Raksha Bandhan Gift Ideas: ರಕ್ಷಾಬಂಧನದ ದಿನ ನಿಮ್ಮ ಸಹೋದರಿಗೆ ಈ ಗಿಫ್ಟ್​ ಕೊಡಬಹುದಾ ನೋಡಿ

ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಸಂಕೇತ ಈ ರಕ್ಷಾ ಬಂಧನ. ಅಂದು ಸಹೋದರನಿಗೆ ರಾಖಿ ಕಟ್ಟಿ ತನ್ನನ್ನು ರಕ್ಷಣೆ ಮಾಡು ಎಂದು ಹೆಣ್ಣುಮಕ್ಕಳು ಕೇಳಿಕೊಳ್ಳುತ್ತಾರೆ. ರಕ್ಷಾ ಬಂಧನದ ದಿನ ಸಹೋದರನಿಗೆ ತಿಲಕ ಇಟ್ಟು, ಆರತಿ ಬೆಳಗಿ ರಾಖಿಯನ್ನು ಕಟ್ಟಲಾಗುತ್ತದೆ.

Raksha Bandhan Gift Ideas: ರಕ್ಷಾಬಂಧನದ ದಿನ ನಿಮ್ಮ ಸಹೋದರಿಗೆ ಈ ಗಿಫ್ಟ್​ ಕೊಡಬಹುದಾ ನೋಡಿ
Rakhi Gift
Updated By: ನಯನಾ ರಾಜೀವ್

Updated on: Aug 05, 2022 | 10:27 AM

ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಸಂಕೇತ ಈ ರಕ್ಷಾ ಬಂಧನ. ಅಂದು ಸಹೋದರನಿಗೆ ರಾಖಿ ಕಟ್ಟಿ ತನ್ನನ್ನು ರಕ್ಷಣೆ ಮಾಡು ಎಂದು ಹೆಣ್ಣುಮಕ್ಕಳು ಕೇಳಿಕೊಳ್ಳುತ್ತಾರೆ. ರಕ್ಷಾ ಬಂಧನದ ದಿನ ಸಹೋದರನಿಗೆ ತಿಲಕ ಇಟ್ಟು, ಆರತಿ ಬೆಳಗಿ ರಾಖಿಯನ್ನು ಕಟ್ಟಲಾಗುತ್ತದೆ.

ಆಗಸ್ಟ್ 11ರಂದು ರಕ್ಷಾ ಬಂಧನವನ್ನು ಆಚರಿಸಲಾಗುವುದು. ಅದಕ್ಕಾಗಿ ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ಈ ದಿನದಂದು, ಸಹೋದರಿ ತನ್ನ ಸಹೋದರನ ಕೈಗೆ ರಾಖಿ ಕಟ್ಟುತ್ತಾಳೆ ಮತ್ತು ಅವನ ಬಾಯಿ ಸಿಹಿ ಮಾಡ್ತಾಳೆ.

ಹಾಗೆಯೇ  ಸಹೋದರ ತನ್ನ ಸಹೋದರಿಯನ್ನು ರಕ್ಷಿಸುವ ವಾಗ್ದಾನ ಮಾಡುತ್ತಾನೆ, ಹಾಗೆಯೇ ಅವಳಿಗೆ ವಿವಿಧ ಗಿಫ್ಟ್ ನೀಡುತ್ತಾನೆ.  ಆದರೆ ಪ್ರತಿ ಬಾರಿ ರಾಖಿ ಹಬ್ಬ ಬಂದಾಗ ಹುಡುಗರನ್ನು ಕಾಡೋ ಪ್ರಶ್ನೆ ಎಂದರೆ, ತನ್ನ ಸಹೋದರಿಗೆ ಏನು ಉಡುಗೊರೆ ನೀಡೋದು ಎಂದು. ನೀವು ಸಹ ಇದೇ ಗೊಂದಲದಲ್ಲಿರಬಹುದು ಅಲ್ವಾ ಕೆಲವು ಸಲಹೆಗಳು ಇಲ್ಲಿವೆ.

ಹಿನ್ನೆಲೆ: ಭವಿಷ್ಯ ಪುರಾಣದ ಪ್ರಕಾರ, ಶ್ರಾವಣ ಮಾಸದ ಹುಣ್ಣಿಮೆಯಂದು, ಇಂದ್ರದೇವತೆ ಮತ್ತು ಅವರ ಪತ್ನಿ ಇಂದ್ರಾಣಿಯ ಪ್ರಾರ್ಥನೆಯ ಮೇರೆಗೆ, ದೇವಗುರು ಬೃಹಸ್ಪಿತರು ಇಂದ್ರದೇವತೆಗೆ ರಕ್ಷಣಾತ್ಮಕ ದಾರವನ್ನು ಕಟ್ಟಿದ್ದರು. ಅದೇ ಸಮಯದಲ್ಲಿ, ತಾಯಿ ಲಕ್ಷ್ಮಿ ರಾಜ ಬಲಿಗೆ ರಾಖಿ ಕಟ್ಟಿದಳು ಮತ್ತು ಅವನನ್ನು ತನ್ನ ಸಹೋದರ ಎಂದು ಪರಿಗಣಿಸಿದಳು. ಕೃಷ್ಣ ಗಾಯಗೊಂಡಾಗ ದ್ರೌಪದಿ ತನ್ನ ಸೀರೆಯನ್ನು ಹರಿದು, ಕೈಗೆ ಬ್ಯಾಂಡೇಜ್ ಕಟ್ಟಿದ್ದಳು ಎಂಬ ನಂಬಿಕೆಯೂ ಇದೆ. ಅದರ ನಂತರ ಶ್ರೀ ಕೃಷ್ಣನು ದ್ರೌಪದಿಯನ್ನು ತನ್ನ ಸಹೋದರಿಯಾಗಿ ಸ್ವೀಕರಿಸಿದನು.

ಒಂದು ನಂಬಿಕೆಯ ಪ್ರಕಾರ, ರಕ್ಷಾ ಬಂಧನದ ದಿನದಂದು, ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟಲು ಪೂಜೆಯ ತಟ್ಟೆಯನ್ನು ಅಲಂಕರಿಸುತ್ತಾರೆ. ಆ ಪೂಜೆಯ ತಟ್ಟೆಯಲ್ಲಿ ಅಕ್ಷತೆ, ರೋಲಿ, ಶ್ರೀಗಂಧ, ದೀಪ, ಸಿಹಿತಿಂಡಿಗಳನ್ನು ಇಡುತ್ತಾರೆ. ರಕ್ಷಾ ಬಂಧನದ ದಿನದಂದು ಮೊದಲ ರಾಖಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ಅದರ ನಂತರ ಸಹೋದರನ ಕೈಗೆ ಮೇಲೆ ರಾಖಿ ಕಟ್ಟಲಾಗುತ್ತದೆ.

ರಾಖಿ ಕಟ್ಟಿದ ಬಳಿಕ ಸಹೋದರಿಗೆ ಉಡುಗೊರೆಯನ್ನು ನೀಡಬೇಕಲ್ಲಾ, ಏನು ಕೊಡ್ತೀರಾ?
-ಆಭರಣ
-ಕಾಸ್ಮೆಟಿಕ್ಸ್, ಬ್ಯೂಟಿ ಪ್ರಾಡಕ್ಟ್ಸ್​
-ವಾಚ್
-ಬಾಲ್ಯದ ನೆನಪುಳ್ಳ ಫೋಟೊ ಫ್ರೇಮ್
-ಸ್ಮಾರ್ಟ್​ ಫೋನ್
-ಪರ್ಫ್ಯೂಮ್ಸ್​
-ಹೆಡ್​ಫೋನ್ಸ್
-ಫಿಟ್​ನೆಸ್ ಬ್ಯಾಂಡ್
-ಚಾಕೊಲೇಟ್
-ಕಸ್ಟಮೈಸ್ಡ್​ ದಿಂಬುಗಳು