Raksha Bandhan 2024: ಅಲೆಕ್ಸಾಂಡರ್​​ನ ಪ್ರಾಣಕ್ಕೆ ರಕ್ಷಣೆಯಾಗಿತ್ತು ಈ ರಕ್ಷಾಬಂಧನ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 19, 2024 | 10:11 AM

ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ಸಂದರ್ಭದಲ್ಲಿ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಅವರಿಬ್ಬರ ನಡುವೆ ಯುದ್ಧ ನಡೆಯುವ ಸಮಯದಲ್ಲಿ ಅಲೆಕ್ಸಾಂಡರ್ ಪತ್ನಿ ಪೋರಸ್​​​ಗೆ ಒಂದು ಪವಿತ್ರ ದಾರ ಮತ್ತು ಒಂದು ಮನವಿಯನ್ನು ಮಾಡುತ್ತಾಳೆ. ಅದೇನೆಂದರೆ ತನ್ನ ಪತಿಯನ್ನು ಕೊಲ್ಲದಂತೆ ಕೇಳಿಕೊಳ್ಳುತ್ತಾಳೆ. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರ್​​​ನನ್ನು ಕೊಲ್ಲದೆ ಉಳಿಸಿದನು.

Raksha Bandhan 2024: ಅಲೆಕ್ಸಾಂಡರ್​​ನ ಪ್ರಾಣಕ್ಕೆ ರಕ್ಷಣೆಯಾಗಿತ್ತು ಈ ರಕ್ಷಾಬಂಧನ
ಸಾಂದರ್ಭಿಕ ಚಿತ್ರ
Follow us on

ಭಾರತವನ್ನು ಹಬ್ಬಗಳ ತವರೂರು. ಶ್ರಾವಣ ಮಾಸ ಬಂತು ಅಂದ್ರೆ ಸಾಕು ಹಬ್ಬಗಳದ್ದೇ ಸಂಭ್ರಮ. ಹಬ್ಬ ಅಂದ್ರೆ ಸಾಕು ಮನೆ ಮಂದಿಯೆಲ್ಲಾ ಓಡಾಡಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಅದ್ಧೂರಿಗಳಲ್ಲಿ ಒಂದು ರಕ್ಷಾಬಂಧನ, ಸಹೋದರ ಸಹೋದರಿಯರ ಭಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವೇ ರಕ್ಷಬಂಧನ.

ರಕ್ಷಾಬಂಧನ ಒಂದು ಪವಿತ್ರವಾದ ಆಚರಣೆಯಾಗಿದೆ. ಸಹೋದರಿಯು ಸಹೋದರಬಿಗೆ ರಾಖಿ ಕಟ್ಟಿ, ಆರತಿ ಬೆಳಗಿ ಅಣ್ಣ ಆಶೀರ್ವಾದದವನ್ನು ಬೇಡುತ್ತಾಳೆ. ಹಾಗೆಯೇ ಸಹೋದರನ ರಕ್ಷಣೆಯು ಸಹೋದರಿಯಿಂದ ಹಾಗೆಯೇ ಸಹೋದರಿ ರಕ್ಷಣೆಯು ಸಹೋದರನಿಂದ ಎಂಬ ಭ್ರಾತೃತ್ವದ ಭಾವನೆಯನ್ನು ದೃಡ ಗೊಳಿಸುವ ಸಂಕೇತವಾಗಿದೆ.

ಇತಿಹಾಸಗಳ ಪ್ರಕಾರ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ಸಂದರ್ಭದಲ್ಲಿ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಅವರಿಬ್ಬರ ನಡುವೆ ಯುದ್ಧ ನಡೆಯುವ ಸಮಯದಲ್ಲಿ ಅಲೆಕ್ಸಾಂಡರ್ ಪತ್ನಿ ಪೋರಸ್​​​ಗೆ ಒಂದು ಪವಿತ್ರ ದಾರ ಮತ್ತು ಒಂದು ಮನವಿಯನ್ನು ಮಾಡುತ್ತಾಳೆ. ಅದೇನೆಂದರೆ ತನ್ನ ಪತಿಯನ್ನು ಕೊಲ್ಲದಂತೆ ಕೇಳಿಕೊಳ್ಳುತ್ತಾಳೆ. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರ್​​​ನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಆತನ ಕೈಯಲ್ಲಿ ಕಟ್ಟಿಕೊಂಡ ರಾಖಿ ಅವನನ್ನು ತಡೆದು ನಿಲ್ಲಿಸಿತು ಎಂದು ಕತೆಗಳಲ್ಲಿ ಉಲ್ಲೇಖವಾಗಿದೆ.

ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕೇವಲ ಸಹೋದರನಾಗಿರದೆ ಒಬ್ಬ ಸ್ನೇಹಿತನಾಗಿಯೂ ಕೂಡ ನಿನ್ನ ಕಷ್ಟದಲ್ಲಿ ನಾನು ಜೊತೆಗಿರುವೆ ಎಂದು ಭರವಸೆಯನ್ನು ನೀಡುವವನು ಸಹೋದರ. ರಾಖಿಯನ್ನು ಸೋದರನೇ ಕಟ್ಟಬೇಕು ಅಂತೇನಿಲ್ಲ. ಯಾರು ಯಾರಿಗೂ ಕಟ್ಟಬಹುದು. ಅದು ರಕ್ಷಣೆಯ ಸಂಕೇತವಾಗಿದೆ.

ಇದನ್ನೂ ಓದಿ: ದ್ರೌಪದಿ ಕೃಷ್ಣನಿಗೆ ಕಟ್ಟಿದ ರಕ್ಷೆ ಅವಳ ಮಾನ ಉಳಿಸಿತು

ಸಹೋದರ ಸಹೋದರಿಯ ಬಂಧ ಅದು ಬಿಡಿಸಲಾಗದ ನಂಟು. ಎಷ್ಟೇ ಜಗಳವಾಡಿದರು ಕೂಡ ಅವರ ಬಂಧ ಪವಿತ್ರವಾದದ್ದು. ಸಹೋದರ ಸಹೋದರಿಯ ಸಂಭಂದ ಅದು ಬೆಲೆ ಕಟ್ಟಲಾಗದ ಮಾಣಿಕ್ಯ. ಅಣ್ಣ ತಂಗಿಯ ಈ ಬಂಧ ಜನುಮ ಜನುಮದ ಅನುಬಂಧ ಎನ್ನುವ ಹಾಗೆ ಸಹೋದರ ಸಹೋದರಿಯರ ಅನುಬಂಧವು ಜನುಮ ಜನುಮದ್ದಾಗಿದೆ.

ಶ್ರಾವ್ಯ ಪ್ರಭು ಎ. ಎಸ್

ರಕ್ಷಾಬಂಧನ ಹಬ್ಬ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ