AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಸಿಕ್ಕಾಪಟ್ಟೆ ಬುದ್ಧಿವಂತರು; ಬೆಕ್ಕು ಪ್ರಿಯರ ನಿಗೂಢ ಗುಣ ಸ್ವಭಾವ ಹೇಗಿದೆ ಗೊತ್ತಾ?

ಕೆಲವರು ನಾಯಿಗಳನ್ನು ಸಾಕಲು ಇಷ್ಟಪಟ್ಟರೆ, ಇನ್ನೂ ಕೆಲವರಿಗೆ ಬೆಕ್ಕುಗಳೆಂದರೆ ಪಂಚಪ್ರಾಣ. ನಾಯಿಗಳನ್ನು ಸಾಕುವ ಜನರು ಶಿಸ್ತುಬದ್ಧರಾಗಿತ್ತಾರೆ ಎಂದು ಹೇಳಲಾಗುತ್ತದೆ. ಅದೇ ರೀತಿ ಬೆಕ್ಕುಗಳನ್ನು ಸಾಕುವವರು ಕೂಡ ವಿಭಿನ್ನ ಗುಣ ಸ್ವಭಾವಗಳನ್ನು ಹೊಂದಿರುತ್ತಾರಂತೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಮಾರ್ಜಾಲ ಪ್ರೇಮಿಗಳ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯೋಣ.

Personality Test: ಸಿಕ್ಕಾಪಟ್ಟೆ ಬುದ್ಧಿವಂತರು; ಬೆಕ್ಕು ಪ್ರಿಯರ ನಿಗೂಢ  ಗುಣ ಸ್ವಭಾವ ಹೇಗಿದೆ ಗೊತ್ತಾ?
ವ್ಯಕ್ತಿತ್ವ ಪರೀಕ್ಷೆImage Credit source: freepik
ಮಾಲಾಶ್ರೀ ಅಂಚನ್​
|

Updated on: Oct 13, 2025 | 3:37 PM

Share

ಸಾಮಾನ್ಯವಾಗಿ ವ್ಯಕ್ತಿಯ ನಡವಳಿಕೆ, ಆತ ಧರಿಸುವ ಬಟ್ಟೆಯಿಂದ ಆತನ ವ್ಯಕ್ತಿತ್ವವನ್ನು (Personality) ಅಳೆಯಲಾಗುತ್ತದೆ. ಇದರ ಹೊರತಾಗಿ ಹಸ್ತ ರೇಖೆ, ಕೈ ಬೆರಳಿನ ಆಕಾರ, ಪಾದದ ಆಕಾರ, ಕೂದಲಿನ ಆಕಾರ ಮೂಗಿನ ಆಕಾರ ಸೇರಿದಂತೆ ದೇಹಕಾರ, ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ನಂತಹ ವ್ಯಕ್ತಿತ್ವ ಪರೀಕ್ಷೆ ವಿಧಾನಗಳ ಮೂಲಕವೂ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ಪರೀಕ್ಷೆ ಮಾಡಬಹುದು. ಅದೇ ರೀತಿ ಬೆಕ್ಕನ್ನು ಪ್ರೀತಿಸುವವರು ಹೇಗಿರುತ್ತಾರೆ ಎಂಬುದನ್ನು ಸಹ ಪರ್ಸನಾಲಿಟಿ ಟೆಸ್ಟ್‌ ಮೂಲಕ ತಿಳಿಯಬಹುದಂತೆ. ಹೌದು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ​​4,655 ಜನರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಶ್ವಾನ ಪ್ರಿಯರು  ಹೆಚ್ಚು ಶಿಸ್ತುಬದ್ಧರು ಮತ್ತು ಸಾಮಾಜಿಕವಾಗಿ ಬೆರೆಯುವಂತೆ ಬೆಕ್ಕು ಪ್ರಿಯರು ಹೆಚ್ಚಾಗಿ ಮುಕ್ತ ಮನಸ್ಸಿನವರು, ಸೃಜನಶೀಲರು ಮತ್ತು ಸ್ವತಂತ್ರರಾಗಿರಲು ಬಯಸುತ್ತಾರೆ ಎಂಬುದನ್ನು ತಿಳಿಸಿದೆ. ಮಾರ್ಜಾಲ ಪ್ರಿಯರ ವ್ಯಕ್ತಿತ್ವ ರಹಸ್ಯಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬೆಕ್ಕು ಪ್ರಿಯರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?

ಬುದ್ಧಿವಂತ ಮತ್ತು ಸೃಜನಶೀಲ: ಬೆಕ್ಕು ಪ್ರಿಯರನ್ನು ಸಾಮಾನ್ಯವಾಗಿ ಬುದ್ಧಿವಂತರು ಮತ್ತು ಸೃಜನಶೀಲರು ಎಂದು ಪರಿಗಣಿಸಲಾಗುತ್ತದೆ. ಅವರು ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ಹೊಂದಿರುತ್ತಾರೆ.

ಸ್ವತಂತ್ರ ಚಿಂತಕರು: ಬೆಕ್ಕುಗಳು ಸ್ವತಂತ್ರ ಜೀವಿಗಳು. ಅದೇ ರೀತಿ ಬೆಕ್ಕು ಪ್ರೇಮಿಗಳು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಬೇರೆಯವರ ಮೇಲೆ ಅವಲಂಬಿತವಾಗಲು ಇಷ್ಟಪಡುವುದಿಲ್ಲ. ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ತಮ್ಮದೇ ಆದ ನಿಯಮಗಳ ಮೇಲೆ ಜೀವನವನ್ನು ನಡೆಸಲು ಬಯಸುತ್ತಾರೆ.

ಇದನ್ನೂ ಓದಿ
Image
ಪ್ರೀತಿ-ಪ್ರೇಮದ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗಿದೆ ತಿಳಿಯಿರಿ
Image
ನಿಮ್ಮ ನಿಗೂಢ ಮನಸ್ಥಿತಿ ಹೇಗಿದೆ ಎಂಬುದನ್ನು ಈ ಚಿತ್ರವೇ ತಿಳಿಸುತ್ತದೆ
Image
ಈ ಚಿತ್ರದಲ್ಲಿ ಯಾವ ಚೆಂಡು ದೊಡ್ಡದಾಗಿ ಕಾಣಿಸುತ್ತಿದೆ?
Image
ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಈ ಚಿತ್ರವೇ ಬಹಿರಂಗಪಡಿಸುತ್ತದೆ

ಶಾಂತತೆ ಮತ್ತು ತಿಳುವಳಿಕೆ: ಬೆಕ್ಕು ಪ್ರಿಯರ ಇನ್ನೊಂದು ಗುಣ ಸ್ವಭಾವ ಏನೆಂದರೆ ಅವರು ಅನಗತ್ಯ ವಾದಗಳು ಮತ್ತು ಜಗಳಗಳನ್ನು ತಪ್ಪಿಸುತ್ತಾರೆ. ಅವರು ಶಾಂತ ಮತ್ತು ಸಂಯಮದಿಂದ ಕೂಡಿರುತ್ತಾರೆ ಮತ್ತು ಯಾವುದೇ ಸಂದರ್ಭದಲ್ಲಿಯಾದರೂ ಸರಿ ಸ್ಪಷ್ಟ ತಿಳುವಳಿಕೆಯ ಆಧಾರದ ಮೇಲೆ  ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಅದ್ಭುತ ವೀಕ್ಷಣಾ ಕೌಶಲ್ಯ: ಬೆಕ್ಕು ಪ್ರಿಯರು ಅತ್ಯುತ್ತಮ ವೀಕ್ಷಣಾ ಕೌಶಲ್ಯವನ್ನು ಹೊಂದಿದ್ದಾರೆ. ಅವರು ಸಣ್ಣ ವಿವರಗಳಿಗೂ ಗಮನ ಕೊಡುತ್ತಾರೆ ಮತ್ತು ಜನರ ದೇಹ ಭಾಷೆ ಮತ್ತು ಭಾವನೆಗಳನ್ನು ಬೇಗನೆ ಗ್ರಹಿಸುತ್ತಾರೆ.

ಮುಕ್ತ ಮನೋಭಾವ ಮತ್ತು ಸಾಹಸಪ್ರಿಯರು: ಬೆಕ್ಕುಗಳು ತಮಾಷೆಯಾಗಿ ಮುಕ್ತವಾಗಿ ಮತ್ತು ಸಾಹಸಮಯವಾಗಿರುವಂತೆಯೇ ಮಾರ್ಜಾಲ ಪ್ರೇಮಿಗಳು ಸಹ ಹೊಸ ವಿಷಯಗಳನ್ನು ಅನ್ವೇಷಿಸಲು ಅಷ್ಟೇ ಉತ್ಸುಕರಾಗಿರುತ್ತಾರೆ. ಜೀವನದಲ್ಲಿ ಪ್ರತಿಯೊಂದು ಅವಕಾಶವನ್ನು ಹೇಗೆ ಆನಂದಿಸಬೇಕೆಂದು ಅವರಿಗೆ ತಿಳಿದಿದೆ.

ತಾಳ್ಮೆ: ಬೆಕ್ಕು ಪ್ರಿಯರು ತಾಳ್ಮೆಯಿಂದಿರುತ್ತಾರೆ. ಹೌದು ಹೆಚ್ಚಿನ ಸಮಯದಲ್ಲಿ  ಅವರು ಶಾಂತ ಸ್ಥಿತಿಯಲ್ಲಿಯೇ ಇರುತ್ತಾರೆ. ಸುಖಾ ಸುಮ್ಮನೆ ಕೋಪ ಮಾಡಿಕೊಳ್ಳುವುದಿಲ್ಲ.

ಭಾವನಾತ್ಮಕವಾಗಿ ಬಲಶಾಲಿಗಳು: ಬೆಕ್ಕು ಪ್ರಿಯರು ಬಲವಾದ ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಕಷ್ಟಕರ ಸಂದರ್ಭಗಳಲ್ಲಿಯೂ ಸಹ ತಮ್ಮ ಭಾವನೆಗಳನ್ನು ಹೇಗೆ ಸಮತೋಲನಗೊಳಿಸುವುದು ಮತ್ತು ಶಾಂತತೆಯನ್ನು ಕಾಪಾಡಿಕೊಳ್ಳುವುದು ಅವರಿಗೆ ತಿಳಿದಿದೆ.

ಪ್ರೀತಿಯ ಮತ್ತು ಕಾಳಜಿಯುಳ್ಳ ಸ್ವಭಾವ: ಬೆಕ್ಕು ಪ್ರಿಯರು ತಮ್ಮವರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರು ತಮ್ಮ ಪ್ರಾಣಿಗಳ ಮೇಲೆ ಮಾತ್ರವಲ್ಲದೆ ತಮ್ಮ ಪ್ರೀತಿಪಾತ್ರರ ಮೇಲೂ ಆಳವಾದ ಬಾಂಧವ್ಯ ಹೊಂದಿರುತ್ತಾರೆ.

ಇದನ್ನೂ ಓದಿ: ಪ್ರೀತಿ-ಪ್ರೇಮದ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗಿದೆ ಎಂಬುದನ್ನು ಚಿತ್ರದ ಮೂಲಕ ತಿಳಿಯಿರಿ

ಹಾಸ್ಯಮಯ ಮತ್ತು ಹರ್ಷಚಿತ್ತ ಸ್ವಭಾವ: ಬೆಕ್ಕುಗಳು ತುಂಟತನದಿಂದ ಕೂಡಿರುತ್ತವೆ. ಅದೇ ರೀತಿ ಬೆಕ್ಕು ಪ್ರಿಯರು  ಯಾವಾಗಲೂ ನಗುವ ಮತ್ತು ಇತರರನ್ನು ನಗಿಸುವ ಒಳ್ಳೆಯ ಮನಸ್ಥಿತಿಯನ್ನು ಹೊಂದಿರುತ್ತಾರೆ.

ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ: ಬೆಕ್ಕು ಪ್ರಿಯರು ತುಂಬಾನೇ ಜವಾಬ್ದಾರರು. ಅವರು ತಮ್ಮ ಸಾಕು ಬೆಕ್ಕುಗಳನ್ನು ಮತ್ತು ಅವರ ಸುತ್ತಮುತ್ತಲಿನವರನ್ನು ಸಮಗ್ರತೆ ಮತ್ತು ಜವಾಬ್ದಾರಿಯಿಂದ ನೋಡಿಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ