ ಮೂಲಕ ನಾವು ನಮ್ಮ ಲವ್‌ ಲೈಫ್‌ ಹೇಗಿದೆ ಎಂಬುದನ್ನು ತಿಳಿಯುವಂತೆ ರಕ್ತದ ಗುಂಪಿನ ಮೂಲಕ  ಸಹ ಪ್ರೀತಿಯಲ್ಲಿ ಯಾರು ಹೆಚ್ಚು ಮೋಸ ಹೋಗುತ್ತಾರೆ ಎಂಬುದನ್ನು ನೋಡಬಹುದಂತೆ. ಹಾಗಿದ್ರೆ ಯಾವ ರಕ್ತದ ಗುಂಪಿನ ಜನರು ಹೆಚ್ಚಾಗಿ ಪ್ರೀತಿ ವಿಷಯದಲ್ಲಿ ಮೋಸ ಹೋಗುತ್ತಾರೆ ಎಂಬುವುದನ್ನು ನೋಡೋಣ ಬನ್ನಿ.

ಯಾವ ರಕ್ತದ ಗುಂಪಿನ ಜನರು ಪ್ರೀತಿಯಲ್ಲಿ ಹೆಚ್ಚು ಮೋಸ ಹೋಗುತ್ತಾರೆ:

ʼOʼ ರಕ್ತದ ಗುಂಪಿನ ಜನರು ಹೆಚ್ಚಾಗಿ ಪ್ರೀತಿಯಲ್ಲಿ ಮೋಸ ಹೋಗುತ್ತಾರಂತೆ. ಹೌದು ಇವರು ಇತರರನ್ನು ಸುಲಭವಾಗಿ ನಂಬುವ ಕಾರಣ ಮತ್ತೆ ಮತ್ತೆ ಮೋಸ ಹೋಗುತ್ತಾರೆ. ಪ್ರೀತಿಯ ವಿಷಯದಲ್ಲಿ ತುಂಬಾನೇ ಗಂಭೀರವಾಗಿರುವ ಇವರು ತಮ್ಮ ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಎಷ್ಟೇ ಪ್ರೀತಿ ತೋರಿಸಿದರು ಇವರು ಪ್ರೀತಿಯಲ್ಲಿ ಮೋಸ ಹೋಗುವುದೇ ಹೆಚ್ಚು. ಆದರೆ ಇದು ಎಷ್ಟು ಸತ್ಯ ಎಂಬುದು ಗೊತ್ತಿಲ್ಲ.

O ರಕ್ತದ ಗುಂಪಿನ ಜನರ ಸ್ವಭಾವ:

O ರಕ್ತದ ಗುಂಪಿನ ಜನರ ಸ್ವಭಾವದ ಬಗ್ಗೆ ನೋಡುವುದಾದರೆ ಇವರು ಯಾವಾಗಲೂ ಇತರರಿಗೆ ಸಹಾಯ ಮಾಡುವುದರಲ್ಲಿ ಖುಷಿ ಕಾಣುತ್ತಾರೆ. ಹೌದು ಇವರು ತಮ್ಮ ಇಡೀ ಜೀವನವನ್ನು ಇತರರಿಗೆ ಸಹಾಯ ಮಾಡುವುದರಲ್ಲಿ ಕಳೆಯಲು ಇಷ್ಟಪಡುತ್ತಾರಂತೆ. ಸ್ವಭಾವತಃ ಹರ್ಷಚಿತ್ತದಿಂದ ಕೂಡಿರುವ  O ರಕ್ತದ ಗುಂಪಿನ ಜನರು ಎಲ್ಲರೊಂದಿಗೂ ಬಹು ಬೇಗನೆ ಬೆರೆಯುತ್ತಾರೆ. ಜೊತೆಗೆ ಇವರು ತಮ್ಮವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ
Image
ಅಕ್ಕಿಯನ್ನು ತೊಳೆಯದೆ ಅನ್ನ ಮಾಡಿದ್ರೆ ಏನಾಗುತ್ತೆ ಗೊತ್ತಾ?
Image
ಜನ ಬಹು ಬೇಗನೆ ಕೆಟ್ಟ ಚಟಗಳಿಗೆ ದಾಸರಾಗುವುದು ಏಕೆ ಗೊತ್ತಾ?
Image
ಬೆಳಿಗ್ಗೆ ನೀವು ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗುತ್ತದೆ
Image
ಈ ಅಭ್ಯಾಸಗಳಿದ್ದರೆ ಶ್ರೀಮಂತಿಕೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ

ಇದನ್ನೂ ಓದಿ: ನಿಮ್ಮ ಭಾವನೆ ಎಂತಹದ್ದು ಎಂಬುದನ್ನು ನಿಮ್ಮಿಷ್ಟದ ಬಣ್ಣದ ಉಡುಗೆಯಿಂದ ತಿಳಿಯಿರಿ

ಪ್ರೀತಿಯಲ್ಲಿ ಮೋಸ ಹೋದರೂ ಕೂಡಾ O ರಕ್ತದ ಗುಂಪಿನ ಜನರು ತುಂಬಾ ಸಕಾರಾತ್ಮಕ ಮತ್ತು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಕಠಿಣ ಪರಿಶ್ರಮವನ್ನು ಹೊಂದಿರುವ ಇವರು ಉತ್ತಮ ನಾಯಕತ್ವದ ಗುಣಗಳನ್ನು ಸಹ ಹೊಂದಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ