Rabindranath tagore’s Death Anniversary: ರವೀಂದ್ರನಾಥ ಠಾಗೋರ್ ಪುಣ್ಯತಿಥಿ, ಅವರ ಪ್ರೇರಕ ಮಾತುಗಳು ನಿಮ್ಮ ಜೀವನಕ್ಕೆ ಹೊಸ ದೃಷ್ಟಿಕೋನ ನೀಡಬಹುದು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 07, 2023 | 12:26 PM

ಇಂದು ಮಹಾನ್ ಲೇಖಕ ರವೀಂದ್ರನಾಥ ಠಾಗೋರ್ ಅವರ ಪುಣ್ಯತಿಥಿ. ಅವರು ಆಗಸ್ಟ್ 7, 1941 ರಂದು ಇಹಲೋಕ ತ್ಯಜಿಸಿದರು. ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ಒಡೆಯರಾಗಿದ್ದ, ಈ ಮಹಾನ್ ಕವಿಯ ಪುಣ್ಯತಿಥಿಯ ಈ ದಿನದಂದು ಅವರ ಜೀವನ ಮತ್ತು ಅವರು ಜಗತ್ತಿಗೆ ಸಾರೀದ ಸ್ಪೂರ್ತಿದಾಯಕ ಮಾತುಗಳ ಬಗ್ಗೆ ತಿಳಿದುಕೊಳ್ಳೋಣ.

Rabindranath tagore’s Death Anniversary: ರವೀಂದ್ರನಾಥ ಠಾಗೋರ್ ಪುಣ್ಯತಿಥಿ, ಅವರ ಪ್ರೇರಕ ಮಾತುಗಳು ನಿಮ್ಮ ಜೀವನಕ್ಕೆ ಹೊಸ ದೃಷ್ಟಿಕೋನ ನೀಡಬಹುದು
ರವೀಂದ್ರನಾಥ ಠಾಗೋರ್
Follow us on

ನೊಬೆಲ್ ಪ್ರಶಸ್ತಿ ವಿಜೇತ, ಮಹಾನ್ ಕವಿ ರವೀಂದ್ರನಾಥ ಠಾಗೋರ್ (Rabindranath tagore) ಅವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಅವರೊಬ್ಬ ಶ್ರೇಷ್ಠ ಕವಿ ಮಾತ್ರವಲ್ಲದೆ ಮಾನವತವಾದಿಯಾಗಿದ್ದವರು. ತಮ್ಮ ಜೀವನದಲ್ಲಿ ಮಾನವೀಯತೆಗೆ ಮೊದಲ ಆದ್ಯತೆಯನ್ನು ನೀಡಿದವರು. ಭಾರತದ ರಾಷ್ಟ್ರಗೀತೆಯ ಸೃಷ್ಟಿಕರ್ತರಾದ ಇವರು 2000ಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದಾರೆ. ಹಾಗೂ ಹಲವಾರು ಕೃತಿಗಳನ್ನು ಕೂಡ ರಚಿಸಿದ್ದಾರೆ. ಭಾರತದ ಜನಪ್ರಿಯ ಕವಿಯಾದ ಠಾಗೋರ್ ಅವರು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯರಾಗಿದ್ದಾರೆ. ಇಂದು ಈ ಮಹಾನ್ ಕವಿಯ ಪುಣ್ಯತಿಥಿ. ಅವರ ಜೀವನ ಕುರಿತ ಕೆಲವೊಂದು ಸಂಗತಿಗಳು ಹಾಗೂ ಅವರ ಸ್ಪೂರ್ತಿದಾಯಕ ಮಾತುಗಳ ಕುರಿತ ಮಾಹಿತಿಯನ್ನು ತಿಳಿದುಕೊಳ್ಳೋಣ.

ರವೀಂದ್ರನಾಥ ಠಾಗೋರ್ ಅವರು 1861ರ ಮೇ 8ರಂದು ಜನಿಸಿದರು. ಅವರ ತಂದೆಯ ಹೆಸರು ದೇಬೇಂದರನಾಥ ಠಾಗೋರ್ ಮತ್ತು ತಾಯಿ ಶಾರದಾ ದೇವಿ. ಅವರ ತಂದೆಯೂ ಕೂಡ ಶ್ರೇಷ್ಠ ಚಿಂತಕ ಮತ್ತು ಸಂಸ್ಕೃತಿಯ ಪ್ರೇಮಿ. ಠಾಗೋರ್ ಅವರ ಇಡೀ ಕುಟುಂಬವೇ ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಗಳಲ್ಲಿ ಬಲವಾದ ಆಸಕ್ತಿಯನ್ನು ಹೊಂದಿದ್ದರು. ಇದೇ ಠಾಗೋರ್ ಅವರಿಗೂ ಬಳುವಳಿಯಾಗಿ ಬಂದಿತ್ತು. ಅವರು ಬಾಲ್ಯದಲ್ಲಿಯೇ ಕಲೆ ಮತ್ತು ಸಾಹಿತ್ಯದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದರು. ಮತ್ತು ಅವರು ತಮ್ಮ ಜೀವನದುದ್ದಕ್ಕೂ ಸಾಹಿತ್ಯ ಮತ್ತು ಕಲಾಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿದರು.

ಠಾಗೋರ್ ಅವರ ಶಿಕ್ಷಣದ ಬಗ್ಗೆ ನೋಡುವುದಾದರೆ ಕೋಲ್ಕತ್ತಾದ ಸೆಂಟ್ ಕ್ಸೇವಿಯರ್ಕ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಬ್ಯಾರಿಸ್ಟರ್ (ವಕೀಲ) ಆಗುವ ಕನಸಿನೊಂದಿಗೆ 1878ರಲ್ಲಿ ಇಂಗ್ಲೇಂಡ್​​ನ ಬ್ರಿಡ್ಜ್ ಟನ್​​​ನಲ್ಲಿರುವ ಸರ್ಕಾರಿ ಶಾಲೆಗೆ ಸೇರಿದರು. ನಂತರ ಅವರು ಲಂಡನ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದರು. ಆದರೆ 1880ರಲ್ಲಿ ಪದವಿ ಪಡೆಯದೆ ಭಾರತಕ್ಕೆ ಮರಳಿ ಬಂದರು.

ರಾಷ್ಟ್ರೀಯತೆಗಿಂದ ಮಾನವೀಯತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದ ರವೀಂದ್ರನಾಥ ಠಾಗೋರ್ ಅವರು 1901ರಲ್ಲಿ ಶಾಂತಿನಿಕೇತನ ಕಾಲೇಜನ್ನು ಸ್ಥಾಪಿಸಿದರು. ಈ ಕಾಲೇಜನ್ನು ಅವರ ತಂದೆ ಮಹರ್ಷಿ ದೇಬೇಂದ್ರನಾಥ ಟಾಗೋರ್ ಅವರ ಸಾಹಿತ್ಯ ಮತ್ತು ಸಂಸ್ಕೃತಿಯ ಕಲ್ಪನೆಗಳ ಆಧಾರದ ಮೇಲೆ ನಿರ್ಮಿಸಲಾಯಿತು. ಈ ಶಾಲೆಯಲ್ಲಿ ಸಂಸ್ಕೃತಿ ಕಲೆ ಮತ್ತು ವಿಜ್ಞಾನದೊಂದಿಗೆ ಶಿಕ್ಷಣದ ಅದ್ಭುತ ಸಂಗಮವನ್ನು ಸಾಧಿಸಲಾಯಿತು. ಅವರ ಶಾಂತಿನಿಕೇತನ ಕಾಲೇಜು ಹೊಸ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಮೂಲಕ ಭಾರತೀಯ ಶಿಕ್ಷಣವನ್ನು ಸುಧಾರಿಸಿತು ಮತ್ತು ಅವರು ಪ್ರಪಂಚದಾದ್ಯಂತ ತಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಗುರುತಿನ ಛಾಪನ್ನು ಮೂಡಿಸಿದರು.

ರವಿಂದ್ರನಾಥ ಅವರ ನಿಧನ:

ರವೀಂದ್ರನಾಥ ಠಾಗೋರ್ ಗಂಭೀರ ಕಾಯಿಲೆಯಿಂದ ತಮ್ಮ ಜೀವನದ ಕೊನೆಯ 4 ವರ್ಷಗಳನ್ನು ಬಹಳ ನೋವಿನಿಂದ ಕಳೆದರು ಮತ್ತು ಅವರು ಆಗಸ್ಟ್ 7, 1941ರಂದು ಕೊಲ್ಕತ್ತಾದಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

ಇದನ್ನೂ ಓದಿ: ರವೀಂದ್ರನಾಥ ಟ್ಯಾಗೋರ್ ಅವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ

ರವೀಂದ್ರನಾಥ ಠಾಗೋರ್ ಅವರ ಸ್ಪೂರ್ಥಿದಾಯಕ ಮಾತುಗಳು:

ಸಂತೋಷವಾಗಿರುವುದು ತುಂಬಾ ಸರಳ, ಆದರೆ ಸರಳವಾಗಿರುವುದು ತುಂಬಾ ಕಷ್ಟ: ಈ ಸಂದೇಶ ನಿಜಕ್ಕೂ ಸ್ಪೂರ್ತಿದಾಯಕವಾದದ್ದು. ಪ್ರತಿಯೊಬ್ಬ ಮನುಷ್ಯನೂ ಇದನ್ನು ಅರಿತು ಬಾಳಿದರೆ ಜೀವನ ಸುಂದರಮಯವಾಗಿರುತ್ತದೆ. ಜೀವನದಲ್ಲಿ ಸರಳ ವ್ಯಕ್ತಿತ್ವವನ್ನು ರೂಪಿಸಿದಷ್ಟು ಜೀವನ ಸುಂದರವಾಗಿರುತ್ತದೆ.

ಉಪದೇಶಿಸುವುದು ತುಂಬಾ ಸುಲಭ, ಆದರೆ ಪರಿಹಾರ ಹೇಳುವುದು ಕಷ್ಟ: ಈ ಮಾತು ನಿಜ ಅಲ್ವಾ. ನಮಗೆ ಯಾರು ಬೇಕಾದರೂ ತುಂಬಾ ಸುಲಭವಾಗಿ ಉಪದೇಶ ನೀಡಬಲ್ಲರು. ಆದರೆ ನಮ್ಮ ಕಷ್ಟದ ಸಮಯದಲ್ಲಿ ಆ ಕಷ್ಟದಿಂದ ಮುಕ್ತಿ ಪಡೆಯಲು ಯಾರು ಪರಿಹಾರ ಸೂಚಿಸುವುದಿಲ್ಲ.

ನಾವು ಜಗತ್ತನ್ನು ತಪ್ಪಾಗಿ ಓದುತ್ತೇವೆ ಹಾಗಾಗಿ ಅದು ನಮ್ಮನ್ನು ಮೋಸಗೊಳಿಸುತ್ತದೆ: ಪ್ರತಿಯೊಂದು ವಿಚಾರದಲ್ಲೂ ಹಾಗೇನೆ ನಾವು ಹೇಗೆ ಒಂದು ವಿಷಯಗಳನ್ನು ಅಲೋಚಿಸುತ್ತೇವೆಯೋ ಅದೇ ರೀತಿಯಾಗಿ ನಮಗೆ ಅದು ಅರ್ಥೈಸುತ್ತದೆ. ಅದರಿಂದ ನಮ್ಮನ್ನು ನಾವು ವಂಚಿಸಿಕೊಂಡತ್ತಾಗುತ್ತದೆ. ಹಾಗಾಗಿ ನಾವು ಜಗತ್ತನ್ನು ಹಾಗೂ ನೋಡುವ ರೀತಿ ಬದಲಾಯಿಸಿಕೊಳ್ಳಬೇಕು. ಬದಲಾಯಿಸಿಕೊಂಡಾಗ ಮಾತ್ರ ನಾವು ಮೋಸಗೊಳ್ಳುವುದರಿಂದ ದೂರವಿರಲು ಸಾಧ್ಯ.

ಹೂವಿನ ದಳಗಳನ್ನು ಕಸಿದುಕೊಳ್ಳುವ ಮೂಲಕ ನೀವು ಹೂವಿನ ಸೌಂದರ್ಯವನ್ನು ಸಂಗ್ರಹಿಸಲಾಗುವುದಿಲ್ಲ: ಇದರ ಅರ್ಥ ನಾವು ಇಷ್ಟ ಪಡುವ ವಸ್ತುವಾಗಲಿ ಅಥವಾ ಜೀವವಾಗಲಿ ಅದು ನಮಗೆ ಬೇಕು ಎಂದು ನಾವು ಆಸೆ ಪಡುವುದು ತಪ್ಪಲ್ಲ. ಆಧರೆ ಅದನ್ನು ಬಲವಂತದಿAದ ಪಡೆಯುವುದರಿಂದ ಏನು ಲಾಭ ಎನ್ನುವುದು ಒಮ್ಮೆ ಯೋಚಿಸಬೇಕು. ಉದಾಹರಣೆಗೆ ಒಂದು ಹೂವು ನಮಗೆ ಇಷ್ಟವಾಗಿರುತ್ತದೆ, ಹಾಗಂತ ಅದರ ದಳಗಳನ್ನು ಕಿತ್ತರೆ ಅದರಿಂದ ನೀವು ಅದರ ಸೌಂದರ್ಯವನ್ನು ಸವಿದಂತಾಗುವುದಿಲ್ಲ. ಬದಲಾಗಿ ನೀವು ಅದರ ಸೌಂದರ್ಯವನ್ನು ನಾಶ ಮಾಡಿದಂತಾಗುತ್ತದೆ.

ನಿಮ್ಮ ಬದುಕಿನಿಂದ ಸೂರ್ಯ ಹೊರಟು ಹೋದನೆಂದು ನೀವು ಅಳುತ್ತಾ ಕೂತರೆ, ನಿಮ್ಮ ಕಣ್ಣೀರು ನೀವು ನಕ್ಷತ್ರಗಳನ್ನು ನೋಡದಂತೆ ತಡೆಯುತ್ತದೆ: ಠಾಗೋರ್ ಅವರ ಈ ಪ್ರೇರಖ ಮಾತು ತುಂಬಾ ಅರ್ಥಪೂರ್ಣವಾಗಿದೆ. ಜೀವನದಲ್ಲಿ ಕಳೆದು ಹೋದ ಕ್ಷಣವನ್ನು ಅಥವಾ ಕಳೆದುಹೋದ ವ್ಯಕ್ತಿಗಳನ್ನು ನೆನೆದು ಅಳುತ್ತಾ ಕೂತರೆ ನೀವು ಈ ಕ್ಷಣ ಅನುಭವಿಸಬೇಕಾದ ಸುಂದರ ಸಮಯವನ್ನು ಕಳೆದುಕೊಳ್ಳಬೇಕಾಗುತ್ತದೆ.

ನೀರನ್ನು ಕೇವಲ ನಿಂತು ನೋಡುವ ಮೂಲಕ ನೀವು ಸಮುದ್ರವನ್ನು ದಾಟಲು ಸಾಧ್ಯವಿಲ್ಲ: ಈ ಪ್ರೇರಕ ಮಾತಿನಲ್ಲಿ ಠಾಗೋರ್ ಅವರು ನಮ್ಮ ಗುರಿಗಳನ್ನು ಸಾಧಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಮತ್ತು ಸವಾಲುಗಳನ್ನು ಸ್ವೀಕರಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: